ಶಿರಸಿ, ಜೂಲೈ 8, 2025: ದಕ್ಷಿಣ ಕನ್ನಡ ಜಿಲ್ಲೆಯ ಬೆಲ್ತಂಗಡಿ ತಾಲೂಕಿನ ಮಂಡೂರು ನಿವಾಸಿ ಆರೋಪಿ ಪಾಸ್ಕಲ್‌ನ ವಿರುದ್ಧ 1984ರಲ್ಲಿ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 147/1984ರ ಅಡಿಯಲ್ಲಿ ಐಪಿಸಿ ಕಲಂ 279, 337, 427 ಹಾಗೂ 116 ಐಎಂವಿ ಕಾಯ್ದೆಯಡಿ ಅಪಘಾತ ಪ್ರಕರಣ ದಾಖಲಾಗಿತ್ತು. ಶಿರಸಿ ನಗರ ಪೊಲೀಸರು ತನಿಖೆ ನಡೆಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಆದರೆ, ಬೇರೆ ಜಿಲ್ಲೆಯವನಾಗಿದ್ದ ಆರೋಪಿ ಪಾಸ್ಕಲ್, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕಣ್ತಪ್ಪಿಸಿಕೊಂಡಿದ್ದನು. ಈ ಹಿನ್ನೆಲೆಯಲ್ಲಿ ಶಿರಸಿ ನ್ಯಾಯಾಲಯವು 1987ರಲ್ಲಿ ಎಲ್‌ಪಿಸಿ 13/1987ರಂತೆ ಆತನ ವಿರುದ್ಧ ವಾರಂಟ್ ಹೊರಡಿಸಿತ್ತು.
ಶಿರಸಿ ನಗರ ಪೊಲೀಸರು ಆರೋಪಿಯ ಪತ್ತೆಗಾಗಿ ಬೆಲ್ತಂಗಡಿ, ಮಂಗಳೂರು, ಉಡುಪಿ, ಪುತ್ತೂರು ಸೇರಿದಂತೆ ಹಲವು ಕಡೆಗಳಲ್ಲಿ ತಿರುಗಾಡಿ ಮಾಹಿತಿ ಸಂಗ್ರಹಿಸಿದ್ದರು. ಆರೋಪಿ ಪಾಸ್ಕಲ್‌ನ ತಂದೆ ಮಾರ್ಟಿನ್ ರೊಡ್ರಿಗಸ್ ನೀಡಿದ್ದ ವಿಳಾಸವನ್ನು ಬದಲಾಯಿಸಿ, ಬೆಂಗಳೂರಿನ ಬಾಗಲಗುಂಟೆಯಲ್ಲಿ ತಲೆಮರೆಸಿಕೊಂಡಿದ್ದನು. ನಂತರ ಆತ ಮೃತಪಟ್ಟಿರುವ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಆದರೆ, ಆರೋಪಿಯ ಬೆನ್ನುಹತ್ತಿದ ಶಿರಸಿ ನಗರ ಪೊಲೀಸರು ಕೊನೆಗೂ ಆತನನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಮುಂದಿನ ಕಾನೂನು ಕ್ರಮಕ್ಕಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಭಾಗಿಯಾದ ಅಧಿಕಾರಿಗಳು:
ಈ ಪ್ರಕರಣದ ಯಶಸ್ವಿ ಪತ್ತೆಗೆ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಶ್ರೀ ಎಂ. ನಾರಾಯಣ ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕೃಷ್ಣಮೂರ್ತಿ ಜೆ. ಮತ್ತು ಶ್ರೀ ಜಗದೀಶ್ ನಾಯ್ಕ್, ಶಿರಸಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀಮತಿ ಗೀತಾ ಪಾಟೀಲ್, ಶಿರಸಿ ವೃತ್ತ ನಿರೀಕ್ಷಕರಾದ ಶ್ರೀ ಶಶಿಕಾಂತ್ ವರ್ಮಾ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ. ಶಿರಸಿ ನಗರ ಠಾಣೆಯ ಪಿಎಸ್‌ಐ ಶ್ರೀ ಕ್ರೀ. ನಾಗಪ್ಪ, ತನಿಖಾ ಪಿಎಸ್‌ಐ ಶ್ರೀ ನಾರಾಯಣ ರಾಥೋಡ್, ಎಎಸ್‌ಐ ಶ್ರೀ ನೇಲ್ಬನ್‌ಆರ್ ಮೆಂತೇರೋ, ಎಎಸ್‌ಐ ಶ್ರೀ ಹೊನ್ನಪ್ಪ ಆಗೇರ್, ಶ್ರೀ ವಿಶ್ವನಾಥ ಭಂಡಾರಿ ಸೇರಿದಂತೆ ಇತರ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಶಂಸೆ:
ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಪೊಲೀಸ್ ಅಧೀಕ್ಷಕರಾದ ಶ್ರೀ ಎಂ. ನಾರಾಯಣ ಐಪಿಎಸ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Leave a Reply