ಭಟ್ಕಳ 31 ಮೇ 2025: ಅರಣ್ಯ ಪ್ರದೇಶದಲ್ಲಿ ಇಸ್ಪೀಟ್ ಜುಗಾರಾಟ ಅಂದರ್-ಬಾಹರ್ ಆಡುತ್ತಿದ್ದ ವೇಳೆ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿ 9 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಾಳಿ ವೇಳೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಬೈಂದೂರು ತಾಲೂಕಿನ ಉಪ್ಪುಂದ ನಿವಾಸಿ ಗೋಪಾಲ ಲಕ್ಷ್ಮಣ ಖಾರ್ವಿ (೪೨), ಭಟ್ಕಳ ತಾಲೂಕಿನ ಉತ್ತರಕೊಪ್ಪದ ನಾಗರಾಜ ನಾರಾಯಣ ನಾಯ್ಕ (೩೪), ಸಿದ್ದಾಪುರ ತಾಲೂಕಿನ ಜಬ್ದಾರ ಅಬ್ದುಲ್ ಖಾದರ ಸಾಬ್ (೩೩) ಬಂಧಿತರು. ಇನ್ನುಳಿದ ಆರೋಪಿಗಳಾದ ಮುರುಡೇಶ್ವರದ ಜಯಂತ ನಾರಾಯಣ ನಾಯ್ಕ, ಇರ್ಫಾನ್, ಶಿರಾಲಿ ಕೋಟೆಬಾಗಿಲು ನಿವಾಸಿಗಳಾದ ಬಾಬು ಅಣ್ಣಪ್ಪ ನಾಯ್ಕ, ದತ್ತಾ ಮಾದೇವ ನಾಯ್ಕ, ಉತ್ತರಕೊಪ್ಪದ ಕುಮಾರ ಗೌಡ, ಬೈಂದೂರಿನ ರಾಜೇಶ ಮತ್ತಿತರರು ನಾಪತ್ತೆಯಾಗಿದ್ದಾರೆ.
ಭಟ್ಕಳ ತಾಲೂಕಿನ ನೂಜ್ ಗ್ರಾಮದ ಅರಣ್ಯ ಪ್ರದೇಶ ಬಳಿ ಮೇ ೩೧ರಂದು ಅಂದರ್-ಬಾಹರ್ ಜೂಗಾರಾಟ ಆಡುತ್ತಿದ್ದಾಗ ದಾಳಿ ನಡೆದಿತ್ತು. ದಾಳಿ ವೇಳೆ ೯೭೦೦ ರೂ. ನಗದು, ೪ ಮೊಬೈಲ್ ಸೇರಿದಂತೆ ಇನ್ನೂ ಉಳಿದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪಿ.ಎಸ್.ಐ. ಭರಮಪ್ಪ ಬೆಳಗಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
Leave a Reply