ಗುಜ್ಜಾಡಿ 15/05/2025: ಇಲ್ಲಿನ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘ (ರಿ) ವತಿಯಿಂದ “ರಜತ ಸಂಭ್ರಮ 2025”, ಮೇ 17 ಮತ್ತು 18 ಕ್ಕೆ ಆಯೋಜಿಸಲಿದೆ.
ಹಳೆ ವಿದ್ಯಾರ್ಥಿ ಸಂಘವು (ರಿ) ವಾರ್ಷಿಕೋತ್ಸವ ಅಥವಾ ಕಾರ್ಯಕ್ರಮ ಮಾಡುವುದಕ್ಕೆ ಮಾತ್ರ ಸೀಮಿತವಾಗಿರದೆ, ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಂತಿದೆ.
ಶಾಲಾ ಅಭಿವೃದ್ಧಿಗೆ ಮಹತ್ವದ ಸಹಕಾರ:
ಶಾಲೆಗೆ ಪೂರ್ವ ಪ್ರಾಥಮಿಕ ತರಗತಿಯಾಗಿ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಗಳನ್ನು ಹಳೆ ವಿದ್ಯಾರ್ಥಿ ಸಂಘವೇ ಸುಸಜ್ಜಿತವಾಗಿ ಆರಂಭಿಸಿ ಯಶಸ್ವಿಯಾಗಿ ನಿರ್ವಹಿಸುತ್ತಿದೆ ಎಂದು ಸಂಘದ ಗೌರವಾಧ್ಯಕ್ಷರು ತಿಳಿಸಿದ್ದಾರೆ.
ಸಂಘದ ಇತಿಹಾಸ:
ಹಳೆ ವಿದ್ಯಾರ್ಥಿ ಸಂಘವು 1999ರಲ್ಲಿ ಸ್ಥಾಪನೆಯಾಗಿ ಅಂದಿನಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಗೌರವಾಧ್ಯಕ್ಷರಾದ ಏ.ಆರ್. ವಲೀಯುಲ್ಲಾ ಗಂಗೊಳ್ಳಿ ನ್ಯೂಸ್‌ಗೆ ತಿಳಿಸಿದ್ದಾರೆ.
ಸಾಮಾಜಿಕ ಕಾರ್ಯಗಳು:
ಮಕ್ಕಳ ತರಬೇತಿ ಶಿಬಿರಗಳು, ಆರೋಗ್ಯ ಶಿಬಿರಗಳು, ಅನಾರೋಗ್ಯ ಪೀಡಿತರಿಗೆ ಧನ ಸಹಾಯ, ವಿದ್ಯಾರ್ಥಿಗಳಿಗೆ ಅನುದಾನ, ಪಠ್ಯಪುಸ್ತಕ ಹಾಗೂ ಬೇಸಿಕ್ ಸೌಲಭ್ಯಗಳ ಒದಗಿಸುವಲ್ಲಿ ಸಂಘವು ಮಂಚೂಣಿಯಲ್ಲಿದೆ.

ಕಾರ್ಯಕ್ರಮದ ವಿವರಗಳು:
- 17-05-2025 ಬೆಳಿಗ್ಗೆ 10:00 ಗಂಟೆಗೆ:
ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಲಿಟಿ ಕಣ್ಣಿನ ಆಸ್ಪತ್ರೆ ಉಡುಪಿಯ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣೆ ಹಾಗೂ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. - 17-05-2025 ಸಂಜೆ 7:00 ಗಂಟೆಗೆ:
ನೂತನ ಕೊಠಡಿಗಳ ಉದ್ಘಾಟನೆ, ಸ್ಮರಣಾ ಸಭೆ ಮತ್ತು ಹಳೆ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ. - 18-05-2025: “ಗುರುವಂದನೆ” ಕಾರ್ಯಕ್ರಮದ ಭಾಗವಾಗಿ ಗುರುಗಮನ, ಮತ್ತು ಕಲಾಸ್ಪೂರ್ತಿ ಹವ್ಯಾಸಿ ನಾಟಕ ತಂಡದ “ದೈವ ಸಂಕಲ್ಪ” ನಾಟಕ ಪ್ರದರ್ಶನ ನಡೆಯಲಿದೆ.
ಆಹ್ವಾನ:
ಈ ವಿಶೇಷ ಕಾರ್ಯಕ್ರಮಕ್ಕೆ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ಶ್ರೀ ಎ.ಆರ್. ವಾಲೀಯುಲ್ಲಾ, ಅಧ್ಯಕ್ಷ ಶ್ರೀ ರಾಮನಾಥ ಚಿತ್ತಾಲ್, ಪ್ರಧಾನ ಕಾರ್ಯದರ್ಶಿ ಶ್ರೀ ರಾಘವೇಂದ್ರ ಡಿ., ಕೋಶಾಧಿಕಾರಿ ಪ್ರಕಾಶ್ ಎನ್. ಮೇಸ್ತ, ಎಸ್.ಡಿ.ಎಂ.ಸಿ ಅಧ್ಯಕ್ಷರು, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಪೋಷಕರು, ವಿದ್ಯಾರ್ಥಿಗಳು ಹಾಗೂ ಎಲ್ಲಾ ಗ್ರಾಮಸ್ಥರು ಆತ್ಮೀಯವಾಗಿ ಆಹ್ವಾನಿಸುತ್ತಾರೆ.
Leave a Reply