ಗಂಗೊಳ್ಳಿ, ಜೂನ್ 2, 2025 – ಶ್ರೀ ಜಟ್ಟಿಗೇಶ್ವರ ಯೂತ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ 22ನೇ ವರ್ಷದ ಉಚಿತ ಪುಸ್ತಕ ವಿತರಣಾ ಸಮಾರಂಭವು ಜೂನ್ 1, 2025ರ ಭಾನುವಾರ ಮಧ್ಯಾಹ್ನ 4:00 ಗಂಟೆಗೆ ಶ್ರೀ ರಾಮ ಮಂದಿರ, ಗಂಗೊಳ್ಳಿಯಲ್ಲಿ ಯಶಸ್ವಿಯಾಗಿ ನೆರವೇರಿತು. 1991ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ಶೈಕ್ಷಣಿಕ ಪ್ರತಿಭೆಯನ್ನು ಗೌರವಿಸುವ ಮತ್ತು ಶಿಕ್ಷಣದ ಉತ್ಸಾಹವನ್ನು ಉತ್ತೇಜಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶರತ್ಕುಮಾರ್ ರಾವ್ ಮಂಗಳೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಸದಾಶಿವ ಖಾರ್ವಿ (ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ), ಶ್ರೀ ಸುಬ್ರಹ್ಮಣ್ಯ ಶೆಟ್ಟಿ (ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ), ಶ್ರೀ ರಾಜೇಂದ್ರ ಸೇರುಗಾರ (ಗ್ರಾಮ ಪಂಚಾಯತ್ ಗಂಗೊಳ್ಳಿ ಸದಸ್ಯ), ಶ್ರೀ ರಾಘವೇಂದ್ರ ಖಾರ್ವಿ (ಬೆಂಗಳೂರಿನ ಉದ್ಯಮಿ), ಶ್ರೀ ನಾಗರಾಜ ಖಾರ್ವಿ (ಶ್ರೀ ಗಣೇಶೋತ್ಸವ ಸಮಿತಿ ಲೈಟ್ಹೌಸ್ ಗಂಗೊಳ್ಳಿ ಅಧ್ಯಕ್ಷ), ಶ್ರೀ ಐ. ರಾಘವೇಂದ್ರ ಪೈ (ಗಂಗೊಳ್ಳಿ ಪತ್ರಕರ್ತ), ಶ್ರೀ ನರೇಂದ್ರ ಎಸ್. ಗಂಗೊಳ್ಳಿ (ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು, ಗಂಗೊಳ್ಳಿ ಉಪನ್ಯಾಸಕ), ಶ್ರೀ ಚಂದ್ರ ಕೆ. ಖಾರ್ವಿ (ಶ್ರೀ ಜಟ್ಟಿಗೇಶ್ವರ ಯೂತ್ ಕ್ಲಬ್ ಲೈಟ್ಹೌಸ್ ಗಂಗೊಳ್ಳಿ ಅಧ್ಯಕ್ಷ), ಶ್ರೀ ಮಡಿ ಮಾಧವ ಖಾರ್ವಿ (ಶ್ರೀ ಜಟ್ಟಿಗೇಶ್ವರ ಯೂತ್ ಕ್ಲಬ್ ಲೈಟ್ಹೌಸ್ ಗಂಗೊಳ್ಳಿ ಸ್ಥಾಪಕ ಅಧ್ಯಕ್ಷ), ಮತ್ತು ಶ್ರೀಮತಿ ಬಯಂತಿ ಜ. ಖಾರ್ವಿ (ಶ್ರೀ ಜಟ್ಟಿಗೇಶ್ವರ ಮಹಿಳಾ ಮಂಡಳಿ ಲೈಟ್ಹೌಸ್ ಗಂಗೊಳ್ಳಿ ಅಧ್ಯಕ್ಷ) ಉಪಸ್ಥಿತರಿದ್ದರು.
ಕಾರ್ಯಕ್ರಮದ ವಿಶೇಷತೆಯಾಗಿ, 2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ಅಂತಿಮ ಪರೀಕ್ಷೆಯಲ್ಲಿ ಕರ್ನಾಟಕಕ್ಕೆ ದ್ವಿತೀಯ ಸ್ಥಾನ ಪಡೆದ ಕುಮಾರಿ ಸುಶ್ರೀದಾ ಎಸ್. ಗಾಣಿಗ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಯಿತು
Leave a Reply