ಚಿಕ್ಕಮಗಳೂರು, ಜುಲೈ 6, 2025: ಹಿಂದುತ್ವ ಸಂಘಟನೆಯ ಮುಖಂಡ ಶರಣ್ ಪಂಪ್‌ವೆಲ್‌ಗೆ ಜಿಲ್ಲಾ ಪ್ರವೇಶ ನಿರ್ಬಂಧಿಸಿ ಚಿಕ್ಕಮಗಳೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಜು.6ರಿಂದ ಆ.4ರವರೆಗೆ 30 ದಿನಗಳ ಕಾಲ ನಿರ್ಬಂಧ ವಿಧಿಸಿ ಚಿಕ್ಕಮಗಳೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಶರಣ್ ಪಂಪ್‌ವೆಲ್ ಮೇಲೆ 22ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಜಿಲ್ಲೆಯ ಕೆಲ ಸಂಘಟನೆಗಳ ಮುಖಂಡರು ಚಿಕ್ಕಮಗಳೂರು, ಮೂಡಿಗೆರೆ, ಆಲ್ದೂರಿನಲ್ಲಿ ಶರಣ್ ಪಂಪ್‍ವೆಲ್ ಅವರನ್ನು ಕರೆಸಿ ಭಾಷಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಿದ್ದರು.
ಶರಣ್ ಪಂಪ್‍ವೆಲ್ ಕೋಮುಧ್ವೇಷ ಹರಡುವಂತಹ ಭಾಷಣ ಮಾಡುವ ಪ್ರವೃತ್ತಿ ಹೊಂದಿದ್ದು, ಈತನ ಪ್ರಚೋದನಾಕಾರಿ ಭಾಷಣದಿಂದ ಗಲಾಟೆ, ಗುಂಪು ಘರ್ಷಣೆ ಉಂಟಾಗುವ ಸಾಧ್ಯತೆಗಳಿವೆ ಎನ್ನುವ ಪೊಲೀಸ್ ವರದಿ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಸಣ್ಣ ಘಟನೆಯೂ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಸಾಧ್ಯತೆಗಳಿವೆ ಎನ್ನುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಕ್ರಮಕ್ಕೆ ಮುಂದಾಗಿದೆ.
ಮಂಗಳೂರು: ಮಂಗಳೂರಿನ ಹಿಂದೂ ಜಾಗರಣಾ ವೇದಿಕೆಯ ದ.ಕ ಜಿಲ್ಲಾ ಸಹ ಸಂಯೋಜಕ ಸಮಿತ್‌ರಾಜ್ ಧರೆಗುಡ್ಡೆ ಎಂಬಾತನ ಮೊಬೈಲ್‌ನಲ್ಲಿ ಭಾರೀ ಅಶ್ಲೀಲ ವಿಡಿಯೋಗಳು ಪತ್ತೆಯಾಗಿದ್ದು, ಪ್ರಕರಣವೊಂದರ ವಿಚಾರಣೆ ವೇಳೆ ಮೊಬೈಲ್ ತನಿಖೆಯಲ್ಲಿ ಹಲವು ಸ್ಪೋಟಕ ವಿಡಿಯೋಗಳು ಪತ್ತೆಯಾಗಿದೆ. ಮೊಬೈಲ್ ಡಾಟಾ Extract ವೇಳೆ ಈ ವಿಡಿಯೋಗಳನ್ನು ಕಂಡು ಮೂಡಬಿದಿರೆ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ.
ಹಿಂದೂ ಜಾಗರಣಾ ವೇದಿಕೆಯ ದ.ಕ ಜಿಲ್ಲಾ ಸಹ ಸಂಯೋಜಕ ಸಮಿತ್‌ರಾಜ್ ಧರೆಗುಡ್ಡೆಯ ಮೊಬೈಲ್‌ನಲ್ಲಿ ಪತ್ತೆಯಾದ ಐವತ್ತಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳಲ್ಲಿ ಕರಾವಳಿಯ ಪ್ರಭಾವಿ ರಾಜಕಾರಣಿಯೊಬ್ಬರ ಅಶ್ಲೀಲ ವಿಡಿಯೋ ಕೂಡ ಪತ್ತೆಯಾಗಿದೆ ಎಂಬ ಬಗ್ಗೆ ಭಾರೀ ಚರ್ಚೆಯಾಗಿದ್ದು, ಮಂಗಳೂರು ಪೊಲೀಸರ ತನಿಖೆ ವೇಳೆ ಅಶ್ಲೀಲ ವಿಡಿಯೋ ಪತ್ತೆಯಾಗಿದೆ ಎಂಬ ಬಗ್ಗೆ ಬಿಸಿಬಿಸಿ ಚರ್ಚೆ ಶುರುವಾಗಿದೆ. ಆದರೆ ಇದರ ಸತ್ಯಾಸತ್ಯತೆ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಿದೆ.
ಮಂಗಳೂರು, ಜುಲೈ 1, 2025: ಮಂಗಳೂರು ನಗರದ ವಲಚ್ಚಿಲ್ ಸಮೀಪದ ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಸಾಹಸಿಕ ವಾಹನ ಚಾಲನೆಯಲ್ಲಿ ತೊಡಗಿದ್ದ ಯುವಕರ ವಿರುದ್ಧ ಮಂಗಳೂರು ನಗರ ಸಂಚಾರ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಗಮನ ಸೆಳೆದ ಸಂಚಾರ ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಮತ್ತು ಅವರ ಸಿಬ್ಬಂದಿಗಳು ಕೂಡಲೇ ಕಾರ್ಯಪ್ರವೃತ್ತರಾದರು.
ದಿನಾಂಕ 01-07-2025 ರಂದು ಈ ಯುವಕರನ್ನು ಪತ್ತೆಹಚ್ಚಿದ ಪೊಲೀಸರು, ಅವರನ್ನು ವಿಚಾರಣೆಗೆ ಒಳಪಡಿಸಿ ಸೂಕ್ತ ತಿಳುವಳಿಕೆ ನೀಡಿದ್ದಾರೆ. ಸಂಚಾರ ನಿಯಮಗಳ ಉಲ್ಲಂಘನೆಗಾಗಿ ಆರೋಪಿತ ಯುವಕರಿಗೆ 6,500 ರೂಪಾಯಿಗಳ ದಂಡವನ್ನು ವಿಧಿಸಲಾಗಿದೆ.
ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮತ್ತು ಸಾಹಸಿಕ ಚಾಲನೆಯಿಂದ ದೂರವಿರುವಂತೆ ಸಾರ್ವಜನಿಕರಿಗೆ ಪೊಲೀಸರು ಮನವಿ ಮಾಡಿದ್ದಾರೆ.
ಮಂಗಳೂರು: ಹಾಡುಹಗಲಿನಲ್ಲಿ ವ್ಯಕ್ತಿಯೋರ್ವರನ್ನು ಭೀಕರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮುಲ್ಕಿ ತಾಲೂಕಿನ ಪಕ್ಷಿಕೆರೆಯ ಕೆಮ್ರಾಲ್ ನಿವಾಸಿ ಆರೋಪಿ ಮೊಹಮ್ಮದ್ ಮುಸ್ತಫಾ ಯಾನೆ ಮುಸ್ತಾ ಎಂದು ಗುರುತಿಸಲಾಗಿದೆ.
2020 ನೇ ಸಾಲಿನಲ್ಲಿ ಮುಲ್ಕಿ ವಿಜಯ ಸನ್ನಿದಿ ಹೆದ್ದಾರಿ ಬಳಿ ಹಾಡುಹಗಲಿನಲ್ಲಿ ಭೀಕರವಾಗಿ ವ್ಯಕ್ತಿಯೋರ್ವರನ್ನು ಹತ್ಯೆ ಮಾಡಿದ ಪ್ರಕರಣ ಸಂಬಂಧ ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಜಾಮೀನು ರದ್ದಾದ ಬಳಿಕ ಆರೋಪಿ ಮೊಹಮ್ಮದ್ ಮುಸ್ತಫಾ ನಕಲಿ ಪಾಸ್‌ಪೋರ್ಟ್ ಬಳಸಿಕೊಂಡು ವಿದೇಶಕ್ಕೆ ಪರಾರಿಯಾಗಿದ್ದ. ಬಳಿಕ 2024 ರ ಎಪ್ರಿಲ್ ತಿಂಗಳಿನಲ್ಲಿ ಆರೋಪಿಯು ಅಕ್ರಮವಾಗಿ ಓಮನ್ ದೇಶದಿಂದ ಭಾರತಕ್ಕೆ ನೇಪಾಳದ ಮೂಲಕ ಅಕ್ರಮ ಪ್ರವೇಶಿಸಿದ್ದ.
ಆರೋಪಿಯ ವಿರುದ್ಧ ಸುಮಾರು ಮೂರು ವರ್ಷಗಳಿಂದ ನ್ಯಾಯಾಲಯಕ್ಕೆ ಕೊಲೆ ಪ್ರಕರಣದಲ್ಲಿ ವಾರಂಟಿನಿಂದ ತಪ್ಪಿಸಿಕೊಂಡು ವಿಚಾರಣೆಗೆ ಹಾಜರಾಗದೇ ನುಣುಚಿಕೊಳ್ಳುತ್ತಿದ್ದ ಬಗ್ಗೆ ಹಾಗೂ ಅಕ್ರಮವಾಗಿ ವಿದೇಶ ಮತ್ತು ಭಾರತಕ್ಕೆ ಬಂದಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.
2020 ರಲ್ಲಿ ಕೊಲೆಯಾದ ವ್ಯಕ್ತಿ ಅಬ್ದುಲ್ ಲತೀಫ್
ಇದೀಗ ಪರಾರಿಯಾಗಿದ್ದ ಆರೋಪಿ ಮೊಹಮ್ಮದ್ ಮುಸ್ತಫಾನನ್ನು ವಿಶೇಷ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮತ್ತೆ ನ್ಯಾಯಾಂಗ ಅಭಿರಕ್ಷೆಗೆ ನೀಡಲಾಯಿತು.
2020ರ ಜೂನ್ 5ರಂದು ಮುಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮುಲ್ಕಿ ವಿಜಯ ಸನ್ನಿದಿ ಹೆದ್ದಾರಿ ಬಳಿ ಹಾಡುಹಗಲಿನಲ್ಲಿ ರಸ್ತೆಯಲ್ಲಿ ಅಬ್ದುಲ್ ಲತೀಫ್ ಎಂಬವನನ್ನು ಆರೋಪಿಗಳಾದ ದಾವೂದ್ ಹಕೀಂ, ಮೊಹಮ್ಮದ್ ಮುಸ್ತಾಫ ಮತ್ತು ಇತರರು ಒಟ್ಟು 10 ಜನ ಸೇರಿ ಕೊಲೆ ಮಾಡಿದ್ದರು. ಎಲ್ಲಾ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿರುತ್ತದೆ. ಹಾಲಿ ನ್ಯಾಯಾಲಯದ ವಿಚಾರಣಾ ಹಂತದಲ್ಲಿರುತ್ತದೆ.
ಈ ಮಧ್ಯೆ ಆರೋಪಿ ಮೊಹಮ್ಮದ್ ಮುಸ್ತಫಾ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ದಿನಾಂಕ 2020ರ ಅಕ್ಟೋಬರ್ 19ರಂದು ಜಾಮೀನು ಪಡೆದಿರುತ್ತಾನೆ. ನಂತರ 2022ರ ಏಪ್ರಿಲ್ 22ರಂದು ನ್ಯಾಯಾಲಯವು ಆರೋಪಿಯ ಜಾಮೀನು ರದ್ದು ಮಾಡಿರುತ್ತದೆ. ಅಂದಿನಿಂದಲೂ ಆರೋಪಿ ಮೊಹಮ್ಮದ್ ಮುಸ್ತಫಾನು ತಲೆಮರೆಸಿಕೊಂಡು ನಕಲಿ ಪಾಸ್‌ಪೋರ್ಟ್ ಮೂಲಕ ವಿದೇಶಕ್ಕೆ ಪರಾರಿಯಾಗಿದ್ದನು.
ತಲೆಮರೆಸಿಕೊಂಡ ವಾರಂಟ್ ಆರೋಪಿ ಮೊಹಮ್ಮದ್ ಮುಸ್ತಫಾನ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿತ್ತು. ಇದೀಗ ಆರೋಪಿಯನ್ನು 2025ರ ಜೂನ್ 30ರಂದು ಮುಲ್ಕಿಯ ಪಕ್ಷಿಕೆರೆ ಬಳಿ ಪತ್ತೆ ಮಾಡಿ ಮುಂದಿನ ಕ್ರಮದ ಬಗ್ಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ವಿಚಾರಣೆ ವೇಳೆ ಆರೋಪಿಯು ನಕಲಿ ಪಾಸ್‌ಪೋರ್ಟ್ ಪಡೆದು ಓಮನ್ ರಾಷ್ಟ್ರಕ್ಕೆ ಪರಾರಿಯಾಗಿ ನಂತರ ನೇಪಾಳ ಮೂಲಕ ಭಾರತ ದೇಶಕ್ಕೆ ಬಂದಿರುವುದಾಗಿ ತಿಳಿದುಬಂದಿದೆ.
ಆರೋಪಿಯು ಕಳೆದ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಈತನ ವಿರುದ್ದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಬಗ್ಗೆ ಮತ್ತು ವಿದೇಶ ಮತ್ತು ಭಾರತಕ್ಕೆ ಅಕ್ರಮವಾಗಿ ಪ್ರವೇಶ ಮಾಡಿರುವ ಪ್ರಕರಣವನ್ನು ಮುಲ್ಕಿ ಠಾಣೆಯಲ್ಲಿ ದಾಖಲಿಸಿಕೊಂಡಿರುತ್ತದೆ. ನಕಲಿ ಪಾಸ್‌ಪೋರ್ಟ್ ಹೊಂದಿರುವ ಬಗ್ಗೆ ಬೆಂಗಳೂರಿನ ಬಸನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈತನ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ 4 ಮತ್ತು ಇತರೆ ಜಿಲ್ಲೆಯಲ್ಲಿ ಒಟ್ಟು 5 ಪ್ರಕರಣಗಳು ದಾಖಲಾಗಿರುತ್ತದೆ. ಚಿಕ್ಕಮಗಳೂರು, ಉಡುಪಿ ಜಿಲ್ಲೆಯ ಠಾಣೆಗಳಲ್ಲಿ ಈತನ ವಿರುದ್ಧ ಎರಡು ಪ್ರಕರಣಗಳಲ್ಲಿ ವಾರಂಟ್ ಬಾಕಿ ಇರುತ್ತದೆ.
ಮಂಗಳೂರು: ರಾಜ್ಯದ ಹುಬ್ಬಳ್ಳಿ, ಬೆಳಗಾವಿ, ಮಂಗಳೂರು ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳ ನಿರ್ದೇಶಕರಿಗೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸುವ ಕುರಿತು ಭಾನುವಾರ ಮಧ್ಯಾಹ್ನ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ರವಾನೆಯಾಗಿದೆ. ಮುಂಜಾಗ್ರತಾ ಕ್ರಮವಾಗಿ ನಿಲ್ದಾಣಗಳಲ್ಲಿ ಬಿಗಿ ಭದ್ರತೆ ಹೆಚ್ಚಿಸಲಾಗಿದೆ.
ವಿಮಾನ ನಿಲ್ದಾಣದ ಆವರಣ ಪ್ರವೇಶಿಸುವ ಪ್ರತಿಯೊಬ್ಬ ಪ್ರಯಾಣಿಕರನ್ನು ಮತ್ತು ಸಾರ್ವಜನಿಕರನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು, ಆಂತರಿಕ ಭದ್ರತಾ ಸಿಬ್ಬಂದಿ ಮತ್ತು ಗುಪ್ತಚರ ಇಲಾಖೆ ಸಿಬ್ಬಂದಿ ನಿಗಾ ವಹಿಸಿದ್ದಾರೆ.
‘ರಾಜ್ಯದ ನಾಲ್ಕು ವಿಮಾನ ನಿಲ್ದಾಣಗಳಿಗೆ roadkill kyo ಹೆಸರಿನ ಇ-ಮೇಲ್ ಐಡಿಯಿಂದ ಬೆದರಿಕೆ ಸಂದೇಶ ಬಂದಿದೆ. ತಕ್ಷಣ ಬಾಂಬ್ ತಪಾಸಣಾ ದಳ ಮತ್ತು ಭದ್ರತಾ ಸಿಬ್ಬಂದಿ ಜತೆ ಸಭೆ ನಡೆಸಿ, ನಿಲ್ದಾಣಕ್ಕೆ ಬಿಗಿ ಭದ್ರತೆ ಒದಗಿಸಿದ್ದೇವೆ. ವಿಮಾನ ನಿಲ್ದಾಣದ ಸುತ್ತಮುತ್ತಲಿನ ಸುಮಾರು 50-60 ಎಕರೆ ಪ್ರದೇಶವನ್ನು ಭದ್ರತಾ ಸಿಬ್ಬಂದಿ ಪರಿಶೀಲಿಸಿದ್ದಾರೆ. ಸಂದೇಶ ಬಂದ ಇ-ಮೇಲ್ ಐಡಿಯ ಮಾಹಿತಿಯನ್ನು ಪೊಲೀಸರಿಗೆ ನೀಡಿ, ಪ್ರಕರಣ ದಾಖಲಿಸಿದ್ದೇವೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶಕುಮಾರ್ ತಿಳಿಸಿದರು.
ಬೆಂಗಳೂರು, ಜೂನ್ 30, 2025: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕರ್ನಾಟಕ ಭಾಗದ ಜಿಲ್ಲಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ವಿಶೇಷ ಸಭೆಯು,ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ರವರ ಅಧ್ಯಕ್ಷತೆಯಲ್ಲಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಜಾಹಿದ್ ಪಾಷಾ ಮತ್ತು ರಾಜ್ಯ ಕಾರ್ಯದರ್ಶಿ ಅಪ್ಸರ್ ಕೆ ಆರ್ ನಗರ ರವರುಗಳ ಉಪಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ನಡೆಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ರವರು, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅಲ್ಪಸಂಖ್ಯಾತ ಮುಸ್ಲಿಮರ ವಿರೋಧಿ ಹೇಳಿಕೆ ನೀಡಿದ್ದು, ಇದನ್ನು ವಿರೋಧಿಸಿ ಪಕ್ಷದ ವತಿಯಿಂದ ರಾಜ್ಯಾದ್ಯಂತ ಹೋರಾಟ ಪ್ರತಿಭಟನೆ ಮಾಡಿದರೂ ಸಹ, ಮುಸ್ಲಿಮರ ವೋಟು ಪಡೆದು ಬೀಗುತ್ತಿರುವ ಕಾಂಗ್ರೆಸ್ ಸರ್ಕಾರ ಮತ್ತು ಕಾಂಗ್ರೆಸ್ ನಾಯಕರು ಕನಿಷ್ಠ ಖಂಡಿಸಿಲ್ಲ ಮತ್ತು ಶಾಸಕನ ವಿರುದ್ಧ ಯಾವುದೇ ರೀತಿಯ ಕ್ರಮ ಜರುಗಿಸಿಲ್ಲ, ಇದು ಅಲ್ಪಸಂಖ್ಯಾತ ಸಮುದಾಯಕ್ಕೆ ಕಾಂಗ್ರೆಸ್ ಮಾಡಿದ ದ್ರೋಹವಾಗಿದೆ.
ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗಗಳು ಒಂದಾಗಿ ರಾಜಕೀಯ ಅಧಿಕಾರ ಪಡೆದರೆ ಮಾತ್ರ ಗೌರವಯುತವಾಗಿ ಜೀವಿಸಲು ಸಾಧ್ಯವಾಗಿದೆ. ಇದಕ್ಕಾಗಿ ಅವಿರತ ಶ್ರಮದ ಅಗತ್ಯವಿದೆ. .
ಹಸಿವು ಮುಕ್ತ ಸ್ವಾತಂತ್ರ, ಭಯ ಮುಕ್ತ ಸ್ವಾತಂತ್ರ ದ್ಯೇಯದೊಂದಿಗೆ ಕಾರ್ಯನಿರ್ವಹಿಸುವ ನಾವು ಜನಪರ ಹೋರಾಟ,ಪ್ರತಿಭಟನೆ, ಆಂದೋಲನಗಳ ಜೊತೆಗೆ ಚುನಾವಣೆಗಳು ಕೂಡ ನಮ್ಮ ಮುಖ್ಯ ಧ್ಯೇಯವಾಗಿರಬೇಕು. ಹೋರಾಟ, ಪ್ರತಿಭಟನೆ, ಮತ್ತು ಜನಾಂದೋಲನ ಮೂಲಕ ವಂಚಿತರ ಹಕ್ಕುಗಳನ್ನು ತಕ್ಕಮಟ್ಟಿಗೆ ಕೊಡಿಸಬಹುದಾಗಿದೆ ಆದರೆ ರಾಜಕೀಯ ಪ್ರತಿನಿಧಿತ್ವದಿಂದ ಅದನ್ನು ಸುಲಭಗೊಳಿಸಬಹುದಾಗಿದೆ. ಆದ್ದರಿಂದ
ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಸ್ಥಳೀಯ ನಗರಡಾಳಿತಗಳ ಚುನಾವಣೆಗಳು ನಮ್ಮ ಗುರಿಯಾಗಿರಬೇಕು. ಈ ನಿಟ್ಟಿನಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಸಿದ್ಧತೆ ನಡೆಯಬೇಕು, ಪಕ್ಷದ ನಾಯಕರು ತಳಮಟ್ಟದಲ್ಲಿ ಮತ್ತು ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಬೇಕು ಈ ಎಂದು ಕರೆ ಕೊಟ್ಟರು.
ದಕ್ಷಿಣ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಬೆಂಗಳೂರು, ಜೂನ್ 29: ಬೆಂಗಳೂರಿನಲ್ಲಿ ಶನಿವಾರ ಬಿಡುಗಡೆಯಾದ ಒಂದು ಸತ್ಯಶೋಧನಾ ವರದಿಯು, 2025 ರ ಏಪ್ರಿಲ್ 27 ರಂದು ಮಂಗಳೂರಿನ ಕುಡುಪಾಡಿಯಲ್ಲಿ ನಡೆದ ಕೇರಳದ ಮುಸ್ಲಿಂ ಯುವಕ ಅಶ್ರಫ್‌ನ ಗುಂಪು ಹತ್ಯೆಯ ನಿಷ್ಪಕ್ಷಪಾತ ತನಿಖೆ ನಡೆಸಲು ಕರ್ನಾಟಕ ಸರ್ಕಾರ ವಿಫಲವಾಗಿದೆ ಎಂದು ತೀವ್ರವಾಗಿ ಖಂಡಿಸಿದೆ.
“ಮಂಗಳೂರು ಗುಂಪು ಹತ್ಯೆ ಪ್ರಕರಣ – ಸಂವಿಧಾನದ ಕೊಲೆಯ ಬಗ್ಗೆ ಮೌನ ಮುರಿಯುವ ಸಮಯ” ಎಂಬ ಶೀರ್ಷಿಕೆಯ ಈ ವರದಿಯನ್ನು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ – ಕರ್ನಾಟಕ, ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ – ಕರ್ನಾಟಕ, ಮತ್ತು ಆಲ್ ಇಂಡಿಯಾ ಅಸೋಸಿಯೇಷನ್ ಫಾರ್ ಜಸ್ಟಿಸ್ – ಕರ್ನಾಟಕ ಸಂಯುಕ್ತವಾಗಿ ಸಿದ್ಧಪಡಿಸಿವೆ. ಈ ವರದಿಯನ್ನು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು, ಪ್ರಕರಣದ ಹಲವಾರು ನಿರ್ಣಾಯಕ ಅಂಶಗಳಿಗೆ ಬೆಳಕು ಚೆಲ್ಲಿದೆ.
ದಲಿತ ನಾಯಕ ಮತ್ತು ಹಿರಿಯ ಕಾರ್ಯಕರ್ತ ಮಾವಳ್ಳಿ ಶಂಕರ್, ಯುಎನ್ ತಜ್ಞೆ ಆಶ್ವಿನಿ ಕೆ.ಪಿ., ವಕೀಲರಾದ ವಿನಯ್ ಶ್ರೀನಿವಾಸ್, ಮೈತ್ರೇಯಿ, ಮಾನವಿ, ಎಸ್‌ಐಒ ರಾಜ್ಯ ಕಾರ್ಯದರ್ಶಿ ಹಯಾನ್ ಕುಡ್ರೋಲಿ, ಪಿಯುಸಿಎಲ್ ಸದಸ್ಯ ಶಶಾಂಕ್, ಮತ್ತು ಕೊಲೆಯಾದ ಯುವಕ ಅಶ್ರಫ್‌ನ ಸಹೋದರ ಅಬ್ದುಲ್ ಜಬ್ಬಾರ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕೇರಳದ ಮುಸ್ಲಿಂ ಯುವಕ ಅಶ್ರಫ್‌ನನ್ನು ಕುಡುಪಾಡಿಯಲ್ಲಿ ಕ್ರಿಕೆಟ್ ಆಡುತ್ತಿದ್ದ ಒಂದು ಗುಂಪಿನ ಜನರು ಕ್ರೂರವಾಗಿ ಹೊಡೆದು ಕೊಂದ ಘಟನೆಯನ್ನು ವರದಿಯು ವಿವರಿಸಿದೆ. ಈ ಘಟನೆಯು ಕರ್ನಾಟಕದಾದ್ಯಂತ ಆಕ್ರೋಶ ಮತ್ತು ಅವಮಾನಕ್ಕೆ ಕಾರಣವಾಯಿತು. ಆದರೆ, ಎರಡು ತಿಂಗಳು ಕಳೆದರೂ ರಾಜ್ಯ ಸರ್ಕಾರವು ಈ ಪ್ರಕರಣಕ್ಕೆ ವಿಶೇಷ ಸಾರ್ವಜನಿಕ ಅಭಿಯೋಜಕರನ್ನು ನೇಮಿಸಿಲ್ಲ. ಇದಲ್ಲದೆ, ಅಶ್ರಫ್‌ನ ಕುಟುಂಬಕ್ಕೆ ಶವಪರೀಕ್ಷೆ ವರದಿಯನ್ನು ಒದಗಿಸಲಾಗಿಲ್ಲ ಮತ್ತು ಯಾವುದೇ ಪರಿಹಾರವನ್ನೂ ನೀಡಲಾಗಿಲ್ಲ.
ಈ ಆಡಳಿತಾತ್ಮಕ ವೈಫಲ್ಯ ಮತ್ತು ನಿರ್ಲಕ್ಷ್ಯದ ಸ್ಪಷ್ಟ ಸಂಕೇತವೆಂದು ಸತ್ಯಶೋಧನಾ ಸಮಿತಿಯು ಇದನ್ನು ಗುರುತಿಸಿದೆ.
ಗುಂಪು ಹತ್ಯೆಯನ್ನು ಕಡಿಮೆ ಮಾಡಿ ತೋರಿಸಲು ಮತ್ತು ಘಟನೆಯೇ ನಡೆಯದಂತೆ ಚಿತ್ರಿಸಲು ವ್ಯವಸ್ಥಿತ ಪ್ರಯತ್ನ ನಡೆದಿದೆ ಎಂದು ವರದಿಯು ಪೊಲೀಸರ ನಿಷ್ಕ್ರಿಯತೆಯನ್ನು ಬಯಲಿಗೆಳೆದಿದೆ.
Mangaluru, June 26, 2025: Mangaluru City Police Commissioner Sudheer Kumar Reddy on Wednesday, June 25, said it is important for reporters to maintain authenticity in the news and not rush to write or display news in a hurry.
Speaking after presenting the ‘Brand Mangaluru’ award to Vijay Kotian Padu, reporter with a vernacular daily at the Mangaluru Press Club on Wednesday, Mr. Reddy said, in rush to be the first to provide the news, it is not good to write something that comes to the mind and cause injustice. In conflict situations, it is important to tell the truth, rather than treat the accused and the victim on equal footing.
“If you (reporters) write truth there is no need to fear,” he said. If compassion is reflected in the report then there will be no problem. The differences will ease out in the society. Journalists should act like a light to dispel darkness in the society.
Fearless reporting, he said, was the soul of reporting. Referring to the work of Russian investigative journalist Anna Politkovskaya, Mr. Reddy said if journalists do their work with noble intention he/she need not fear. Mr. Reddy said journalists, including those in Radio, kept on reporting on positive things while genocide was happening in Rwanda. Over the years differences among communities died down and effort was made to outlaw mischief mongers in Rwanda. “Similar work needs to be done by journalists in Mangaluru too,” he said.
The ‘Brand Mangaluru’ award was instituted by Dakshina Kannada Working Journalists Association. Mr. Padu was chosen for his report on Muslims donning ‘Huli vesha’.
ವಿಟ್ಟಲ, ಜೂನ್ 11, 2025: ಜಿಲ್ಲಾ ಪೊಲೀಸ್ ಸೂಪರಿಂಟೆಂಡೆಂಟ್‌ರು ವಿಟ್ಟಲ ಎಸ್‌ಐ ಕೌಶಿಕ್ ಬಿಎಂ ಅವರನ್ನು ಜೂಗಾಟದ ಪ್ರಕರಣದಲ್ಲಿ ಆರೋಪಿಯೊಬ್ಬರಿಂದ ಹಣ ಕೇಳಿದ ಆರೋಪದ ಮೇಲೆ ಅಮಾನತುಗೊಳಿಸಿದ್ದಾರೆ.
ವಿಟ್ಟಲ ಎಸ್‌ಐ ಜೂಗಾಟದ ಚಟುವಟಿಕೆ ನಡೆಯುತ್ತಿದೆ ಎಂಬ ಮಾಹಿತಿಯ ಮೇರೆಗೆ ಎಸ್‌ಐ ಒಂದು ಸ್ಥಳದ ಮೇಲೆ ದಾಳಿ ನಡೆಸಿದ್ದರು. ಆದರೆ, ಜೂಗಾಟದಲ್ಲಿ ತೊಡಗಿದ್ದವರು ಪರಾರಿಯಾಗಲು ಯಶಸ್ವಿಯಾಗಿದ್ದರು. ಪೊಲೀಸರು ಸ್ಥಳದಿಂದ ಬೈಕ್ ಒಂದನ್ನು ವಶಪಡಿಸಿಕೊಂಡಿದ್ದರು. ಎಸ್‌ಐ ಕೌಶಿಕ್ ಬಿಎಂ ಅವರು ಬೈಕ್‌ನ ಮಾಲೀಕರನ್ನು ಸ್ಟೇಷನ್‌ಗೆ ಕರೆಸಿ, ಮೂರನೇ ವ್ಯಕ್ತಿಯ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ವರದಿಯಾಗಿದೆ. ಈ ಸಂಭಾಷಣೆಯ ವಿಡಿಯೋ ವೈರಲ್ ಆಗಿತ್ತು. ಎಸ್‌ಪಿ ಅವರು ಆದೇಶವೊಂದರಲ್ಲಿ ಎಸ್‌ಐಯನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ ಮತ್ತು ಇಲಾಖಾ ಶಿಸ್ತು ಕ್ರಮಕ್ಕೆ ಬಾಕಿಯಿದೆ.
Karkala: In a tragic incident, one person was killed in a head-on collision between a autorickshaw and a bus on the Karkala-Padubidri highway on Thursday, June 12 morning.
An accident occurred between a private bus coming from Mangaluru to Karkala and an auto rickshaw near Adve, Kanjarkatte junction. As a result, One died on the spot and two were severely injured in the incident.
Pratap, a native of North India, died on the spot. The rickshaw driver is seriously injured.
The victims were immediately rushed to the hospital.