Author: NewsDesk

  • Touheed Girls’ Pre-University College Celebrates Stellar II PUC Results 2024-25

    Gangolli, April 9, 2025 – Touheed Girls’ Pre-University College, managed by the Touheed Educational Trust (R) in Gangolli, has announced an impressive 92.30% pass rate for the II PUC examinations of 2024-25. Out of 26 students who appeared for the exams, 24 have successfully passed, showcasing the institution’s commitment to academic excellence.

    The results highlight remarkable performances, with eight students achieving distinction and 13 securing first class. Three students earned second class honors. Among the standout achievers Fathima Afra scored 96% and Topped the college, Aysha Siddiqua scored a perfect 100/100 in Accountancy, while Fathima Madha Arihole excelled with 100/100 in both Business Studies and Statistics.

    Top performers are:

    • Fathima Afra (576/96%) – D/o Mr. Sadiq Al Abadi & Mrs. Zeenath
    • Aysha Siddiqua (572/95.33%, 100/100 in Accountancy) – D/o Mr. G. Muhammed Mubeen & Mrs. S. Nazneen
    • Fathima Madha Arihole (570/95%, 100/100 in Business Studies & Statistics) – D/o Late Abdul Hameed A & Mrs. Malika Tahseen
    • K. Fathima Asna (560/93.33%) – D/o Mr. K. Abdul Rehman & Mrs. K. Asma
    • Fathima Nuha (555/92.5%) – D/o Mr. G. Mohammed Ilyas & Mrs. Tabssum
    • Atifah (539/89.83%) – D/o Mr. Akram Mohammed Saheb & Mrs. Sirajunnisa
    • Munzalin Muba (538/89.66%) – D/o Mr. Mohammed Anies & Mrs. Dilshad
    • Sadiya (523/87.16%) – D/o Mr. Mohammed Hanif & Mrs. Khathija

    The college extended heartfelt congratulations to all meritorious students, along with the management, principal, lecturers, and non-teaching staff for their unwavering support.

  • ಗಂಗೊಳ್ಳಿ ಸರಸ್ವತಿ ವಿದ್ಯಾಲಯಕ್ಕೆ ಶೇ.90.48 ಫಲಿತಾಂಶ

    ಗಂಗೊಳ್ಳಿ: 2024-25ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿಗೆ ಶೇ.90.48 ಫಲಿತಾಂಶ ದಾಖಲಿಸಿದೆ.

    ಪರೀಕ್ಷೆಗೆ ಹಾಜರಾದ 127 ವಿದ್ಯಾರ್ಥಿಗಳಲ್ಲಿ 114 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದು, 27 ವಿದ್ಯಾರ್ಥಿಗಳು ವಿಶಿಷ್ಠ ದರ್ಜೆಯಲ್ಲಿ, 68 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 17 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಮತ್ತು ಇಬ್ಬರು ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

    ವಿಜ್ಞಾನ ವಿಭಾಗದಲ್ಲಿ ಶ್ರಾವ್ಯ (576), ದಿವ್ಯಾ ಡಿ.ಮೇಸ್ತ (565), ಸೃಷ್ಟಿ (559), ಪ್ರಥಮ್ ಟಿ.ನಾಯಕ್ (553), ಸುಶ್ಮಿತಾ (545), ಶ್ರೀರಕ್ಷಾ ಶೆಣೈ (544), ಮೊತಾಸೀನ್ ಫಾತೀಮಾ (543), ರಕ್ಷಿತಾ (532), ಜೊಲ್ವಿನ್ ಎಲ್.ರೆಬೆಲ್ಲೊ (532), ಫಾತಿಮತ್ ಸಫ್ರೀನ್ (521), ಸ್ವಸ್ತಿಕ್ (520), ಟ್ರೆನಿಟಾ ರೆಬೆಲ್ಲೊ (520), ಗುರುಚರಣ್ ವೈದ್ಯ (520), ಧನುಷ್ ಪಟೇಲ್ (514) ಮತ್ತು ಅಲೈನಾ ಎಂ.ಎಚ್. (513) ಉತ್ತಮ ಸಾಧನೆ ಮಾಡಿದ್ದಾರೆ.

    ವಾಣಿಜ್ಯ ವಿಭಾಗದಲ್ಲಿ ಕ್ಷಮಾ ಆರ್.ಆಚಾರ್ಯ (577), ಜ್ಯೋತಿ ಬೊತೆಲ್ಲೊ (576), ಅಪೇಕ್ಷಾ ಪಿ. (570), ರೋಶಿತ್ ಆರ್.ಚಂದನ್ (562), ಸನ್ನಿಧಿ (561), ಸಂಜನಾ ಖಾರ್ವಿ (558), ಸುನಿಧಿ (554), ಅನ್ವೇಶ್ (546), ಸಹನಾ (543), ಸುಕ್ಷಿತಾ ಎನ್. (539), ಕುಶಿ (538) ಮತ್ತು ಪೂಜಾ ಪೂಜಾರಿ (527) ಉತ್ತಮ ಸಾಧನೆ ಮಾಡಿದ್ದಾರೆ.

  • ಕುಂದಾಪುರ: 75,000 ರೂ. ವಂಚನೆ: ಆರೋಪಿಯ ವಿರುದ್ಧ ಪ್ರಕರಣ ದಾಖಲು

    ಕುಂದಾಪುರ, ಮಾರ್ಚ್ 12, 2025: ಕುಂದಾಪುರದ ಶಾಸ್ತ್ರಿ ಸರ್ಕಲ್‌ನಲ್ಲಿ ಆಕಸ್ಮಿಕವಾಗಿ ಭೇಟಿಯಾದ ವ್ಯಕ್ತಿಯೊಬ್ಬ ಎಲ್‌ಇಡಿ ಅಳವಡಿಕೆಯ ಕಾರಣಕ್ಕೆಂದು ಹೇಳಿ, 68 ವರ್ಷದ ಕೃಷ್ಣಯ್ಯ ಎಂಬುವವರಿಂದ 75,000 ರೂ. ವಂಚಿಸಿದ ಘಟನೆ ನಡೆದಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    ಮೂಡಲಕಟ್ಟೆಯ ಕೃಷ್ಣಯ್ಯ ಎಂಬುವವರು ದಿನಾಂಕ 12 ಮಾರ್ಚ್ 2024ರಂದು ಮಧ್ಯಾಹ್ನ 12:00 ಗಂಟೆಯ ಸುಮಾರಿಗೆ ಶಾಸ್ತ್ರಿ ಸರ್ಕಲ್‌ನಲ್ಲಿ ಆರೋಪಿ ಕಿರಣ್ ಎಂಬಾತನನ್ನು ಭೇಟಿಯಾಗಿದ್ದಾರೆ. ಆರೋಪಿಯು ಎಲ್‌ಇಡಿ ಅಳವಡಿಕೆಗೆ ಕುಂದಾಪುರಕ್ಕೆ ಬಂದಿರುವುದಾಗಿ ಹೇಳಿ, ಪಿರ್ಯಾದಿದಾರರ ಮೊಬೈಲ್‌ನಿಂದ ಫೋನ್‌ಪೇ ಮೂಲಕ 75,000 ರೂ.ಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

    ಕೃಷ್ಣಯ್ಯ ಅವರು ನೀಡಿದ ಖಾಸಗಿ ದೂರಿನ ಆಧಾರದ ಮೇಲೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 94/2025ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಆರಂಭವಾಗಿದೆ. ಸಾರ್ವಜನಿಕರು ಇಂತಹ ವಂಚನೆಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರು ಸೂಚಿಸಿದ್ದಾರೆ.

  • ಬೈಂದೂರು: ರೈಲ್ವೆ ಹಳಿಯಲ್ಲಿ ಯುವಕನ ಶವ ಪತ್ತೆ; ಸಹಾಯ

    ಬೈಂದೂರು, ಫೆಬ್ರವರಿ 3, 2025: ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ನಾವುಂದ ಅರೆಹೊಳೆಯಲ್ಲಿ ರೈಲ್ವೆ ಹಳಿಯಲ್ಲಿ ಸುಮಾರು 30 ವರ್ಷದ ಯುವಕನ ಶವ ದೊರಕಿದ ಘಟನೆ ನಡೆದಿದೆ. ಶವದ ಅವಶೇಷಗಳು ಸುಮಾರು ಅರ್ಧ ಕಿಲೋಮೀಟರ್ ತನಕ ಚದರಿವೆಯಾಗಿದ್ದವು.

    ತಕ್ಷಣ ಸ್ಥಳಕ್ಕೆ ಧಾವಿಸಿದ ಗಂಗೊಳ್ಳಿಯ 24×7 ಆಂಬ್ಯುಲೆನ್ಸ್ ತಂಡದ ಸದಸ್ಯರಾದ ಇಬ್ರಾಹಿಂ, ಮೌಲಾನ ಶಕೀಲ್, ಸಮೀ ಉಲ್ಲಾ ಕಾಝೀ ಮತ್ತು ಮಗ್ದೂಮ್ ಅರೆಹೊಳೆ ಅವರು ಶವದ ಅವಶೇಷಗಳನ್ನು ಗುರುತಿಸಿ, ಸಂಗ್ರಹಿಸಿ ಶವಾಗಾರಕ್ಕೆ ಒಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು

  • ಗಂಗೊಳ್ಳಿ ಗ್ರಾಮ ಪಂಚಾಯಿತಿ: ಬಿಜೆಪಿ ಬೆಂಬಲಿತರಿಗೆ ಕೈ ತಪ್ಪಿದ ಅಧಿಕಾರ

    ಕುಂದಾಪುರ: ಡಿ. 8ರಂದು ನಡೆದ ಗಂಗೊಳ್ಳಿ ಗ್ರಾಮ ಪಂಚಾಯಿತಿಯ ಚುನಾವಣೆ ಫಲಿತಾಂಶ ಗುರುವಾರ ರಾತ್ರಿ ಹೊರಬಿದ್ದಿದ್ದು, ಕಾಂಗ್ರೆಸ್ ಮತ್ತು ಎಸ್‍ಡಿಪಿಐ ಬೆಂಬಲಿತರು ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತವಾಗಿದೆ.

    ಎರಡು ದಶಕಗಳ ಕಾಲ ಬಿಜೆಪಿ ಬೆಂಬಲಿತರ ಭದ್ರಕೋಟೆಯಾಗಿದ್ದ ಹಾಗೂ ಹಿಂದುತ್ವ ಪ್ರತಿಪಾದನೆಯ ಪ್ರಬಲ ಗ್ರಾಮ ಎಂದು ಬಿಂಬಿತವಾಗಿದ್ದ ಗಂಗೊಳ್ಳಿ ಗ್ರಾಮ ಪಂಚಾಯಿತಿಯ ಚುನಾವಣೆಯಲ್ಲಿ ಎಸ್‍ಡಿಪಿಐ ಬೆಂಬಲಿತರ ಸಹಕಾರದೊಂದಿಗೆ, ಕಾಂಗ್ರೆಸ್ ಬೆಂಬಲಿತರು ಅಧಿಕಾರದ ಗದ್ದುಗೆ ಹಿಡಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

    ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿಗರು 4 ಕ್ಷೇತ್ರಗಳಲ್ಲಿ ಶೂನ್ಯ ಸಾಧನೆ ಮಾಡಿದ್ದರೆ, ಎಸ್‍ಡಿಪಿಐ 6 ಕ್ಷೇತ್ರಗಳಲ್ಲಿ ಶೂನ್ಯ ಸಾಧನೆ ಮಾಡಿದೆ. ಕಳೆದ ಕೆಲ ವರ್ಷಗಳಿಂದ ಬಿಜೆಪಿ ಹಿಡಿತದಲ್ಲಿದ್ದ ವಾರ್ಡ್‌ಗಳಲ್ಲಿ ಈ ಬಾರಿ ಕಾಂಗ್ರೆಸ್ ಬೆಂಬಲಿಗರು ಹುಬ್ಬೇರುವಂತೆ ಸಾಧನೆ ಮಾಡಿದ್ದಾರೆ.

    33 ಸದಸ್ಯ ಬಲದ ಗಂಗೊಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತರು ತಲಾ 12, ಎಸ್‍ಡಿಪಿಐ ಬೆಂಬಲಿತರು 7 ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

    ಬೆಳಿಗ್ಗೆಯಿಂದ ಮಂದಗತಿಯಲ್ಲಿ ಸಾಗಿದ ಮತ ಎಣಿಕೆ ಕಾರ್ಯ ರಾತ್ರಿ 10ರವರೆಗೂ ಸಾಗಿತ್ತು. ಕುಂದಾಪುರ ತಹಶೀಲ್ದಾರ್ ಎಚ್.ಎಸ್.ಶೋಭಾಲಕ್ಷ್ಮಿ ನೇತೃತ್ವದಲ್ಲಿ ಮತ ಎಣಿಕೆ ಕಾರ್ಯ ನಡೆದಿದ್ದು, ತಾಲ್ಲೂಕು ಯುವಜನ ಸೇವಾ ಅಧಿಕಾರಿ ಕುಸುಮಾರ ಶೆಟ್ಟಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

    ಕಳೆದ ಆಡಳಿತದ ಅವಧಿಯಲ್ಲಿ 23 ಬಿಜೆಪಿ ಬೆಂಬಲಿತರು, 6 ಕಾಂಗ್ರೆಸ್ ಬೆಂಬಲಿತರು ಮತ್ತು ನಾಲ್ವರು ಎಸ್‍ಡಿಪಿಐ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದರು.

    ವಿಜಯೋತ್ಸವ:  ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿದ ಕಾಂಗ್ರೆಸ್ ಮತ್ತು ಎಸ್‍ಡಿಪಿಐ ಬೆಂಬಲಿತ ಅಭ್ಯರ್ಥಿಗಳು ತಮ್ಮ ಬೆಂಬಲಿತರೊಂದಿಗೆ ತಡರಾತ್ರಿ ಕುಂದಾಪುರದಿಂದ ಗಂಗೊಳ್ಳಿಯವರೆಗೆ ವಿಜಯೋತ್ಸವ ನಡೆಸಿದರು.

  • ಮರವಂತೆ: ಆಂಧ್ರ ಪ್ರದೇಶ ಲಾರಿ ಚಾಲಕನ ಶವ ಲಾರಿಯಲ್ಲಿ ಪತ್ತೆ

    ಮರವಂತೆ, ಅಕ್ಟೋಬರ್ 17, 2024: ಮರವಂತೆ ಬೀಚ್ ವರಾಹ ಸ್ವಾಮಿ ದೇವಸ್ಥಾನದ ಎದುರಿನ ಹೆದ್ದಾರಿಯಲ್ಲಿ ಆಂಧ್ರ ಪ್ರದೇಶ ನೋಂದಣಿಯ ಲಾರಿಯೊಂದರ ಒಳಗೆ ಚಾಲಕನ ಶವ ಪತ್ತೆಯಾಗಿದೆ. ತಾಂತ್ರಿಕ ಧೋಷದ ಕಾರಣದಿಂದ ಲಾರಿ ಕಳೆದ 6 ದಿನಗಳಿಂದ ನಿಂತಿರುವುದಾಗಿ ತಿಳಿದುಬಂದಿದೆ. ಚಾಲಕ ಬಾಬು ರಾಯ್ (ಆಂಧ್ರ ಪ್ರದೇಶ ಮೂಲ) ಅನಾರೋಗ್ಯದಿಂದ ಬಳಲುತ್ತಿದ್ದು, ನಾಲ್ಕು ದಿನಗಳ ಹಿಂದೆ ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಇಂದು ಬೆಳಿಗ್ಗೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

    ಘಟನೆಯ ಸ್ಥಳಕ್ಕೆ ಗಂಗೊಳ್ಳಿ ಠಾಣಾಧಿಕಾರಿ ಬಸವ ಕನಶೆಟ್ಟಿ, ಸಹಾಯಕ ಠಾಣಾಧಿಕಾರಿ ಅಮೃತೇಶ್ ಮತ್ತು ಸಿಬ್ಬಂದಿಗಳಾದ ನಾಗರಾಜ್ ಶೇರಿಗಾರ್, ರಿತೇಶ್ ಮುನಿಯಾಲ್, ರಾಘವೇಂದ್ರ ಪೂಜಾರಿ, ಮುಖ್ಯ ಪೇದೆ ನಾಗರಾಜ್ ನಾಯಕವಾಡಿ ಭಾಗವಹಿಸಿದರು. 24×7 ಆಂಬ್ಯುಲೆನ್ಸ್ ತಂಡದ ಇಬ್ರಾಹಿಂ ಗಂಗೊಳ್ಳಿ, ಪ್ರಮೋದ್ ಪಮ್ಮಿ ತ್ರಾಸಿ, ಮಾಗ್ದುಮ್ ಕೈಫ್ ಕಿರಿಮಂಜೇಶ್ವರ, ಖಾಲಿದ್ ಗಂಗೊಳ್ಳಿ ಸಹಿತ ಸ್ಥಳೀಯರು ಶವ ಸಾಗಾಟದಲ್ಲಿ ಸಹಕರಿಸಿದರು. ಶವವನ್ನು ಮಣಿಪಾಲ ಆಸ್ಪತ್ರೆಯ ಶವ ಶೀತಲೀಕರಣ ಘಟಕಕ್ಕೆ ಕೊಂಡೊಯ್ಯಲಾಗುತ್ತಿದ್ದು, ಮೃತರ ಜೊತೆಯಲ್ಲಿದ್ದ ಕ್ಲೀನರ್ ಶ್ರೀವಾಸ್ ಈ ಮಾಹಿತಿ ನೀಡಿದ್ದಾರೆ. ಮೃತರ ವಾರಸುದಾರರು ಇಂದು ಸಂಜೆ ವೇಳೆಗೆ ಮಣಿಪಾಲ ತಲುಪಲಿದ್ದಾರೆ.

  • ಗಂಗೊಳ್ಳಿ: ರೈಲಿನಿಂದ ಬಿದ್ದ ಯುವಕನಿಗೆ ತುರ್ತು ಚಿಕಿತ್ಸೆ, ಸ್ಥಳೀಯರ ಸಹಾಯ

    ಗಂಗೊಳ್ಳಿ, ಅಕ್ಟೋಬರ್ 17, 2024: ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸೆನಾಪುರ ರೈಲ್ವೆ ನಿಲ್ದಾಣದಲ್ಲಿ ತಡರಾತ್ರಿ 2:45ರ ಸಮಯದಲ್ಲಿ ಭೋಪಾಲ್, ರಾಜ್ಯದ ಯುವಕನೊಬ್ಬ ರೈಲಿನಿಂದ ಬಿದ್ದು ಗಾಯಗೊಂಡ ಘಟನೆ ಸಂಭವಿಸಿದೆ. ರಕ್ತಸಿಕ್ತ ಬಟ್ಟೆಯೊಂದಿಗೆ ಯುವಕನು ಹೆದರಿಕೆಯಿಂದ ಹತ್ತಿರದ ಮನೆಗಳ ಸಮೀಪ ತೆರಳಿ ಭಯದ ವಾತಾವರಣ ಸೃಷ್ಟಿಸಿದ್ದ. ತಕ್ಷಣ ಸ್ಥಳೀಯ ಅಂಬೇಡ್ಕರ್ ನಗರದ ನಿವಾಸಿಗಳು 112 ಪೊಲೀಸ್ ಹಾಗೂ ನಮ್ಮ 24×7 ಆಂಬ್ಯುಲೆನ್ಸ್ ಸೇವೆಗೆ ಕರೆ ಮಾಡಿದರು.

    ತುರ್ತು ಸ್ಪಂದನೆಯೊಂದಿಗೆ ಯುವಕನನ್ನು ಕುಂದಾಪುರದ ಆದರ್ಶ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯ ಡಾಕ್ಟರ್ ಆದರ್ಶ ಹೆಬ್ಬಾರ್ ಮಾನವೀಯ ನೆಲೆಯಲ್ಲಿ ಚಿಕಿತ್ಸೆಗೆ ಮುಂದೆ ಬಂದಿದ್ದು, ಯುವಕನ ತಲೆಗಾಯಕ್ಕೆ ಹೊಲಿಗೆ ಹಾಕಿ ಉಪಚಾರ ನೀಡಲಾಗಿದೆ. ಈಗ ಆತನನ್ನು ಒಳರೋಗಿಯಾಗಿ ದಾಖಲಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಚಾಲಕ ದಿನೇಶ್ ಬೈಂದೂರು, ಮುಖ್ಯ ಪೇದೆ ಶಾಂತಾರಾಮ್ ಶೆಟ್ಟಿ, ಅಬ್ರರ್ ಗಂಗೊಳ್ಳಿ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಮತ್ತು ಸಹಕರಿಸಿದ ಎಲ್ಲರಿಗೂ ಶ್ಲಾಘಿಸಿದ್ದಾರೆ.

  • ಉಡುಪಿ: ನೇಜಾರು ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ: ಆರೋಪಿ ಪ್ರವೀಣ್ ಚೌಗಲೆ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

    ಉಡುಪಿ: ನೇಜಾರುವಿನಲ್ಲಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

    ಉಡುಪಿ ಜಿಲ್ಲೆಯ ನೇಜಾರುವಿನಲ್ಲಿ ಏರ್ ಹೋಸ್ಟೆಸ್ ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಆರೋಪಿ ಪ್ರವೀಣ್ ಅರುಣ್ ಚೌಗಲೆ ಚಾಕುವಿನಿಂದ ಇರಿದು ಹತ್ಯೆಗೈದಿದ್ದ.

    ಪ್ರಕರಣದಲ್ಲಿ ಜೈಲುಪಾಲಾಗಿರುವ ಆರೋಪಿ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದು, ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಂ.ಜಿ.ಉಮಾ ಅವರಿದ್ದ ಹೈಕೋರ್ಟ್ ಪೀಠ, ಜಾಮೀನು ಅರ್ಜಿ ವಜಾಗೊಳಿಸಿದೆ.

  • Nejar Murders: ಗಗನಸಖಿಗೆ ಪ್ರವೀಣ್‌ ಚೌಗಲೆ ಪರಿಚಯ ಹೇಗಾಯ್ತು?; 16 ವರ್ಷ ಮಂಗಳೂರಿನಲ್ಲೇ ಇದ್ದ ಹಂತಕ!

    ಉಡುಪಿ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದಲ್ಲಿ ಬಂಧನದಲ್ಲಿರುವ ಆರೋಪಿ ಪ್ರವೀಣ್‌ ಚೌಗಲೆ ಕುರಿತ ಮತ್ತಷ್ಟು ಸ್ಫೋಟಕ ಸಂಗತಿಗಳು ಬಯಲಾಗಿದೆ. ಸಿಸಿಟಿವಿ ಕೊಟ್ಟ ಸುಳಿವಿನಿಂದ ಉಡುಪಿ ಪೊಲೀಸರು ಆರೋಪಿಯನ್ನ ಬಂಧಿಸಿ ಕೈಗೆ ಕೋಳ ತೊಡಿಸಿದ್ದಾರೆ. ಇದೀಗ ಖಾಕಿ ಪಡೆಯ ವಿಚಾರಣೆಯಲ್ಲಿ ಈತನ ಕೇರ್‌ ಆಫ್‌ ಅಡ್ರೆಸ್‌ ಮಂಗಳೂರಾಗಿತ್ತು ಅನ್ನೋ ಅಂಶ ಗೊತ್ತಾಗಿದೆ.

    ಉಡುಪಿಯ ಅಯ್ನಾಯ್‌ ಹಾಗೂ ಆರೋಪಿ ಪ್ರವೀಣ್ ಏರ್ ಇಂಡಿಯಾ ವಿಮಾನದಲ್ಲಿ ಸಹೋದ್ಯೋಗಿಗಳಾಗಿದ್ದರು. ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಅಯ್ನಾಯ್‌ಗೂ ಕ್ಯಾಬಿನ್ ಕ್ರ್ಯೂ ಆಗಿದ್ದ ಪ್ರವೀಣ್‌ಗೂ ಪರಿಚಯವಿತ್ತು. ಒಂದೇ ಸಂಸ್ಥೆಯಲ್ಲಿ ಅಯ್ನಾಝ್ ಹಾಗೂ ಪ್ರವೀಣ್‌ ಜೊತೆಯಾಗಿ ಕೆಲಸ ಮಾಡುತ್ತಿದ್ದು ಇದೀಗ ಅದಕ್ಕೆ ಸಂಬಂಧಪಟ್ಟ ವಿಡಿಯೋ ಸಾಕ್ಷಿಗಳು ಪೊಲೀಸರಿಗೆ ಲಭ್ಯವಾಗಿದೆ.

    ವಿಮಾನದಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಅಯ್ನಾಝ್‌ಗೆ ವಿಮಾನದಲ್ಲಿ ಸುರಕ್ಷತಾ ನಿಯಮ ಹೇಳಿಕೊಡ್ತಿದ್ದವನೇ ಕಂಟಕವಾಗಿದ್ದಾನೆ. ಏರ್ ಇಂಡಿಯಾದ ಉದ್ಯೋಗಿಯಾಗಿದ್ದ ಆರೋಪಿ ಪ್ರವೀಣ್, ವಿಮಾನದಲ್ಲಿ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಹಾಗೂ ಇನ್ನಿತರ ಸುರಕ್ಷತೆ ನಿಯಮ ಹೇಳಿಕೊಡುತ್ತಿದ್ದ. ಕೊನೆಗೆ ಅಯ್ನಾಝ್ ಮೇಲಿದ್ದ ಮೋಹ ದ್ವೇಷಕ್ಕೆ ತಿರುಗಿ ಪ್ರವೀಣ್ ಹತ್ಯೆ ಮಾಡಲು ಮುಂದಾಗಿದ್ದಾನೆ ಎನ್ನಲಾಗಿದೆ.

    ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಪ್ರವೀಣ್ ಅರುಣ್ ಚೌಗುಲೆಯನ್ನು ಉಡುಪಿ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಕೋರ್ಟ್ ಹಾಲ್‌ನಲ್ಲಿ ನ್ಯಾಯಾಧೀಶರು ಆರೋಪಿಗೆ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ಕನ್ನಡದಲ್ಲೇ ಆರೋಪಿ ಪ್ರವೀಣ್ ಚೌಗುಲೆ ಉತ್ತರಿಸಿದ್ದಾರೆ. ಇದರ ವಿವರ ಇಲ್ಲಿದೆ ನೋಡಿ.

    ನ್ಯಾಯಾಧೀಶರು- ನಿಮ್ಮನ್ನು ಯಾವಾಗ ಅರೆಸ್ಟ್ ಮಾಡಿದ್ರು?
    ಆರೋಪಿ- ಮಂಗಳವಾರ ಸಂಜೆ 6 ಗಂಟೆಗೆ ಸರ್
    ನ್ಯಾಯಾಧೀಶರು- ನಿಮ್ಮ ಊರು ಯಾವುದು
    ಆರೋಪಿ- ಮಹಾರಾಷ್ಟ್ರ, ಸಾಂಗ್ಲಿಯಲ್ಲಿ
    ನ್ಯಾಯಾಧೀಶರು- ನೀವು ಕೊಟ್ಟ ಅಡ್ರೆಸ್‌ನಲ್ಲಿ ಮಂಗಳೂರು ಇದ್ಯಲ್ಲಾ?
    ಆರೋಪಿ- ಮಂಗಳೂರಲ್ಲಿ ಕಳೆದ 16 ವರ್ಷದಿಂದ ಇದ್ದೇನೆ. ಬಿಜೈ ಸಮೀಪ ಫ್ಲ್ಯಾಟ್‌ನಲ್ಲಿದ್ದೇನೆ

    ನ್ಯಾಯಾಧೀಶರ ಪ್ರಶ್ನೆಗೆ ಹೀಗೆ ಉತ್ತರಿಸಿರುವ ಆರೋಪಿ ಪ್ರವೀಣ್‌, ತಾನು ಮಹಾರಾಷ್ಟ್ರದ ಸಾಂಗ್ಲಿಯವನಾದ್ರೂ 16 ವರ್ಷದಿಂದ ಮಂಗಳೂರಲ್ಲೇ ನೆಲೆಸಿರುವುದಾಗಿ ಹೇಳಿದ್ದಾನೆ.

  • ಮಹಮ್ಮದ್ ಸುಭಾನ್ ಗಡಿಪಾರು

    ಉಡುಪಿ: ದನ ಕಳವು, ಅಕ್ರಮ ಜಾನುವಾರು ಸಾಗಾಟ ಕೃತ್ಯಗಳಲ್ಲಿ ಭಾಗಿಯಾಗಿ ಸಮಾಜದ ಶಾಂತಿ ಸುವ್ಯವಸ್ಥೆಗೆ ಭಂಗ ತಂದ ಆರೋಪಿ ಮಹಮ್ಮದ್ ಸುಭಾನ್ ಎಂಬಾತನನ್ನು 6 ತಿಂಗಳು ಚಳ್ಳಕೆರೆ ಉಪ ವಿಭಾಗಕ್ಕೆ ಗಡಿ ಪಾರು ಮಾಡಲಾಗಿದೆ.

    ಮಹಮ್ಮದ್ ಸುಭಾನ್‌ ವಿರುದ್ಧ ಗಂಗೊಳ್ಳಿ ಠಾಣೆಯಲ್ಲಿ 5 ಪ್ರಕರಣಗಳು ದಾಖಲಾಗಿದ್ದು, ಜೈಲು ಶಿಕ್ಷೆ ಅನುಭವಿಸಿದ್ದಾನೆ. ಹಲವು ಪ್ರಕರಣಗಳಲ್ಲಿ ಜಾಮೀನು ಪಡೆದು ಹೊರಬಂದ ಬಳಿಕವೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಶಾಂತಿ ಸುವ್ಯವಸ್ಥೆಗೆ ಭಂಗ ತಂದಿದ್ದ.

    ಗಂಗೊಳ್ಳಿ ಪಿಎಸ್‌ಐ ನೀಡಿದ ವರದಿ ಆಧರಿಸಿ ಕುಂದಾಪುರ ಉಪ ವಿಭಾಗದ ದಂಡಾಧಿಕಾರಿ ಮಹಮ್ಮದ್ ಸುಭಾನ್‌ಗೆ ಗಡಿ ಪಾರು ಮಾಡಿದ್ದಾರೆ. ಸಂಬಂಧಪಟ್ಟ ಪ್ರಾಧಿಕಾರದ ಅನುಮತಿ ಪಡೆಯದೆ ಕುಂದಾಪುರ ಉಪ ವಿಭಾಗದಲ್ಲಿ ಆರೋಪಿಯು ಕಾಣಿಸಿಕೊಂಡರೆ ಬಂಧಿಸುವಂತೆ ಆದೇಶಿಸಲಾಗಿದೆ.