Category: Entertainment

  • ಉಡುಪಿ: ಕನ್ನಡ ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ನಟ ಕಮಲ್ ಹಾಸನ್ ವಿರುದ್ಧ ಕರವೇ ಪ್ರತಿಭಟನೆ

    ಉಡುಪಿ: ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದ್ದು ಅನ್ನೋ ವಿವಾದಾತ್ಮಕ ಹೇಳಿಕೆ ನೀಡಿದ್ದ ನಟ ಕಮಲ್ ಹಾಸನ್ ಅವರು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಳೆದ 2 ದಿನಗಳಿಂದ ಕಮಲ್ ಹಾಸನ್ ವಿರುದ್ಧ ಕನ್ನಡಿಗರು ಪ್ರತಿಭಟನೆ ನಡೆಸಿ ಕ್ಷಮೆಯಾಚಿಸಲು ಪಟ್ಟು ಹಿಡಿದಿದ್ದಾರೆ.

    ಉಡುಪಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣದ ವತಿಯಿಂದ ಪ್ರತಿಭಟನೆ ನಡೆಯಿತು. ನಗರದ ಅಜ್ಜರಕಾಡಿನ ಹುತಾತ್ಮರ ಸ್ಮಾರಕದ ಮುಂಭಾಗದಲ್ಲಿ ಸೇರಿದ್ದ ಕರವೇ ಕಾರ್ಯಕರ್ತರು ಕಮಲ್ ಹಾಸನ್ ವಿರುದ್ಧ ದಿಕ್ಕಾರ ಕೂಗಿದರು. ಕಮಲ್ ಹಾಸನ್ ತಕ್ಷಣವೇ ಕನ್ನಡಿಗರ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಅವರು ನಟಿಸಿರುವ “ಥಗ್ ಲೈಫ್” ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

    ಕರವೇ ಜಿಲ್ಲಾಧ್ಯಕ್ಷ ಪ್ರಭಾಕರ ಪೂಜಾರಿ ಮಾತನಾಡಿ, ತಮಿಳು ನಟ ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿದ್ದು, ಇದು ಅತ್ಯಂತ ಖಂಡನೀಯ. ಈ ಆಧಾರರಹಿತ ಹೇಳಿಕೆಯು ಕನ್ನಡ ಭಾಷೆಯ ಶ್ರೀಮಂತ ಇತಿಹಾಸ, ಸಂಸ್ಕೃತಿ ಮತ್ತು ಸ್ವಾಭಿಮಾನಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ. ಕನ್ನಡಿಗರಿಂದ ತೀವ್ರ ಖಂಡನೆ ಮತ್ತು ವಿರೋಧ ವ್ಯಕ್ತವಾದರೂ, ಕಮಲ್ ಹಾಸನ್ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸದೆ ಉದ್ಧಟತನ ಪ್ರದರ್ಶಿಸುತ್ತಿದ್ದಾರೆ‌ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕಮಲ್ ಹಾಸನ್ ಕೂಡಲೇ ಕನ್ನಡಿಗರ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಜೂನ್ 5ರಂದು ಬಿಡುಗಡೆ ಸಿದ್ದವಾಗಿರುವ ಅವರ “ತಗ್ ಲೈಫ್’ ಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ. ಈ ಚಿತ್ರದ ವಿತರಕರು ತಮ್ಮ ಹೂಡಿಕೆಯನ್ನು ರಕ್ಷಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

  • ಮೈಸೂರು ಸ್ಯಾಂಡಲ್ ಸೋಪ್‌ನ ರಾಯಭಾರಿಯಾಗಿ ತಮನ್ನಾ ಭಾಟಿಯಾ ಆಯ್ಕೆ: ಕನ್ನಡಿಗರ ಆಕ್ಷೇಪ

    ಬೆಂಗಳೂರು, ಮೇ 22, 2025: ಕರ್ನಾಟಕ ಸರ್ಕಾರದ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ತನ್ನ ಐತಿಹಾಸಿಕ ಮೈಸೂರು ಸ್ಯಾಂಡಲ್ ಸೋಪ್‌ನ ಬ್ರಾಂಡ್ ಅಂಬಾಸಿಡರ್ ಆಗಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿದೆ. ಎರಡು ವರ್ಷದ ಅವಧಿಗೆ ಒಟ್ಟು 6.2 ಕೋಟಿ ರೂಪಾಯಿಗಳ ಒಪ್ಪಂದದಡಿ ಈ ನೇಮಕಾತಿ ನಡೆದಿದೆ. ಆದರೆ, ಈ ನಿರ್ಧಾರವು ಕನ್ನಡಿಗರಿಂದ ತೀವ್ರ ಆಕ್ಷೇಪಕ್ಕೆ ಒಳಗಾಗಿದೆ.

    Circular

    ಮೈಸೂರು ಸ್ಯಾಂಡಲ್ ಸೋಪ್, 1916ರಲ್ಲಿ ಮೈಸೂರಿನ ಮಹಾರಾಜ ಕೃಷ್ಣರಾಜ ವಾಡಿಯಾರ್ IV ಅವರ ಆಡಳಿತದಲ್ಲಿ ಬೆಂಗಳೂರಿನಲ್ಲಿ ಸ್ಥಾಪಿತವಾದ ಸೋಪ್ ಕಾರ್ಖಾನೆಯಿಂದ ಉತ್ಪಾದನೆಯಾಗುತ್ತಿದ್ದು, ಕರ್ನಾಟಕದ ಸಾಂಸ್ಕೃತಿಕ ಗುರುತಾಗಿದೆ. ಈ ಬ್ರಾಂಡ್‌ಗೆ ಕನ್ನಡಿಗರಲ್ಲಿ ಗಾಢವಾದ ಗೌರವವಿದೆ. ಆದರೆ, ಕನ್ನಡ ನಟಿಯರನ್ನು ಬಿಟ್ಟು ಬಾಲಿವುಡ್‌ನ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿರುವುದು ಸ್ಥಳೀಯ ಕಲಾವಿದರಿಗೆ ಅವಕಾಶ ನೀಡದಿರುವುದಕ್ಕೆ ಕಾರಣವಾಗಿದೆ ಎಂದು ಕನ್ನಡಪರ ಸಂಘಟನೆಗಳು ಆರೋಪಿಸಿವೆ.

    ಕರ್ನಾಟಕ ರಕ್ಷಣಾ ವೇದಿಕೆಯ ಮುಖ್ಯಸ್ಥ ಟಿ. ನಾರಾಯಣಗೌಡ ಅವರು ಈ ನಿರ್ಧಾರವನ್ನು ಕರ್ನಾಟಕದ ಪ್ರತಿಭೆಗಳಿಗೆ ಅವಮಾನ ಎಂದು ಕರೆದಿದ್ದಾರೆ. “ಕನ್ನಡದ ಯುವ ನಟಿಯರಾದ ಅಶಿಕಾ ರಂಗನಾಥ್, ರುಕ್ಮಿಣಿ ವಸಂತ್ ಅಥವಾ ಇತರ ಸ್ಥಳೀಯ ಕಲಾವಿದರಿಗೆ ಈ ಅವಕಾಶ ನೀಡಬಹುದಿತ್ತು. ಇದು ಕರ್ನಾಟಕದ ಗೌರವಕ್ಕೆ ಧಕ್ಕೆ ತರುವ ನಿರ್ಧಾರ,” ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಈ ವಿವಾದಕ್ಕೆ ಪ್ರತಿಕ್ರಿಯೆ ನೀಡಿರುವ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಎಂ.ಬಿ. ಪಾಟೀಲ್, “ಕೆಎಸ್‌ಡಿಎಲ್ ಕನ್ನಡ ಚಿತ್ರರಂಗವನ್ನು ಗೌರವಿಸುತ್ತದೆ. ಕೆಲವು ಕನ್ನಡ ಚಿತ್ರಗಳು ಬಾಲಿವುಡ್‌ಗೆ ಸೆಡ್ಡು ಹೊಡೆಯುತ್ತಿವೆ. ಆದರೆ, ಮೈಸೂರು ಸ್ಯಾಂಡಲ್ ಸೋಪ್‌ನ ಉದ್ದೇಶ ಕರ್ನಾಟಕದ ಗಡಿಯಾಚೆಗೆ ತನ್ನ ಮಾರುಕಟ್ಟೆಯನ್ನು ಆಕ್ರಮಣಕಾರಿಯಾಗಿ ವಿಸ್ತರಿಸುವುದಾಗಿದೆ. ತಮನ್ನಾ ಭಾಟಿಯಾ ಅವರ 28.2 ಮಿಲಿಯನ್ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಮತ್ತು ರಾಷ್ಟ್ರವ್ಯಾಪಿ ಜನಪ್ರಿಯತೆಯಿಂದಾಗಿ ಈ ಆಯ್ಕೆ ಮಾಡಲಾಗಿದೆ,” ಎಂದು ಸಮರ್ಥಿಸಿಕೊಂಡಿದ್ದಾರೆ.

    ಕೆಎಸ್‌ಡಿಎಲ್‌ನ ಹಿರಿಯ ಅಧಿಕಾರಿಯೊಬ್ಬರು, “ರಶ್ಮಿಕಾ ಮಂದಣ್ಣ, ದೀಪಿಕಾ ಪಡುಕೋಣೆ ಮತ್ತು ಪೂಜಾ ಹೆಗ್ಡೆಯಂತಹ ಕನ್ನಡ ನಟಿಯರನ್ನು ಪರಿಗಣಿಸಲಾಗಿತ್ತು. ಆದರೆ, ಅವರು ಈಗಾಗಲೇ ಇತರ ಬ್ರಾಂಡ್‌ಗಳೊಂದಿಗೆ ಒಪ್ಪಂದದಲ್ಲಿದ್ದ ಕಾರಣ ಮುಂದುವರಿಯಲಾಗಲಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.

    ಸಾಮಾಜಿಕ ಜಾಲತಾಣ Xನಲ್ಲಿ ಈ ಆಯ್ಕೆಯನ್ನು ಖಂಡಿಸಿರುವ ಅನೇಕರು, “ಕನ್ನಡದ ಪ್ರತಿಭೆಗಳಿಗೆ ಯಾಕೆ ಅವಕಾಶ ಕೊಡಲಿಲ್ಲ? ಮೈಸೂರು ಸ್ಯಾಂಡಲ್ ಸೋಪ್ ಕರ್ನಾಟಕದ ಹೆಮ್ಮೆ, ಆದರೆ ಇದನ್ನು ಪ್ರಚಾರ ಮಾಡಲು ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಬೇಕಿತ್ತು,” ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಈ ವಿವಾದದ ನಡುವೆ, ಕೆಎಸ್‌ಡಿಎಲ್ ತನ್ನ ಬ್ರಾಂಡ್‌ನ ಜನಪ್ರಿಯತೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ವೃದ್ಧಿಸಲು ತಮನ್ನಾ ಭಾಟಿಯಾ ಅವರ ಆಯ್ಕೆಯನ್ನು ಸಮರ್ಥವಾಗಿ ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ. ಆದರೆ, ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಈ ನಿರ್ಧಾರವನ್ನು ಪರಿಷ್ಕರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

  • ಕುಂದಾಪುರ: ಚೈತ್ರಾ ಕುಂದಾಪುರ ಅವರ ತಂದೆಯಿಂದ ಆಘಾತಕಾರಿ ಆರೋಪ; ನಟಿ ತಿರುಗೇಟು

    ಕುಂದಾಪುರ: ಬಿಗ್ ಬಾಸ್ ಕನ್ನಡ ಖ್ಯಾತಿಯ ಚೈತ್ರಾ ಕುಂದಾಪುರ ಅವರು ಶ್ರೀಕಾಂತ್ ಕಶ್ಯಪ್ ಅವರೊಂದಿಗೆ ಇತ್ತೀಚೆಗೆ ಸರಳ ವಿವಾಹವಾದ ಕೆಲವೇ ದಿನಗಳಲ್ಲಿ, ಅವರ ತಂದೆ ಬಾಲಕೃಷ್ಣ ನಾಯಕ್ ಅವರು ತಮ್ಮ ಮಗಳು ಮತ್ತು ಗಂಡನ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಆರೋಪಗಳು ಸುದ್ದಿಯಾಗಿ ವಿವಾದಕ್ಕೆ ಕಾರಣವಾಗಿವೆ.

    ತಮ್ಮ ವಿವಾಹಕ್ಕೆ ಚೈತ್ರಾ ತನಗೆ ಸರಿಯಾದ ಆಮಂತ್ರಣ ನೀಡಲಿಲ್ಲ ಎಂದು ಮಾಧ್ಯಮಗಳೊಂದಿಗೆ ಮಾತನಾಡಿದ ಬಾಲಕೃಷ್ಣ ನಾಯಕ್, “ನಾನು ಈ ವಿವಾಹವನ್ನು ಒಪ್ಪುವುದಿಲ್ಲ. ಚೈತ್ರಾ ಮತ್ತು ಅವಳ ಗಂಡ ಇಬ್ಬರೂ ಕಳ್ಳರು,” ಎಂದು ಆರೋಪಿಸಿದ್ದಾರೆ.

    ಅವರು ಮುಂದುವರೆದು, “ನನ್ನ ಪತ್ನಿಯೂ ಚೈತ್ರಾಳನ್ನು ಬೆಂಬಲಿಸುತ್ತಿದ್ದಾಳೆ. ಹಣದ ಆಸೆಗೆ ಇವರೆಲ್ಲರೂ ನನ್ನನ್ನು ಕೈಬಿಟ್ಟಿದ್ದಾರೆ. ಗೋವಿಂದ ಬಾಬು ಪೂಜಾರಿ ಪ್ರಕರಣದಲ್ಲಿ ಇವರು ಹಣವನ್ನು ತಮ್ಮಲ್ಲಿ ಹಂಚಿಕೊಂಡಿದ್ದಾರೆ. ಕೇವಲ ನನ್ನ ಹಿರಿಯ ಮಗಳು ಮಾತ್ರ ನನ್ನೊಂದಿಗಿದ್ದಾಳೆ,” ಎಂದರು.

    ವಿವಾಹದ ಸಂದರ್ಭದಲ್ಲಿ ಚೈತ್ರಾ ತನ್ನಿಂದ ಹಣ ಕೇಳಿದ್ದಾಗಿ ನೆನಪಿಸಿಕೊಂಡ ನಾಯಕ್, “ನಾನೊಬ್ಬ ಸಾಮಾನ್ಯ ಹೋಟೆಲ್ ಕೆಲಸಗಾರ. ಚೈತ್ರಾ ಮತ್ತು ಅವಳ ತಾಯಿ ಹಣಕ್ಕಾಗಿ ನನ್ನಿಂದ ದೂರವಾಗಿದ್ದಾರೆ. ಚೈತ್ರಾಳ ಗಂಡ ನಮ್ಮ ಮನೆಯಲ್ಲೇ ಇದ್ದ. ಅವನೂ ಕಳ್ಳ, ಇವರಿಗೆ ಗೌರವ, ಮಾನ-ಮರ್ಯಾದೆ ಇಲ್ಲ. ಈಗ ಇವರು ಕುಟುಂಬದ ಗೌರವವನ್ನೇ ನಾಶಪಡಿಸಿದ್ದಾರೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಚೈತ್ರಾಳಿಂದ ತಿರುಗೇಟು

    ಈ ಆರೋಪಗಳು ಮಾಧ್ಯಮಗಳಲ್ಲಿ ಗಮನ ಸೆಳೆದಾಗ, ಚೈತ್ರಾ ಕುಂದಾಪುರ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅವರು: “ಕುಡುಕ ತಂದೆಯ ಚಿತ್ರ ಹಿಂಸೆ ಅನುಭವಿಸಿದವರಿಗಷ್ಟೇ ಗೊತ್ತು. ಎಂತಹ ಮಕ್ಕಳಿಗೂ ಕುಡುಕ ತಂದೆ ಸಿಗಬಾರದು. ಎರಡು ಕ್ವಾರ್ಟರ್ ನಾನು ಕೊಟ್ಟರೆ ನನ್ನ ಮಕ್ಕಳು ದೇವರು ಅನ್ನುವವರ ಮಾತಿಗೆ ಬೆಲೆ ಕೊಡುವವರು ಮೂರ್ಖರಾಗ್ತಾರೆ.” ಬರೆದಿದ್ದಾರೆ.

    “ಹೆತ್ತ ಮಕ್ಕಳನ್ನ ಸಾಕಲಿಲ್ಲ, ಫೀಸ್ ಕಟ್ಟಿ ಓದಿಸಲಿಲ್ಲ , ಹೆಣ್ಣು ಮಕ್ಕಳ ಜವಾವ್ದಾರಿ ಹೊತ್ತು ಮದುವೆಯೂ ಮಾಡಲಿಲ್ಲ … ಕಟ್ಟಿಕೊಂಡ ಹೆಂಡತಿಗೆ ಹೊಡೆದು ಚಿತ್ರ ಹಿಂಸೆ ಮಾಡಿದ್ದು ಬಿಟ್ಟರೆ ಬೇರೆ ಏನೋ ಇಲ್ಲ … ಎಲ್ಲಾ ಮುಗಿದ ಮೇಲೆ ಅಪವಾದ ಹಾಕೋಕೆ ಮಾತ್ರ ತಂದೆ ಎನ್ನುವ ಹೆಸರು…. ವಾವ್” ಎಂದು ತಿರುಗೇಟು ಕೊಟ್ಟಿದ್ದಾರೆ.

  • ಉಡುಪಿ: ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ರಾಕೇಶ್ ಪೂಜಾರಿ ಇನ್ನಿಲ್ಲ

    ಉಡುಪಿ, ಮೇ. 12: ಕರ್ನಾಟಕದ ಮನೆ ಮಾತಾಗಿದ್ದ ‘ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ರಾಕೇಶ್ ಪೂಜಾರಿ(34) ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

    ಕಾರ್ಕಳದ ನಿಟ್ಟೆಯಲ್ಲಿ ರಾಕೇಶ್ ಅವರು ಮೆಹಂದಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಮೇ 12 ಮುಂಜಾನೆ 2 ಗಂಟೆ ಸುಮಾರಿಗೆ ಅವರಿಗೆ ಹೃದಯಾಘಾತವಾಗಿದೆ. ಬಳಿಕ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

    ಇನ್ನು ರಾಕೇಶ್ ಅವರಿಗೆ ಲೋ ಬಿಪಿಯಿಂದ ಸಹ ಸಮಸ್ಯೆ ಕಾಣಿಸಿಕೊಂಡಿತ್ತು. ಸುಸ್ತು ಅಂತ ಸ್ನೇಹಿತರ ಬಳಿ ಹೇಳಿದಾಗ ತಕ್ಷಣ ರಾಕೇಶ್ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಯಿತಾದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

    ರಾಕೇಶ್ ನಿಧನಕ್ಕೆ ನಟಿ ರಕ್ಷಿತಾ ಪ್ರೇಮ್, ನಟರೂ ಹಾಗೂ ರಾಕೇಶ್ ಆಪ್ತರೂ ಆದ ಶಿವರಾಜ್ ಕೆಆರ್ ಪೇಟೆ, ಗೋವಿಂದೇ ಗೌಡ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.

    ರಾಕೇಶ್ ಅವರು ಹಲವು ವರ್ಷಗಳಿಂದಲೂ ಅವರ ರಂಗಭೂಮಿ, ಕಿರುತೆರೆಯಲ್ಲಿ ಸಕ್ರಿಯರಾಗಿದ್ದರು. ಅವರು ಕನ್ನಡದ ‘ಪೈಲ್ವಾನ್’, ‘ಇದು ಎಂತ ಲೋಕವಯ್ಯ’ ಸಿನಿಮಾಗಳಲ್ಲಿ, ಹಾಗೂ ತುಳುವಿನ ‘ಪೆಟ್ಕಮ್ಮಿ’, ‘ಅಮ್ಮೆರ್ ಪೊಲೀಸ್’, ‘ಪಮ್ಮನ್ನೆ ದಿ ಗ್ರೇಟ್’, ‘ಉಮಿಲ್’ ಮತ್ತು ‘ಇಲ್ಲೊಕ್ಕೆಲ್’ ನಾಟಕಗಳು, ಪ್ರಹಸನಗಳಲ್ಲಿ ನಟಿಸಿ ಜನಪ್ರಿಯರಾಗಿದ್ದರು.

  • ಚೈತ್ರಾ ಕುಂದಾಪುರ ಮದುವೆ: ಬಿಗ್‌ಬಾಸ್ ತಾರೆಯ ಹಸೆಮಣೆ ಏರಲು ಸಜ್ಜು

    ಕುಂದಾಪುರ: ಬಿಗ್‌ಬಾಸ್ ಕನ್ನಡ 11ರ ವಿವಾದಾತ್ಮಕ ಸ್ಪರ್ಧಿ ಚೈತ್ರಾ ಕುಂದಾಪುರ ಅವರು ಮೇ 9, 2025ರಂದು ಮದುವೆಯಾಗಲು ಸಿದ್ಧರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಮದರಂಗಿ ಶಾಸ್ತ್ರದ ಫೋಟೋಗಳು ಮತ್ತು ವಿಡಿಯೋಗಳಲ್ಲಿ ಚೈತ್ರಾ ಮದುಮಗಳ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮದುವೆಯ ಸಂಭ್ರಮದಲ್ಲಿ ತೊಡಗಿರುವ ಅವರ ವಿಡಿಯೋಗಳಿಗೆ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಆದರೆ, ವರನ ಗುರುತಿನ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ, ಇದು ಕುತೂಹಲವನ್ನು ಹೆಚ್ಚಿಸಿದೆ.

    ಚೈತ್ರಾ ಕುಂದಾಪುರ ಯಾರು?

    ಚೈತ್ರಾ ಕುಂದಾಪುರ ಉಡುಪಿಯ ಕುಂದಾಪುರದವರು. ಇವರು ಕನ್ನಡ ಮಾಧ್ಯಮದಲ್ಲಿ ವಿವಾದಾತ್ಮಕ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಬಿಗ್‌ಬಾಸ್ ಕನ್ನಡ 11ರಲ್ಲಿ ಭಾಗವಹಿಸಿ ತಮ್ಮ ಧೀರ ಮತ್ತು ಸ್ಪಷ್ಟವಾದ ಮಾತುಗಾರಿಕೆಯಿಂದ ಗಮನ ಸೆಳೆದರು. ಆದರೆ, ಅವರ ಪಯಣವು ವಿವಾದಗಳಿಂದ ಕೂಡಿತ್ತು. ಶೋನಲ್ಲಿ ತಮ್ಮ ಸಹ ಸ್ಪರ್ಧಿಗಳ ಜೊತೆ ತೀವ್ರ ವಾಗ್ವಾದಗಳು, ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಆರೋಪಗಳು ಮತ್ತು ಹೊರಗಿನ ಮಾಹಿತಿಯನ್ನು ಒಳಗೆ ತಂದಿದ್ದಕ್ಕಾಗಿ ಆತಿಥೇಯ ಕಿಚ್ಚ ಸುದೀಪ್‌ರಿಂದ ತೀವ್ರ ಟೀಕೆಗೆ ಒಳಗಾಗಿದ್ದರು. ಫಿನಾಲೆಗೆ ಎರಡು ವಾರಗಳ ಮೊದಲು ಚೈತ್ರಾ ಶತಕೋಡಿ ಹೊರಬಿದ್ದರು.

    ಇದಕ್ಕೂ ಮೊದಲು, ಚೈತ್ರಾ 2023ರಲ್ಲಿ 5 ಕೋಟಿ ರೂಪಾಯಿಗಳ ವಂಚನೆ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದರು. ಉದ್ಯಮಿಯೊಬ್ಬರಿಗೆ ಬಿಜೆಪಿ ಚುನಾವಣಾ ಟಿಕೆಟ್ ಒದಗಿಸುವುದಾಗಿ ಭರವಸೆ ನೀಡಿ ವಂಚಿಸಿದ ಆರೋಪ ಎದುರಿಸಿದ್ದರು. ಈ ಪ್ರಕರಣದಲ್ಲಿ ಇವರ ಜೊತೆಗೆ ಇತರ ಏಳು ಜನರ ವಿರುದ್ಧವೂ ದೂರು ದಾಖಲಾಗಿತ್ತು.

    ಮದುವೆಯ ವಿವರ

    ಮದುವೆಯ ಸ್ಥಳ ಮತ್ತು ವರನ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಚೈತ್ರಾ ಅವರ ಮದರಂಗಿ ಶಾಸ್ತ್ರದ ಫೋಟೋಗಳು ವೈರಲ್ ಆಗಿದ್ದು, ಅಭಿಮಾನಿಗಳು ವರನ ಗುರುತಿನ ಬಗ್ಗೆ ಊಹಾಪೋಹಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮದುವೆಯ ಸಂಭ್ರಮವನ್ನು ಸದ್ದಿಲ್ಲದೆ ಆಚರಿಸಲು ಚೈತ್ರಾ ಯೋಜಿಸಿರುವಂತೆ ಕಾಣುತ್ತದೆ.

    ಚೈತ್ರಾ ಕುಂದಾಪುರ ಅವರ ಈ ಹೊಸ ಅಧ್ಯಾಯಕ್ಕೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ, ಆದರೆ ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ವಿವಾದಗಳು ಇನ್ನೂ ಚರ್ಚೆಯ ಕೇಂದ್ರಬಿಂದುವಾಗಿವೆ.

  • Udupi: Podar International School Organises Spectrum Pulse – An Evening with Podar

    Udupi, May 6, 2025: Podar International School, Udupi, extends its heartfelt gratitude to parents, children, and the entire school community for their enthusiastic participation and unwavering support during Spectrum Pulse – An Evening with Podar. The event, held recently, was a delightful evening filled with engaging games for children and parents, coloring and drawing competitions, and a host of other activities that brought the community together.

    The overwhelming presence and vibrant energy of the attendees made the occasion truly special and unforgettable. The school acknowledges the continued trust placed in them, which fuels their commitment to fostering a joyful and enriching environment for nurturing young minds.

    A special shoutout was given to the dedicated teachers, administrative team, and support staff whose tireless efforts ensured the event’s success. The school also expressed deep appreciation for their respected Principal, Ms. Netra, for her constant guidance and encouragement throughout the planning and execution of the event.

    Podar International School remains dedicated to providing the best educational experience and looks forward to more such community-driven initiatives that strengthen their bond with students, parents, and staff.

  • ಸ್ಯಾಂಡಲ್​ವುಡ್​ನಿಂದ ಖ್ಯಾತ ಗಾಯಕ ಸೋನು ನಿಗಮ್ ಬ್ಯಾನ್

    ಫಿಲ್ಮ್ ಚೇಂಬರ್​​ನಲ್ಲಿ ಇಂದು ಸೋನು ನಿಗಮ್ ವಿವಾದದ ಕುರಿತು ಸಭೆ ನಡೆದಿದ್ದು, ಸಂಗೀತ ಸಂಯೋಜಕರ ಸಂಘ, ನಿರ್ದೇಶಕರ ಸಂಘ, ನಿರ್ಮಾಪಕರ ಸಂಘಗಳು ಭಾಗಿಯಾಗಿದ್ದವು. ಸಭೆಯಲ್ಲಿ ಒಮ್ಮತದಿಂದ ಸೋನು ನಿಗಮ್​​ರನ್ನು ಸ್ಯಾಂಡಲ್​ವುಡ್​​ನಿಂದ ನಿಷೇಧಿಸಲು ನಿರ್ಧರಿಸಲಾಗಿದೆ.

    ಕನ್ನಡ ಹಾಡು ಕೇಳಿದಕ್ಕೆ ಪೆಹಲ್ಗಾಮ್​ ದಾಳಿ ಜೊತೆಗೆ ಹೋಲಿಕೆ ಮಾಡಿದ್ದ ಸೋನು ನಿಗಮ್ ಮೇಲೆ ಕನ್ನಡಪರ ಸಂಘಟನೆಗಳು ಕೆರಳಿ ಕೆಂಡವಾಗಿದ್ದವು. ಕ್ಷಮೆ ಕೇಳುವ ಬದಲು ಸಮರ್ಥನೆ ಮಾಡಿಕೊಂಡು ಉದ್ದಟತನ ಮೆರೆದಿದ್ದಾರೆ ಎಂದು ಟೀಕೆಗಳು ವ್ಯಕ್ತವಾಗಿದ್ದವು. ಅದರ ಬೆನ್ನಲ್ಲೇ ಫಿಲಂ ಚೇಂಬರ್ ಈ ನಿರ್ಧಾರ ಕೈಗೊಂಡಿದೆ.

    ಇತ್ತೀಚೆಗೆ ಸೋನು ನಿಗಮ್ ತಮ್ಮ ಹೊಸ ಹಿಂದಿ ಹಾಡು ಸುನ್ ಝರಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದಾಗ, ಯುವಕನೋರ್ವ ಕನ್ನಡದ ಹಾಡು ಹಾಡಿ ಎಂದು ಪ್ಲಕಾರ್ಡ್ ಪ್ರದರ್ಶಿಸಿದ್ದ. ಈ ವೇಳೆ ಕೆರಳಿದ ಸೋನು ನಿಗಮ್, ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲವು ಮಾತುಗಳನ್ನಾಡಿದ್ದರು. ಆ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿ, ಕನ್ನಡಿಗರಿಂದ ಆಕ್ರೋಶ ವ್ಯಕ್ತವಾಗಿತ್ತು.

  • 93 ದಿನಗಳ ಬಳಿಕ ಲಾಯರ್ ಜಗದೀಶ್ ಜೈಲಿನಿಂದ ಬಿಡುಗಡೆ

    ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಮಾಜಿ ಸ್ಪರ್ಧಿ ಲಾಯರ್ ಜಗದೀಶ್ ಅವರು 93 ದಿನಗಳ ಜೈಲುವಾಸದ ಬಳಿಕ ಬಿಡುಗಡೆಯಾಗಿದ್ದಾರೆ.

    ಕೊಡಿಗೆಹಳ್ಳಿಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗದೀಶ್ ಮತ್ತು ಗನ್‌ಮ್ಯಾನ್‌ನನ್ನು ಜನವರಿ 25, 2025ರಂದು ಪೊಲೀಸರು ಬಂಧಿಸಿದ್ದರು. ರಸ್ತೆಯಲ್ಲಿ ಅಣ್ಣಮ್ಮ ದೇವಿಯನ್ನು ಕೂರಿಸಲು ವಿರೋಧಿಸಿದ್ದರಿಂದ ಜಗದೀಶ್ ಮತ್ತು ಸ್ಥಳೀಯರ ನಡುವೆ ವಾಗ್ವಾದ ಉಂಟಾಗಿತ್ತು. ಇದರಿಂದ ಬಂಧನಕ್ಕೊಳಗಾಗಿದ್ದ ಜಗದೀಶ್ ಇದೀಗ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

    ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಜಗದೀಶ್, ತಮಗೆ ಜಾಮೀನು ದೊರೆತಿರುವುದಾಗಿ ತಿಳಿಸಿದ್ದಾರೆ. “ನಾನು ವರ್ಷಗಳಿಂದ ಭ್ರಷ್ಟಾಚಾರದ ವಿರುದ್ಧ ಧೀರ ಹೋರಾಟ ನಡೆಸುತ್ತಿರುವ ಯೋಧ. PSI ಹಗರಣವನ್ನು ಬಯಲಿಗೆಳೆದಿದ್ದೇವೆ, ADGP ಅಮೃತಪಾಲ್‌ರನ್ನು ಜೈಲಿಗೆ ಕಳುಹಿಸಿದ್ದೇವೆ, ದೊಡ್ಡ ರಾಜಕಾರಣಿಗಳ ಸೆಕ್ಸ್ ಸ್ಕ್ಯಾಂಡಲ್‌ ಬಹಿರಂಗಪಡಿಸಿದ್ದೇವೆ, ರವಿ ಚೆನ್ನಣ್ಣನವರ ಭ್ರಷ್ಟಾಚಾರವನ್ನು ತೆರೆದಿಟ್ಟಿದ್ದೇವೆ, ಟ್ರಾಫಿಕ್ ಟೋವಿಂಗ್ ವ್ಯವಸ್ಥೆಯನ್ನು ನಿಲ್ಲಿಸಿದ್ದೇವೆ, ಕೊಡಿಗೆಹಳ್ಳಿಯಲ್ಲಿ ಡ್ರಗ್ಸ್ ವಿರುದ್ಧ ಹೋರಾಡಿದ್ದೇವೆ,” ಎಂದು ತಮ್ಮ ಹೋರಾಟದ ಸಾಧನೆಗಳನ್ನು ಉಲ್ಲೇಖಿಸಿದ್ದಾರೆ.

    ಈ ಧೈರ್ಯದ ಹೋರಾಟವನ್ನು ಸಹಿಸದ ಭ್ರಷ್ಟ ರಾಜಕೀಯ ಮತ್ತು ಪೊಲೀಸ್ ವ್ಯವಸ್ಥೆ, ತಮ್ಮ ಮತ್ತು ತಮ್ಮ ಮಗನ ವಿರುದ್ಧ ಸಂಚು ರೂಪಿಸಿ, 25/01/2025ರಂದು ಸ್ಥಳೀಯ ಪುಂಡರಿಂದ ಮಾರಣಾಂತಿಕ ಹಲ್ಲೆಗೊಳಗಾಗಿ, ಅಕ್ರಮವಾಗಿ ಜೈಲಿಗೆ ಕಳುಹಿಸಲಾಗಿತ್ತು ಎಂದು ಆರೋಪಿಸಿದ್ದಾರೆ. “93 ದಿನಗಳ ಬಳಿಕ ಇಂದು ನನಗೆ ನ್ಯಾಯ ಸಿಕ್ಕಿದೆ. ಜಾಮೀನು ಲಭಿಸಿದೆ. ನ್ಯಾಯಕ್ಕಾಗಿ ನನ್ನ ಹೋರಾಟ ಮುಂದುವರಿಯಲಿದೆ, ಶರಣಾಗುವುದಿಲ್ಲ,” ಎಂದು ಜಗದೀಶ್ ಘೋಷಿಸಿದ್ದಾರೆ.