ಕುಂದಾಪುರ: ನೇಣು ಬಿಗಿದು ಆತ್ಮಹತ್ಯೆ

ಕುಂದಾಪುರ: ಪಿರ್ಯಾದಿದಾರರಾದ ಕೇಶವ (35), ತಂದೆ: ಕುಷ್ಟ, ವಾಸ:ಹಳ್ಣಾಡು ಕುಂದಾಪುರ ತಾಲೂಕು ಇವರ ತಮ್ಮ ಸತೀಶ (24) ಎಂಬುವವರು ಹಲವು ವರ್ಷದಿಂದ ಮದ್ಯಪಾನ ಮಾಡುವ ಚಟ ಹೊಂದಿದ್ದು ಈ ಬಗ್ಗೆ  ಕುಡಿತ ಬಿಡಿಸಲು ಮದ್ದು ಮಾಡಿದ್ದು ,



ಈ ಬಗ್ಗೆ 2-3 ವಾರದಿಂದ ಮದ್ಯಪಾನ ಮಾಡಲು ಆಗದೇ ಇದ್ದು ಅದೇ ಕಾರಣ ದಿಂದ ಬೇಸರಗೊಂದು ದಿನಾಂಕ 08/04/2018 ರಂದು 15:00 ಗಂಟೆಗೆ ಮನೆಯಿಂದ ಹೋದವರು ವಾಪಾಸ್ಸು ಬಾರದೇ ಇದ್ದು ,ಹುಡುಕಾಡಿದಲ್ಲಿ ದಿನಾಂಕ 09/04/2018 ರಂದು ಬೆಳಿಗ್ಗೆ 06:00 ಗಂಟೆಗೆ ಮನೆಯ ಹತ್ತಿರದ ಹಾಡಿಯಲ್ಲಿ ಮರಕ್ಕೆ ಹಗ್ಗ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 13/2018 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Comments

Leave a Reply

Your email address will not be published. Required fields are marked *