ಮಣಿಪಾಲ, ಜು.13: ಗೂಗಲ್ ಪೇ ಮೂಲಕ ವ್ಯಕ್ತಿಯೊಬ್ಬರಿಗೆ ಸಾವಿರಾರು ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪದ್ಮನಾಭ(56) ಎಂಬವರಿಗೆ ಜು.10ರಂದು ಆರ್ಮಿ ಆಫೀಸರ್ ಎಂದು ಹೇಳಿ ಕರೆದು ಮಾಡಿದ ವ್ಯಕ್ತಿ, ತನಗೆ ಮನೆ ಬಾಡಿಗೆ ಬೇಕು ಎಂದು ಕೇಳಿದ್ದಾನೆ. ಅದಕ್ಕೆ ಪದ್ಮನಾಭ 25,000ರೂ. ಮುಂಗಡ ಮತ್ತು 13,000ರೂ. ಬಾಡಿಗೆ ಎಂದು ತಿಳಿಸಿದ್ದನು. ಅದಕ್ಕೆ ಆತನು 1 ರೂ. ಗೂಗಲ್ ಪೇ ಮಾಡುವಂತೆ ತಿಳಿಸಿದ್ದರು. ಅದರಂತೆ ಪದ್ಮನಾಭ ಕೂಡಲೇ 1 ರೂ. ಗೂಗಲ್ ಪೇ ಮಾಡಿದ್ದರು. ಬಳಿಕ ಅವರು ಆತನ ಜೊತೆ ಪೋನ್‌ನಲ್ಲಿ ಮಾತನಾಡುತ್ತಿರುವ ಅವರ ಖಾತೆಯಿಂದ 38,000ರೂ. ಆತನ ಖಾತೆಗೆ ವರ್ಗಾವಣೆ ಮಾಡಿಕೊಂಡು ನಂಬಿಸಿ ವಂಚನೆ ಮಾಡಿರುವುದಾಗಿ ದೂರಲಾಗಿದೆ
Leave a Reply