ರೋಗಿಯ ರಕ್ಷಣೆ: ಸೂಚನೆ. 

ಉಡುಪಿ, ಜುಲೈ 21, 2025: ಗಂಭೀರ ಸ್ಥಿತಿಯಲ್ಲಿದ್ದ ಅಪರಿಚಿತ ವ್ಯಕ್ತಿಯನ್ನು ಸಮಾಜಸೇವಕ ನಿತ್ಯಾನಂದ‌ ಒಳಕಾಡು ಅವರು ರಕ್ಷಿಸಿ, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿರುವ ಘಟನೆ ರವಿವಾರ ನಡೆದಿದೆ. ರಕ್ಷಿಸಲ್ಪಟ್ಟ ರೋಗಿಯು ಹೆಸರು ಸುರೇಶ (49ವ) ತಂದೆ ದುರ್ಗಾ ನಾಯ್ಕ್ ಹಾವೇರಿಯ ನಿವಾಸಿ ಎಂದು‌ ಹೇಳಿಕೊಂಡಿದ್ದಾನೆ. ವಾರಸುದಾರರು ಉಡುಪಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ. 

 ಆದರ್ಶ್ ಆಸ್ಪತ್ರೆಯ ಸನಿಹದ ಅಂಗಡಿ ಜಗುಲಿಯಲ್ಲಿ ರೋಗಿಯು ಚಳಿಜ್ವರದಿಂದ ಬಳಲುತ್ತ, ಚಿಕಿತ್ಸೆ ಪಡೆಯಲು ಅಸಹಾಯಕರಾಗಿ ಮಲಗಿಕೊಂಡಿದ್ದರು. ಗಮನಿಸಿದ ನಗರ ಪೋಲಿಸ್ ಠಾಣೆಯ ಗಸ್ತು ವಾಹನದ ಚಾಲಕ ಸಕತೋಷ್‌ರಾವ್ ಒಳಕಾಡುವರ ಗಮನಕ್ಕೆ ತಂದಿದ್ದರು,ಜಗದೀಶ್ ಸಹಕರಿಸಿದರು.

Comments

Leave a Reply

Your email address will not be published. Required fields are marked *