ಗಂಗೊಳ್ಳಿ: ಮೇಲ್ ಗಂಗೊಳ್ಳಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ 2025-26ನೇ ಸಾಲಿನ ವಿದ್ಯಾರ್ಥಿ ಸಂಸತ್ ಪದಗ್ರಹಣ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.
ಶಾಲೆಯ ಮುಖ್ಯ ಶಿಕ್ಷಕ ಗುರುರಾಜ್ ಆಚಾರ್ಯ ಅವರು ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿ ಶುಭ ಹಾರೈಸಿದರು. ವಿದ್ಯಾರ್ಥಿ ನಾಯಕಿ ರಶ್ಮಿತಾ ಅನಿಸಿಕೆ ಹಂಚಿಕೊಂಡರು.
ಈ ಸಂದರ್ಭದಲ್ಲಿ ಸಹ ಶಿಕ್ಷಕ ಯೋಗೀಶ್, ಎಸ್ಡಿಎಂಸಿ ಅಧ್ಯಕ್ಷೆ ಸವಿತಾ ಖಾರ್ವಿ, ಅಡುಗೆ ಸಹಾಯಕಿ ಶಕುಂತಲಾ ಖಾರ್ವಿ, ಜ್ಯೋತಿ ಆನಂದ ಇನ್ನಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಣ ಮಂತ್ರಿ ಸಾನ್ವಿ ನಿರೂಪಿಸಿ, ಉಪ ಮುಖ್ಯಮಂತ್ರಿ ಇರ್ಷಾದ್ ಸ್ವಾಗತಿಸಿ, ಸಾಂಸ್ಕೃತಿಕ ಮಂತ್ರಿ ಅನ್ವಿತಾ ವಂದಿಸಿದರು.
Leave a Reply