ಭಟ್ಕಳ: ಗ್ರಾಮೀಣ ಪೊಲೀಸರಿಂದ “ಗರುಡ ಗ್ಯಾಂಗ್” ದರೋಡೆಕೋರರ ಬಂಧನ

ಭಟ್ಕಳ, 28 ಮೇ 2025: ಇಂದು ಬೆಳಿಗ್ಗೆ 3:00 ಗಂಟೆಗೆ, ಬಿಲಾಲಖಂಡ ಗ್ರಾಮದ ಸಾಗರ ರಸ್ತೆಯ ರಾಜ್ಯ ಹೆದ್ದಾರಿಯಲ್ಲಿ, ದರೋಡೆಗೆ ಸಿದ್ಧತೆ ನಡೆಸುತ್ತಿದ್ದ 3 ಆರೋಪಿಗಳನ್ನು ಭಟ್ಕಳ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. 2 ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳು ಟೊಯೊಟಾ ಇನ್ನೋವಾ ಕಾರಿನಲ್ಲಿ , ಚಾಕು, ಖಾರಪುಡಿ, ಮಂಕಿ ಕ್ಯಾಪ್, ಬೆಲ್ಟ್, ತಾಡಪತ್ರ ಮುಂತಾದ ದರೋಡೆಗೆ ಬೇಕಾದ ಸಾಮಗ್ರಿಗಳೊಂದಿಗೆ ಗುಳ್ಮೆ ರಸ್ತೆ ಕ್ರಾಸ್ ಬಳಿಯ ಕತ್ತಲೆಯಲ್ಲಿ ಕಾದು ಕುಳಿತಿದ್ದರು.

ಪಿಎಸ್‌ಐ ಶ್ರೀ ರನ್ನಗೌಡ ಪಾಟೀಲ್ ಅವರು ತಪಾಸಣೆಗೆ ತೆರಳಿದಾಗ, ಆರೋಪಿಗಳು ತಪ್ಪಿಸಿಕೊಳ್ಳಲು ಕಾರನ್ನು ಹಿಂದಕ್ಕೆ ಚಲಾಯಿಸಿ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದರು. “ಗರುಡ ಗ್ಯಾಂಗ್”ನ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ಸಂಖ್ಯೆ: 56/2025, BNS-2023ರ ಸೆಕ್ಷನ್ 310(4), 310(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಬಂಧಿತ ಆರೋಪಿಗಳ ವಿವರ:

  1. ಜಲೀಲ್ ಹುಸೇನ್, ತಂದೆ: ಪಿ.ಕೆ. ಮೈಯದ್, ವಯಸ್ಸು: 39, ವೃತ್ತಿ: ಚಾಲಕ, ವಿಳಾಸ: ಮಂಗಳೂರು. ಈತನ ವಿರುದ್ಧ ಈಗಾಗಲೇ 11 ಪ್ರಕರಣಗಳು ದಾಖಲಾಗಿವೆ. ಜಿಲ್ಲಾಂತರ ಕುಖ್ಯಾತ ಕಳ್ಳನಾಗಿದ್ದು
  2. ನಾಸಿರ್ ಹಕೀಂ, ತಂದೆ: ಮೊಹಿದ್ದೀನ್ ಅಬುಲ್ ಖಾದರ್, ವಯಸ್ಸು: 26, ವೃತ್ತಿ: ಚಾಲಕ, ವಿಳಾಸ: ಗಾಂಧಿನಗರ, ಹೆಬಲೆ, ಭಟ್ಕಳ. ಈತನ ವಿರುದ್ಧ 2 ಪ್ರಕರಣಗಳು ದಾಖಲಾಗಿವೆ. ಜಿಲ್ಲಾಂತರ ಕುಖ್ಯಾತ ಕಳ್ಳ.
  3. ಕಾನೂನಿಗೆ ಸಂಘರ್ಷಕ್ಕೆ ಒಳಗಾದ ಬಾಲಕ, ಈತನ ವಿರುದ್ಧ ಒಂದು ಪ್ರಕರಣ ದಾಖಲಾಗಿದೆ.

ಪರಾರಿಯಾದ ಆರೋಪಿಗಳು:

  1. ಜಿಶಾನ್, ಮುಗ್ಧುಂ ಕಾಲೋನಿ, ಭಟ್ಕಳ.
  2. ನಬೀಲ್, ಬಟ್ಟಾಗಾಂವ್ , ಭಟ್ಕಳ.

ಪರಾರಿಯಾದ ಆರೋಪಿಗಳನ್ನು ಪತ್ತೆಹಚ್ಚಲು ವಿಶೇಷ ತಂಡವೊಂದನ್ನು ರಚಿಸಲಾಗಿದೆ.

ವಶಪಡಿಸಿಕೊಂಡ ವಸ್ತುಗಳು:

  1. ನೋಕಿಯಾ ಕೀಪ್ಯಾಡ್ ಮೊಬೈಲ್-1
  2. ನಥಿಂಗ್ 2A ಮೊಬೈಲ್-1
  3. ನಗದು ರೂ. 1500/-
  4. ಚಾಕುಗಳು-2
  5. ಖಾರಪುಡಿ
  6. ಮಂಕಿ ಕ್ಯಾಪ್
  7. ಸೊಂಟದ ಬೆಲ್ಟ್
  8. ನೀಲಿ ತಾಡಪತ್ರ-1
  9. ಬಿಳಿ ಪಾಲಿಥೀನ್ ಬ್ಯಾಗ್-1
  10. ಟೊಯೊಟಾ ಇನ್ನೋವಾ ಕಾರು

ಕಾರ್ಯಾಚರಣೆಯ ಮಾರ್ಗದರ್ಶನ:
ಈ ಕಾರ್ಯಾಚರಣೆಯನ್ನು ಶ್ರೀ ಎಂ. ನಾರಾಯಣ್, ಪೊಲೀಸ್ ಅಧೀಕ್ಷಕರು, ಯು.ಕೆ. ಕಾರವಾರ, ಶ್ರೀ ಕೃಷ್ಣಮೂರ್ತಿ ಜಿ., ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಶ್ರೀ ಜಗದೀಶ ಎಂ., ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಶ್ರೀ ಮಹೇಶ್ ಎಂ.ಕೆ., ಉಪ ವಿಭಾಗಾಧಿಕಾರಿ, ಭಟ್ಕಳ, ಹಾಗೂ ಶ್ರೀ ದಿವಾಕರ್ ಪಿ.ಎಂ., ಪೊಲೀಸ್ ಇನ್ಸ್‌ಪೆಕ್ಟರ್, ಭಟ್ಕಳ ನಗರ ಠಾಣೆ, ಪಿಎಸ್‌ಐ ರನ್ನಗೌಡ ಪಾಟೀಲ್, ಭಟ್ಕಳ ಗ್ರಾಮೀಣ ಠಾಣೆ, ಮತ್ತು ಇತರ ಸಿಬ್ಬಂದಿಗಳಾದ ವಿನಾಯಕ್ ಪಾಟೀಲ್, ಅಂಬರೀಶ ಕುಂಬಾರಿ, ವಿನೋದ್ ಜಿ.ಬಿ., ಲೋಕೇಶ ಕಟ್ಟಿ, ನಿಂಗನಗೌಡ ಪಾಟೀಲ್, ಜಗದೀಶ ನಾಯಕ್, ವಿಜಯ ಜಾಧವ್, ದುರ್ಗೇಶ ನಾಯಕ್, ದೇವರಾಜ ಮೊಗೇರ ಅವರು ಪಾಲ್ಗೊಂಡಿದ್ದರು.

Comments

Leave a Reply

Your email address will not be published. Required fields are marked *