ಬೈಂದೂರು, ಜುಲೈ 9, 2025: ಮಂಗಳೂರಲ್ಲಿ ರೋಯ್ಸ್ ಚೆಸ್ ಕಾರ್ನರ್ ನಡೆಸಿದ ಆಲ್ ಇಂಡಿಯಾ ರ್‍ಯಾಪಿಡ್ ಚೆಸ್ ಟೂರ್ನಮೆಂಟ್ ನಲ್ಲಿ 7ರ ವಯೋಮಾನದ ವಿಭಾಗದಲ್ಲಿ ಪ್ರಮುಖ ಬಿ. ಪೂಜಾರಿ ಪ್ರಥಮ ಲೈಟ್ನಿಂಗ್ ಚೆಸ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾನೆ. ಹಾಗೂ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್ ಅವರು ನಡೆಸಿದ ಆಲ್ ಇಂಡಿಯಾ ಕ್ಲಾಸಿಕಲ್ ಚೆಸ್ ಸ್ಪರ್ಧೆಯಲ್ಲಿ ಬೈಂದೂರು ತಾಲ್ಲೂಕಿನಲ್ಲಿ ಪ್ರಥಮವಾಗಿ ಅತಿ ಕಿರಿಯ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಶ್ರೇಯಾಂಕವನ್ನು ಪಡೆದಿರುತ್ತಾನೆ. ಇವನು ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕಿರಿಮಂಜೇಶ್ವರದಲ್ಲಿ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತ, ಸಿದ್ದಿವಿನಾಯಕ ಚೆಸ್ ಅಕಾಡೆಮಿ ಬೈಂದೂರು ಇಲ್ಲಿ ಚೆಸ್ ತರಬೇತಿಯನ್ನು ಪಡೆಯುತ್ತಿದ್ದಾನೆ.
ವಿದ್ಯಾರ್ಥಿಯ ಈ ಸಾಧನೆಗೆ ಆಡಳಿತ ಮಂಡಳಿ, ಮುಖ್ಯ ಶಿಕ್ಷಕಿ ,ಭೋದಕ/ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
Leave a Reply