ಬೈಂದೂರು: ಬೈಂದೂರು ಮೂಕಾಂಬಿಕ ರೈಲ್ವೆ ನಿಲ್ಡಾಣದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ಮಾರುತಿ ಸುಜುಕಿ ಒಮಿನಿ ಕಾರು ಕಳವು ಮಾಡಲಾಗಿದೆ.
ಬೈಂದೂರು ಗಂಗನಾಡಿನ ಥಾಮಸ್ ವಿ ಎಮ್ ಇವರು ಬಾಡಿಗೆ ಮಾಡಲು ತನ್ನ KA-20-C-3590 ನೇ ಮಾರುತಿ ಸುಜುಕಿ ಒಮಿನಿ ಕಾರನ್ನು ಬೈಂದೂರು ಮೂಕಾಂಬಿಕ ರೈಲ್ವೆ ನಿಲ್ಡಾಣದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದು ಜು. 9 ರಂದು ರಾತ್ರಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Reply