Category: Gangolli

  • ಪಿಎಸೈ ವರ್ಗಾವಣೆ: ಗಂಗೊಳ್ಳಿ ಠಾಣೆಗೆ ಪವನ್‌ ನಾಯಕ್‌, ಸೆನ್‌ ಠಾಣೆಗೆ ಹರೀಶ್‌ ಆರ್‌.

    ಕುಂದಾಪುರ: ಪಶ್ಚಿಮ ವಲಯದ 12 ಪಿಎಸೈಗಳನ್ನು ವರ್ಗಾವಣೆ ಮಾಡಿ ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕ ಅಮಿತ್‌ ಸಿಂಗ್‌ ಅವರು ಆದೇಶ ಹೊರಡಿಸಿದ್ದಾರೆ.

    ಉಡುಪಿ ಸೆನ್‌ ಠಾಣೆಯಲ್ಲಿ ಪಿಎಸೈ ಆಗಿ ಕರ್ತವ್ಯದಲ್ಲಿದ್ದ ಪವನ್‌ ನಾಯಕ್‌ ಅವರನ್ನು ಗಂಗೊಳ್ಳಿ ಪೊಲೀಸ್‌ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ಪಿಎಸೈ ಆಗಿಯೂ, ಗಂಗೊಳ್ಳಿ ಠಾಣೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪಿಎಸೈ ಆಗಿದ್ದ ಹರೀಶ್‌ ಆರ್‌. ಅವರನ್ನು ಉಡುಪಿ ಸೆನ್‌ ಠಾಣೆಯ ಪಿಎಸೈ ಆಗಿಯೂ ಪರಸ್ಪರ ವರ್ಗಾವಣೆಗೊಳಿಸಲಾಗಿದೆ.

    ಇನ್ನು ಉಡುಪಿ ಜಿಲ್ಲೆಯಲ್ಲಿ ಮಲ್ಪೆ ಠಾಣೆಗೆ ಅನಿಲ್‌ ಕುಮಾರ್‌ ಡಿ., ಅಜೆಕಾರು ಠಾಣೆಗೆ ಮಹೇಶ್‌ ಟಿ.ಎಂ ಅವನ್ನು ಹೆಬ್ರಿ ಠಾಣೆಗೆ ರವಿ ಬಸಪ್ಪ ಕಾರಗಿ ಅವರನ್ನು ಕಾರ್ಕಳ ಠಾಣೆಗೆ ಮುರಳಿಧರ ನಾಯ್ಕ್‌ ಅವರನ್ನು ವರ್ಗಾವಣೆಗೊಳಿಸಲಾಗಿದೆ.

  • ನಿವೃತ್ತ ಮುಖ್ಯೋಪಾಧ್ಯಾಯ ಜಿ ವಿಶ್ವನಾಥ್ ಭಟ್ ಅವರಿಗೆ ಸನ್ಮಾನ

    ಗಂಗೊಳ್ಳಿ : ಬಿಲ್ಲವರ ಹಿತರಕ್ಷಣಾ ವೇದಿಕೆ  ಗಂಗೊಳ್ಳಿ,  ವೈಷ್ಣವಿ ಇವೆಂಟ್ಸ್ ಗಂಗೊಳ್ಳಿ ಮತ್ತು ಸಂಜೀವ ಪಾರ್ವತಿ ಪ್ರಕಾಶನ  ಗಂಗೊಳ್ಳಿಯ ವತಿಯಿಂದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿ ಮತ್ತು ಮುಖ್ಯೋಪಾಧ್ಯಾಯರಾಗಿ ಸುಮಾರು 36  ವರ್ಷಗಳ ಕಾಲ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿ ಹೊಂದಿದ ಜಿ.ವಿಶ್ವನಾಥ ಭಟ್ ಅವರನ್ನು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ಸಭಾಂಗಣದಲ್ಲಿ  ಅಭಿನಂದಿಸಿ ಸನ್ಮಾನಿಸಲಾಯಿತು.

     ಈ ಸಂದರ್ಭದಲ್ಲಿ ವೈಷ್ಣವಿ ಇವೆಂಟ್ಸ್ ಮಾಲೀಕರಾದ ಗೋಪಾಲ ಚಂದನ್, ಬಿಲ್ಲವರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಜಿ ಗೋಪಾಲ ಪೂಜಾರಿ, ಸಂಜೀವ ಪಾರ್ವತಿ ಪ್ರಕಾಶನದ ನಿರ್ವಾಹಕ ನರೇಂದ್ರ ಎಸ್ ಗಂಗೊಳ್ಳಿ, ಶ್ರೀ ಸೀತಾಳಿ  ನವದುರ್ಗೆ ದೇವಸ್ಥಾನದ ಪಾತ್ರಿ ರಘುನಾಥ ಪೂಜಾರಿ, ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ  ಮುಖ್ಯೋಪಾಧ್ಯಾಯ ದೀಕ್ಷಿತ್ ಮೇಸ್ತ ಮತ್ತು ಬಿಲ್ಲವರ ಹಿತರಕ್ಷಣಾ ವೇದಿಕೆಯ ಕಾರ್ಯದರ್ಶಿ ಜಿ ಎ ಆರ್ ಲಕ್ಷ್ಮಣ ಪೂಜಾರಿ ಉಪಸ್ಥಿತರಿದ್ದರು.

  • ಗಂಗೊಳ್ಳಿ: ಭಾರೀ ಮಳೆಗೆ 50 ವರ್ಷ ಹಳೆಯ ಸಿಮೆಂಟ್‌ ನೀರಿನ ಟ್ಯಾಂಕ್‌ ಕುಸಿತ: ಸಂಪೂರ್ಣ ಹಾನಿ

    ಗಂಗೊಳ್ಳಿ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದ ಕಾಝಿ ಅಬ್ದುಲ್‌ ಹಮೀದ್‌ ಅವರ ಮನೆಯ ಅಂಗಳದಲ್ಲಿ 50 ವರ್ಷಗಳಿಗೂ ಹೆಚ್ಚು ಹಳೆಯದಾದ, ನಾಲ್ಕು ಕಂಬಗಳ ಮೇಲೆ ನಿರ್ಮಿಸಲಾಗಿದ್ದ ಸಿಮೆಂಟ್‌ ನೀರಿನ ಟ್ಯಾಂಕ್‌ ಒಂದು, ಇತ್ತೀಚಿನ ಭಾರೀ ಮಳೆಯಿಂದಾಗಿ ಕುಸಿದು ಸಂಪೂರ್ಣವಾಗಿ ಹಾನಿಗೊಳಗಾಗಿದೆ.

    ಟ್ಯಾಂಕ್‌ ಪಕ್ಕದಲ್ಲಿದ್ದ ತೆಂಗಿನ ಮರವೂ ಈ ಕುಸಿತದ ರಭಸಕ್ಕೆ ಸಿಲುಕಿ ಧರೆಗುರುಳಿದೆ.

    ದಿನಾಂಕ 16 ಜೂನ್‌ 2025ರಂದು ನಡೆದ ಈ ಘಟನೆಯಿಂದ ಟ್ಯಾಂಕ್‌ ಸಂಪೂರ್ಣವಾಗಿ ಧ್ವಂಸಗೊಂಡಿದೆ.

    ಬೈಂದೂರು, ಕುಂದಾಪುರ ಮತ್ತು ಕಾರ್ಕಳ ತಾಲ್ಲೂಕುಗಳು ಹೆಚ್ಚು ಹಾನಿಗೊಳಗಾಗಿದ್ದು, ನಿರಂತರ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿವೆ ಮತ್ತು ಸುರಕ್ಷಿತ ಮಟ್ಟಕ್ಕಿಂತ ಹೆಚ್ಚಾಗಿವೆ. ಬಲವಾದ ಪ್ರವಾಹವು ನಿವಾಸಿಗಳಲ್ಲಿ ಪ್ರವಾಹದ ಭೀತಿಯನ್ನು ಹೆಚ್ಚಿಸಿದೆ. ಬಾರ್ಕೂರು ಕೂಡ ಪ್ರವಾಹದಂತಹ ಪರಿಸ್ಥಿತಿಯನ್ನು ವರದಿ ಮಾಡಿದೆ.

  • ಜೂ.13(ನಾಳೆ) ಉಡುಪಿ ಜಿಲ್ಲೆಯ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಮುಂದುವರಿಕೆ

    ಉಡುಪಿ, ಜೂ.12: ಭಾರೀ ಮಳೆಯ ಹಿನ್ನೆಲೆಯಲ್ಲಿ ಜೂ.13 (ನಾಳೆ) ಉಡುಪಿ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ರಜೆ ಘೋಷಣೆ ಮಾಡಿ ಆದೇಶಿಸಿದ್ದಾರೆ.

    ರಾಜ್ಯದಲ್ಲಿ ಕೆಲವು ದಿನಗಳ ವಿರಾಮದ ಬಳಿಕ ಮುಂಗಾರು ಮತ್ತೆ ವೇಗ ಪಡೆದುಕೊಂಡಿದ್ದು, ಜೂನ್ 16 ರವರೆಗೆ ರಾಜ್ಯಾದ್ಯಂತ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

  • ಉಡುಪಿ ಜಿಲ್ಲೆ: ಪೊಲೀಸ್ ಠಾಣೆಗಳಲ್ಲಿ ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನದಂದು ಬಾಲ ಕಾರ್ಮಿಕರ ಸೇವೆಯನ್ನು ತಡೆಗಟ್ಟುವ ಪ್ರತಿಜ್ಞೆ

    ಉಡುಪಿ, ಜೂನ್ 12, 2025: ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಬಾಲ ಕಾರ್ಮಿಕರ ಸೇವೆಯನ್ನು ಪಡೆಯದಿರುವ ಬಗ್ಗೆ ಪ್ರತಿಜ್ಞೆ ಸ್ವೀಕರಿಸಲಾಯಿತು. ಈ ಕಾರ್ಯಕ್ರಮವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ನಡೆಯಿತು.

    ಪೊಲೀಸ್ ಠಾಣೆಗಳಲ್ಲಿ ಈ ಸಂದರ್ಭದಲ್ಲಿ ಬಾಲ ಕಾರ್ಮಿಕರ ಶೋಷಣೆಯನ್ನು ತಡೆಗಟ್ಟುವ ಮತ್ತು ಅವರ ಶಿಕ್ಷಣ ಹಾಗೂ ಯೋಗಕ್ಷೇಮವನ್ನು ಖಾತ್ರಿಪಡಿಸುವ ಬಗ್ಗೆ ಒತ್ತು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿ, ಸ್ಥಳೀಯ ಅಧಿಕಾರಿಗಳು ಮತ್ತು ಸಮುದಾಯದ ಪ್ರಮುಖರು ಭಾಗವಹಿಸಿದ್ದರು.

  • ಜೂ.12(ನಾಳೆ) ಉಡುಪಿ ಜಿಲ್ಲೆಯ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಣೆ

    ಉಡುಪಿ, ಜೂ.11: ಭಾರೀ ಮಳೆಯ ಹಿನ್ನೆಲೆಯಲ್ಲಿ ಜೂ.12 (ನಾಳೆ) ಉಡುಪಿ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ರಜೆ ಘೋಷಣೆ ಮಾಡಿ ಆದೇಶಿಸಿದ್ದಾರೆ.

    ರಾಜ್ಯದಲ್ಲಿ ಕೆಲವು ದಿನಗಳ ವಿರಾಮದ ಬಳಿಕ ಮುಂಗಾರು ಮತ್ತೆ ವೇಗ ಪಡೆದುಕೊಂಡಿದ್ದು, ಜೂನ್ 14 ರವರೆಗೆ ರಾಜ್ಯಾದ್ಯಂತ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

    ಇಲಾಖೆಯ ಮಾಹಿತಿ ಪ್ರಕಾರ, ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು, ಕರಾವಳಿ ಕರ್ನಾಟಕ ಸೇರಿದಂತೆ 13 ಜಿಲ್ಲೆಗಳಲ್ಲಿ ಜೂನ್ 14 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಹಾವೇರಿ, ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೊಷಿಸಲಾಗಿದೆ.

    ವಿಜಯಪುರ, ಮೈಸೂರು, ಹಾಸನ, ದಾವಣಗೆರೆ, ಕೊಪ್ಪಳ, ರಾಯಚೂರು, ಗದಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ನಡುವೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಮಂಡ್ಯ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಲಾಗಿದೆ.

    ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ಮಂಗಳವಾರ ರಾತ್ರಿ ಗುಡುಗು ಸಹಿತ ಭಾರಿ ಮಳೆಯಾಗಿದೆ. ಔರಾದ್, ಬೀದರ್, ಬರಗೂರು, ಅಣ್ಣಿಗೆರೆ, ಹುಮನಾಬಾದ್, ಚಿತ್ತಾಪುರ, ಚಿಟಗೊಪ್ಪ, ಸಿರಾ, ಬೆಂಗಳೂರು, ದಾವಣಗೆರೆ, ಮದ್ದೂರು, ಗುಬ್ಬಿ, ಜಗಳೂರು, ಹಿರಿಯೂರು, ಇಂಡಿ, ಭಾಲ್ಕಿ, ಸೇಡಂ, ಕಾರ್ಕಳ, ಮಂಗಳೂರು, ಬಂಟ್ವಾಳ, ಕುಂದಾಪುರ ಮತ್ತು ಜೆಕೆವಿಕೆ ಸೇರಿದಂತೆ ಗಮನಾರ್ಹ ಮಳೆಯಾಗಿದೆ.

    ರಾಜ್ಯದಲ್ಲಿ ಮಾನ್ಸೂನ್ ಪೂರ್ವ ಮಳೆ ಮೊದಲೇ ಬಿದ್ದಿದ್ದರೂ, ಮಾನ್ಸೂನ್ ಆರಂಭವಾದಾಗಿನಿಂದ ಮಳೆ ಕಡಿಮೆಯಾಗಿತ್ತು. ಆದಾಗ್ಯೂ, ಜೂನ್ 10 ರಿಂದ, ಮಾನ್ಸೂನ್ ಚಟುವಟಿಕೆ ಮತ್ತೆ ಚುರುಕುಗೊಂಡಿದೆ.

    ಐಎಂಡಿ ಪ್ರಕಾರ, ಕರಾವಳಿ ಕರ್ನಾಟಕದಲ್ಲಿ ಜೂನ್ 12 ರಿಂದ 16 ರವರೆಗೆ, ಉತ್ತರ ಕರ್ನಾಟಕದಲ್ಲಿ ಜೂನ್ 12 ರಿಂದ 15 ರವರೆಗೆ ಮತ್ತು ದಕ್ಷಿಣ ಒಳನಾಡಿನಲ್ಲಿ ಜೂನ್ 15 ರಿಂದ 16 ರವರೆಗೆ ಮಳೆಯಾಗುವ ನಿರೀಕ್ಷೆಯಿದೆ.

  • ಗಂಗೊಳ್ಳಿ: ಯಕ್ಷಾಭಿಮಾನಿ ರಕ್ತದಾನಿ ಬಳಗದಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ

    ಗಂಗೊಳ್ಳಿ: ರಕ್ತದಾನ ಮಾಡುವುದು ಪುಣ್ಯದ ಕೆಲಸ. ನಾವು ನೀಡುವ ಒಂದು ಯೂನಿಟ್ ರಕ್ತ ಮೂರು ಜೀವಗಳನ್ನು ಉಳಿಸಬಲ್ಲದು. ರಕ್ತ ದೇವರು ನಮಗೆ ನೀಡಿದ ಬೆಲೆ ಕಟ್ಟಲಾಗದ ಸಂಪತ್ತು. ರಕ್ತದ ಬೆಲೆ ಎಷ್ಟು ಎಂಬುದನ್ನು ರಕ್ತದ ಅವಶ್ಯಕತೆ ಇರುವ ಜನರಿಗೆ ತಿಳಿದಿದೆ. ಹೀಗಾಗಿ ಯುವಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಬೇಕು. ಜನರಲ್ಲಿ ರಕ್ತದಾನದ ಬಗ್ಗೆ ಇರುವ ಸಂಶಯಗಳನ್ನು ದೂರ ಮಾಡಬೇಕು ಎಂದು ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ನಿಯಮಿತ ಇದರ ಅಧ್ಯಕ್ಷ ಜಿ. ವೆಂಕಟೇಶ ಶೆಣೈ ಹೇಳಿದರು.

    ಅವರು ಯಕ್ಷಾಭಿಮಾನಿ ರಕ್ತದಾನಿಗಳ ಬಳಗ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ, ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ನಿಯಮಿತ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ರಕ್ತನಿಧಿ ಕೇಂದ್ರ ಕೆಎಂಸಿ ಮಣಿಪಾಲ ಇವರ ಸಹಭಾಗಿತ್ವದೊಂದಿಗೆ 16ನೇ ವರ್ಷದ ಧರ್ಮಸ್ಥಳ ಪಾದಯಾತ್ರೆಯ ಪ್ರಯುಕ್ತ ಗಂಗೊಳ್ಳಿಯ ಶ್ರೀ ವೀರ ವಿಠಲ ಸಭಾಗೃಹದಲ್ಲಿ ಮಂಗಳವಾರ ಜರಗಿದ ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

    ಉಡುಪಿಯ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸತೀಶ್ ಸಾಲ್ಯಾನ್, ಪತ್ರಕರ್ತ ಬಿ. ರಾಘವೇಂದ್ರ ಪೈ, ಉಪನ್ಯಾಸಕ ನರೇಂದ್ರ ಎಸ್. ಗಂಗೊಳ್ಳಿ ಹಾಗೂ ರಕ್ತನಿಧಿ ಕೇಂದ್ರ ಕೆಎಂಸಿ ಮಣಿಪಾಲದ ವೈದ್ಯೆ ಡಾ. ನಮಿತಾ ಶುಭ ಹಾರೈಸಿದರು.

    ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ನಿಯಮಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ ನಾಯಕ್, ಗಂಗೊಳ್ಳಿ ಗ್ರಾಪಂ ಸದಸ್ಯ ಚಂದ್ರ ಖಾರ್ವಿ, ಪಾದಯಾತ್ರೆ ಬಳಗದ ಸಂಚಾಲಕ ರಾಮಚಂದ್ರ ಖಾರ್ವಿ, ಚರಣ್ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.

  • ಗಂಗೊಳ್ಳಿ: ಸ್ಕೂಟರ್‌-ಜೀಪ್‌ ಡಿಕ್ಕಿ, ಸ್ಕೂಟರ್‌ ಸವಾರನಿಗೆ ಗಾಯ

    ಗಂಗೊಳ್ಳಿ: ಕೇರಳದ ಕೋಜಿಕ್ಕೋಡ್‌ ಜಿಲ್ಲೆಯ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪಿರ್ಯಾದಿದಾರ ಪ್ರಕಾಶ್‌ (48) ತಮ್ಮ ಇಲಾಖಾ ಜೀಪ್‌ನಲ್ಲಿ ಆರೋಪಿಯೊಬ್ಬನನ್ನು ಪತ್ತೆಮಾಡಿ ಮುಂಬೈಯಿಂದ ಕೋಜಿಕ್ಕೋಡ್‌ಗೆ ಎಸ್ಕಾರ್ಟ್‌ ಮಾಡಿಕೊಂಡು ತೆರಳುತ್ತಿದ್ದರು. ದಿನಾಂಕ 10/06/2025 ರಂದು ಮಧ್ಯಾಹ್ನ 12:05 ಗಂಟೆಗೆ ಬೈಂದೂರು-ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಮರವಂತೆ ಬಳಿ ತೆರಳುವಾಗ, ಸ್ಕೂಟರ್‌ ಸವಾರನೊಬ್ಬ ರಸ್ತೆಯ ತೀರಾ ಬಲಬದಿಯಲ್ಲಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಸ್ಕೂಟರ್‌ ಚಲಾಯಿಸಿಕೊಂಡು ಬಂದು ಇಲಾಖಾ ಜೀಪ್‌ಗೆ ಡಿಕ್ಕಿ ಹೊಡೆದಿದ್ದಾನೆ. ಈ ಘಟನೆಯಿಂದ ಸ್ಕೂಟರ್‌ ಚಾಲಕ ರಸ್ತೆಗೆ ಬಿದ್ದು ಗಾಯಗೊಂಡಿದ್ದಾನೆ.

    ಗಾಯಗೊಂಡ ಸ್ಕೂಟರ್‌ ಸವಾರನನ್ನು ಕೂಡಲೇ ಕುಂದಾಪುರದ ಆದರ್ಶ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ಒಳಪಡಿಸಲಾಗಿದೆ. ಈ ಘಟನೆ ಸಂಬಂಧ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 66/2025ರಡಿಯಲ್ಲಿ ಕಲಂ 281, 125(A) BNS ರಂತೆ ಪ್ರಕರಣ ದಾಖಲಾಗಿದೆ.

  • ಮರವಂತೆ ಬೀಚ್ ನ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ

    ಮರವಂತೆ: ಸರ್ಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ(ರಿ) ತನ್ನ ವಾರ್ಷಿಕ ಅಧ್ಯಯನ ಭೇಟಿ ಸಂದರ್ಭದಲ್ಲಿ ಈ ಬಾರಿ ಉಡುಪಿ ಜಿಲ್ಲೆಯ ತ್ರಾಸಿ ಮರವಂತೆ ಬೀಚ್ ನ ಕಡಲ್ಕೊರೆತ ಪ್ರದೇಶಗಳಿಗೆ ಜೂನ್ 9ರ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

    ಬೈಂದೂರು ತಾಲೂಕು ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಬಂದರು ಪ್ರದೇಶದಲ್ಲಿ ಸಮುದ್ರ ಮತ್ತು ನದಿ ದಂಡೆಗೆ ಸಮಿತಿ ಭೇಟಿ ನೀಡಿ ಸ್ಥಳೀಯರ ಜೊತೆ ಸಮಾಲೋಚನೆ ನಡೆಸಿ ಕಡಲು ಮತ್ತು ನದಿ ಕೊರೆತ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಲಾಯಿತು. ಕೊಡೇರಿ ಪ್ರದೇಶ ಎಡಮಾವಿನ ಹೊಳೆ ಮತ್ತು ಸಮುದ್ರ ಕೂಡು ಪ್ರದೇಶವಾಗಿದ್ದು ಸ್ಥಳೀಯ ಜನತೆ ಬಳಸುವ ಪುಟ್ಟ ಬಂದರೂ ಇದ್ದು ಕಡಲ್ಕೊರೆತ ಸಮಸ್ಯೆಯಿಂದ ಬಾಧಿತವಾಗಿದೆ ಎಂದು ಪರಿಸರದ ಜನ ತಿಳಿಸಿದರು.

    ದಡದಿಂದ 5೦೦ ಮೀಟರ್ ಗೂ ಹೆಚ್ಚು ದೂರವಿದ್ದ ಸಮುದ್ರ ಕೆಲವೊಮ್ಮೆ 2೦೦ ಮೀಟರ್ ಗೂ ಕಡಿಮೆ ಅಂತರವನ್ನು ಹೊಂದಿದೆ. ಪ್ರತೀವರ್ಷ ಕಡಲು ತೀರವನ್ನು ನುಂಗುತ್ತಿದ್ದು ದಂಡೆಯ ಬಹಳಷ್ಟು ಭಾಗಕ್ಕೆ ತಡೆಗೋಡೆ ನಿರ್ಮಾಣ ಬಾಕಿ ಇದೆ. ಹಲವು ಬಾರಿ ಕಾಂಟ್ರಾಕ್ಟ್ ನೀಡಲಾಗಿದ್ದರೂ ಸೀಮಿತ ಪ್ರದೇಶದಲ್ಲಷ್ಟೆ ಬಂಡೆಹಾಸಿನ ತಡೆ ನಿರ್ಮಾಣ ವಾಗಿರುತ್ತದೆ ಎಂದು ಸ್ಥಳೀಯ ಮತ್ಸ್ಯೋದ್ಯಮಿ‌ ರಮೇಶ್ ಖಾರ್ವಿ ಸಮಿತಿ ಗೆ ವಿವರಿಸಿದರು. ಸಮುದ್ರ ಕ್ಕೆ ಸಮಾನಾಂತರ ವಾಗಿ ಬಹಳ ದೂರ ಸಾಗುವ ಎಡಮಾವಿನ ಹೊಳೆಯ ದಂಡೆಗಳು ನದಿಕೊರೆತಕ್ಕೊಳಗಾಗಿವೆ ಎಂದು ಅವರು ವಿವರಿಸಿದರು. ಮಧ್ಯಾಹ್ನದಿಂದ ಸಂಜೆವರೆಗೆ ಪೂರ್ತಿ ಪರಿಸರವನ್ನು ಪರಿಶೀಲನೆ ನಡೆಸಿ ಸರ್ಕಾರ ಈ ಬಗ್ಗೆ ಜಾಗೃತರಾಗುವಂತೆ ನಾವು ಒತ್ತಾಯಿಸುತ್ತೇವೆ ಎಂದು ಸಮಿತಿಯ ಸಂಸ್ಥಾಪಕರಾದ ಜಯಕೃಷ್ಣ ಎ. ಶೆಟ್ಟಿ ಪರಿಸರದ ಜನರಿಗೆ ಭರವಸೆಯನ್ನು ನೀಡಿದರು.

    ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ತಂಡದಲ್ಲಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್, ಜಿಲ್ಲಾ ಕಾರ್ಯಾಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ , ಕೋಶಾಧಿಕಾರಿ ಸದಾನಂದ ಆಚಾರ್ಯ, ಸಮಿತಿಯ ವಕ್ತಾರ ದಯಾಸಾಗರ್ ಚೌಟ, ಸಮಿತಿಯ ರಾಜ್ಯ ಸಂಯೋಜಕರಾದ ಕೆ. ಪಿ. ಜಗದೀಶ್ ಅಧಿಕಾರಿ, ಉಪಾಧ್ಯಕ್ಷರುಗಳಾದ ಪಿ. ಧನಂಜಯ ಶೆಟ್ಟಿ, ಮಾಜಿ ಅಧ್ಯಕ್ಷರಾದ ಧರ್ಮಪಾಲ್ ದೇವಾಡಿಗ, ನ್ಯಾ. ಆರ್. ಎಂ. ಭಂಡಾರಿ, ತೋನ್ಸೆ ಡಾ. ವಿಜಯಕುಮಾರ್ ಶೆಟ್ಟಿ, ಶ್ಯಾಮ್ ಎನ್. ಶೆಟ್ಟಿ, ಗಿರೀಶ್ ಬಿ. ಸಾಲ್ಯಾನ್, ದೇವದಾಸ್ ಕುಲಾಲ್, ಸಿಎಸ್ ಗಣೇಶ್ ಶೆಟ್ಟಿ, ರಾಕೇಶ್ ಭಂಡಾರಿ, ಮಹೇಶ್ ಕಾರ್ಕಳ, ಸಮಿತಿಯ ಸದಸ್ಯರುಗಳಾದ ಪೆಲಿಕ್ಸ್ ಡಿ’ಸೋಜಾ ದಂಪತಿ., ತೋನ್ಸೆ ಅಶೋಕ್ ಎಸ್. ಶೆಟ್ಟಿ, ತುಳಸಿದಾಸ್ ಎಲ್. ಅಮೀನ್, ನ್ಯಾ. ದಯಾನಂದ ಶೆಟ್ಟಿ, , ಚಿತ್ರಾಪು ಕೆ.ಎಂ. ಕೋಟ್ಯಾನ್, ಜಿಲ್ಲಾ ಗೌರವ ಕಾರ್ಯದರ್ಶಿ ಸುರೇಂದ್ರ ಮೆಂಡನ್, ದಿವಾಕರ್ ಪೊಸ್ರಾಲ್, ರವಿ ಮೆಂಡನ್, ಶೇಖರ ಗುಜ್ಜರಬೆಟ್ಟು, ಪ್ರತಾಪ್ ಕೋಟ್ಯಾನ್, ರವಿರಾಜ್ ಕಲ್ಯಾಣ್ಪುರ್, ನಿರಂಜನ್ ಕರ್ಕೇರ, ನಾಗೇಶ್ ಶೆಟ್ಟಿ ಮಣಿ ಗುತ್ತು, ಜಯಪ್ರಕಾಶ್ ಹೆಗ್ಡೆ, ನ್ಯಾ. ಗುಣಕರ್ ಶೆಟ್ಟಿ, ಜಿಲ್ಲಾ ಕೋಶಾಧಿಕಾರಿ ಪ್ರಭಾಕರ ಬಂಗೇರ ಕಾರ್ಕಳ ಹಾಗೂ ಸಮಿತಿಯ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

  • ಗಂಗೊಳ್ಳಿ: ತ್ರಾಸಿ-ಮರವಂತೆ ಕಡಲತೀರದಲ್ಲಿ ಮುಳುಗುತ್ತಿದ್ದ ಐವರ ರಕ್ಷಣೆ

    ಗಂಗೊಳ್ಳಿ, ಜೂನ್ 8, 2025: ಜೂನ್ 7 ರ ಸಂಜೆ ಜನಪ್ರಿಯ ತ್ರಾಸಿ-ಮರವಂತೆ ಕಡಲತೀರದಲ್ಲಿ ಈಜುತ್ತಿದ್ದಾಗ ಅಲೆಗಳಿಗೆ ಸಿಲುಕಿ ಕೊಚ್ಚಿಕೊಂಡು ಹೋಗುವ ಸ್ಥಿತಿಯಲ್ಲಿದ್ದ ಬೆಂಗಳೂರಿನ ನಾಲ್ವರು ಸೇರಿದಂತೆ ಒಟ್ಟು ಐವರು ವ್ಯಕ್ತಿಗಳನ್ನು ರಕ್ಷಿಸಲಾಗಿದೆ.

    ರಕ್ಷಣಾ ಕಾರ್ಯವನ್ನು ಲೈಫ್‌ಗಾರ್ಡ್‌ಗಳಾದ ಪೃಥ್ವಿರಾಜ್ ಉಪ್ಪುಂದ ಮತ್ತು ಪ್ರಮೋದ್ ರಾಜ್ ಉಪ್ಪುಂದ, ಕಡಲತೀರದ ಮೇಲ್ವಿಚಾರಕ ಸುರೇಶ್ ಕೊಡೇರಿ ಮತ್ತು 24×7 ಆಂಬ್ಯುಲೆನ್ಸ್ ನ ಎಂ. ಹೆಚ್. ಇಬ್ರಾಹಿಂ ಗಂಗೊಳ್ಳಿ ನಡೆಸಿದರು.

    ಘಟನೆಯ ನಂತರ, ಗಂಗೊಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿ, 112 ಹಾಗೂ ಹೆದ್ದಾರಿ ಗಸ್ತು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿದರು. ಪ್ರವಾಸಿಗರಿಗೆ ಸುರಕ್ಷತೆಗಾಗಿ ಎಚ್ಚರಿಕೆ ನೀಡಲು ಸೈರನ್‌ಗಳನ್ನು ಮೊಳಗಿಸಲಾಯಿತು.