ಮಣಿಪಾಲ, ಜೂನ್ 07, 2025: ಮಣಿಪಾಲದ ಹೆರ್ಗಾ ಗ್ರಾಮದ ಸರಳಬೆಟ್ಟು ನಿವಾಸಿ ಸಂಜಯ್‌ಕುಮಾರ್ ಮೊಹಂತಿ (38) ದಾಖಲಿಸಿದ ದೂರಿನ ಆಧಾರದ ಮೇರೆಗೆ, ಆನ್‌ಲೈನ್ ವಂಚನೆಯ ಆರೋಪದಡಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಸಿಟಿ ಗ್ರೂಪ್ ಆಫ್ ಕಂಪನಿ ಎಂಬ ಹೆಸರಿನ ಕಂಪನಿಯು ಸಂಜಯ್‌ಕುಮಾರ್ ಅವರ ವಾಟ್ಸ್‌ಆಪ್‌ಗೆ ಲಿಂಕ್ ಕಳುಹಿಸಿ, ಟ್ರೇಡ್ ಮಾರ್ಕೆಟ್‌ನಲ್ಲಿ ರಿಜಿಸ್ಟ್ರೇಷನ್ ಮಾಡಿಸಿಕೊಂಡು ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿದೆ. ಈ ಆಮಿಷಕ್ಕೆ ಬಲಿಯಾದ ಸಂಜಯ್‌ಕುಮಾರ್ ಅವರ ಎಸ್‌ಬಿಐ ಖಾತೆಯಿಂದ NEFT, RTGS, ಮತ್ತು IMPS ಮೂಲಕ ಹಂತಹಂತವಾಗಿ ಒಟ್ಟು 20,37,200 ರೂಪಾಯಿಗಳನ್ನು ಹೂಡಿಕೆ ಮಾಡಿಸಿಕೊಳ್ಳಲಾಗಿದೆ. ಆದರೆ, ಕಂಪನಿಯು ಸರ್ವಿಸ್ ಚಾರ್ಜ್ ಮತ್ತು ಖಾತೆ ಕ್ಲಿಯರೆನ್ಸ್‌ಗೆ ಹೆಚ್ಚಿನ ಹಣ ಕೇಳಿ, ಹೂಡಿಕೆ ಮಾಡಿದ ಮೊತ್ತವನ್ನು ಮರುಪಾವತಿ ಮಾಡದೆ ಮೋಸ ಮಾಡಿದೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ BNS ಕಲಂ 316(2), 318(4) ಮತ್ತು ಐಟಿ ಕಾಯಿದೆಯ ಕಲಂ 66(ಸಿ), 66(ಡಿ) ರ ಅಡಿಯಲ್ಲಿ ಅಪರಾಧ ಕ್ರಮಾಂಕ 93/2025 ರಂತೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
Leave a Reply