ಭಟ್ಕಳ, ಜುಲೈ 6, 2025 : ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ನಕಲಿ ಆಧಾರ್ ಕಾರ್ಡ್‌ನೊಂದಿಗೆ ಜಾಮೀನು ಕೊಡಲು ಬಂದ ಇಬ್ಬರ ವಿರುದ್ದ ಇಲ್ಲಿನ ಶಹರ ಠಾಣೆ ಪೊಲೀಸರು ಬುಧವಾರ ಪ್ರಕರಣ ದಾಖಲಿಸಿದ್ದಾರೆ.
ದರೋಡೆ ಆರೋಪ ಮೇಲೆ ಭಟ್ಕಳ ಗ್ರಾಮೀಣ ಠಾಣೆಯ ಠಾಣೆಯಲ್ಲಿ ಗರುಡಾ ಗ್ಯಾಂಗ್‌ನ ಸದಸ್ಯರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಇಲ್ಲಿನ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಹಾಗೂ ಜೆಎಂಎಫ್ ನ್ಯಾಯಾಲಯದಿಂದ ಜಾಮೀನು ಕೊಡಲು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಸೋಮ ಶೆಟ್ಟಿ ಕೋಟಿ ಶೆಟ್ಟಿ ಹಾಗೂ ಬೆಳ್ತಂಗಡಿಯ ವಾಸು ಸಪಲ್ಯ ಅಣ್ಣಪ್ಪ ಸಪಲ್ಯ ಎಂಬುವರು ಬಂದಿದ್ದರು. ಇವರು ಜಾಮೀನಿಗಾಗಿ ಲಗತ್ತಿಸಿದ ಆಧಾರ್ ಕಾರ್ಡ್ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ಪ್ಯೂರಿಟಿ ಮ್ಯಾನೇಜ್‌ಮೆಂಟ್ ಸಿಸ್ಟಮ್‌ನಿಂದ ಪರಿಶೀಲಿಸುತ್ತಿರುವಾಗ ಓಡಿ ಹೋಗಿದ್ದಾರೆ. ಅವು ನಕಲಿ ಆಧಾರ್ ಕಾರ್ಡ್ ಆಗಿದ್ದವು ಎಂಬುದು ತಿಳಿದು ಬಂದಿದೆ. ಈ ಕುರಿತು ಚೇತನ ಚಂದಾವರಕರ್ ಎಂಬುವರು ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಮುಂದುವರಿದಿದೆ.
Leave a Reply