Category: State

  • ಹಾವೇರಿ: ಕಾರ್ಮಿಕರಿಗೆ ಉಚಿತ ಆರೋಗ್ಯ ಸೇವೆ; ಸಂಚಾರಿ ಆರೋಗ್ಯ ಘಟಕಕ್ಕೆ ಚಾಲನೆ

    ಹಾವೇರಿ, ಮೇ 21, 2025: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಹಾವೇರಿ ಜಿಲ್ಲೆಯ ನೋಂದಾಯಿತ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ಸಂಚಾರಿ ಆರೋಗ್ಯ ಘಟಕಕ್ಕೆ ಇಂದು ವಿಧಾನಸಭೆಯ ಉಪ ಸಭಾಧ್ಯಕ್ಷರಾದ ಶ್ರೀ ರುದ್ರಪ್ಪ ಲಮಾಣಿ ಅವರು ಚಾಲನೆ ನೀಡಿದರು.

    ಈ ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

  • ತೀರ್ಥಹಳ್ಳಿ: ಮಿಸ್ ಫೈರಿಂಗ್; ಯುವಕ ಸಾವು

    ತೀರ್ಥಹಳ್ಳಿ: ಬೇಟೆಗೆಂದು ಹೋಗಿದ್ದ ಸಂದರ್ಭದಲ್ಲಿ ಮಿಸ್ ಫೈರಿಂಗ್ ಆಗಿ ಯುವಕನೋರ್ವ ಸಾವನ್ನಪ್ಪಿದ್ದ ಘಟನೆ ತೀರ್ಥಹಳ್ಳಿಯ ಕಟ್ಟೆಹಕ್ಕಲಿನಲ್ಲಿ ನಡೆದಿದೆ.

    ಮೃತ ದುರ್ದೈವಿ ಯುವಕ ಗೌತಮ್ (25) ಎಂದು ಗುರುತಿಸಲಾಗಿದೆ.

    ತಾಲೂಕಿನ ಬಸವಾನಿ ಸಮೀಪದ ಕೊಳಾವರ ಗ್ರಾಮದ ಯುವಕ ಕಟ್ಟೆಹಕ್ಕಲಿಗೆ ಸ್ನೇಹಿತರ ಜೊತೆಗೆ ಬೇಟೆಗಾಗಿ ಹೋಗಿದ್ದ ಈ ವೇಳೆ ಮಿಸ್ ಫೈರಿಂಗ್ ಆಗಿ ಮೃತಪಟ್ಟಿದ್ದಾನೆ.

    ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

  • ಮಾಗಡಿ: ವೈಜಿಗುಡ್ಡ ಡ್ಯಾಮ್‌ನಲ್ಲಿ ಮುಳುಗಿ ಬೆಂಗಳೂರಿನ ಮೂವರು ಯುವತಿಯರ ಸಾವು!

    ಮಾಗಡಿ: ರಾಮನಗರ ಜಿಲ್ಲೆಯ ಮಾಗಡಿ ತಾಲೂತಿನ ವೈಜಿಗುಡ್ಡ ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಯುವತಿಯರನ್ನು ಬೆಂಗಳೂರು ಮೂಲದ 18 ವರ್ಷದ ರಾಘವಿ, 20 ವರ್ಷದ ಮಧುಮಿತ ಹಾಗೂ 22 ವರ್ಷದ ರಮ್ಯಾ ಎಂದು ಗುರುತಿಸಲಾಗಿದೆ.

    ಏಳು ಯುವತಿಯರ ತಂಡ ಜಲಾಶಯ ವೀಕ್ಷಣೆಗೆಂದು ತೆರಳಿತ್ತು. ಈ ಪೈಕಿ ಓರ್ವ ಯುವತಿ ನೀರಿಗೆ ಬಿದ್ದಿದ್ದು ಆಕೆಯನ್ನು ರಕ್ಷಿಸಲು ಯುವತಿಯರು ಮುಂದಾಗಿದ್ದಾರೆ. ದುರದೃಷ್ಟವಶಾತ್ ಮೂವರು ಯುವತಿಯರು ನೀರುಪಾಲಾಗಿದ್ದು ನಾಲ್ವರು ಯುವತಿಯರನ್ನು ಯುವಕನೋರ್ವ ರಕ್ಷಿಸಿದ್ದಾನೆ. ಸದ್ಯ ಮೃತ ದೇಹಗಳನ್ನು ಮಾಗಡಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.

  • ಹೊಳೆಹೊನ್ನೂರು ಹೇಮಣ್ಣ ಕೊಲೆ ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟು

    ಹೊಳೆಹೊನ್ನೂರು: ಹೇಮಣ್ಣ ಕೊಲೆ ಪ್ರಕರಣದ ಆರೋಪಿ ಮಂಜ ಎಂಬಾತನ ಕಾಲಿಗೆ ಹೊಳಲೂರು ಸಮೀಪ ಪೊಲೀಸರು ಗುಂಡು ಹಾರಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಬಂಧಿಸಲು ತೆರಳಿದ್ದ ಪೊಲೀಸರ ಮೇಲೆಯೆ ಈತ ಹಲ್ಲೆಗೆ ಯತ್ನಿಸಿದ್ದ. ಆಗ ಗುಂಡು ಹಾರಿಸಲಾಗಿದೆ.

    ಈ ಕುರಿತು ಮಾಧ್ಯಮಗಳಿಗೆ ವಾಟ್ಸಪ್ ಮೂಲಕ ಮಾಹಿತಿ ನೀಡಿರುವ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ತಲೆಮರೆಸಿಕೊಂಡಿದ್ದ ಮಂಜನ ಕುರಿತು ಖಚಿತ ಮಾಹಿತಿ ಲಭ್ಯವಾಗಿತ್ತು.

    ಹೊಳೆಹೊನ್ನೂರು ಠಾಣೆ ಇನ್ಸ್‌ಪೆಕ್ಟರ್ ಲಕ್ಷ್ಮಿಪತಿ ನೇತೃತ್ವದ ತಂಡ ಆತನನ್ನು ಬಂಧಿಸಲು ತೆರಳಿತ್ತು. ಆಗ ಮಂಜ ಪೊಲೀಸ್ ಸಿಬ್ಬಂದಿ ಪ್ರಕಾಶ್ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ್ದ. ಈ ವೇಳೆ ಆತ್ಮರಕ್ಷಣೆಗಾಗಿ ಇನ್ಸ್‌ಪೆಕ್ಟರ್ ಲಕ್ಷ್ಮಿಪತಿ ಗುಂಡು ಹಾರಿಸಿದ್ದಾರೆ ಎಂದು ತಿಳಿಸಿದ್ದಾರೆ.

    ಈಚೆಗೆ ಹೊಳೆಹೊನ್ನೂರಿನ ಹೊಸಕೊಪ್ಪದ ಪದವಿ ಪೂರ್ವ ಕಾಲೇಜು ರಸ್ತೆಯಲ್ಲಿ ಹೇಮಣ್ಣ ಎಂಬುವವರ ಹತ್ಯೆಯಾಗಿತ್ತು‌. ವಾಕಿಂಗ್‌ಗೆ ತೆರಳಿದ್ದ ಹೇಮಣ್ಣನ ಮೇಲೆ ದಾಳಿ ನಡೆಸಿ, ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಮಂಜ ಪ್ರಮುಖ ಆರೋಪಿಯಾಗಿದ್ದ ಆರೋಪಿಸಲಾಗಿದೆ. 

  • ಕುಶಾಲನಗರ ಸಂಪತ್ ಕೊಲೆ ಕೇಸ್‌ – ಸ್ನೇಹಿತನಿಗೆ ಚಟ್ಟ ಕಟ್ಟಿದ್ದ ಮೂವರು ಅರೆಸ್ಟ್‌

    ಮಡಿಕೇರಿ: ಇದೇ ಮೇ 10ರಂದು ನಾಪತ್ತೆಯಾಗಿದ್ದ ಕೊಡಗಿನ (Kodagu) ಸೋಮವಾರಪೇಟೆಯ ನಿವಾಸಿ ಸಂಪತ್‌ ನಾಯರ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ.

    ಸೋಮವಾರಪೇಟೆ ತಾಲ್ಲೂಕಿನ ಹಾನಗಲ್‌ ಗ್ರಾಮದ ಬಿ.ಎಂ ಕಿರಣ್ (44), ಆತನ ಪತ್ನಿ ಸಂಗೀತಾ (35) ಹಾಗೂ ಚೌಡ್ಲು ಗ್ರಾಮದ ಪಿ.ಎಂ ಗಣಪತಿ (43) ಬಂಧಿತ ಆರೋಪಿಗಳಾಗಿದ್ದಾರೆ. ಈ ಮೂವರೂ ಕೊಲೆಯಾದ ಸಂಪತ್‌ ಸ್ನೇಹಿತರೇ ಎಂಬುದು ಗಮನಾರ್ಹ. 

    ಆರೋಪಿ ಸಿಕ್ಕಿಬಿದ್ದಿದ್ದೇ ರೋಚಕ

    ವೈಯಕ್ತಿಕ ದ್ವೇಷದಿಂದ ಕೊಲೆ ಮಾಡಲು ಆರೋಪಿ ಸಂಗೀತಾ ಸಂಚು ರೂಪಿಸಿದ್ದಳು. ಅದಕ್ಕಾಗಿ ಮೇ 9ರಂದು ಸಂಪತ್‌ ನಾಯರ್‌ನನ್ನ ಸೋಮವಾರಪೇಟೆಯ ಹಾನಗಲ್‌ನಲ್ಲಿರುವ ತನ್ನ ಮನೆಗೆ ಬರಲು ಹೇಳಿದ್ದಳು. ಸಾಲದ ಹಣ ವಾಪಸ್‌ ಕೊಡುತ್ತೇನೆ ಎಂದು ಕರೆಸಿಕೊಂಡಿದ್ದಳು. ಸಂಪತ್‌ ಮನೆಗೆ ಬಂದ ಮೇಲೆ ಸಂಗೀತಾಳ ಗಂಡ ಕಿರಣ್‌ ಹಾಗೂ ಸ್ನೇಹಿತ ಗಣಪತಿ ಮೂವರು ಸೇರಿ ದೊಣ್ಣೆಯಿಂದ ಹೊಡೆದು, ಕತ್ತಿಯಿಂದ ಇರಿದು ಕೊಲೆ ಮಾಡಿದ್ದಾರೆ. ಕೊಲೆಯನ್ನು ಮರೆಮಾಚಲು ಮೃತ ದೇಹವನ್ನ ಸಂಪತ್ ನಾಯರ್ ತಂದಿದ್ದ ಫಿಯೆಟ್ ಪುಂಟೋ ಕಾರಿನಲ್ಲೇ ಹಾಕಿಕೊಂಡು ಸಕಲೇಶಪುರ ತಾಲೂಕು ಒಳಗೂರು ಅರಣ್ಯದಲ್ಲಿ ಬಿಸಾಡಿದ್ದಾರೆ. ಬಳಿಕ ಕಲ್ಲಳ್ಳಿ ಬಳಿ ಆತನ ಕಾರು ನಿಲ್ಲಿಸಿ ಬೇರೊಂದು ಕಾರಿನಲ್ಲಿ ಬೆಂಗಳೂರಿಗೆ ತೆರಳಿದ್ದರು. ಮೇ 16 ರಂದು ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಿರಣ್‌ನನ್ನ ಬೆಂಗಳೂರಿನಲ್ಲಿ ಬಂಧಿಸಲಾಯಿತು. ಇನ್ನೂ ಮೇ 17ರಂದು ಬೆಳ್ತಂಗಡಿಯ ಅಂಗಡಿಯಲ್ಲಿ ಮತ್ತೊಬ್ಬ ಆರೋಪಿ ಗಣಪತಿ ಹಾಗೂ ಮೇ 18ರಂದು (ಇಂದು) ಆರೋಪಿ ಸಂಗೀತಾಳನ್ನ ಸೋಮವಾರ ಪೇಟೆಯಲ್ಲಿ ಬಂಧಿಸಲಾಯಿತು.

  • ಮೆಟ್ರೋ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್!

    ಮೆಟ್ರೋ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ತುಮಕೂರಿನ ಜನರಿಗೆ ನಮ್ಮ ಮೆಟ್ರೋ ಕಡೆಯಿಂದ ಮಹತ್ವದ ಸುದ್ದಿ ಹೊರಬಿದ್ದಿದೆ. ಬೆಂಗಳೂರಿನ ಅವಿಭಾಜ್ಯ ಸಾರಿಗೆ ಸಂಸ್ಥೆಯಾಗಿರುವ ನಮ್ಮ ಮೆಟ್ರೋ ಮೊಟ್ಟ ಮೊದಲ ಸಲ ಅಂತರ ಜಿಲ್ಲೆ ಸಂಚಾರ ಆರಂಭಿಸುವ ಸುದ್ದಿ ಹೊರಬಿದ್ದಿದೆ.

    ಬೆಂಗಳೂರು ಟು ತುಮಕೂರಿಗೆ ಮೆಟ್ರೋ ವಿಸ್ತರಣೆಗೆ ಚಿಂತನೆ ನಡೆದಿದ್ದು, ಈಗಾಗಲೇ ಬಿಎಂಆರ್​ಸಿಎಲ್ ಕಡೆಯಿಂದ ಕಾರ್ಯಾಸಾಧ್ಯತೆ ವರದಿ ಸಿದ್ಧವಾಗಿ ಸರ್ಕಾರಕ್ಕೂ ಸಲ್ಲಿಕೆಯಾಗಿದೆ. ಈಗಾಗಲೇ ಮೆಟ್ರೋ ಹಸಿರು ಮಾರ್ಗದಲ್ಲಿ ರೇಷ್ಮೇ ಸಂಸ್ಥೆಯಿಂದ ಮಾಧಾವರವರೆಗೂ ಕಾರ್ಯಾಚರಣೆ ಮಾಡ್ತಿದ್ದು, ನೆಲಮಂಗಲಕ್ಕೆ ವಿಸ್ತರಣೆ ಮಾಡುವ ಬಗ್ಗೆ ಪ್ರಸ್ತಾವನೆ ಇತ್ತು.

    ನೆಲಮಂಗಲ ದಾಟಿ ತುಮಕೂರು ಜಿಲ್ಲೆಗೂ ನಮ್ಮ ಮೆಟ್ರೋ ವಿಸ್ತರಿಸಲು ಸರ್ಕಾರ ತೀರ್ಮಾನಿಸಿದ್ದು, ಶಿರಾ ಗೇಟ್ ವರೆಗೂ ಮೆಟ್ರೋ ಮಾಡುವ ಕುರಿತು ರಿಪೋರ್ಟ್ ಸಿದ್ಧವಾಗಿದೆ. ಸದ್ಯ ಈ ರಿಪೋರ್ಟ್ ನಲ್ಲಿ ಬೆಂಗಳೂರಿನಿಂದ ತುಮಕೂರು ಮಾರ್ಗದಲ್ಲಿ 58 ಕಿ.ಮೀಟರ್ ಯೋಜನೆ ಹೊಂದಿದ್ದು, ಒಟ್ಟು 25 ಎತ್ತರದ ಮೆಟ್ರೋ ನಿಲ್ದಾಣಗಳನ್ನ ಗುರುತು ಮಾಡಲಾಗಿದೆಯಂತೆ.

    ಬೆಂಗಳೂರು ಟು ತುಮಕೂರು ಮೆಟ್ರೋ ವಿಸ್ತರಣೆ ಯೋಜನೆ ಬಗ್ಗೆ ಜನಸಾಮಾನ್ಯರು ಅಚ್ಚರಿ ಮತ್ತು ಖುಷಿ ಎರಡೂ ವ್ಯಕ್ತಪಡಿಸ್ತಿದ್ದಾರೆ. ತುಮಕೂರಿನ ಮಂದಿ ಮೆಟ್ರೊ ಬರಲಿ ಬಿಡಿ ಅಂತಿದ್ರೆ, ಇನ್ನು ಕೆಲವ್ರು ಮೊದಲು ಬೆಂಗಳೂರು ನಗರದಲ್ಲಿ ಮೆಟ್ರೋ ಕಂಪ್ಲೀಟ್ ಮಾಡೋಕೆ ಹೇಳಿ ಎನ್ನುತ್ತಿದ್ದಾರೆ.

    ಬೆಂಗಳೂರು ಟು ತುಮಕೂರುವರೆಗಿನ‌ ಮೆಟ್ರೋ ವಿಸ್ತರಣೆ ಪ್ರಸ್ತಾವನೆಗೆ ವಿರೋಧವೂ ವ್ಯಕ್ತವಾಗಿದೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಇದೊಂದು ಮೂರ್ಖತನದ ಐಡಿಯಾ, ಮೊದಲು ಬಾಕಿ ಉಳಿದಿರುವ ಮಾರ್ಗಗಳಲ್ಲಿ ಮೆಟ್ರೋ ಆರಂಭಿಸಿ ಎಂದು ಟೀಕಿಸಿದ್ರೆ, ಬಿಜೆಪಿ ನಾಯಕ, ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಈ ಸರ್ಕಾರಕ್ಕೆ ಸೂಕ್ತ ಬುದ್ದಿ ಹೇಳಬೇಕಾದ ಅನಿವಾರ್ಯತೆ ಇದೆ. ಬೆಂಗಳೂರು ಟು ತುಮಕೂರು‌ ನಡುವೆ ಎಕ್ಸ್ ಪ್ರೆಸ್ ಬಸ್, ಎಕ್ಸ್‌ಪ್ರೆಸ್‌ ರೈಲು ಸಂಚಾರ ಇದೆ.

  • ಬೆಳಗಾವಿಯಲ್ಲಿ ಕುರಾನ್ ಅಪವಿತ್ರಗೊಳಿಸಿರುವುದನ್ನು ಖಂಡಿಸಿ ಬೃಹತ್ ಪ್ರತಿಭಟನೆ

    ಬೆಳಗಾವಿ: ಜಿಲ್ಲೆಯ ಸಂತಿ ಬಸ್ತವಾಡ ಗ್ರಾಮದಲ್ಲಿ ಇತ್ತೀಚೆಗೆ ಪವಿತ್ರ ಕುರಾನ್ ಸೇರಿದಂತೆ ಇತರ ಪವಿತ್ರ ಗ್ರಂಥಗಳನ್ನು ಅಪವಿತ್ರಗೊಳಿಸಿದ ಘಟನೆಯ ವಿರುದ್ಧ ಮೇ 16, 2025 ರಂದು ಕರ್ನಾಟಕದ ಬೆಳಗಾವಿ ಜಿಲ್ಲೆಯ ಹಲವೆಡೆ ವಿವಿಧ ಮುಸ್ಲಿಂ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು.

    ಬೆಳಗಾವಿಯಲ್ಲಿ ವಿಶಾಲ ರ‍್ಯಾಲಿಯೊಂದನ್ನು ಆಯೋಜಿಸಲಾಗಿತ್ತು. ಇದೇ ರೀತಿಯ ರ‍್ಯಾಲಿಗಳು ಹುಕ್ಕೇರಿ ಮತ್ತು ಇತರ ಕೆಲವು ಪಟ್ಟಣಗಳಲ್ಲಿಯೂ ನಡೆದವು. ಗ್ರಾಮದ ಮಸೀದಿಯಲ್ಲಿನ ಶೆಲ್ಫ್‌ನಿಂದ ಅಪರಿಚಿತ ವ್ಯಕ್ತಿಗಳು ಪವಿತ್ರ ಕುರಾನ್ ಮತ್ತು ಹದೀಸ್ ಗ್ರಂಥಗಳನ್ನು ಕದ್ದು, ಹೊಲದಲ್ಲಿ ಸುಟ್ಟಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

    ಬಂಧಿತರನ್ನು ಲಕ್ಷ್ಮಣ್ ಯಲ್ಲಪ್ಪ ಉಚವಾಡೆ (30), ಮುತ್ತಪ್ಪ ಭರ್ಮ ಉಚವಾಡೆ (26), ಲಕ್ಷ್ಮಣ್ ನಾಗಪ್ಪ ನಾಯಕ್ (30), ಮತ್ತು ಶಿವರಾಜ್ ಯಲ್ಲಪ್ಪ ಗುಡ್ಲಿ (29) ಎಂದು ಗುರುತಿಸಲಾಗಿದೆ

    ಕಿತ್ತೂರ್ ರಾಣಿ ಚನ್ನಮ್ಮ ವೃತ್ತದ ಬಳಿಯ ಅಂಜುಮನ್ ಮೈದಾನದ ಎದುರು ದೊಡ್ಡ ಸಂಖ್ಯೆಯ ಜನರು ಜಮಾಯಿಸಿದರು. ಅವರು ‘ನಾರಾ ತಕ್ದೀರ್, ಅಲ್ಲಾಹು ಅಕ್ಬರ್’, ‘ಇಸ್ಲಾಂ ಜಿಂದಾಬಾದ್’ ಎಂಬ ಘೋಷಣೆಗಳನ್ನು ಕೂಗಿದರು. ಅವರು ಬಾವುಟಗಳು ಮತ್ತು ಪ್ಲಕಾರ್ಡ್‌ಗಳನ್ನು ಹಿಡಿದಿದ್ದರು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದರು.

    ಪ್ರತಿಭಟನೆಗೆ ಸಂಘರ್ಷಣೆಯಾಗಿ ಬೆಳಗಾವಿಯ ಪ್ರಮುಖ ರಸ್ತೆಗಳಲ್ಲಿನ ವ್ಯಾಪಾರಿಗಳu ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚಿದರು. ಮಧ್ಯಾಹ್ನದ ನಮಾಜ್ ಬಳಿಕ ಜನಸಂದಣಿ ಹೆಚ್ಚಾಯಿತು. ಪ್ರತಿಭಟನೆಯಿಂದಾಗಿ ವೃತ್ತಕ್ಕೆ ತೆರಳುವ ಎಲ್ಲ ರಸ್ತೆಗಳಲ್ಲಿ ಸುಮಾರು ಎರಡು ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತು.

    ಶಾಸಕ ಆಸಿಫ್ ಸೇಠ್, ಯುವ ನಾಯಕ ಅಮಾನ್ ಸೇಠ್, ನಗರಸಭೆಯ ಪ್ರಸಕ್ತ ಮತ್ತು ಮಾಜಿ ಸದಸ್ಯರು ಹಾಗೂ ದೊಡ್ಡ ಸಂಖ್ಯೆಯ ಮುಸ್ಲಿಂ ನಾಗರಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಆರೋಪಿಗಳನ್ನು ಶೀಘ್ರ ಬಂಧಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

    ಶ್ರೀ ಸೇಠ್ ಅವರು ಪವಿತ್ರ ಗ್ರಂಥಗಳ ಕಳವು ಮತ್ತು ಸುಡುವಿಕೆಯನ್ನು ಖಂಡಿಸಿ, ತಕ್ಷಣದ ಕಾನೂನು ಕ್ರಮಕ್ಕೆ ಒತ್ತಾಯಿಸಿದರು. “ಆಗಿರುವುದು ಕ್ಷಮಾರ್ಹವಲ್ಲ. ಪೊಲೀಸ್ ಆಯುಕ್ತರು ಒಂದು ವಾರದೊಳಗೆ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದ್ದಾರೆ. ಈ ಹಿಂದೆ ಪೊಲೀಸರು ಮೂರು ದಿನಗಳ ಗಡುವು ಕೋರಿದ್ದರು. ಆದರೆ ಅದೇ ಗ್ರಾಮದಲ್ಲಿ ಈದ್ಗಾಹ್ ಅಪವಿತ್ರಗೊಂಡ ಪ್ರಕರಣವನ್ನು ಭೇದಿಸುವಲ್ಲಿ ಅಧಿಕಾರಿಗಳು ಬ್ಯುಸಿಯಾಗಿದ್ದರು. ಈಗ ಆ ಪ್ರಕರಣವನ್ನು ಬಗೆಹರಿಸಿರುವುದರಿಂದ, ಈ ಪ್ರಕರಣದಲ್ಲಿ ಅವರು ಪೂರ್ಣ ಶಕ್ತಿಯಿಂದ ಕೆಲಸ ಮಾಡುತ್ತಾರೆ ಎಂದು ಭಾವಿಸುತ್ತೇವೆ,” ಎಂದು ಅವರು ಹೇಳಿದರು.

    ನಿರ್ಲಕ್ಷ್ಯ ವಹಿಸಿದ ಒಬ್ಬ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ತಿಳಿಸಿದರು. ಸಮುದಾಯದ ಸದಸ್ಯರಿಗೆ ಶಾಂತಿ ಕಾಪಾಡಲು ಮತ್ತು ಪೊಲೀಸರೊಂದಿಗೆ ಸಹಕರಿಸಲು ಅವರು ಮನವಿ ಮಾಡಿದರು.

    ಮುಂಜಾಗ್ರತಾ ಕ್ರಮವಾಗಿ, ನಗರ ಪೊಲೀಸ್ ಆಯುಕ್ತ ಐಡಾ ಮಾರ್ಟಿನ್ ಮಾರ್ಬನಿಯಾಂಗ್ ಅವರು ಕೇಂದ್ರ ವಾಣಿಜ್ಯ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಪ್ರತಿಭಟನಾಕಾರರಿಗೆ ಶಾಂತಿಯುತ ಮೆರವಣಿಗೆ ನಡೆಸುವಂತೆ ಪೊಲೀಸರು ಕೋರಿದ್ದರು. ಸುಮಾರು 3,000 ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯದಲ್ಲಿದ್ದರು ಎಂದು ಪೊಲೀಸರು ತಿಳಿಸಿದರು. ಕೆಲವು ಯುವ ಪ್ರತಿಭಟನಾಕಾರರು ಕೆಲವು ಪೊಲೀಸ್ ಕಾನ್ಸ್‌ಟೇಬಲ್‌ಗಳು ತಮ್ಮನ್ನು ತಳ್ಳಿದ ಆರೋಪದ ಮೇಲೆ ವಾಗ್ವಾದಕ್ಕಿಳಿದಾಗ ರ‍್ಯಾಲಿಯು ಕೆಲ ಕ್ಷಣಗಳ ಕಾಲ ಅಡ್ಡಿಯಾಯಿತು. ಹಿರಿಯ ಅಧಿಕಾರಿಗಳು ಕೋಪಗೊಂಡ ಯುವಕರನ್ನು ಸಮಾಧಾನಪಡಿಸಿದರು.

    ಹುಕ್ಕೇರಿಯಲ್ಲಿ ಒಟ್ಟು 11 ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.

  • ಕನ್ನಡಿಗರ ಬಗ್ಗೆ ಹೋಟೆಲ್​ ಡಿಸ್​ಪ್ಲೇನಲ್ಲಿ ಅವಾಚ್ಯ ಪದ ಬಳಕೆ.. ಮ್ಯಾನೇಜರ್ ವಶಕ್ಕೆ

    ಬೆಂಗಳೂರು: ಹೊಟೇಲ್​ನ ಡಿಸ್ಪ್ಲೇ ಬೋರ್ಡ್​ವೊಂದರಲ್ಲಿ ಕನ್ನಡಿಗರಿಗೆ ಅಪಮಾನ ಮಾಡಲಾಗಿದೆ. ಕೋರಮಂಗಲದ ಹೊಟೇಲ್​ನ ಡಿಸ್ಪ್ಲೇ ಬೋರ್ಡ್​ನಲ್ಲಿ ಅವಹೇಳನಕಾರಿಯಾಗಿ ಬರೆದು ಅತಿರೇಕದ ಉದ್ಧಟತನ ಮೆರೆದಿದ್ದಾರೆ.

    ಕೋರಮಂಗಲದ ನೆಕ್ಸಸ್ ಮಾಲ್ ಸಮೀಪದ HOTEL GS SUITEನ ಡಿಸ್ಪ್ಲೇ ಬೋರ್ಡ್ ನಲ್ಲಿ ಕನ್ನಡಿಗರಿಗೆ ಅಪಮಾನ ಆಗುವಂತಹ ಬರಹ ಹಾಕಲಾಗಿದೆ. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಹೋಟೆಲ್​ಗೆ ತೆರಳಿ ಪೊಲೀಸರು ಪರಿಶೀಲನೆ ಮಾಡಿದ್ದಾರೆ.

    ಪೊಲೀಸರು ಹೊಟೇಲ್‌ನ ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದಾರೆ. ಮತ್ತು ಬೋರ್ಡನ್ನು ಕಿತ್ತು ಹಾಕಿದ್ದಾರೆ. ಇನ್ನೂ, ಈ ಘಟನೆ ಬಗ್ಗೆ ಆಗ್ನೇಯ ವಿಭಾಗ ಡಿಸಿಪಿ ಸಾರಾಫಾತೀಮಾ, ಮಡಿವಾಳ ಠಾಣೆಯಲ್ಲಿ ಸುಮೋಟೊ ಕೇಸ್ ದಾಖಲಿಸಿದ್ದೇವೆ. ಕೆಲಸ ಮಾಡ್ತಿದ್ದ ಮ್ಯಾನೇಜರ್ ಸೇರಿ ಐವರನ್ನ ವಶಕ್ಕೆ ಪಡೆದಿದ್ದೇವೆ. ಹೋಟೆಲ್ ಮಾಲೀಕ ವಿದೇಶದಲ್ಲಿ ಇದ್ದಾನೆ. ಆತನಿಗೂ ನೋಟಿಸ್ ಕೊಟ್ಟಿದ್ದೀವಿ. ಕಳೆದ ಎಂಟನೇ ತಾರೀಖಿನಂದು ಬೋರ್ಡ್ ಅಳವಡಿಸಿದ್ದಾರೆ. ಈ ರೀತಿ ಪದ ಯಾವಾಗಿಂದ ಡಿಸ್ಪ್ಲೆ ಮಾಡಿದ್ದಾರೆ ಅನ್ನೋದು ತನಿಖೆ ಮಾಡ್ತಿದ್ದೀವಿ. ಯಾವಾಗ ಘಟನೆ ಆಗಿದೆ ಅನ್ನೋದು ತನಿಖೆ ಮಾಡ್ತಿದ್ದೇವೆ ಎಂದು ಹೇಳಿದ್ದಾರೆ.

  • ಬಿಡದಿಯಲ್ಲಿ ಸಾಮೂಹಿಕ ಅತ್ಯಾಚಾರಗೈದು ಕೊಲೆಗೈದ ದಲಿತ ಬಾಲಕಿಗೆ ನ್ಯಾಯ ದೊರಕಲಿ: ವಿಮೆನ್ ಇಂಡಿಯಾ ಮೂವ್ಮೆಂಟ್ ಆಗ್ರಹ

    ರಾಜ್ಯ ರಾಜಧಾನಿಗೆ ತಾಗಿರುವ ಬಿಡದಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಪೋಲೀಸರ ನಿರ್ಲಕ್ಷ್ಯದ ನಡೆಯನ್ನು ವಿರುದ್ಧ ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸಿದೆ .

    ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ , ಇತ್ತೀಚಿಗೆ ರಾಜ್ಯದಲ್ಲಿ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ ಮತ್ತು ಹೆಚ್ಚಾಗಿ ಮಹಿಳೆಯರ ಮೇಲೆ ಭೀಕರವಾಗಿ ನಡೆಯುತ್ತಿರುವ ಹಿಂಸಾತ್ಮಕ ಪ್ರಕರಣಗಳನ್ನು ನೋಡುವಾಗ ಸುಸಂಸ್ಕೃತಿ, ನೈತಿಕ ಮೌಲ್ಯಗಳ ತಳಹದಿಯ ಮೇಲೆ ನೆಲೆಗೊಂಡು, ಸುಸಭ್ಯ ಸಮಾಜವಾಗಿ ಗುರಿತಿಸಲ್ಪಡುತ್ತಿದ್ದ ಕರ್ನಾಟಕದ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದು, ಒಂದು ಅನಾಗರಿಕರ ತಾಣದಂತಾಗಿದೆ ಎಂದು ಹೇಳಿದರು .

    ಜನರು ಸದಾ ಭಯ ಭೀತಿಯಲ್ಲಿ ಬದುಕುವಂತಾಗಿದೆ. ಅತ್ಯಾಚಾರ ನಡೆದರೂ ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ ಪೋಲೀಸರ ನಡೆ ಪ್ರಶ್ನಿಸಿದರೆ ಪೊಲೀಸರು ಹಲ್ಲೆ ಮಾಡುತ್ತಾರೆ ಎನ್ನುವುದಾದರೆ ಈ ವ್ಯವಸ್ಥೆ ಅತ್ಯಾಚಾರಿಗಳ ರಕ್ಷಣೆಗೆ ನಿಂತಿರುವ ಹಾಗೆ ಭಾಸವಾಗುತ್ತಿದೆ. ಸಮಾಜದಲ್ಲಿ ನ್ಯಾಯ ,ನೀತಿ, ನೈತಿಕತೆ ಸ್ಥಾಪಿಸಲು ಪಣತೊಡಬೇಕಾದ ಆರಕ್ಷಕರು ಭಕ್ಷಕರಾಗಿ ವರ್ತಿಸುತ್ತಿದ್ದಾರೆ.

    ಅತ್ಯಂತ ದಾರುಣವಾಗಿ ಅತ್ಯಾಚಾರಕ್ಕೆ ಒಳಗಾಗಿ ಸಾವನ್ನಪ್ಪಿದ ಬಿಡದಿಯ ಈ 14 ವರ್ಷದ ಮೂಗ ಬಾಲಕಿಗಾಗಿ ಧ್ವನಿಯೆತ್ತಲು ಮಾಧ್ಯಮಗಳಿಗೆ ಸಮಯವೇ ಸಿಕ್ಕಿಲ್ಲ . ಟಿ.ಆರ್.ಪಿ ಗಾಗಿ ಒಂದು ಕ್ಷುಲ್ಲಕ ವಿಚಾರವನ್ನು ಮುಂದಿಟ್ಟುಕೊಂಡು ತಾಸುಗಟ್ಟಲೆ ಕುಳಿತು ಡಿಬೆಟ್ ನಡೆಸುವ ಮಾಧ್ಯಮಗಳು ಈ ಪ್ರಕರಣದ ಕುರಿತು ಚರ್ಚಿಸುವ ಗೋಜಿಗೆ ಹೋಗುವುದಿಲ್ಲ.

    ಸ್ವಘೋಷಿತ ಧರ್ಮ ರಕ್ಷಕರಿಗೆ ಬೀದಿಗಿಳಿದು ಹೋರಾಡಲು ಈ ಮುಗ್ಧ ಹೆಣ್ಣಿನ ಆರ್ತನಾದ ಕೇಳಿಸಲೇ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

    ಸರ್ಕಾರವು ಅತ್ಯಂತ ಬರ್ಬರವೆನಿಸಿದ ಈ ಅತ್ಯಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಅಧಿಕಾರಿಗಳ ಅಧೀನತೆಯಲ್ಲಿ ಈ ಪ್ರಕರಣದ ತನಿಖೆ ನಡೆಸಿ, ನಿರ್ಲಕ್ಷ್ಯ ತೋರಿದ ಪೋಲೀಸರ ವಿರುದ್ಧ ಕಾನೂನು ಕ್ರಮ ಜರುಗಿಸಿ ರಾಜ್ಯದಲ್ಲಿ ಇಂತಹ ಪ್ರಕರಣಗಳನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಂಡು ಹೆಣ್ಣುಮಕ್ಕಳ ಸುರಕ್ಷತೆಯನ್ನು ಖಾತಾರಿಪಡಿಸಬೇಕು ಎಂದು ಅವರು ಆಗ್ರಹಿಸಿದರು.

  • High drama at Bengaluru pub after armed intruder spotted

    Bengaluru: High drama at Bengaluru pub after armed intruder spotted; police find cash stolen but no sign of suspect

    High drama ensued as armed Quick Response Teams (QRTs) from the Bengaluru City Police surrounded a three-storeyed building that houses the Geometry Brewery and Kitchen, after its security guard alerted the police that he had locked up an intruder armed with a firearm inside the building, near the Malleshwaram 17th Cross Bridge, Subramanya Nagar in the wee hours of May 12, 2025.

    After hours of operations overseen by Saidulu Adavath, Deputy Commissioner of Police (North Division), the police found no sign of an intruder still in the building. The suspect seems to have fled by the time the police arrived, sources said. The intruder entered the premises through the back door, damaged a few CCTV cameras and made away with around ₹50,000 from the cashbox.