ಸರಸ್ವತಿ ವಿದ್ಯಾಲಯದಲ್ಲಿ ಸಿ. ಎ ಮತ್ತು ಸಿ.ಎಸ್ ಪರಿಚಯ ಕಾರ್ಯಕ್ರಮ

ಗಂಗೊಳ್ಳಿ, ಜುಲೈ 12, 2025ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು, ಗಂಗೊಳ್ಳಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು  ವಿ ರೀಚ್ ಅಕಾಡೆಮಿ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಸರಸ್ವತಿ ವಿದ್ಯಾಲಯದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಕಂಪನಿ ಸೆಕ್ರೆಟರಿ ಮತ್ತು ಚಾಟಡ್ ಅಕೌಂಟೆಂಟ್ ಕೋರ್ಸ್ ಗಳ ಕುರಿತಾದ ಪರಿಚಯ  ಕಾರ್ಯಕ್ರಮವು ಇಲ್ಲಿನ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ನೆರವೇರಿತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕಂಪನಿ ಸೆಕ್ರೆಟರಿ  ಸಂತೋಷ್  ಪ್ರಭು ಅವರು,  ಕಂಪನಿ ಸೆಕ್ರೆಟರಿ ಕೋರ್ಸಿನ ಬಗ್ಗೆ ಮಾಹಿತಿಯನ್ನು ನೀಡುತ್ತಾ ಕಂಪನಿ ಸೆಕ್ರೆಟರಿ ಕೋರ್ಸ್ ಮಾಡುವುದರ ಮೂಲಕ  ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದಾಗಿದೆ. ಇದು ಖಚಿತ ಉದ್ಯೋಗ ವನ್ನು ನೀಡುವುದು ಮಾತ್ರವಲ್ಲದೆ ವಾಣಿಜ್ಯ ವಿಭಾಗದಲ್ಲಿನ   ಬದಲಾವಣೆಗಳಿಗೆ ಒಗ್ಗಿಕೊಳ್ಳಲು ನಮ್ಮನ್ನು ಸಜ್ಜುಗೊಳಿಸಿ ಉನ್ನತ ಸ್ಥಾನಮಾನವನ್ನು ಮತ್ತು ಗಳಿಕೆಯನ್ನು ಪಡೆಯುವಂತೆ ಮಾಡುತ್ತದೆ  ಎಂದು ಹೇಳಿದರು.

ಐಸಿಎಸ್ಐ ನ ಮಂಗಳೂರು ವಿಭಾಗದ ಇಂಚಾರ್ಜ್ ಆಫೀಸರ್ ಶಂಕರ್ ಶುಭ ಹಾರೈಸಿದರು.

ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ. ಸಿ ಅಧ್ಯಕ್ಷತೆ ವಹಿಸಿದ್ದರು. ಆಂಗ್ಲ ಭಾಷೆ ಉಪನ್ಯಾಸಕ ಥಾಮಸ್ ಪಿ.ಎ ಪ್ರಾಸ್ತಾವಿಕ ಮಾತುಗಳಾಡಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಸುಗುಣ ಆರ್ ಕೆ ಮತ್ತು ಎನ್ಎಸ್ಎಸ್ ವಿದ್ಯಾರ್ಥಿ ಘಟಕದ ನಾಯಕ  ಗಗನ್ ಮೇಸ್ತ  ಉಪಸ್ಥಿತರಿದ್ದರು.  ದಿಯಾ ಜಿ ಪೈ ಪ್ರಾರ್ಥಿಸಿದರು. ಧನ್ಯ ಯು ಅತಿಥಿಗಳನ್ನು ಪರಿಚಯಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಸಹಕರಿಸಿದರು. ವಿದ್ಯಾರ್ಥಿನಿ ಮೆಹಕ್ ಖಾರ್ವಿ ಕಾರ್ಯಕ್ರಮವನ್ನು ನಿರೂಪಿಸಿದರು ಶರ್ವಾನಿ ಪೈ ವಂದಿಸಿದರು.

Comments

Leave a Reply

Your email address will not be published. Required fields are marked *