ಕುಂದಾಪುರ, ಮೇ 26, 2025: ಯಕ್ಷಗಾನ ಕಲಾರಂಗ (ರಿ.) ಉಡುಪಿ ಮತ್ತು ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್ಮೆಂಟ್, ಟ್ರೈನಿಂಗ್ ಆ್ಯಂಡ್ ರಿಸರ್ಚ್ ಸೆಂಟರ್ (ಐವೈಸಿ) ಉಡುಪಿ ವತಿಯಿಂದ ಯಕ್ಷನಿಧಿ – ವಿದ್ಯಾಪೋಷಕ್ – ಯಕ್ಷಶಿಕ್ಷಣ ಯೋಜನೆಯಡಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಶ್ರಾವಣಿಗೆ ವಿದ್ಯಾಪೋಷಣ ಒದಗಿಸಲಾಯಿತು. ಈ ಕಾರ್ಯಕ್ರಮ ಕುಂದಾಪುರ ತಾಲ್ಲೂಕಿನ ಕಮಲಶಿಲೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ, ಡಾ. ಉಡುಪಿ ಸುಂದರಾಯ ಶೇಟ್-ಸುಮಿತ್ರಾ ಬಾಯಿ ಅವರ ಸುಪುತ್ರ ಉಡುಪಿ ಬನ್ನಂಜೆಯ ಯು. ಎಸ್. ಶ್ರೀಧರ್ ಶೇಟ್ ಅವರು, ತಮ್ಮ ಮಾತೃಶ್ರೀಯವರ ಜನ್ಮಶತಾಬ್ದಿಯ ಸವಿ ನೆನಪಿನಲ್ಲಿ ನಿರ್ಮಿಸಿದ ನೂತನ ಮನೆ ‘ಸುಮಿತ್ರಾ ಸುಂದರ’ ಮನೆಯ ಹಸ್ತಾಂತರ ಕಾರ್ಯಕ್ರಮವೂ ನೆರವೇರಿತು. ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಉಪಸ್ಥಿತರಿದ್ದರು.
Leave a Reply