ಬೈಂದೂರು: ದಿನಾಂಕ 05.06.2025 ರಂದು ಬೈಂದೂರು ಠಾಣೆಯ ಪಿಎಸ್ಐ ತಿಮ್ಮೇಶ್ ಮತ್ತು ಸಿಬ್ಬಂದಿಗಳು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಬೆಳಗ್ಗೆ 3:30 ಗಂಟೆ ಸುಮಾರಿಗೆ ಕೊಲ್ಲೂರಿನಿಂದ ಅಕ್ರಮವಾಗಿ ಜಾನುವಾರುಗಳನ್ನು ತುಂಬಿಕೊಂಡ ಇಚರ್ ಲಾರಿಯೊಂದಿಗೆ ಕಾರೊಂದು ಬೈಂದೂರು ಕಡೆಗೆ ಬರುತ್ತಿರುವ ಬಗ್ಗೆ ಮಾಹಿತಿ ದೊರೆಯಿತು. ಯಡ್ತರೆ ಜಂಕ್ಷನ್ನಲ್ಲಿ ವಾಹನ ತಪಾಸಣೆ ನಡೆಸುವ ವೇಳೆ, ಅತಿವೇಗದಲ್ಲಿ ಬಂದ ಲಾರಿ ಮತ್ತು ಕಾರು ನಿಲ್ಲಿಸಲು ಸೂಚಿಸಿದರೂ ಪರಾರಿಯಾದವು.

ಪೊಲೀಸರು ಲಾರಿಯನ್ನು ಮತ್ತು ಕಾರನ್ನು ಬೆನ್ನಟ್ಟಿ, 9 ಗಂಡು ಎತ್ತುಗಳು ಮತ್ತು 2 ಹೋರಿಗಳನ್ನು ಅಕ್ರಮವಾಗಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಲಾರಿಯನ್ನು ಹಾಗೂ ಅದನ್ನು ಹಿಂಬಾಲಿಸುತ್ತಿದ್ದ ಕಾರನ್ನು ವಶಪಡಿಸಿಕೊಂಡರು. ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 116/2025ರಂತೆ ಕರ್ನಾಟಕ ಗೋವು ವಧೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 2020, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960 ಮತ್ತು IMV ಕಾಯ್ದೆಯ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿದೆ.
Leave a Reply