ಕುಂದಾಪುರ: ವಿವಾಹಿತ ಮಹಿಳೆಗೆ ಮಾನಸಿಕ ಹಿಂಸೆ, ದೌರ್ಜನ್ಯ ಆರೋಪ

ಕುಂದಾಪುರ: ಬೀಜಾಡಿ ಗ್ರಾಮದ ಸಫಾ (21) ಎಂಬ ವಿವಾಹಿತ ಮಹಿಳೆಯು ತನ್ನ ಗಂಡ ಹಾಗೂ ಇತರ ಇಬ್ಬರು ವ್ಯಕ್ತಿಗಳ ವಿರುದ್ಧ ಮಾನಸಿಕ ಹಿಂಸೆ ಮತ್ತು ದೌರ್ಜನ್ಯ ಆರೋಪಿಸಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪಿರ್ಯಾದಿದಾರರಾದ ಸಫಾ ಅವರು 10/11/2024 ರಂದು ಮುಸ್ಲಿಂ ಸಂಪ್ರದಾಯದಂತೆ ಭಟ್ಕಳದ ಡೊಂಗರ್ ಪಲ್ಲಿ ಎಂಬಲ್ಲಿ ಆರೋಪಿ 1 ಮಹಮ್ಮದ್ ನಬೀಲ್ ಜೊತೆ ವಿವಾಹವಾಗಿದ್ದರು. ವಿವಾಹದ ನಂತರ ಭಟ್ಕಳದಲ್ಲಿ ಗಂಡನೊಂದಿಗೆ ವಾಸವಾಗಿದ್ದ ಸಫಾ ಅವರಿಗೆ 20/11/2024 ರಂದು ಸಂಜೆ 5:00 ಗಂಟೆಗೆ ಆರೋಪಿ 2 ಇಸ್ಮಾಯಿಲ್ ಮತ್ತು ಆರೋಪಿ 3 ಶರ್ಫುನ್ನಿಸ ಇವರು ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆದು “ನಿನ್ನ ಮನೆಗೆ ಹೋಗು” ಎಂದು ಗದರಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ನಂತರ, 20/12/2024 ರಂದು ಸಫಾ ತನ್ನ ಗಂಡನೊಂದಿಗೆ ಬೀಜಾಡಿಯ ತಂದೆಯ ಮನೆಗೆ ಬಂದಿದ್ದ ವೇಳೆ ಸಂಜೆ 8:00 ಗಂಟೆಗೆ ಮತ್ತೆ ಅವಾಚ್ಯವಾಗಿ ಬೈದಿದ್ದಾರೆ. ಈ ವೇಳೆ ಸಫಾ ಅವರ ತಂದೆ ಬುದ್ಧಿವಾದ ಹೇಳಿದ್ದಾರೆ. 02/01/2025 ರಂದು ಆರೋಪಿ 1 ಮಹಮ್ಮದ್ ನಬೀಲ್, ಸಫಾ ಅವರನ್ನು ಭಟ್ಕಳದ ತನ್ನ ಮನೆಯಲ್ಲಿ ಬಿಟ್ಟು ವಿದೇಶಕ್ಕೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಆರೋಪಿ 2 ಮತ್ತು 3 ರವರು ಅವಾಚ್ಯ ಶಬ್ದಗಳಿಂದ ಬೈದು ಹಿಂಸೆ ನೀಡಿದ್ದಾರೆ.

ಮತ್ತೊಂದೆಡೆ, 30/01/2025 ರಂದು ಸಫಾ ತನ್ನ ಗಂಡನೊಂದಿಗೆ ವಿದೇಶಕ್ಕೆ ತೆರಳಿದ್ದಾಗಲೂ, ಆರೋಪಿ 1 ಮಹಮ್ಮದ್ ನೆಭಿಲ್ ಪದೇ-ಪದೇ ಅವಾಚ್ಯ ಶಬ್ದಗಳಿಂದ ಬೈದು ಮಾನಸಿಕ ಹಿಂಸೆ ನೀಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 58/2025ರಡಿ ಕಲಂ 85, 352, 115(2) R/W 3(5) BNS ರಂತೆ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *