ಮಂಗಳೂರು, ಮೇ 2: ತೊಕ್ಕೊಟ್ಟುವಿನ ಮೇ ಬಾರ್ ಬಳಿ ತಡರಾತ್ರಿ ನಡೆದ ಘಟನೆಯಲ್ಲಿ ಯುವಕನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಲಾಗಿದೆ.
ಹಲ್ಲೆಗೋಳಗಾದ ವ್ಯಕ್ತಿಯನ್ನು ಅಲೆಕಲ ನಿವಾಸಿ ಫೈಜಲ್ ಎಂದು ಗುರುತಿಸಲಾಗಿದೆ.
ಸೋಮೇಶ್ವರದಲ್ಲಿರುವ ತನ್ನ ಪತ್ನಿಯ ಮನೆಯಿಂದ ಕಲ್ಲಾಪುವಿನ ಗ್ಲೋಬಲ್ ಮಾರ್ಕೆಟ್‌ಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ತೊಕ್ಕೊಟ್ಟು ಬಳಿ ಅಪರಿಚಿತ ದುಷ್ಕರ್ಮಿಗಳು ಅವರ ಮೇಲೆ ದಾಳಿ ನಡೆಸಿದರು.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Leave a Reply