ಶಿರಸಿ, ಜೂನ್ 24, 2025: ಶಿರಸಿಯ ಯಲ್ಲಾಪುರ ನಾಕಾದಲ್ಲಿ ಅಕ್ರಮ ಗಾಂಜಾ ಮಾರಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ತಂಡವು ಮಂಗಳವಾರ ರಾತ್ರಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದೆ.
ಬಂಧಿತ ಆರೋಪಿಗಳು ಇಕ್ಬಾಲ್ ಷೇಖ್ (27, ಮುಸ್ಲಿಂಗಲ್ಲಿ, ಶಿರಸಿ) ಮತ್ತು ಇಮ್ರಾನ್ ಬಿಣ್ಣಿ (20, ರಾಜೀವ ನಗರ, ಶಿರಸಿ) ಎಂದು ಗುರುತಿಸಲಾಗಿದೆ. ಪೊಲೀಸರು ಆರೋಪಿಗಳಿಂದ 286 ಗ್ರಾಂ ಗಾಂಜಾ (ಮೌಲ್ಯ 14,300 ರೂ.), ಸ್ಯಾಮ್ಸಂಗ್ ಮತ್ತು ರಿಯಲ್ಮಿ ಕಂಪನಿಯ ಎರಡು ಮೊಬೈಲ್ ಫೋನ್ಗಳು (ಮೌಲ್ಯ 4,500 ರೂ.) ಹಾಗೂ 750 ರೂ. ನಗದು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣವನ್ನು ಸಂಖ್ಯೆ 700/2025ರಡಿ ಎನ್ಡಿಪಿಎಸ್ ಆಕ್ಟ್ ಕಲಂ 8(c), 20(b)(ii)(A) ಪ್ರಕಾರ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.
ಕಾರ್ಯಾಚರಣೆಯು ಪೊಲೀಸ್ ಅಧೀಕ್ಷಕ ಶ್ರೀ ನಾರಾಯಣ (ಐಎಎಸ್), ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀ ಕೃಷ್ಣಮೂರ್ತಿ ಜೆ., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀ ಜಗದೀಶ ಎನ್., ಪೊಲೀಸ್ ಉಪಾಧೀಕ್ಷಕ ಶ್ರೀಮತಿ ಗೀತಾ ಪಾಟೀಲ ಮತ್ತು ಪೊಲೀಸ್ ವೃತ್ತ ನಿರೀಕ್ಷಕ ಶ್ರೀ ಶಶಿಕಾಂತ ವರ್ಮಾ ರವರ ಮಾರ್ಗದರ್ಶನದಲ್ಲಿ ನಡೆಯಿತು.
ತಂಡದಲ್ಲಿ ಪಿಎಸ್ಐ ಕು. ರತ್ನಾ ಕುರಿ, ಎಎಸ್ಐ ಶ್ರೀ ಪಿ.ಜೆ. ಕಟ್ಟಿ, ಸಿಬ್ಬಂದಿಗಳಾದ ಮಹಾಂತೇಶ ಖಾರಕೇರ, ರಾಮಯ್ಯ ಪೂಜಾರಿ, ಹನುಮಂತ ಮಾಕಾಪೂರ, ಮಾರುತಿ ಮಾಳಗಿ, ಮಂಜುನಾಥ ವಾಳ ಮತ್ತು ಚಾಲಕ ಕೃಷ್ಣ ರೇವಣಕರ ಭಾಗವಹಿಸಿದ್ದರು.
ಪೊಲೀಸ್ ಅಧೀಕ್ಷಕ ಶ್ರೀ ನಾರಾಯಣ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Leave a Reply