ಭಟ್ಕಳ : ಇಲ್ಲಿನ ಹೋಟೆಲೊಂದರ ಬಳಿ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದ ನಾಲ್ವರ ವಿರುದ್ಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಟ್ಕಳದ ಸಫಾ ಸ್ಟ್ರೀಟ್ ನಿವಾಸಿ ಮಹ್ಮದ್ ಇಮ್ರಾನ್ ಸಯ್ಯದ್ ಅಬು ಮಹ್ಮದ್ (27), ಮಗ್ದುಂ ಕಾಲೋನಿಯ ಅಬು ತಾಹೀರ್ ತಬ್ರೇಜ್ ಭಾಷಾ (25) ಮತ್ತು ಹೊನ್ನಾವರ ತಾಲೂಕಿನ ಕರ್ಕಿ ನಿವಾಸಿಗಳಾದ ಮಹ್ಮದ್ ಅಲ್ತಾಫ್ ಅಬ್ದುಲ್ ರೆಹಮಾನ್ (35), ಅಲ್ತಾಫ್ ಅಬ್ದುಲ್ ಖಾದರ್ ಸಾಬ್ (27) ಪರಸ್ಪರ ಹೊಡೆದಾಡಿಕೊಂಡು ಗಾಯಗೊಂಡಿದ್ದರು. ನಾಲ್ವರ ವಿರುದ್ಧ ಭಟ್ಕಳ ಶಹರ ಪೊಲೀಸ್ ಠಾಣೆಯ ಪಿಎಸೈ ನವೀನ್ ಎಸ್.ನಾಯ್ಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Leave a Reply