ಉಡುಪಿ, ಜುಲೈ 13, 2025: ‘ಕೈಯಲ್ಲಿ ಮಣ್ಣು, ಹೃದಯದಲ್ಲಿ ಭಾರತ’ ಎಂಬ ರಾಷ್ಟ್ರೀಯ ಅಭಿಯಾನದ ಅಡಿಯಲ್ಲಿ ಚಿಲ್ಡ್ರನ್ ಇಸ್ಲಾಮಿಕ್ ಆರ್ಗನೈಸೇಶನ್ನ (ಸಿಐಓ) ಉಡುಪಿ ಘಟಕವು ಪರಿಸರ ಜಾಗೃತಿ ಮೂಡಿಸುವುದು ಮತ್ತು ಯುವ ಜನಾಂಗದಲ್ಲಿ ಪ್ರಕೃತಿಯ ಜವಾಬ್ದಾರಿಯನ್ನು ಬೆಳೆಸುವ ಉದ್ದೇಶದಿಂದ ರವಿವಾರ ಗಿಡ ನೆಡುವ ಕಾರ್ಯಕ್ರಮವನ್ನು ಆಯೋಜಿಸಿತು.
ಕಾರ್ಯಕ್ರಮದಲ್ಲಿ ಮೆಹರುನಿಸಾ ಭಾಗವಹಿಸಿ, ಸಸ್ಯಗಳ ಪ್ರಾಮುಖ್ಯತೆ ಮತ್ತು ದೈನಂದಿನ ಜೀವನದಲ್ಲಿ ಅವುಗಳ ಬಹುವಿಧ ಉಪಯೋಗಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು. ನಂತರ, ಸಿಐಓ ಮಕ್ಕಳು, ಐಸಿಸಿ ಹುಡುಗರು ಮತ್ತು ಎಸ್ಐಓ ಕಾರ್ಯಕರ್ತರು ಉಡುಪಿಯ ಜಾಮಿಯಾ ಮಸೀದಿ ಆವರಣದಲ್ಲಿ ಸಸಿಗಳನ್ನು ನೆಟ್ಟರು. ಈ ಸಂದರ್ಭದಲ್ಲಿ ಜಾಮಿಯಾ ಮಸೀದಿಯ ರಿಯಾಜ್ ಅಹ್ಮದ್ ಉಪಸ್ಥಿತರಿದ್ದರು.
Leave a Reply