ಉಡುಪಿ: ಬಾಡಿಗೆ ನೆಪದಲ್ಲಿ ರಿಕ್ಷಾ ಚಾಲಕನ ಕೊಲೆ ಯತ್ನ, SDPI ಜಿಲ್ಲಾಧ್ಯಕ್ಷರಿಂದ ಕಠಿಣ ಕ್ರಮಕ್ಕೆ ಅಗ್ರಹ

“ಸುಹಾಸ್ ಶೆಟ್ಟಿ ಕೊಲೆ ನೆಪವನ್ನ ಇಟ್ಟುಕೊಂಡು ಸಂಘಪಾರಿವಾರಾ ಉಡುಪಿ ಜಿಲ್ಲೆಯ ಶಾಂತಿಯನ್ನು ಕಡಡಲು ಪ್ರಯತ್ನಿಸುತ್ತಿದ್ದು, ನಿನ್ನೆ ರಾತ್ರಿ ಅಮಾಯಕ ರಿಕ್ಷಾ ಚಾಲಕಾರೊಬ್ಬರ ಕೊಲೆಗೆ ವಿಫಲ ಯತ್ನ ನಡೆಸಿದ್ದಾರೆ. ಪೊಲೀಸ್ ಇಲಾಖೆ ಈ ಸಂಚಿನ ಹಿಂದೆ ಇರುವ ಕಾಣದ ಕೈಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು“ ಎಂದು ಎಸ್.ಡಿ.ಪಿ.ಐ ಉಡುಪಿ ಜಿಲ್ಲಾಧ್ಯಕ್ಷರು ಆಸೀಫ್ ಕೋಟೇಶ್ವರ ಹೇಳಿದ್ದಾರೆ.

ಆಟೋ ರಿಕ್ಷಾ ಚಾಲಕನೋರ್ವರಿಗೆ ಕರೆ ಮಾಡಿ ಬಾಡಿಗೆ ಇದೆ ಕರೆಯಿಸಿಕೊಂಡು ದುಷ್ಕರ್ಮಿಗಳು ಕೊಲೆ ಮಾಡಲು ಯತ್ನಿಸಿರುವ ಘಟನೆ ಆತ್ರಾಡಿ ಗ್ಯಾಸ್‌ ಪೆಟ್ರೋಲ್‌ ಬಂಕ್‌ ಬಳಿ ಗುರುವಾರ ರಾತ್ರಿ ನಡೆದಿದೆ.

ಆಟೋ ರಿಕ್ಷಾ ಚಾಲಕ ಬಡಗಬೆಟ್ಟು ನಿವಾಸಿ ಅಬುಬಕ್ಕರ್‌ (50), ಎನ್ನುವರರಿಗೆ ಅವರ ಪರಿಚಯದ‌ ದಿನೇಶ್ ಎನ್ನುವವರು ಕರೆ ಮಾಡಿ ಮದಗದಿಂದ ಆತ್ರಾಡಿಗೆ ಬಾಡಿಗೆ ಬರಲು ತಿಳಿಸಿದ್ದಾರೆ. ಈ ಹಿನ್ನೆಲೆ ಅಬುಬಕ್ಕರ್‌ ರಿಕ್ಷಾದಲ್ಲಿ ಆತ್ರಾಡಿ ಪೆಟ್ರೋಲ್‌ ಬಂಕ್‌ ಬಳಿ ಮೋಟಾರ್‌ ಸೈಕಲ್‌ ನಲ್ಲಿ ಹಿಂದಿನಿಂದ ಬಂದ ಇಬ್ಬರು ದುಷ್ಕರ್ಮಿಗಳು ರಿಕ್ಷಾ ಹಿಂಬಾಲಿಸಿಕೊಂಡು ಬಂದು ಗಾಡಿಯನ್ನು ನಿಲ್ಲಿಸುವಂತೆ ಅವ್ಯಾಚ್ಯ ಶಬ್ದಗಳಿಂದ ಬೈದಿದ್ದಾರೆ.

ಈ ವೇಳೆ ಅಬುಬಕ್ಕರ್‌ ಗಾಡಿಯನ್ನು ನಿಲ್ಲಿಸದೇ ಮುಂದೆ ಬಂದು ಶೇಡಿಗುಡ್ಡೆ ಬಳಿ ರಸ್ತೆಯಲ್ಲಿ ಆಟೋವನ್ನು ನಿಲ್ಲಿಸಿ ಓಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಮೋಟಾರ್‌ ಸೈಕಲ್‌ನಲ್ಲಿದ್ದ ಓರ್ವ ವ್ಯಕ್ತಿ ತನ್ನ ಕೈಯಲ್ಲಿದ್ದ ತಲವಾರಿನಿಂದ ಅಬುಬಕ್ಕರ್‌ ತಲೆಗೆ ಬೀಸಿದ್ದು, ತಲವಾರಿನ ಹೊಡೆತದಿಂದ ಅಬುಬಕ್ಕರ್‌ ತಪ್ಪಿಸಿಕೊಂಡಿದ್ದಾರೆ.

ಬಜರಂಗದಳ ಕಾರ್ಯಕರ್ತ ಹಾಗೂ ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಹಿನ್ನಲೆಯೆಲ್ಲಿ ಜಿಲ್ಲೆಯ ಭಾಗಗಳಲ್ಲಿ ಹಲ್ಲೆ ಮತ್ತು ಕೊಲೆ ಯತ್ನ ಸುದ್ದಿ ಬರ್ತಾ ಇವೆ.

Comments

Leave a Reply

Your email address will not be published. Required fields are marked *