ಬೈಂದೂರು, ಜೂನ್ 07, 2025: ಬಿಜೂರು ಗ್ರಾಮದ ಬಲವಾಡಿ ನವೋದಯ ಕಾಲೋನಿ ಸಮೀಪದ ಸರಕಾರಿ ಹಾದಿಯ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ನಡೆಸುತ್ತಿದ್ದ ಆರೋಪದಡಿ ಬೈಂದೂರು ಪೊಲೀಸರು ದಾಳಿ ನಡೆಸಿ, ಐವರನ್ನು ವಶಕ್ಕೆ ಪಡೆದಿದ್ದಾರೆ.
ದಿನಾಂಕ 06-06-2025ರಂದು ಮಧ್ಯಾಹ್ನ 4:45 ಗಂಟೆಗೆ, ಬೈಂದೂರು ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮೇಶ್ ಬಿ.ಎನ್. ರವರಿಗೆ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಮಾಹಿತಿ ದೊರೆತು, ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿ ನಡೆಸಿದಾಗ, ಜಯದೀಪ (29, ಕಿರಿಮಂಜೇಶ್ವರ), ಮಧುಕರ (34, ಬಿಜೂರು), ಹೆರಿಯಣ್ಣ (42, ಬಿಜೂರು), ರಾಘವೇಂದ್ರ ದಾಸ್ (30, ಕಾಲ್ತೋಡು), ಕೃಷ್ಣದಾಸ್ (ಉಪ್ಪುಂದ), ಚಂದ್ರ (ಮರವಂತೆ), ಅಶೋಕ (ಉಪ್ಪುಂದ), ರಾಘವೇಂದ್ರ (ಹರಿಕೆರೆ), ಮಹೇಶ್ (ಬಿಜೂರು), ಮತ್ತು ಪಾಂಡುರಂಗ ನದಿಕಂಠ (ಉಪ್ಪುಂದ) ಈ ಕೃತ್ಯದಲ್ಲಿ ಭಾಗಿಯಾಗಿದ್ದರು. ಇವರ ಪೈಕಿ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಾಳಿಯ ವೇಳೆ, 5 ಕೋಳಿ ಹುಂಜಗಳು, ಕೋಳಿ ಅಂಕಕ್ಕೆ ಪಣವಾಗಿಟ್ಟ 1,490 ರೂಪಾಯಿ, ಎರಡು ಹರಿತವಾದ ಕೋಳಿ ಬಾಳುಗಳು ಮತ್ತು ಎರಡು ದಾರಗಳನ್ನು ಮಹಜರು ಮೂಲಕ ಸ್ವಾಧೀನಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ 11(1)A, ಪ್ರಾಣಿ ಹಿಂಸೆ ನಿಷೇಧ ಕಾಯಿದೆ ಹಾಗೂ ಕರ್ನಾಟಕ ಪೊಲೀಸ್ ಕಾಯಿದೆಯ ಕಲಂ 87 ಮತ್ತು 93ರ ಅಡಿಯಲ್ಲಿ
Leave a Reply