ಗುಲ್ವಾಡಿ: ಕೌಂಜೂರು ಕೆತ್ತಮಕ್ಕಿ ಎಸ್‍ಸಿ ಕಾಲೋನಿಗೆ ಹೋಗುವ ರಸ್ತೆಯ ಅಭಿವೃದ್ಧಿ; ಸುಮಾರು 50 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಚಾಲನೆ

ಕುಂದಾಪುರ, ಮೇ 24, 2025: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಕೇಂದ್ರ ಸರಕಾರ ಅನುದಾನ ಮೀಸಲಿಟ್ಟಿದೆ. ಈ ಅನುದಾನದ ಮೂಲಕ ಕೊರಗರ ಕಾಲೋನಿ ರಸ್ತೆ ಅಭಿವೃದ್ಧಿಗೆ ಪ್ರಯತ್ನಗಳು ನಡೆಯುತ್ತಿವೆ. ಸೌಕೂರು ದೇವಸ್ಥಾನದಿಂದ ಭಟ್ರಹಾಡಿವರೆಗೆ ರಸ್ತೆ ನಿರ್ಮಾಣವಾಗಬೇಕು ಎಂಬುದು ಸ್ಥಳೀಯರ ಬಹುದಿನದ ಬೇಡಿಕೆ. ಪ್ರತಿ ಗ್ರಾಮಕ್ಕೆ ಒಂದೊಂದು ರಸ್ತೆ ನಿರ್ಮಾಣವಾದರೆ ಆ ಊರು ಅಭಿವೃದ್ಧಿಯತ್ತ ಸಾಗುತ್ತದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.

ಅವರು ಶನಿವಾರ ಬೈಂದೂರು ವಿಧಾನಸಭಾ ಕ್ಷೇತ್ರದ ಗುಲ್ವಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೌಂಜೂರು ಕೆತ್ತಮಕ್ಕಿ ಎಸ್‍ಸಿ ಕಾಲೋನಿಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಈ ಭಾಗದ ಜನರ ಬೇಡಿಕೆಯಂತೆ ರಸ್ತೆ ನಿರ್ಮಾಣಕ್ಕೆ ಸಾಧ್ಯವಾದಷ್ಟು ಪ್ರಯತ್ನ ಮಾಡುವುದಾಗಿ ಅವರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಗುಲ್ವಾಡಿ ಗ್ರಾಮ ಪಂಚಾಯತ್ ಸದಸ್ಯ ರಾಮಕೃಷ್ಣ ಹೆಬ್ಬಾರ್, ತಾಪಂ ಮಾಜಿ ಸದಸ್ಯ ಕರಣ್ ಪೂಜಾರಿ, ದಿವ್ಯಾನಂದ ಶೆಟ್ಟಿ, ರಾಮ ಅಡಿಗ ಮತ್ತು ಸ್ಥಳೀಯರು ಉಪಸ್ಥಿತರಿದ್ದರು. ಸಂತೋಷ ಪೂಜಾರಿ ಸ್ವಾಗತಿಸಿದರೆ, ಸುರೇಂದ್ರ ಗುಲ್ವಾಡಿ ವಂದನೆ ಸಲ್ಲಿಸಿದರು.

Comments

Leave a Reply

Your email address will not be published. Required fields are marked *