ಹೊಸದಾಗಿ ಮೂರೂ ಕೇಂದ್ರಗಳಲ್ಲಿ ಟೋಲ್ ಪಾವತಿಸಬೇಕಾಗಿರುವುದರಿಂದ ಕುಂದಾಪುರ ಕಡೆಯಿಂದ ಕಾಸರಗೋಡಿಗೆ ತೆರಳುವವರು ಇನ್ನು ನಾಲ್ಕು ಕೇಂದ್ರಗಳಲ್ಲಿ ಸುಂಕ ಪಾವತಿಸಬೇಕಾದ ಅನಿವಾರ್ಯತೆಗೆ ಸಿಲುಕಲಿದ್ದಾರೆ. ಸದ್ಯ ಸುರತ್ಕಲ್ ಸಮೀಪದ ಎನ್‌ಐಟಿಕೆ ಪರಿಸರದಲ್ಲಿ ಒಂದು ಟೋಲ್ ಗೇಟ್ ಕಾರ್ಯಾಚರಿಸುತ್ತಿದೆ. ಇದೀಗ ಮೂರು ಟೋಲ್ ಗೇಟ್ ಕಾರ್ಯಾರಂಭಿಸಿದರೂ ಎನ್‌ಐಟಿಕೆ ಬಳಿಯಿರುವ ಟೋಲ್ ಗೇಟ್ ಅಸ್ತಿತ್ವದಲ್ಲಿರಲಿದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಟೋಲ್ ದರಗಳ ವಿವರ:
40, 30, 35 ರೂ. : ಕಾರು, ಜೀಪ್, ವ್ಯಾನ್‌ಗಳಿಗೆ ಏಕಮುಖಿ ಸಂಚಾರಕ್ಕೆ ಕ್ರಮವಾಗಿ ಗುಂಡ್ಮಿ, ಹೆಜಮಾಡಿ, ತಲಪಾಡಿಗಳಲ್ಲಿ 40, 30 ಹಾಗೂ 35 ರೂ. ಪಾವತಿಸಬೇಕಾಗುತ್ತದೆ. ದ್ವಿತೀಯ ಸಂಚಾರಕ್ಕೆ ಕ್ರಮವಾಗಿ 60, 45 ಹಾಗೂ 50 ರೂ. ಪಾವತಿಸಬೇಕಾಗುತ್ತದೆ.
ಬಸ್ ಗಳಿಗೆ ಸುಂಕ:
ಬಸ್ ಮತ್ತು ಟ್ರಕ್ ಗಳಿಗೆ ಸಮಾನ ರೀತಿಯ ಸುಂಕ ನಿಗದಿಗೊಳಿಸಲಾಗಿದ್ದು, ಗುಂಡ್ಮಿಯಲ್ಲಿ ಏಕಮುಖ ಸಂಚಾರಕ್ಕೆ 130 ಮತ್ತು ದ್ವಿಮುಖ ಸಂಚಾರಕ್ಕೆ 195 ರೂ. ನಿಗದಿಗೊಳಿಸಲಾಗಿದೆ. ಹೆಜಮಾಡಿಯಲ್ಲಿ 105 ರೂ. (ಏಕಮುಖ) ಮತ್ತು 160 ರೂ. (ದ್ವಿಮುಖ) ಹಾಗೂ ತಲಪಾಡಿಯಲ್ಲಿ 110 ರೂ. (ಏಕಮುಖ) ಹಾಗೂ 165 ರೂ. (ದ್ವಿಮುಖ) ಶುಲ್ಕ ನಿಗದಿಪಡಿಸಲಾಗಿದೆ.
ಮಾಸಿಕ ಪಾಸ್:
ಪ್ರತಿನಿತ್ಯ ಸಂಚರಿಸುವ ವಾಣಿಜ್ಯ ಉದ್ದೇಶದ ವಾಹನಗಳಿಗೆ ಮಾಸಿಕ ಪಾಸ್ ನೀಡಲಾಗುತ್ತದೆ. ಮಾಸಿಕ ಪಾಸ್ ಪಡೆದ ವಾಹನಗಳು ತಿಂಗಳಿಗೆ 50 ಬಾರಿ ನಿಗದಿತ ಟೋಲ್ ಮೂಲಕ ಸಂಚರಿಸಬಹುದು.
ಸ್ಥಳೀಯರಿಗೆ ವಿಶೇಷ ಪಾಸ್:



Leave a Reply