ಬೈಂದೂರು, ಜೂನ್ 9, 2025: ತೆಗ್ಗರ್ಸೆ ಗ್ರಾಮದ ಸುಭಾಶ (32) ಎಂಬವರು ಗುತ್ತಿಗೆ ವ್ಯವಹಾರದಲ್ಲಿ ತೊಡಗಿದ್ದು, ತಮ್ಮ ವಾಹನಗಳನ್ನು ನಿಲ್ಲಿಸಲು ಯಡ್ತರೆ ಗ್ರಾಮದಲ್ಲಿ ಸೂಕ್ತ ಜಾಗವನ್ನು ಹುಡುಕುತ್ತಿದ್ದ ವೇಳೆ ದೊಡ್ಡಪ್ಪನ ಮಗನಾದ ಶಂಕರ (2ನೇ ಆರೋಪಿ) ಜಮೀನು ಒಡಮಾಡಿಕೊಡುವುದಾಗಿ ಭರವಸೆ ನೀಡಿ, ರೊಕಿ ಡಯಾಸ್ (1ನೇ ಆರೋಪಿ) ಎಂಬಾತನನ್ನು ಪರಿಚಯಿಸಿದ್ದಾನೆ. ರೊಕಿ ಡಯಾಸ್, ಯಡ್ತರೆ ಗ್ರಾಮದ ಸರ್ವೆ ನಂಬರ್ 30/3 A1 ರಲ್ಲಿ 0.40 ಎಕ್ರೆ, 30/3A2 ರಲ್ಲಿ 0.14 ಎಕ್ರೆ ಮತ್ತು 30/9 ರಲ್ಲಿ 0.26 ಎಕ್ರೆ ಜಮೀನನ್ನು ತೋರಿಸಿ, ಸೆಂಟ್ಗೆ 3.5 ಲಕ್ಷ ರೂ. ದರದಂತೆ ಒಟ್ಟು 2.66 ಕೋಟಿ ರೂ.ಗೆ ಕರಾರು ಪತ್ರ ಮಾಡಿಕೊಂಡಿದ್ದಾನೆ.
ಸುಭಾಶ ಅವರು 1.80 ಕೋಟಿ ರೂ. ಬ್ಯಾಂಕ್ ಖಾತೆ ಮೂಲಕ ಮತ್ತು 1 ಲಕ್ಷ ರೂ. ನಗದಾಗಿ ಆರೋಪಿಗೆ ಪಾವತಿಸಿದ್ದು, ಉಳಿದ ಮೊತ್ತವನ್ನು ಕ್ರಯಪತ್ರದ ವೇಳೆ ನೀಡಲು ಒಪ್ಪಿಗೆ ಮಾಡಿಕೊಂಡಿದ್ದರು. ಆದರೆ, 15 ದಿನಗಳ ಬಳಿಕ ಶಂಕರ, ಜಮೀನಿನ ದಾಖಲೆಗಳಲ್ಲಿ ದೋಷಗಳಿರುವುದಾಗಿ ತಿಳಿಸಿ, ಅವುಗಳನ್ನು ಸರಿಪಡಿಸಿ ಕ್ರಯಪತ್ರ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾನೆ.
ದಾಖಲೆ ಪರಿಶೀಲನೆಯಲ್ಲಿ 0.14 ಎಕ್ರೆ ಮತ್ತು 0.26 ಎಕ್ರೆ ಜಮೀನು ಪ್ರಾನ್ಸಿಸ್ ಪೀಟರ್ ರೆಬೆಲ್ಲೋ ಹೆಸರಿನಲ್ಲಿರುವುದು ಕಂಡುಬಂದಿದೆ. ಈ ಬಗ್ಗೆ ವಿಚಾರಿಸಿದಾಗ, ಆರೋಪಿಗಳು ಜಮೀನನ್ನು 1ನೇ ಆರೋಪಿಯ ಹೆಸರಿಗೆ ನೊಂದಣಿ ಮಾಡಿ ಕ್ರಯಪತ್ರ ನೀಡುವುದಾಗಿ ನಂಬಿಸಿದ್ದಾರೆ. ಆದರೆ, ನಂತರ ಕರಾರು ಪತ್ರವನ್ನು ರದ್ದುಗೊಳಿಸಿ ಸುಭಾಶ ಅವರಿಗೆ ನೋಟೀಸ್ ನೀಡಿದ್ದಾರೆ.
ಮತ್ತೊಮ್ಮೆ ದಾಖಲೆಗಳನ್ನು ಸರಿಪಡಿಸಿ ಕ್ರಯಪತ್ರ ಮಾಡಿಕೊಡುವುದಾಗಿ ಆರೋಪಿಗಳು ಭರವಸೆ ನೀಡಿದರೂ, ಜಮೀನಿನ ಸರ್ವೆ ನಂಬರ್ 30/3 A1 ರಲ್ಲಿ ಬೈಂದೂರು ಸಾಗರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಿಂದ 1 ಕೋಟಿ ರೂ. ಸಾಲ ಪಡೆದಿರುವುದು ಬೆಳಕಿಗೆ ಬಂದಿದೆ. ಜೂನ್ 7, 2025 ರಂದು ಈ ಬಗ್ಗೆ ವಿಚಾರಿಸಿದಾಗ, ಆರೋಪಿಗಳು ಸುಭಾಶ ಅವರಿಗೆ ಬೆದರಿಕೆ ಹಾಕಿ, ವಂಚಿಸಿರುವುದಾಗಿ ದೂರು ದಾಖಲಾಗಿದೆ.
ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 118/2025ರಡಿ ಕಲಂ 316(2), 318(2),
Leave a Reply