ಬೈಂದೂರು: ಕಾಂಗ್ರೆಸ್‌ನಿಂದ ಸತ್ಯದರ್ಶನ ಪ್ರತಿಭಟನೆ; ಬಿಜೆಪಿ ವಿರುದ್ಧ ಆಕ್ರೋಶ

ಬೈಂದೂರು, ಜುಲೈ 7, 2025: ಬೈಂದೂರು ಬ್ಲಾಕ್ ಕಾಂಗ್ರೆಸ್‌ನಿಂದ ಪಟ್ಟಣ ಪಂಚಾಯಿತಿ ಎದುರಿಗೆ ಸೋಮವಾರ, ಜುಲೈ 7 ರಂದು ಬೃಹತ್ ಪ್ರತಿಭಟನೆಯನ್ನು ಆಯೋಜಿಸಲಾಯಿತು. ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ ನೇತೃತ್ವದಲ್ಲಿ ಮತ್ತು ಕಾಂಗ್ರೆಸ್ ನಾಯಕ ಕೆ. ಗೋಪಾಲ್ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪಕ್ಷದ ಎಲ್ಲಾ ನಾಯಕರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

ಬೈಂದೂರು ಕ್ಷೇತ್ರಕ್ಕೆ ಆಘಾದವಾದ ರಾಜಕೀಯ ಹಿನ್ನೆಲೆಯಿದೆ.ಈ ಕ್ಷೇತ್ರವನ್ನು ಪ್ರತಿನಿಧಿಸಿದ ಪ್ರತಿ ಶಾಸಕರು ಒಂದಿಷ್ಟು ಬದ್ದತೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ.ಆದರೆ ಈ ಬಾರಿಯ ಬಿಜೆಪಿ ಶಾಸಕರು ಮಾತ್ರ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.ಕ್ಷೇತ್ರದ ಜನರಿಗೆ ಅನುಕೂಲವಾಗಲು ಶಾಸಕರ ಕಛೇರಿಯನ್ನು ಬೈಂದೂರಿನಲ್ಲಿ ಸ್ಥಾಪಿಸಲಾಗಿದೆ.ಆದರೆ ಶಾಸಕರು ಮಾತ್ರ ಉಪ್ಪುಂದದ ಪಕ್ಷದ ಕಛೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸುತ್ತಾರೆ.ಖಾಸಗಿ ಕಛೇರಿಯಲ್ಲಿ ಸಂಜೀವಿನಿ ಸೇರಿದಂತೆ ಸರಕಾರಿ ಅಧಿಕಾರಿಗಳ ಸಭೆ ನಡೆಸುವುದು ಸರಿಯಲ್ಲ.ಇದು ಮುಂದುವರಿದರೆ ಶಾಸಕರ ನಡೆ ವಿರುದ್ದ ಶೀಘ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಮಾಜಿ ಶಾಸಕರು ಹೇಳಿದರು.

ಕಾಂಗ್ರೆಸ್ ನಾಯಕರು ಮಾತನಾಡಿ, “ಸತ್ಯವನ್ನು ಮರೆಮಾಚಿ, ಜನರನ್ನು ದಾರಿತಪ್ಪಿಸುವ ಪ್ರಯತ್ನಗಳನ್ನು ಬಿಜೆಪಿ ನಡೆಸುತ್ತಿದೆ. ಇದಕ್ಕೆ ಜನತೆಯೇ ಉತ್ತರ ನೀಡಲಿದ್ದಾರೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *