ಕುಂದಾಪುರ: ನಮ್ಮ ನಾಡ ಒಕ್ಕೂಟ ಕಮ್ಯುನಿಟಿ ಸೆಂಟರ್ ಕುಂದಾಪುರ ಇವರ ಆಶ್ರಯದಲ್ಲಿ ಪ್ರೌಢಶಾಲಾ, ಕಾಲೇಜು ಹಾಗು ಉನ್ನತ ವ್ಯಾಸಂಗ ಮಾಡುತ್ತಿರುವ ಆಯ್ದು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಹಾಗೂ ಮಾದಕ ದ್ರವ್ಯ ಸೇವೆನೆಯಿಂದ ಆಗುವ ಅನಾಹುತದ ಬಗ್ಗೆ ಮತ್ತು ಮಾನಸಿಕ ಒತ್ತಡದ ಮಾಹಿತಿ ಕಾರ್ಯಾಗಾರ ಮಂಗಳವಾರ ಎನ್.ಎನ್.ಓ ಕಮ್ಯುನಿಟಿ ಸೆಂಟರ್ ಮಿನಿ ಸಭಾಭವನ ಕುಂದಾಪುರ ನಡೆಯಿತು.
ಇತ್ತೀಚಿಗಷ್ಟೇ ಕರಾಟೆ ಸ್ಪರ್ಧೆಯಲ್ಲಿ 9 ವರ್ಷದೊಳಗಿನ +35 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಹಾಗು ಕಂಚಿನ ಪದಕ ಪಡೆದ ಅಮೈರಾ ಅವರಿಗೆ ಕುಂದಾಪುರ ಎನ್.ಎನ್.ಒ ಕಮ್ಯೂನಿಟಿ ಸೆಂಟರ್ ವತಿಯಿಂದ ಗುರುತಿಸಿ, ಗೌರವಿಸಿ ಸನ್ಮಾನಿಸಲಾಯಿತು.
ಕುಂದಾಪುರ ಎನ್.ಎನ್.ಒ ಕಮ್ಯೂನಿಟಿ ಸೆಂಟರ್ ಅಧ್ಯಕ್ಷ ಅಬ್ದುಲ್ ಮುನಾಫ್ ಹಂಗಾರಕಟ್ಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಮಾತಾ ಆಸ್ಪತ್ರೆಯ ಆಡಳಿತಮಂಡಳಿ ನಿರ್ದೇಶಕರಾದ ಡಾ ಪ್ರಕಾಶ್ ತೋಳಾರ್, ನಮ್ಮ ನಾಡ ಒಕ್ಕೂಟ ಜಿಲ್ಲಾಧ್ಯಕ್ಷ ಮುಸ್ತಾಕ್ ಅಹ್ಮದ್ ಬೆಳ್ವೆ, ನಮ್ಮ ನಾಡ ಒಕ್ಕೂಟ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝಹಿರ್ ಅಹ್ಮದ್, ಎನ್.ಎನ್.ಓ ಕುಂದಾಪುರ ಘಟಕಾಧ್ಯಕ್ಷ ಎಸ್. ದಸ್ತಗಿರ್ ಸಾಹೇಬ್ ಕಂಡ್ಲೂರು, ಕಾರ್ಯಕ್ರಮದ ಸಂಯೋಜಕರಾದ ಅಬುಮೊಹಮ್ಮದ್ ಕುಂದಾಪುರ, ಮನ್ಸೂರ್ ಇಬ್ರಾಹಿಂ, ಕಮ್ಯೂನಿಟಿ ಸೆಂಟರ್ ನ ಉಪಾಧ್ಯಕ್ಷ ರಾದ ಜಮಾಲ್ ಗುಲ್ವಾಡಿ, ಕೋಶಾಧಿಕಾರಿ ಎಸ್ ಅನ್ವರ್ ಕಂಡ್ಲೂರ್, ನಮ್ಮ ನಾಡ ಒಕ್ಕೂಟ ಕೋಶಾಧಿಕಾರಿ ಪೀರ್ ಸಾಹೇಬ್, ಟಿ ಎಸ್ ಅನ್ಸಾರ್ ಉಡುಪಿ, ಮೊಹಮ್ಮದ್, ಗುಲ್ವಾಡಿ, ಅಬ್ದುಲ್ ಖಾದರ್ ಮೂಡ್ ಗೋಪಾಡಿ, ನಿಹಾರ್ ಅಹ್ಮದ್, ಜಾವದ್ ಅಕ್ಬರ್ ಹಂಗಾರಕಟ್ಟೆ ಉಪಸ್ಥಿತರಿದ್ದರು.
ಕುಂದಾಪುರ ಎನ್.ಎನ್.ಒ ಕಮ್ಯೂನಿಟಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಹುಸೈನ್ ಹೈಕಾಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ನಮ್ಮ ನಾಡ ಒಕ್ಕೂಟ ಎನ್.ಎನ್.ಒ ಕಮ್ಯೂನಿಟಿ ಸೆಂಟರ್ ಸದಸ್ಯ ಪಳ್ಳಿ ಉಸ್ಮಾನ್ ಗುಲ್ವಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Leave a Reply