ಗಂಗೊಳ್ಳಿ, ಜೂನ್ 07, 2025: ಇಸ್ಲಾಂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾದ ಈದ್ ಉಲ್-ಅಝ್ಹಾ (ಬಕ್ರೀದ್) ಅನ್ನು ಗಂಗೊಳ್ಳಿಯ ಮುಸ್ಲಿಂ ಸಮುದಾಯವು ಶನಿವಾರ, ಜೂನ್ 7, 2025 ರಂದು ಅತ್ಯಂತ ಭಕ್ತಿಭಾವ ಮತ್ತು ಸಡಗರದಿಂದ ಆಚರಿಸಿತು. ಈ ಹಬ್ಬವು ಪ್ರವಾದಿ ಇಬ್ರಾಹಿಂ ಅವರ ದೇವರಿಗೆ ಸಮರ್ಪಣೆ ಮತ್ತು ತ್ಯಾಗದ ಸಂದೇಶವನ್ನು ಸಾರುತ್ತದೆ.

ಗಂಗೊಳ್ಳಿಯ ಜಾಮಿಯಾ ಮಸೀದಿ, ಮುಹಿಯುದ್ದೀನ್ ಜುಮಾ ಮಸೀದಿ, ಶಾಹಿ ಮಸೀದಿ ಮತ್ತು ಸುಲ್ತಾನ್ ಮಸೀದಿ (ತಾತ್ಕಾಲಿಕ)ಗಳಲ್ಲಿ ಬೆಳಿಗ್ಗೆ ಈದ್ ಉಲ್-ಅಝ್ಹಾ ನಮಾಜ್ಗಾಗಿ ದೊಡ್ಡ ಸಂಖ್ಯೆಯ ಭಕ್ತರು ಒಟ್ಟಿಗೆ ಸೇರಿದರು. ಎಳೆಯ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಹೊಸ ಬಟ್ಟೆಬರೆ ಧರಿಸಿ, ಅತ್ತರ್ ಹಚ್ಚಿ, ನಾನಾ ಬಗೆಯ ತಿಂಡಿ-ತಿನಿಸು ತಿಂದು ಹಬ್ಬವನ್ನು ಅತ್ಯಂತ ಶ್ರದ್ಧೆಯಿಂದ ಸಂಭ್ರಮಿಸಿದರು. ಈದ್ ನಮಾಜ್ ಮತ್ತು ಖುತ್ಬಾದ ಬಳಿಕ ಭಕ್ತರು ದಫನ ಭೂಮಿಗೆ ತೆರಳಿ, ಅಗಲಿದ ಕುಟುಂಬದ ಸದಸ್ಯರ ಮಗ್ಫಿರತ್ಗಾಗಿ ಪ್ರಾರ್ಥಿಸಿದರು. ಬಳಿಕ ಕುಟುಂಬಸ್ಥರು, ಸ್ನೇಹಿತರು ಮತ್ತು ಸಮೀಪದ ನಿವಾಸಿಗಳ ಮನೆಗೆ ತೆರಳಿ ಈದ್ ಶುಭಾಶಯ ಸಲ್ಲಿಸಿದರು.

ವಿಶೇಷ ಪ್ರಾರ್ಥನೆಗಳ ನಂತರ, ಇಮಾಮ್ರವರು ತ್ಯಾಗ, ದಾನ ಮತ್ತು ಸಮುದಾಯದ ಒಗ್ಗಟ್ಟಿನ ಬಗ್ಗೆ ಉಪದೇಶ ನೀಡಿದರು.
Leave a Reply