ಉಡುಪಿ, ಜುಲೈ 8, 2025: ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಸ್ವರೂಪ ಟಿ.ಕೆ. ಅವರನ್ನು ಉಡುಪಿ ಜಿಲ್ಲೆಯ ಪ್ರಮುಖ 10 ಸಂಘಟನೆಗಳ ಒಕ್ಕೂಟವಾದ ಸುನ್ನಿ ಕೋ-ಒರ್ಡಿನೇಷನ್ ಉಡುಪಿ ಜಿಲ್ಲಾ ಸಮಿತಿಯ ನಿಯೋಗ ಭೇಟಿಯಾಗಿ ಅಭಿನಂದಿಸಿತು.
ಚುನಾವಣೆಯ ಮೊದಲು ಕಾಂಗ್ರೆಸ್ ಸರಕಾರ ಮುಸ್ಲಿಮರಿಗೆ ನೀಡಿದ ಆಶ್ವಾಸನೆಗಳನ್ನು ಪೂರ್ತಿಗೊಳಿಸುವ ಬಗ್ಗೆ ಜಿಲ್ಲಾಧಿಕಾರಿಯ ಮೂಲಕ ಸರಕಾರಕ್ಕೆ ಹಲವು ಬೇಡಿಕೆಗಳ ಜ್ಞಾಪಕ ಪತ್ರವನ್ನು ಜಿಲ್ಲಾಧಿಕಾರಿಯ ಮೂಲಕ ಸರಕಾರಕ್ಕೆ ಸಲ್ಲಿಸಿ ಶೀಘ್ರ ಪರಿಹಾರಕ್ಕಾಗಿ ಒತ್ತಾಯಿಸಲಾಯಿತು.

2ಬಿ ಮೀಸಲಾತಿ ಮರು ಸ್ಥಾಪಿಸಬೇಕು. ಶಿಕ್ಷಣ ಕೇಂದ್ರಗಳಲ್ಲಿ ಹಿಜಾಬ್ ನಿಷೇಧವನ್ನು ತೆರವುಗೊಳಿಸಬೇಕು. ಉಡುಪಿ ಜಿಲ್ಲೆಯಲ್ಲಿ ಬೇರು ಬಿಡುತ್ತಿರುವ ಕೋಮುವಾದ, ಕೋಮು ಸಂಘರ್ಷಗಳನ್ನು ಹಾಗೂ ಕೋಮುವಾದಿ ಹೇಳಿಕೆಗಳಿಗೆ ಕಡಿವಾಣ ಹಾಕಬೇಕು. ಕೋಮು ಸಂಘರ್ಷಕ್ಕೆ ಎಡೆ ಮಾಡಿ ಕೊಡುವ ಹೇಳಿಕೆಗಳನ್ನು ನೀಡುವವರಿಗೆ ಜಾಮೀನು ರಹಿತ ಕಾಯ್ದೆಗಳ ಮೂಲಕ ಸೂಕ್ತ ಶಿಕ್ಷೆಯನ್ನು ನೀಡಬೇಕು. ಜೈಲಿನಲ್ಲಿರುವ ಅಮಾಯಕ ಯುವಕರನ್ನು ಬಿಡುಗಡೆಗೊಳಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

ಉಡುಪಿ ಜಿಲ್ಲಾ ಸುನ್ನಿ ಕೋ-ಒರ್ಡಿನೇಷನ್ ಸಮಿತಿಯ ನಿಯೋಗದ ವತಿಯಿಂದ ಉಡುಪಿ ಜಿಲ್ಲಾ ನೂತನ SP ಹರಿರಾಮ್ ಶಂಕರ್ ರವರನ್ನು ತಾರೀಕು 7/07/2025 ರ ಸೋಮವಾರ ಬೇಟಿಯಾಗಿ ಶುಭ ಹಾರೈಸಲಾಯಿತು.
ನಿಯೋಗದಲ್ಲಿ ಜಿಲ್ಲಾ ಸುನ್ನಿ ಕೋ-ಒರ್ಡಿನೇಷನ್ ಸಮಿತಿಯ ಅಧ್ಯಕ್ಷ ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಪ್ರಧಾನ ಕಾರ್ಯದರ್ಶಿ ಸುಭಾನ್ ಅಹ್ಮದ್ ಹೊನ್ನಾಳ, ಕೋಶಾಧಿಕಾರಿ ವಸೀಮ್ ಭಾಷಾ ಕುಂದಾಪುರ, ಕಾರ್ಯದರ್ಶಿ ಗಳಾದ ಇಲಿಯಾಸ್ ಕಟಪಾಡಿ, ಕಾನೂನು ಸಲಹೆಗಾರ ಹಬೀಬ್ ಸಂತೋಷ್ ನಗರ, ನಿರ್ದೇಶಕರಾದ ಸೈಯ್ಯದ್ ಫರೀದ್ ಸಾಹೇಬ್ ಉಡುಪಿ, ಹನೀಫ್ ಅಂಬಾಗಿಲು ಮೊದಲಾದವರು ಉಪಸ್ಥಿತರಿದ್ದರು
Leave a Reply