ಹೊನ್ನಾವರ: ಕುಡಿದು ಬೈಕ್ ವೀಲಿಂಗ್ ಮಾಡಿದ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ

ಹೊನ್ನಾವರ, ಜೂಲೈ 8, 2025: ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ಕಿ ಮೀನು ಮಾರುಕಟ್ಟೆಯಿಂದ ರೈಲ್ವೆ ಕ್ರಾಸ್‌ವರೆಗಿನ ಹೆದ್ದಾರಿಯಲ್ಲಿ ಕೆಲವರು ಕುಡಿದು ಅಮಲಿನಲ್ಲಿ ಬೈಕ್‌ ವೀಲಿಂಗ್‌ ಮಾಡುತ್ತಾ, ಅತೀ ವೇಗದಲ್ಲಿ ಹಾಗೂ ಅಜಾಗರೂಕತೆಯಿಂದ ದ್ವಿಚಕ್ರ ವಾಹನ ಚಲಾಯಿಸುತ್ತಿರುವ ಬಗ್ಗೆ ವಾಟ್ಸ್‌ಆ್ಯಪ್‌ ಮೂಲಕ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಹೊನ್ನಾವರ ಪೊಲೀಸರು ಕಾರ್ಯಪ್ರವೃತ್ತರಾಗಿ, ತಪ್ಪಿತಸ್ಥ ದ್ವಿಚಕ್ರ ವಾಹನಗಳನ್ನು ಪತ್ತೆ ಮಾಡಿದ್ದಾರೆ.

ಕಿಡಿಗೇಡಿಗಳ ವಿರುದ್ಧ ಕರ್ನಾಟಕ ಮೋಟರ್ ವಾಹನ ಕಾಯ್ದೆಯಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ.

Comments

Leave a Reply

Your email address will not be published. Required fields are marked *