ಮದುವೆಯಾಗುವುದಾಗಿ ನಂಬಿಸಿ, ಮೋಸ: ಯುವತಿ ಆತ್ಮಹತ್ಯೆಗೆ ಯತ್ನ

ಶಂಕರನಾರಾಯಣ: ಮದುವೆಯಾಗುವುದಾಗಿ ನಂಬಿಸಿ ಪ್ರಿಯಕರ ಮೋಸ ಮಾಡಿರುವ ಹಿನ್ನೆಲೆ ಯುವತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕುಂದಾಫುರ ತಾಲೂಕಿನ ಸಿದ್ಧಾಪುರ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನು ಕುಂದಾಪುರ ತಾಲೂಕಿನ ಸಿದ್ಧಾಪುರ ಗ್ರಾಮದ ಅನುಷಾ(23) ಎಂದು ಗುರುತಿಸಲಾಗಿದೆ.
ಅನುಷಾ ಅವರ ಅಣ್ಣ ಅರುಣ ಎನ್ನುವವರ ಪಿಕಪ್‌ ವಾಹನಕ್ಕೆ ಸುಮಾರು ಆರು ತಿಂಗಳ ಡ್ರೈವರ್‌ ಆಗಿ ಸೇರಿಕೊಂಡಿದ್ದ ಹಳ್ಳಿಹೊಳೆಯ ಭರತ್‌ ಎಂಬಾತ ಅನುಷಾಳನ್ನು ಪ್ರೀತಿಯ ಬಲೆಗೆ ಬೀಳಿಸಿದ್ದ. ಈ ವಿಚಾರ ಅನುಷಾಳ ಮನೆಯವರಿಗೆ ಎರಡು ತಿಂಗಳ ಹಿಂದೆ ತಿಳಿದುಬಂದಿದ್ದು, ಈ ಬಗ್ಗೆ ಅನುಷಾಳ ಬಳಿ ವಿಚಾರಿಸಿದಾಗ ಆತನು ತನ್ನನ್ನ ಮದುವೆಯಾಗುವುದಾಗಿ ಹೇಳಿದ್ದಾನೆ ಎಂದು ಹೇಳಿದ್ದಾಳೆ. ಆಕೆ ಪರಿಶಿಷ್ಟ ಜಾತಿಯವಳು ಎಂದು ತಿಳಿದಿದ್ದರೂ ಕೂಡ ಆಕೆಯನ್ನು ಪ್ರೀತಿ ಮಾಡುತ್ತಿದ್ದ ಆತ, ಕೆಲವೊಮ್ಮೆ ಅನುಷಾಳನ್ನು ಸಿದ್ಧಾಪುರದಿಂದ ಆತನ ಬೈಕ್ ನಲ್ಲಿ ತಾರೆಕೊಡ್ಲು ಬಸ್ ನಿಲ್ದಾಣಕ್ಕೆ ತಂದು ಬಿಟ್ಟು ಹೋಗುತ್ತಿದ್ದನು.
ಭರತ್‌ ನ ಬಳಿ ಮದುವೆ ವಿಚಾರ ಪ್ರಸ್ತಾಪಿಸಿದಾಗ ಆತ ತಾನು ನಿನ್ನನ್ನು ಮದುವೆ ಆಗುವುದಿಲ್ಲ ಎಂದು ತಿಳಿಸಿದ್ದಾನೆ. ಇದರಿಂದ ಮನನೊಂದ ಯುವತಿ ಇಲಿ ಪಾಷಾಣವನ್ನು ಸೇವಿಸಿದ್ದು,ಕೂಡಲೇ ಆಕೆಯನ್ನು ಚಿಕಿತ್ಸೆಗಾಗಿ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಯುವತಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅನುಷಾ ಪರಿಶಿಷ್ಟ ಜಾತಿಗೆ ಸೇರಿದವಳು ಎನ್ನುವ ಕಾರಣಕ್ಕೆ ಭರತ್‌ ಆಕೆಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Comments

Leave a Reply

Your email address will not be published. Required fields are marked *