ಬ್ರಹ್ಮಾವರ, ಜೂನ್ 18, 2025: ಶಾಲಾ ಬಸ್ಸಿಗೆ ಹಿಂದಿನಿಂದ ಲಾರಿಯೊಂದು ಗುದ್ದಿದ ಪರಿಣಾಮ ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರ ಧರ್ಮವರ ಆಡಿಟೋರಿಯಂ ಸರ್ಕಲ್ ಬಳಿ ನಡೆದಿದೆ.
ಜಿ.ಎಂ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿದ್ದ ವಾಹನಕ್ಕೆ ಕುಂದಾಪುರದಿಂದ ಬಂದಿದ್ದ ಈಚಾರ್ ಲಾರಿಯೊಂದು ಧರ್ಮವರ ಆಡಿಟೋರಿಯಂ ಸರ್ಕಲ್ ಬಳಿ ಯೂಟರ್ನ್ ಮಾಡುವ ಸಂದರ್ಭ ಗುದ್ದಿದೆ.
ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಈ ಅಪಘಾತಕ್ಕೆ ಶಾಲಾ ಬಸ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗುತ್ತಿದ್ದು ಬ್ರಹ್ಮಾವರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
Leave a Reply