Category: Gangolli

  • ಗಂಗೊಳ್ಳಿ ಸರಸ್ವತಿ ಪ.ಪೂ ಕಾಲೇಜಿನ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಶೇ.95.83 ಫಲಿತಾಂಶ

    ಗಂಗೊಳ್ಳಿ: 2024-25ನೇ ಸಾಲಿನ ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಗಂಗೊಳ್ಳಿಯ ಸರಸ್ವತಿ ಪದವಿ ಪೂರ್ವ ಕಾಲೇಜಿನ ಕನ್ನಡ ಮಾಧ್ಯಮ ಪ್ರೌಢಶಾಲೆ ಶೇ.95.83 ಫಲಿತಾಂಶ ದಾಖಲಿಸಿದ್ದಾರೆ.

    ವಿದ್ಯಾರ್ಥಿಗಳಾದ ನಿಸರ್ಗ 597 ಅಂಕಗಳನ್ನು ಪಡೆದು ಶಾಲೆಗೆ ಅಗ್ರಸ್ಥಾನಿಯಾಗಿ ಮೂಡಿ ಬಂದಿದ್ದಾಳೆ. ಮನೀಷಾ (588), ಸನ್ವಿತಾ (580) ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

    ಪರೀಕ್ಷೆಗೆ ಹಾಜರಾದ 48 ವಿದ್ಯಾರ್ಥಿಗಳಲ್ಲಿ 46 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದು, 9 ಮಂದಿ ವಿದ್ಯಾರ್ಥಿಗಳು ವಿಶಿಷ್ಠ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

  • ಗುಜ್ಜಾಡಿ ಎಂ. ಭಾಸ್ಕರ ಪೈ ಸರಕಾರಿ ಪ್ರೌಢಶಾಲೆ: ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇ.89.47 ಫಲಿತಾಂಶ

    ವಿದ್ಯಾರ್ಥಿಗಳಾದ ಸಮೀಕ್ಷಾ 586 ಅಂಕಗಳನ್ನು ಪಡೆದು ಶಾಲೆಗೆ ಅಗ್ರಸ್ಥಾನಿಯಾಗಿ ಮೂಡಿ ಬಂದಿದ್ದಾಳೆ. ಆರ್. ರಂಜಿತಾ 576 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

    ಪರೀಕ್ಷೆಗೆ ಹಾಜರಾದ 38 ವಿದ್ಯಾರ್ಥಿಗಳ ಪೈಕಿ 34 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದು, 7 ವಿದ್ಯಾರ್ಥಿಗಳು ವಿಶಿಷ್ಠ ದರ್ಜೆಯಲ್ಲಿ, 18 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು 9 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

  • Anjuman English Medium School Published its SSLC Result 2024-25; Mubashira Muskan tops with 88.96%

    Anjuman English Medium School published its SSLC Results for the academic year 2024-2025. for This year, school has achieved 75% and Mubashira Muskan tops the school with 556/625 marks (88.96%).

    Out of 20 students appeared, 1 student scored distiction, 11 Fist Class and 3 students scored second class.

    School Toppers

    1. Mubashira Muskan – 556 (88.96%)
    2. Dangi Safa – 487 (77.92%)
    3. Mohammed Anfal – 478(76.48%)

    Gangolli News Team Congratulates all the student who appeared, and Good luck for the future endeavors.

  • Touheed English Medium School Secures Consecutive 100% SSLC Results; Fathima Zia Tops with 96.16%

    Gangolli: Touheed English medium School has secured 100% result in 2024-25 SSLC exam.

    Out of 45 students appeared 16 of them got distinction, 23 First Class and 6 Second Class.

    Total of 18 Boys and 27 Girls appeared for SSLC exam conducted.

    Toppers List

    1. Fathima Zia – 601 marks (96.16%)
      Daughter of Mohammed Javid M H and Aysha Siddiqua
    2. Amna Mubsira M H – 598 marks (95.68%)
      Daughter of Mahamood Muazzam M H and Fathima S A
    3. Ayesha Sameeya – 597 marks (95.52%)
      Daughter of Shaikh Mohammed Riyaz and Sabeena Begum
    4. Zayesha Tabassum Malga – 595 marks (95.20%)
      Daughter of Malga Mohammed Zakir and Bibi Sameera
    5. Nidha – 593 marks (94.88%)
      Daughter of Munthaseeb and Shabanam
    6. Maryam Mahek Nakhuda – 591 marks (94.56%)
      Daughter of Mohammed Faheem Nakhuda and Fathima Sugra
    7. Abdullah Hisan Moulana – 582 marks (93.12%)
      Son of Moulana Noorul Hassan and Shahina Banu
    8. Ayesha Rifa – 582 marks (93.12%)
      Daughter of Raquib Hassan Moulana and Gulshan Raquib Hassan Moulana
    9. Mohammed Zayan – 574 marks (91.84%)
      Son of Riyaz Ahamed and Musrat
    10. Aisha Muskan – 574 marks (91.84%)
      Daughter of N Abdulla and Beebi Parveen
    11. Nidha Naaz – 573 marks (91.68%)
      Daughter of Mohammed Naushad and Raziya Naushad
    12. Fathima Simin – 563 marks (90.08%)
      Daughter of Syed Iqbal and Indalib
    13. Ahmed Afaf M H – 562 marks (89.92%)
      Son of M H Mohammed Tauseef and Muzaifa Habiba
    14. Abdur Rahman Madical – 537 marks (85.92%)
      Son of Abdul Sattar Madical and Rubeena Abdul Sattar
    15. Fouzan Khan – 536 marks (85.76%)
      Son of Anwar Hussain and Fathima Farha
    16. Fathima Hiram – 533 marks (85.28%)
      Daughter of Abdul Wahid H and Shabhana Banu

    Gangolli News Team Congratulates all of the student and wish the best for their future endeavors.

  • ಗಂಗೊಳ್ಳಿ: ಮೀನುಗಾರನ ಸಾವಿನ ಪ್ರಕರಣ: ಆರೋಪಿಗೆ 10 ವರ್ಷ ಕಠಿಣ ಜೈಲುಶಿಕ್ಷೆ

    ಕುಂದಾಪುರ: ಗಂಗೊಳ್ಳಿ ಮೀನುಗಾರಿಕಾ ಬಂದರಿನ ದಕ್ಕೆಯಲ್ಲಿ ಬೋಟ್ ಕಟ್ಟುವ ವಿಷಯಕ್ಕೆ ಸಂಬಂಧಿಸಿದ ಹಲ್ಲೆಯಿಂದ ಮೀನುಗಾರನೊಬ್ಬ ಮೃತಪಟ್ಟ ಪ್ರಕರಣದಲ್ಲಿ ಆರೋಪಿಗೆ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 10 ವರ್ಷ ಕಠಿಣ ಜೈಲುಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

    ಆರೋಪಿಯನ್ನು ಭಟ್ಕಳ ಮೂಲದ ಚಂದ್ರಕಾಂತ ಖಾರ್ವಿ ಎಂದು ಗುರುತಿಸಲಾಗಿದೆ. 2017ರ ಸೆಪ್ಟೆಂಬರ್ 15ರ ರಾತ್ರಿ, ಗಂಗೊಳ್ಳಿ ಮೀನುಗಾರಿಕಾ ಬಂದರಿನ ದಕ್ಕೆಯಲ್ಲಿ ಮೀನು ಖಾಲಿ ಮಾಡಲು ಪ್ರಕಾಶ ಪೂಜಾರಿ ತಾನು ಕೆಲಸ ಮಾಡುತ್ತಿದ್ದ ಮೀನುಗಾರಿಕಾ ಬೋಟ್‌ನ ಹಗ್ಗವನ್ನು ಚಂದ್ರಕಾಂತ ಚಾಲಕನಾಗಿದ್ದ ಬೋಟ್‌ಗೆ ಕಟ್ಟುತ್ತಿದ್ದಾಗ, ಆರೋಪಿಯು ಪ್ರಕಾಶ್‌ಗೆ ಅವಾಚ್ಯವಾಗಿ ಬೈದಿದ್ದನು.

    ಇದನ್ನು ಆಕ್ಷೇಪಿಸಿದ್ದಕ್ಕೆ, ಚಂದ್ರಕಾಂತನು ತನ್ನ ಬೋಟ್‌ನಲ್ಲಿದ್ದ ಮರದ ಹಲಗೆಯಿಂದ ಪ್ರಕಾಶ್‌ನ ತಲೆಗೆ, ಆತನಿಗೆ ಮಾರಕವಾಗಬಹುದೆಂಬ ತಿಳಿವಳಿಕೆ ಇದ್ದರೂ, ಹೊಡೆದಿದ್ದನು. ಪರಿಣಾಮವಾಗಿ, ತಲೆಗೆ ಗಾಯಗೊಂಡ ಪ್ರಕಾಶ ಪೂಜಾರಿ ಪಂಚಗಂಗಾವಳಿ ಹೊಳೆಗೆ ಬಿದ್ದಿದ್ದನು. ಆತನ ಶವವು ಗಂಗೊಳ್ಳಿ ಗ್ರಾಮದ ಬೇಲಿಕೆರೆ ಅರಬ್ಬಿ ಸಮುದ್ರದಲ್ಲಿ ಪತ್ತೆಯಾಗಿತ್ತು.

    ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಂದಿನ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಪರಮೇಶ್ವರ ಆರ್. ಗುನಗ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆಯನ್ನು ಪೂರ್ಣಗೊಳಿಸಿದ ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ್ ಶೇಖ್ ಅವರು ಆರೋಪಿಯನ್ನು ದೋಷಿಯೆಂದು ಘೋಷಿಸಿ, ಐಪಿಸಿ ಕಲಂ 304(2) ಅಡಿಯಲ್ಲಿ 10 ವರ್ಷ ಕಠಿಣ ಜೈಲುಶಿಕ್ಷೆಯ ಜೊತೆಗೆ 10,000 ರೂ. ದಂಡ, ಮತ್ತು ಕಲಂ 504 ಅಡಿಯಲ್ಲಿ 2 ವರ್ಷ ಶಿಕ್ಷೆಯ ಜೊತೆಗೆ 5,000 ರೂ. ದಂಡ ವಿಧಿಸಿ ಆದೇಶಿಸಿದರು.

    ಪ್ರಕರಣದ ಸಾಕ್ಷಿ ವಿಚಾರಣೆಯನ್ನು ಅಂದಿನ ಸರಕಾರಿ ಅಭಿಯೋಜಕರಾದ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ಮತ್ತು ಹರಿಶ್ಚಂದ್ರ ಉದ್ಯಾವರ ನಡೆಸಿದ್ದರು. ಈಗಿನ ಸರಕಾರಿ ಅಭಿಯೋಜಕ ಇಂದಿರಾ ನಾಯ್ಕ ಅವರು ವಿಚಾರಣೆಯನ್ನು ಮುಂದುವರಿಸಿ ವಾದ ಮಂಡಿಸಿದ್ದಾರೆ.

  • ಮಂಗಳೂರು: ಗುಂಪು ಹತ್ಯೆ ಪ್ರಕರಣ; ಗುರುತು ಪತ್ತೆ, ಮೃತ ದೇಹ ಹಸ್ತಾಂತರ

    ಮಂಗಳೂರು, ಏ.30: ನಗರದ ಹೊರವಲಯ ಕುಡುಪು ಸಮೀಪ ಏ.27ರಂದು ದುಷ್ಕರ್ಮಿಗಳ ಗುಂಪೊಂದು ಥಳಿಸಿ ಹತ್ಯೆಗೈದ ವ್ಯಕ್ತಿಯ ಗುರುತುಪತ್ತೆಯಾಗಿದ್ದು, ಕೇರಳದ ವಯನಾಡಿನಿಂದ ಆಗಮಿಸಿದ ಆತನ ಮನೆಮಂದಿ ಮೃತದೇಹವನ್ನು ಇಂದು ಬೆಳಗ್ಗಿನ ಜಾವ ಕೊಂಡೊಯ್ದಿದ್ದಾರೆ.  

    ಕೇರಳದ ವಯನಾಡ್ ಜಿಲ್ಲೆಯ ಪುಲ್ಪಳ್ಳಿ ನಿವಾಸಿ ಕುಂಞಾಯಿ ಎಂಬವರ ಪುತ್ರ ಅಶ್ರಫ್ ಕೊಲೆಯಾದ ವ್ಯಕ್ತಿ.

    ಈ ಬಗ್ಗೆ ಮಾಹಿತಿ ಪಡೆದಿದ್ದ ಅಶ್ರಫ್ ಕುಟುಂಬಸ್ಥರು ಮಂಗಳವಾರ ತಡರಾತ್ರಿ 12:30ರ ಸುಮಾರಿಗೆ ಮಂಗಳೂರಿಗೆ ಆಗಮಿಸಿದ್ದರು. ಅಶ್ರಫ್ ಅವರ ಸಹೋದರ ಸೇರಿದಂತೆ ಆಗಮಿಸಿದ್ದ ಮೂವರು ವೆನ್ಲಾಕ್ ಶವಾಗಾರದಲ್ಲಿರಿಸಿದ್ದ ಮೃತದೇಹ ಅಶ್ರಫ್ ಅವರದ್ದೆಂದು ಗುರುತಿಸಿದರು. ಈ ಹಿನ್ನೆಲೆಯಲ್ಲಿ ಕಾನೂನು ಪ್ರಕ್ರಿಯೆಯನ್ನು ಮುಗಿಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

    ಬಳಿಕ ಮೃತದೇಹವನ್ನು ಬಂದರ್ ನ ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿಗೆ ಕೊಂಡೊಯ್ಯಲಾಯಿತು. ಅಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ ಮಯ್ಯಿತ್ ನಮಾಝ್ ನಿರ್ವಹಿಸಿದ ಬಳಿಕ ಮುಂಜಾನೆ 4:30ರ ಸುಮಾರಿಗೆ ಮೃತದೇಹವನ್ನು ಆಂಬುಲೆನ್ಸ್ ಮೂಲಕ ವಯನಾಡಿಗೆ ಕೊಂಡೊಯ್ಯಲಾಯಿತು.

    ಈ ಸಂದರ್ಭ ಮಾಜಿ ಮೇಯರ್ ಕೆ.ಅಶ್ರಫ್, ಸುಹೈಲ್ ಕಂದಕ್, ಕೆ.ಕೆ.ಶಾಹುಲ್ ಹಮೀದ್, ಬಿ.ಕೆ.ಇಮ್ತಿಯಾಝ್, ಸಂತೋಷ್ ಬಜಾಲ್, ಜಲೀಲ್ ಕೃಷ್ಣಾಪುರ, ರಿಯಾಝ್ ಕಡಂಬು ಮತ್ತಿತರರು ಉಪಸ್ಥಿತರಿದ್ದರು. ಮೂಲತಃ ಮಲಪ್ಪುರಂ ಜಿಲ್ಲೆಯವರಾದ ಅಶ್ರಫ್ ಕುಟುಂಬ ಕೆಲವು ವರ್ಷಗಳ ಹಿಂದೆ ವಯನಾಡ್ ಜಿಲ್ಲೆಗೆ ಬಂದು ನೆಲೆಸಿದೆ. ತಂದೆ, ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರನ್ನು ಹೊಂದಿದ್ದ ಅಶ್ರಫ್ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ ನಂತರ ಮಾನಸಿಕ ಸಮಸ್ಯೆಗೆ ಒಳಗಾಗಿದ್ದರೆನ್ನಲಾಗಿದೆ. ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಅಶ್ರಫ್ ಮನೆ ಬಿಟ್ಟು ಇದೇ ರೀತಿ ಆಗಾಗ್ಗೆ ಹೋಗುತ್ತಿದ್ದರು ಎಂದು ಮನೆ ಮಂದಿ ತಿಳಿಸಿದ್ದಾರೆ.

  • ಭಾರತ-ಪಾಕಿಸ್ತಾನ ಸಂಘರ್ಷದ ಹಿನ್ನೆಲೆಯಲ್ಲಿ 16 ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳಿಗೆ ಭಾರತದಿಂದ ನಿಷೇಧ

    ಭಾರತ ಸರ್ಕಾರವು ಇತ್ತೀಚೆಗೆ 16 ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಿದೆ, ಇವುಗಳು ಭಾರತದ ವಿರುದ್ಧ ತಪ್ಪು ಮಾಹಿತಿ ಮತ್ತು ಭಾವನಾತ್ಮಕವಾಗಿ ಸ್ಪರ್ಶಿಸುವ ವಿಷಯವನ್ನು ಹರಡುತ್ತಿವೆ ಎಂದು ಆರೋಪಿಸಲಾಗಿದೆ. ಈ ಕ್ರಮವು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22, 2025 ರಂದು ನಡೆದ ಭಯೋತ್ಪಾದಕ ದಾಳಿಯ ನಂತರದ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಬಂದಿದೆ, ಇದರಲ್ಲಿ 26 ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು.

    ಗೃಹ ಸಚಿವಾಲಯದ ಶಿಫಾರಸಿನ ಮೇರೆಗೆ, ಈ ಚಾನೆಲ್‌ಗಳು ಭಾರತದ ಸೇನೆ, ಭದ್ರತಾ ಸಂಸ್ಥೆಗಳು ಮತ್ತು ಸರ್ಕಾರದ ವಿರುದ್ಧ ತಪ್ಪು ಮಾಹಿತಿಯನ್ನು ಪ್ರಚಾರ ಮಾಡುತ್ತಿವೆ ಎಂದು ಗುರುತಿಸಲಾಗಿದೆ. ನಿಷೇಧಿತ ಚಾನೆಲ್‌ಗಳಲ್ಲಿ ಡಾನ್ ನ್ಯೂಸ್, ಸಮಾ ಟಿವಿ, ಆರಿ ನ್ಯೂಸ್, ಜಿಯೋ ನ್ಯೂಸ್ ಜೊತೆಗೆ ಪ್ರಸಿದ್ಧ ಕ್ರಿಕೆಟಿಗ ಶೋಯೆಬ್ ಅಖ್ತರ್ ಅವರ ‘100mph’ ಚಾನೆಲ್ ಮತ್ತು ಕ್ರೀಡಾ ವಿಶ್ಲೇಷಕ ವಾಸೆ ಹಬೀಬ್ ಅವರ ಚಾನೆಲ್ ಸೇರಿವೆ. ಈ ಚಾನೆಲ್‌ಗಳ ಒಟ್ಟಾರೆ ಚಂದಾದಾರರ ಸಂಖ್ಯೆ ಸುಮಾರು 6.6 ಕೋಟಿಗಿಂತಲೂ ಹೆಚ್ಚಿದೆ.

    ಈ ನಿಷೇಧವು ಭಾರತದ ಆಂತರಿಕ ಭದ್ರತೆ ಮತ್ತು ಸಾಮಾಜಿಕ ಸಾಮರಸ್ಯವನ್ನು ರಕ್ಷಿಸಲು ತೆಗೆದುಕೊಂಡ ಕ್ರಮವಾಗಿದೆ ಎಂದು ಸರ್ಕಾರ ತಿಳಿಸಿದೆ. ಭಾರತದ ಬಳಕೆದಾರರಿಗೆ ಈ ಚಾನೆಲ್‌ಗಳನ್ನು ಯೂಟ್ಯೂಬ್‌ನಲ್ಲಿ ಪ್ರವೇಶಿಸಲು ಸಾಧ್ಯವಿಲ್ಲ, ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸರ್ಕಾರಿ ಆದೇಶದಿಂದಾಗಿ ವಿಷಯವನ್ನು ನಿರ್ಬಂಧಿಸಲಾಗಿದೆ ಎಂದು ಸಂದೇಶವೊಂದು ತೋರಿಸುತ್ತದೆ.

    ಈ ಕ್ರಮವು ಭಾರತ-ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಒತ್ತಡವನ್ನು ಮತ್ತಷ್ಟು ತೀವ್ರಗೊಳಿಸಿದೆ, ಇದರಲ್ಲಿ ವೀಸಾ ಸೇವೆಗಳ ಸ್ಥಗಿತಗೊಳಿಸುವಿಕೆ, ವಾಣಿಜ್ಯ ಸಂಬಂಧಗಳ ನಿಲುಗಡೆ ಮತ್ತು ಇಂಡಸ್ ವಾಟರ್ಸ್ ಒಪ್ಪಂದದ ಸ್ಥಗಿತಗೊಳಿಸುವಿಕೆಯಂತಹ ಕ್ರಮಗಳು ಸೇರಿವೆ.

  • ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಬೈಂದೂರು ಕ್ಷೇತ್ರ ಸಮಿತಿಯ ಕಾರ್ಯಕರ್ತರ ಸಮಾವೇಶ

    ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಬೈಂದೂರು ಕ್ಷೇತ್ರ ಸಮಿತಿಯ ವತಿಯಿಂದ ತಾರೀಕು 27/4/2025 ರವಿವಾರ ಸಂಜೆ 4:30ಕ್ಕೆ ಗಂಗೊಳ್ಳಿಯ ಮಾಡರ್ನ್‌ ಸೂಪರ್ ಮಾರ್ಕೆಟ್ ಮೇಲ್ಬಾಗದ ಸಭಾ ಭವನದಲ್ಲಿ ಕಾರ್ಯಕರ್ತರ ಸಮಾವೇಶ ನಡೆಯಿತು

    ಈ ಸಮಾವೇಶಕ್ಕೆ ಸಿದ್ದಿಕ್ ಗಂಗೊಳ್ಳಿ ಅಧ್ಯಕ್ಷತೆ ವಯಿಸಿದರು ಮುಖ್ಯ ಅತಿಥಿಯಾಗಿ ಅತಾವುಲ್ಲಾ ಜೋಕಟ್ಟೆ ಆಗಮಿಸಿ ಅವರು ಭಾರತದಲ್ಲಿ ಪಕ್ಷದ ಚಟುವಟಿಕೆ ಬಗ್ಗೆ ಕಾರ್ಯಕರ್ತರಿಗೆ ವಿವರಿಸಿದರು ಅದೇರೀತಿ ಇನೊರ್ವ ಅತಿಥಿ ಹನೀಫ್ ಮುಳೂರ್ ರವರು ರಾಜ್ಯದಲಿ ಪಕ್ಷದ ಚಟುವಟಿಕೆ ಬಗ್ಗೆ ಕಾರ್ಯಕರ್ತರಿಗೆ ವಿವರಿಸಿದರು.

    ಈ ಸಂಧರ್ಭದಲ್ಲಿ ವೇದಿಕೆಯಲ್ಲಿ ಆಸೀಫ್ ಕೋಟೇಶ್ವರ ಜಿಲಾಧ್ಯಕ್ಷರು ಅಬ್ದುಲ್ ರಝ್ಝಾಕ್ YS ಜಿಲ್ಲಾ ಪ್ರದಾನ ಕಾರ್ಯದರ್ಶಿ ಉಪಸ್ಥಿತರಿದ್ದರು ಮುಕ್ತಾರ್ ನಿರೋಪಿಸಿದರು.

  • Touheed Girls’ Pre-University College Celebrates Stellar II PUC Results 2024-25

    Gangolli, April 9, 2025 – Touheed Girls’ Pre-University College, managed by the Touheed Educational Trust (R) in Gangolli, has announced an impressive 92.30% pass rate for the II PUC examinations of 2024-25. Out of 26 students who appeared for the exams, 24 have successfully passed, showcasing the institution’s commitment to academic excellence.

    The results highlight remarkable performances, with eight students achieving distinction and 13 securing first class. Three students earned second class honors. Among the standout achievers Fathima Afra scored 96% and Topped the college, Aysha Siddiqua scored a perfect 100/100 in Accountancy, while Fathima Madha Arihole excelled with 100/100 in both Business Studies and Statistics.

    Top performers are:

    • Fathima Afra (576/96%) – D/o Mr. Sadiq Al Abadi & Mrs. Zeenath
    • Aysha Siddiqua (572/95.33%, 100/100 in Accountancy) – D/o Mr. G. Muhammed Mubeen & Mrs. S. Nazneen
    • Fathima Madha Arihole (570/95%, 100/100 in Business Studies & Statistics) – D/o Late Abdul Hameed A & Mrs. Malika Tahseen
    • K. Fathima Asna (560/93.33%) – D/o Mr. K. Abdul Rehman & Mrs. K. Asma
    • Fathima Nuha (555/92.5%) – D/o Mr. G. Mohammed Ilyas & Mrs. Tabssum
    • Atifah (539/89.83%) – D/o Mr. Akram Mohammed Saheb & Mrs. Sirajunnisa
    • Munzalin Muba (538/89.66%) – D/o Mr. Mohammed Anies & Mrs. Dilshad
    • Sadiya (523/87.16%) – D/o Mr. Mohammed Hanif & Mrs. Khathija

    The college extended heartfelt congratulations to all meritorious students, along with the management, principal, lecturers, and non-teaching staff for their unwavering support.

  • ಗಂಗೊಳ್ಳಿ ಗ್ರಾಮ ಪಂಚಾಯಿತಿ: ಬಿಜೆಪಿ ಬೆಂಬಲಿತರಿಗೆ ಕೈ ತಪ್ಪಿದ ಅಧಿಕಾರ

    ಕುಂದಾಪುರ: ಡಿ. 8ರಂದು ನಡೆದ ಗಂಗೊಳ್ಳಿ ಗ್ರಾಮ ಪಂಚಾಯಿತಿಯ ಚುನಾವಣೆ ಫಲಿತಾಂಶ ಗುರುವಾರ ರಾತ್ರಿ ಹೊರಬಿದ್ದಿದ್ದು, ಕಾಂಗ್ರೆಸ್ ಮತ್ತು ಎಸ್‍ಡಿಪಿಐ ಬೆಂಬಲಿತರು ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತವಾಗಿದೆ.

    ಎರಡು ದಶಕಗಳ ಕಾಲ ಬಿಜೆಪಿ ಬೆಂಬಲಿತರ ಭದ್ರಕೋಟೆಯಾಗಿದ್ದ ಹಾಗೂ ಹಿಂದುತ್ವ ಪ್ರತಿಪಾದನೆಯ ಪ್ರಬಲ ಗ್ರಾಮ ಎಂದು ಬಿಂಬಿತವಾಗಿದ್ದ ಗಂಗೊಳ್ಳಿ ಗ್ರಾಮ ಪಂಚಾಯಿತಿಯ ಚುನಾವಣೆಯಲ್ಲಿ ಎಸ್‍ಡಿಪಿಐ ಬೆಂಬಲಿತರ ಸಹಕಾರದೊಂದಿಗೆ, ಕಾಂಗ್ರೆಸ್ ಬೆಂಬಲಿತರು ಅಧಿಕಾರದ ಗದ್ದುಗೆ ಹಿಡಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

    ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿಗರು 4 ಕ್ಷೇತ್ರಗಳಲ್ಲಿ ಶೂನ್ಯ ಸಾಧನೆ ಮಾಡಿದ್ದರೆ, ಎಸ್‍ಡಿಪಿಐ 6 ಕ್ಷೇತ್ರಗಳಲ್ಲಿ ಶೂನ್ಯ ಸಾಧನೆ ಮಾಡಿದೆ. ಕಳೆದ ಕೆಲ ವರ್ಷಗಳಿಂದ ಬಿಜೆಪಿ ಹಿಡಿತದಲ್ಲಿದ್ದ ವಾರ್ಡ್‌ಗಳಲ್ಲಿ ಈ ಬಾರಿ ಕಾಂಗ್ರೆಸ್ ಬೆಂಬಲಿಗರು ಹುಬ್ಬೇರುವಂತೆ ಸಾಧನೆ ಮಾಡಿದ್ದಾರೆ.

    33 ಸದಸ್ಯ ಬಲದ ಗಂಗೊಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತರು ತಲಾ 12, ಎಸ್‍ಡಿಪಿಐ ಬೆಂಬಲಿತರು 7 ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

    ಬೆಳಿಗ್ಗೆಯಿಂದ ಮಂದಗತಿಯಲ್ಲಿ ಸಾಗಿದ ಮತ ಎಣಿಕೆ ಕಾರ್ಯ ರಾತ್ರಿ 10ರವರೆಗೂ ಸಾಗಿತ್ತು. ಕುಂದಾಪುರ ತಹಶೀಲ್ದಾರ್ ಎಚ್.ಎಸ್.ಶೋಭಾಲಕ್ಷ್ಮಿ ನೇತೃತ್ವದಲ್ಲಿ ಮತ ಎಣಿಕೆ ಕಾರ್ಯ ನಡೆದಿದ್ದು, ತಾಲ್ಲೂಕು ಯುವಜನ ಸೇವಾ ಅಧಿಕಾರಿ ಕುಸುಮಾರ ಶೆಟ್ಟಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

    ಕಳೆದ ಆಡಳಿತದ ಅವಧಿಯಲ್ಲಿ 23 ಬಿಜೆಪಿ ಬೆಂಬಲಿತರು, 6 ಕಾಂಗ್ರೆಸ್ ಬೆಂಬಲಿತರು ಮತ್ತು ನಾಲ್ವರು ಎಸ್‍ಡಿಪಿಐ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದರು.

    ವಿಜಯೋತ್ಸವ:  ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿದ ಕಾಂಗ್ರೆಸ್ ಮತ್ತು ಎಸ್‍ಡಿಪಿಐ ಬೆಂಬಲಿತ ಅಭ್ಯರ್ಥಿಗಳು ತಮ್ಮ ಬೆಂಬಲಿತರೊಂದಿಗೆ ತಡರಾತ್ರಿ ಕುಂದಾಪುರದಿಂದ ಗಂಗೊಳ್ಳಿಯವರೆಗೆ ವಿಜಯೋತ್ಸವ ನಡೆಸಿದರು.