ಬಸ್ ಮತ್ತು ಆಂಬುಲೆನ್ಸ್ ಡಿಕ್ಕಿ: ಆಂಬುಲೆನ್ಸ್ ಚಾಲಕ ಗಂಭೀರ

ಉಡುಪಿ: ಇಲ್ಲಿನ ಬ್ರಹ್ಮಾವರ ಹೇರೂರುಸೇತುವೆ ಬಳಿ ಬಸ್ ಮತ್ತು ಆಂಬುಲೆನ್ಸ್ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಆಂಬುಲೆನ್ಸ್ ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಂದಾಪುರದಿಂದ ಉಡುಪಿಗೆ ಹೋಗುತ್ತಿದ್ದ ದುರ್ಗಾಂಬಾ ಬಸ್ಮತ್ತು ಮಣಿಪಾಲದಿಂದ ಬ್ರಹ್ಮಾವರ ಕಡೆ ಬರುತ್ತಿದ್ದ ಆಂಬುಲೆನ್ಸ್ ಮುಖಾಮುಖಿಢಿಕ್ಕಿಯಾದವು. ಢಿಕ್ಕಿಯ ತೀವ್ರತೆಗೆ ಆಂಬುಲೆನ್ಸ್ ಸಂಪೂರ್ಣ ನಜ್ಜುಗುಜ್ಜಾಗಿದ್ದುಹರಸಾಹಸಪಟ್ಟು ಚಾಲಕನನ್ನು ಹೊರಕ್ಕೆ ತರಲಾಯಿತು. ಈ ಸ೦ಬಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು ಕಿಲೋಮೀ ದೂರದವರೆಗೆ ವಾಹನ ನಿಂತೇ ಇದ್ದವು. ಬ್ರಹ್ಮಾವರ ಪೊಲೀಸರು ಸ್ಥಳಕ್ಕೆ ಆಗಮಿಸಿ ಸುಗಮ ಸಂಚಾರ ಅನುವು ಮಾಡಿಕೊಟ್ಟು ಪ್ರಕರಣ ವನ್ನು ದಾಖಲಿಸಿ ಕೊಂಡಿದ್ದಾರೆ ..
 Source : VKNews

  Share on Whatsapp

Comments

Leave a Reply

Your email address will not be published. Required fields are marked *