ಉಡುಪಿ, 27 ಮೇ 2025: ಝುಲ್ ಹಿಜ್ಜಾ 1446ರ ಚಂದ್ರ ದರ್ಶನವಾಗದಿರುವ ಹಿನ್ನೆಲೆಯಲ್ಲಿ, ಈದ್-ಉಲ್-ಅಜ್ಹಾ ದಿನಾಂಕ 7 ಜೂನ್ 2025, ಶನಿವಾರದಂದು ಆಚರಿಸಲಾಗುವುದು ಎಂದು ಉಡುಪಿ ಜಿಲ್ಲೆಯ ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ನ ಖಾಝಿಯಾದ ಮೌಲಾನಾ ಉಬೈದುಲ್ಲಾ ಅಬೂಬಕರ್ ನದ್ವೀ ತಿಳಿಸಿದ್ದಾರೆ.
ಮೋಡ ಕವಿದ ವಾತಾವರಣದಿಂದಾಗಿ ದುಲ್ ಹಿಜ್ಜಾದ ಚಂದ್ರ ಕಾಣಿಸಲಿಲ್ಲ. ಆದ್ದರಿಂದ, ಗುರುವಾರ, ಮೇ 29, 2025, ದುಲ್ ಹಿಜ್ಜಾದ ಮೊದಲ ದಿನ. ಶುಕ್ರವಾರ, ಜೂನ್ 6, 2025, 9ನೇ ದುಲ್ ಹಿಜ್ಜಾ, ಮತ್ತು ಶನಿವಾರ, ಜೂನ್ 7, 2025, ಈದ್-ಉಲ್-ಅಜ್ಹಾ ಆಚರಣೆ ನಡೆಯಲಿದೆ.
ಉಡುಪಿ ಜಿಲ್ಲಾ ಜಮಾತುಲ್ ಮುಸ್ಲಿಮೀನ್ ಪ್ರಧಾನ ಕಾರ್ಯದರ್ಶಿ ಜಮೀರ್ ಅಹ್ಮದ್ ರಶಾದಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Reply