ಭಟ್ಕಳ ನಗರ ಸ್ಪೋಟಿಸುವುದಾಗಿ ಪೊಲೀಸ್ ಠಾಣೆಗೆ ಎರಡು ಇಮೇಲ್ ಸಂದೇಶ -ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ

 ಭಟ್ಕಳ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರವನ್ನು 24 ಗಂಟೆಯೊಳಗೆ ಸ್ಪೋಟಿಸುವುದಾಗಿ ಕಣ್ಣನ್ ಗುರುಸ್ವಾಮಿ ಎಂಬ ಹೆಸರಿನಲ್ಲಿ ಭಟ್ಕಳ ಶಹರ ಠಾಣೆಗೆ ಬೆದರಿಕೆಯ ಇ-ಮೇಲ್ ಸಂದೇಶವನ್ನು ಕಳುಹಿಸಲಾಗಿದೆ.

ಜುಲೈ 10 ರ ಬೆಳಗ್ಗೆ 7-22 ಕ್ಕೆ ಈ ಈ ಮೇಲ್ ಸಂದೇಶವನ್ನು ಎರಡು ಬಾರಿ ಕಳುಹಿಸಲಾಗಿದ್ದು,  kannnannandik@gmail.com  ನಿಂದ ಭಟ್ಕಳ ಶಹರ ಠಾಣೆಯ bhatkaltownkwr@ksp.gov.in ಸಂದೇಶ ರವಾನಿಸಲಾಗಿದೆ. ಜುಲೈ 10 ರ ಬೆಳಗ್ಗೆ ಬಂದ ಮೊದಲ ಇಮೇಲ್ ಸಂದೇಶದಲ್ಲಿ ವಿ ವಿಲ್ ಪ್ಲಾಂಟ್ ಬಾಂಬ್ ಇನ್ ಭಟ್ಕಳ ಟೌನ್ ಎಂದು ಸಂದೇಶ ಕಳುಹಿಸಲಾಗಿದ್ದು ,ನಂತರ ಆಲ್ ದ ಬಾಂಬ್ ವಿಲ್ ಬ್ಲಾಸ್ಟ್ ಇನ್ 24 ಹಾರ್ಸ್ ಎಂದು ಸಂದೇಶ ಕಳುಹಿಸಲಾಗಿದೆ.

ಈ ಕುರಿತು ಭಟ್ಕಳ ಶಹರ ಠಾಣೆಯ ಪಿ.ಎಸ್.ಐ ನವೀನ್ ರವರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು ,ಇಂದು ಮುಂಜಾಗೃತ ಕ್ರಮವಾಗಿ ಭಟ್ಕಳ ನಗರದ ಬಸ್ ನಿಲ್ದಾಣ,ರೈಲ್ವೆ ನಿಲ್ದಾಣ ಸೇರಿದಂತೆ ಪ್ರಮುಖ ಜನ ನಿಬಿಡ ಪ್ರದೇಶದಲ್ಲಿ ಶ್ವಾನ ದಳ ಹಾಗೂ ಜಿಲ್ಲಾ ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ ನಡೆಸಲಾಯಿತು. ಇದಲ್ಲದೇ ದ್ರೋಣ್ ಕ್ಯಾಮರಾ ಮೂಲಕವೂ ಕಣ್ಗಾವಲಿಟ್ಟು ತಪಾಸಣೆ ನಡೆಸಲಾಗಿದೆ. ಇದೇ ಮೊದಲಬಾರಿಗೆ ಭಟ್ಕಳ ನಗರ ಸ್ಪೋಟಿಸುವ ಸಂದೇಶ ಬಂದಿದ್ದು  ಪೊಲೀಸರು ಅಲರ್ಟ ಆಗಿದ್ದು ತಪಾಸಣೆ ಕೈಗೊಂಡಿದ್ದಾರೆ.

ಇನ್ನು ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ್ ರವರು ಭಟ್ಕಳಕ್ಕೆ ತೆರಳಿದ್ದು ಹೆಚ್ಚಿನ ಮಾಹಿತಿ ಹೊರಬರಬೇಕಿದೆ.

Comments

Leave a Reply

Your email address will not be published. Required fields are marked *