Category: Udupi District

  • ವಾಹನಗಳ ಬಹಿರಂಗ ಹರಾಜು

    ಉಡುಪಿ, ಜುಲೈ 13, 2025: ಮಣಿಪಾಲ ಪೊಲೀಸ್ ಠಾಣೆಯ ಪ್ರಕರಣಕ್ಕೆ ಸಂಬಂಧಪಟ್ಟ ಮತ್ತು ವಾರೀಸುದಾರರಿಲ್ಲದ ದ್ವಿಚಕ್ರ ವಾಹನಗಳಾದ ಕೆಎ 20ಯು-6787 ಬಜಾಜ್ ಪಲ್ಸರ್, ಕೆಎ 20 ಎಕ್ಸ್-9663 ಹೀರೋ ಹೋಂಡಾ ಸ್ಪೆ್ಲಂಡರ್, ಎಂಹೆಚ್ 31 ಡಿಯು-8379 ಯಮಾಹಾ ಎಫ್.ಝಡ್-ಎಸ್, ಎಂಜಿನ್ ನಂ. ಕೆಸಿ09ಇ204813 ಹೊಂಡಾ ಯುನಿಕಾರ್ನ್ ಮತ್ತು ಆಟೋರಿಕ್ಷಾ ಕೆಎ20 ಎ-8850 ಬಜಾಜ್ ಆರ್/ಇ 2ಸ್ಟ್ರೋಕ್ ಅನ್ನು ಜುಲೈ 15 ರಂದು ಸಂಜೆ 4 ಗಂಟೆಗೆ ಮಣಿಪಾಲ ಪೊಲೀಸ್ ಠಾಣಾ ಆವರಣದಲ್ಲಿ ನ್ಯಾಯಾಲಾಯದ ಆದೇಶದಂತೆ ಬಹಿರಂಗ ಹರಾಜು ಮಾಡಲಾಗುವುದು. ಆಸಕ್ತರು ಭಾಗವಹಿಸಬಹುದಾಗಿದೆ ಎಂದು ಮಣಿಪಾಲ ಪೊಲೀಸ್ ಠಾಣೆಯ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

  • Monsoon Football Splash District Level Tournament Shines in Manipal

    Manipal, July 13, 2025: The Students Islamic Organisation (SIO) Udupi District hosted the exhilarating Monsoon Football Splash District Level Tournament on July 13, 2025, at City Arena, Manipal. Building on the success of the Brotherhood Football Match held on July 6, 2025, this event brought together 11 teams from 4 units and 7 circles, showcasing remarkable talent, teamwork, and sportsmanship.

    The tournament, a vibrant celebration of unity and brotherhood, saw enthusiastic participation from young athletes representing circles including Gangolli, Kandlur, Mavinakatte, Shiroor, Uppinakote, Brahmavar, and others. The matches were filled with energy, with players demonstrating their passion for football amidst the monsoon spirit.

    Tournament Highlights

    • Winners: Shiroor
    • Runners-up: Gangolli

    The event fostered a sense of community and healthy competition among the youth, aligning with SIO’s mission to promote unity through sports. The tournament was a testament to the dedication and skill of the participants, who competed with fervor and camaraderie.

    SIO Udupi District extends heartfelt gratitude to all participating units and circles for their spirited involvement and contribution to making the event a grand success.

    Source: SIO Udupi District

  • ಉಡುಪಿ: ಹಣ್ಣು ಹಂಪಲಿನ ಗಿಡಗಳ ಉಚಿತ ವಿತರಣೆ ಕಾರ್ಯಕ್ರಮ

    ಉಡುಪಿ, ಜುಲೈ 12, 2025: ಪ್ರಿ ಓನ್ಡ್‌ ವೆಹಿಕಲ್‌ ಅಸೋಸಿಯೇಷನ್‌ ಉಡುಪಿ ಇದರ ವತಿಯಿಂದ ಒಂದು ಸಾವಿರಕ್ಕೂ ಮಿಕ್ಕಿ ಹಣ್ಣು ಹಂಪಲಿನ ಗಿಡಗಳ ಉಚಿತ ವಿತರಣೆ ಮತ್ತು ನೆಡುವ ಕಾರ್ಯಕ್ರಮ ಶನಿವಾರ ಉಡುಪಿ ಭುಜಂಗ ಪಾರ್ಕ್‌ ನ ಬಯಲು ರಂಗಮಂಟಪದಲ್ಲಿ ನಡೆಯಿತು.

    ಕಾರ್ಯಕ್ರಮವನ್ನು ನಗರ ಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಈಗ ಎಲ್ಲಿ ನೋಡಿದರು ಬಿಲ್ಡಿಂಗ್‌ ಗಳು ತಲೆ ಎತ್ತಿ ನಿಂತಿದ್ದು, ಮಳೆ ನೀರು ಇಂಗುವ ಸ್ಥಳಗಳೇ ಇಲ್ಲದೇ ಮಳೆ ನೀರು ಸಮುದ್ರವನ್ನು ಸೇರುತ್ತಿದೆ. ಗಿಡ ನೆಡುವುದರಿಂದ ನೀರಿನ ಜಲಮಟ್ಟವನ್ನು ಏರಿಸಬಹುದು. ನಗರದಲ್ಲಿ ಮರಗಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆ ಇಂದಿನ ದಿನಮಾನದಲ್ಲಿ ಉಷ್ಣತೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ನಗರದ 35 ವಾರ್ಡಿನಲ್ಲಿ ಪಾರ್ಕ್‌ ಗಳ ಸಂಖ್ಯೆ ಹೆಚ್ಚಿಸುವುದು ನಮ್ಮ ಪ್ರಥಮ ಆದ್ಯತೆ ಎಂದರು.

    ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ, ನಿರಂತರವಾಗಿ ಇದನ್ನು ಮುಂದುವರಿಸಿ, ಇದನ್ನು ಇಡೀ ಜಿಲ್ಲೆಗೆ ವಿಸ್ತರಿಸಿ ಎಂದು ಶುಭ ಹಾರೈಸಿದರು.

    ಮುಖ್ಯ ಅತಿಥಿಗಳಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಲ್.ಪಿ.ನಾಯಕ್, ವಲಯ ಅರಣ್ಯಧಿಕಾರಿ ವನಜಾಕ್ಷಿ, ನಗರಸಭಾ ಸದಸ್ಯರಾದ ಮಂಜುನಾಥ್ ಮಣಿಪಾಲ, ರಶ್ಮಿ ಭಟ್, ಡಾ.ಪ್ರಕಾಶ್ ಭಟ್, ಐರೋಡಿ ಅನಂತ ಪೈ. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಅಶ್ರಫ್ ವಹಿಸಿದ್ದರು, ಉದಯ್ ಕಿರಣ್ ಸ್ವಾಗತಿಸಿದರು.

  • ಬೈಂದೂರು ರೈಲ್ವೆ ನಿಲ್ಡಾಣದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ಒಮಿನಿ ಕಾರು ಕಳವು

    ಬೈಂದೂರು: ಬೈಂದೂರು ಮೂಕಾಂಬಿಕ ರೈಲ್ವೆ ನಿಲ್ಡಾಣದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ಮಾರುತಿ ಸುಜುಕಿ ಒಮಿನಿ ಕಾರು ಕಳವು ಮಾಡಲಾಗಿದೆ.

    ಬೈಂದೂರು ಗಂಗನಾಡಿನ ಥಾಮಸ್ ವಿ ಎಮ್ ಇವರು ಬಾಡಿಗೆ ಮಾಡಲು ತನ್ನ KA-20-C-3590 ನೇ ಮಾರುತಿ ಸುಜುಕಿ ಒಮಿನಿ ಕಾರನ್ನು ಬೈಂದೂರು ಮೂಕಾಂಬಿಕ ರೈಲ್ವೆ ನಿಲ್ಡಾಣದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದು ಜು. 9 ರಂದು ರಾತ್ರಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೀಜಾಡಿ: ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

    ಕುಂದಾಪುರ: ಬ್ಲಾಕ್ ಕಾಂಗ್ರೆಸ್ ಸಮಿತಿ ಕುಂದಾಪುರ ವತಿಯಿಂದ ಬೀಜಾಡಿ ಗ್ರಾಮ ಪಂಚಾಯತ್ ಮುಂದೆ ಬಿಜೆಪಿಯ ವಿರುದ್ಧ ಸತ್ಯದರ್ಶನ ಪ್ರತಿಭಟನೆ ನಡೆಯಿತು.

    ಪ್ರತಿಭಟನಾ ಸಭೆಯಲ್ಲಿ ಪಿ‌ಎಲ್ ಡಿ ಬ್ಯಾಂಕಿನ ಅಧ್ಯಕ್ಷರಾದ ಶಿವರಾಮ ಶೆಟ್ಟಿ, ಪಕ್ಷದ ನಾಯಕರಾದ ಅಶೋಕ್ ಪೂಜಾರಿ ಬೀಜಾಡಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ವಿನೋದ್ ಕ್ರಾಸ್ಟೊ, ಹಿರಿಯರಾದ ಬಿ ಹಿರಿಯಣ್ಣ, ತಾಲೂಕು ಕೆ.ಡಿ.ಪಿ ಸದಸ್ಯರಾದ ರಮೇಶ್ ಶೆಟ್ಟಿ, ಪಂಚಾಯತ್ ಸದಸ್ಯರಾದ ಶೇಖರ ಚಾತ್ರಬೆಟ್ಟು, ಜೆಸಿಂತಾ ಡಿಮೆಲ್ಲೊ, ಗುಲಾಬಿಯಮ್ಮ, ಅನಿಲ್, ಆನಂದ ಬಂಗೇರ, ಅಲ್ಪಸಂಖ್ಯಾತ ಘಟಕದ ಬ್ಲಾಕ್ ಅಧ್ಯಕ್ಷ ಮುನಾಫ್ ಕೋಡಿ, ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ನೌಫಲ್, ಕಾರ್ಯದರ್ಶಿ ಪೈಸಲ್, ಅನಿಶ್, ರೇಣುಕಾ, ಸುರೇಶ್, ಶಂಕರ್ ಚಾತ್ರಬೆಟ್ಟು ಅಶೋಕ್ ಪೂಜಾರಿ ಚಾತ್ರಬೆಟ್ಟು , ಪ್ರಕಾಶ್, ಮಹೇಶ್ ಕುಂದರ್, ಉದಯ, ಉಷಾ, ನಾಗರತ್ನ, ಭಾರತಿ, ಶಾರದಾ , ರಮೇಶ್ ಕುಂದರ್, ನಾರಾಯಣ ಗಾಣಿಗ, ಮುತ್ತಾ, ಬಸವ , ನಾರಾಯಣ ಮೊಗವೀರ ಇನ್ನಿತರ ಉಪಸ್ಥಿತರಿದ್ದರು.

  • ಬೈಂದೂರು: ದನ ಕಳ್ಳತನ; ಇಬ್ಬರ ಬಂಧನ

    ಬೈಂದೂರು, ಜುಲೈ 12, 2025: ಬೈಂದೂರು ಠಾಣೆಯಲ್ಲಿ ನಡೆದ ದನ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

    ಮೊಹಮ್ಮದ ಕೈಪ್‌ ಸಾಸ್ತಾನ ಮತ್ತು ಕಾಪುವಿನ ಉಚ್ಚಿಲದ ಮೊಹಮ್ಮದ ಸುಹೇಲ್‌ ಖಾದರ ಬಂಧಿತ ಆರೋಪಿಗಳು.

    ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 3 ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಾಗೂ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ 4 ದನಗಳನ್ನು ರಕ್ಷಿಸಿ ಗೋಶಾಲೆಗೆ ಬಿಡಲಾಗಿದೆ ಎಂದು ತಿಳಿದು ಬಂದಿದೆ.

    ಬೈಂದೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪದೇ ಪದೇ ದನ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದುದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳ ಪತ್ತೆಗೆ 3 ವಿಶೇಷ ತಂಡವನ್ನು ರಚಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  

    ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಎಸ್‌ಪಿ ಎಸ್. ಸುಧಾಕರ್ ನಾಯಕ್ ಮತ್ತು ಕುಂದಾಪುರ ಉಪವಿಭಾಗದ ಡಿವೈಎಸ್‌ಪಿ ಹೆಚ್.ಡಿ. ಕುಲಕರ್ಣಿ ಅವರ ಮೇಲ್ವಿಚಾರಣೆಯಲ್ಲಿ ಬೈಂದೂರು ವೃತ್ತ ನಿರೀಕ್ಷಕ ಸವಿತಾ ತೇಜ್ ಅವರ ನೇತೃತ್ವದಲ್ಲಿ ವಿಶೇಷ ಕಾಯಾಛರಣೆ ನಡೆಸಲಾಯಿತು.

    ಪ್ರಕರಣದ ತನಿಖೆಗೆ ಮೂರು ತನಿಖಾ ತಂಡಗಳನ್ನು ರಚಿಸಲಾಗಿತ್ತು. ಪಿಎಸ್‌ಐ ತಿಮ್ಮೇಶ್ ಬಿ.ಎನ್., ಪಿಎಸ್‌ಐ ನವೀನ್ ಬೋರಾಕರ್ (ಬೈಂದೂರು ಠಾಣೆ), ಪಿಎಸ್‌ಐ ವಿನಯ್ (ಕೊಲ್ಲೂರು ಠಾಣೆ), ಮತ್ತು ಪಿಎಸ್‌ಐ ಬಸವರಾಜ್ (ಗಂಗೊಳ್ಳಿ ಠಾಣೆ) ಅವರು ಈ ತಂಡಗಳ ನೇತೃತ್ವ ವಹಿಸಿದ್ದರು. ಪೊಲೀಸ್ ಸಿಬ್ಬಂದಿಗಳಾದ ನಾಗೇಂದ್ರ, ಮೋಹನ್, ಸುರೇಶ್, ಚೇತನ್, ಜಯರಾಮ್, ಸತೀಶ್, ಚಿದಾನಂದ, ಮಲ್ಲಪ್ಪ ದೇಸಾಯಿ, ಶ್ರೀಧರ್ ಪಾಟೀಲ್ ಮತ್ತು ಪರಯ್ಯ ಮಾತಾಪತಿ ಅವರು ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

  • ಜುಲೈ14 ರಂದು ಉಡುಪಿಯಲ್ಲಿ ಎಸ್ ವೈ ಎಸ್ ಸೌಹಾರ್ದ ಸಂಚಾರ ಕಾರ್ಯಕ್ರಮ

    ಉಡುಪಿ: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್ ವೈಎಸ್ ) ವತಿಯಿಂದ ಜುಲೈ 14ರಿಂದ 16 ರ ವರೆಗೆ ಹೃದಯ ಹೃದಯಗಳನ್ನು ಬೆಸೆಯೋಣ ಎಂಬ ಘೋಷಣೆಯೊಂದಿಗೆ ಸೌಹಾರ್ದ ಸಂಚಾರ ಕಾರ್ಯಕ್ರಮ ಹಮ್ಮಿಕೊಂಡಿದ್ದು ಜುಲೈ 14 ರಂದು ಉಡುಪಿಗೆ ಸೌಹಾರ್ದ ಸಂದೇಶ ಜಾಥಾ ಆಗಮಿಸಲಿದೆ ಎಂದು ಸಮಿತಿಯ ಜಿಲ್ಲಾ ಸಂಚಾಲಕ ಹಂಝತ್ ಹೆಜಮಾಡಿ ಹೇಳಿದರು.

    ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬುದ್ಧಿವಂತರ ಜಿಲ್ಲೆ ಎಂದು ಹೆಸರುವಾಸಿಯಾದ ಕರಾವಳಿ ಕರ್ನಾಟಕದ ಇತ್ತೀಚಿನ ಬೆಳವಣಿಗೆಗಳು ಶೀರಾ ಆತಂಕಕಾರಿಯಾಗಿದೆ.ಕರಾವಳಿ ಕರ್ನಾಟಕದಲ್ಲಿ ಕೋಮು ವೈಷಮ್ಮವು ತೀವ್ರಗೊಳ್ಳುತ್ತಿದ್ದು ಹಲ್ಲೆ, ಹತ್ಯೆಗಳು ಸಾಮಾನ್ಯವಾಗುತ್ತಿದೆ ಯಾರೂ ಯಾರನ್ನೂ ನಂಬಲಾಗದಂತೆ ಆತಂಕ ಕವಿದಿದೆ. ಕೃಷಿ, ಕೈಗಾರಿಕೆ, ಮೀನುಗಾರಿಕೆ, ಶಿಕ್ಷಣ, ವೈದ್ಯಕೀಯ ಮತ್ತಿತರ ಕ್ಷೇತ್ರಗಳಲ್ಲಿ ಮೇಲೇರುತ್ತಲೇ ಇರುವ ನಾಡು ನಮ್ಮದು ಆದರೆ ಮನುಷ್ಯ ಮನಸ್ಸುಗಳ ನಡುವಿನ ಅಂತರ ಹೆಚ್ಚಾಗುತ್ತಿದೆ. ಜಾತಿ ಮತ ಪಥ ಪಂಥ ಪಕ್ಷ ಪಂಗಡಗಳ ಹೆಸರಿನಲ್ಲಿ ಪರಸ್ಪರ ಮಾಂಸ ಕೀಳುವ, ರಕ್ತ ಹರಿಸುವ, ಒಬ್ಬರನ್ನೊಬ್ಬರು ಕೊಲ್ಲುವ ತನಕ ಮೊರ, ವಿದ್ವೇಷಗಳು ಮಿತಿ ಮೀರಿವೆ. ಇದಕ್ಕೆಲ್ಲ ಇತಿಶ್ರೀ ಹಾಡುವುದು ಇಂದಿನ ತುರ್ತು ಅಗತ್ಯವಾಗಿದೆ. ಜಾತಿ ಮತ ಪಥಗಳು ಭಿನ್ನವಾದರೂ ಎಲ್ಲರನ್ನೂ ಮನುಷ್ಯರನ್ನಾಗಿ ಕಾಣುವ ಹೃದಯವಂತಿಕೆ ಬಹಳ ಮುಖ್ಯ. ಒಬ್ಬರನ್ನೊಬ್ಬರು ಅರಿತು, ಬೆರೆತು ಬದುಕಿದರೆ ಮಾತ್ರ ಸ್ವಸ್ಥ ಜೀವನ ಸಾಧ್ಯ ಈ ಸಂದೇಶವನ್ನು ಸಮಾಜದ ಮುಂದೆ ಪ್ರಬಲವಾಗಿ ಪ್ರತಿಪಾದಿಸುವ ಸಲುವಾಗಿ ‘ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ’ (ಎಸ್ ವೈ ಎಸ್)  ವಿಶಿಷ್ಟ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ.

    ಹೃದಯ ಹೃದಯಗಳನ್ನು ಬೆಸೆಯೋಣ’ ಎಂಬ ಘೋಷಣೆಯೊಂದಿಗೆ ಜುಲೈ 14,15,16 ದಿನಾಂಕಗಳಲ್ಲಿ ಕುಂದಾಪುರದಿಂದ ಸುಳ್ಯ ತನಕ ಸರ್ವ ಮತೀಯರೂ ಜೊತೆಗೂಡಿ ಸಾಗುವ ‘ಕರಾವಳಿಯ ನೆಲದಲ್ಲಿ ಸೌಹಾರ್ದ ಸಂಚಾರ’ ಎಂಬ ಕಾರ್ಯಕ್ರಮವು ಸೌಹಾರ್ದ ಸಂದೇಶವನ್ನು ಸಮಾಜದ ಮುಂದೆ ತೆರೆದಿಡಲಿದೆ. ದಿನಾಂಕ: 14-07-2025 ಸೋಮವಾರ ಬೆಳಿಗೆ 8 ಗಂಟೆಗೆ ಕುಂದಾಪುರ ಅಸ್ವಯ್ಯದ್ ಯೂಸುಫ್ ವಲಿಯುಲ್ಲಾಹಿ ರವರ ದರ್ಗಾ ಝಿಯಾರತ್ ನೊಂದಿಗೆ ಆರಂಭವಾಗುವ ಸೌಹಾರ್ದ ಸಂಚಾರವು ಬೆಳಿಗ್ಗೆ 9 ಗಂಟೆಗೆ ಕುಂದಾಪುರ ದರ್ಗಾದಿಂದ ಶಾಸ್ತ್ರಿ ಸರ್ಕಲ್ ತನಕ ಸೌಹಾರ್ದ ಕಾಲ್ನಡಿಗೆ ಜಾಥಾ ಹಾಗೂ ನಂತರ ಸೌಹಾರ್ದ ಸಂದೇಶ ಕಾರ್ಯಕ್ರಮ ನಡೆಯಲಿದೆ

    ಮಧ್ಯಾಹ್ನ 12 ಗಂಟೆಗೆ ಉಡುಪಿ ಜಾಮಿಯಾ ಮಸೀದಿಯಿಂದ ಮದರ್ ಆಫ್ ಸೋರೋಸ್ ಚರ್ಚ್ ತನಕ ಕಾಲ್ನಡಿಗೆ ಜಾಥಾ ಹಾಗೂ ಸೌಹಾರ್ದ ಸಂದೇಶ ನಡೆಯಲಿದೆ. ಮಧ್ಯಾಹ್ನ 3.30 ಗಂಟೆಗೆ ಕಾರ್ಕಳ ಗ್ಯಾಲಕ್ಸಿ ಹಾಲ್ ನಿಂದ ಬಸ್ಸು ನಿಲ್ದಾಣದವರೆಗೆ ಕಾಲ್ನಡಿಗೆ ಜಾಥಾ ಹಾಗೂ ಸೌಹಾರ್ದ ಸಂದೇಶ ನಡೆಯಲಿದೆ. ಸಂಜೆ 5:30 ಗಂಟೆಗೆ ಕಾಪು ಪೊಲಿವು ಜಾಮಿಯಾ ಮಸೀದಿಯಿಂದ ಕಾಪು ಪೇಟೆ ತನಕ ಸೌಹಾರ್ದ ನಡಿಗೆ ಹಾಗೂ ಸಂದೇಶ ಭಾಷಣ ನಡೆಯಲಿದೆ. ರಾತ್ರಿ 8 ಗಂಟೆಗೆ ಪಡುಬಿದ್ರಿ ಸೌಹಾರ್ದ ಭಾಷಣ ನಡೆಯಲಿದೆ ಎಂದರು.

    ಈ ಸೌಹಾರ್ದ ಸಂಚಾರದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು, ಕ್ರೈಸ್ತ ಧರ್ಮಗುರುಗಳು ಮುಸ್ಲಿಂ ಧಾರ್ಮಿಕ ವಿದ್ವಾಂಸರು, ಸಾಮಾಜಿಕ ಶೈಕ್ಷಣಿಕ ಹಾಗೂ ಇನ್ನಿತರ ಪ್ರಮುಖ ನಾಯಕರುಗಳು ಭಾಗವಹಿಸಲಿರುವರು.

    ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಉಪಾಧ್ಯಕ್ಷರಾದ ಹಬೀಬ್ ಆಲಿ, ಪ್ರಧಾನ ಕಾರ್ಯದರ್ಶಿ ಎಮ್ ಸಲೀಂ ಪಕೀರ್ಣಕಟ್ಟೆ, ಎಸ್ ವೈ ಎಸ್ ಜಿಲ್ಲಾ ಸಮಿತಿ ಉಪಾಧ್ಯಕ್ಷರಾದ ಹುಸೈನ್ ಸಅದಿ ಹೊಸ್ಮಾರು, ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಹಾರಿಸ್ ಹೆಮ್ಮಾಡಿ, ಸ್ವಾಗತ ಸಮಿತಿ ಸಂಚಾಲಕರಾದ ಇಂತಿಯಾಝ್ ಹೊನ್ನಾಳ, ಕಾರ್ಯದರ್ಶಿ ತೌಫೀಕ್ ಅಂಬಾಗಿಲು ಉಪಸ್ಥಿತರಿದ್ದರು.

  • ಕಲ್ಯಾಣಪುರ ಮೀನು ಮಾರು ಕಟ್ಟೆ ಬಳಿ ವೃದ್ಧರ ರಕ್ಷಣೆ: ಸೂಚನೆ

    ಉಡುಪಿ ಜುಲೈ. 10, 2025: ಕಲ್ಯಾಣಪುರ ಮೀನು ಮಾರುಕಟ್ಟೆ ಬಳಿ ಕಳೆದ ಮೂರು ನಾಲ್ಕು ದಿನಗಳಿಂದ ಮಳೆಗಾಳಿಗೆ ಅಸಹಾಯಕರಾಗಿದ್ದ ವೃದ್ಧರನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಕೊಳಲಗಿರಿಯ ಸ್ವರ್ಗ ಆಶ್ರಮಕ್ಕೆ ದಾಖಲಿಸಿದ್ದಾರೆ. ವೃದ್ಧರು ತನ್ನ ಹೆಸರು ಲಕ್ಷ್ಮಣ ಪೂಜಾರಿ, ಮಕ್ಕಳು ಬರುತ್ತಾರೆ ಎಂದು ಕಾಯುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. 

    ಮೇಲ್ನೋಟಕ್ಕೆ ಮರೆವು ಕಾಯಿಲೆಯಂತೆ ಕಾಣುತ್ತಾರೆ. ಈ ಬಗ್ಗೆ ಮೀನು ಮಾರಾಟ ಮಾಡುವ ಮಹಿಳೆಯೋರ್ವರಿಂದ ಮಾಹಿತಿ ಪಡೆದ ವಿಶು ಶೆಟ್ಟಿಯವರು, ರಕ್ಷಿಸಿ ಆಶ್ರಮಕ್ಕೆ ದಾಖಲಿಸಿದ್ದಾರೆ.

  • ಬ್ರಹ್ಮಾವರ: ಅಕ್ರಮ ಮದ್ಯ ಮಾರಾಟ – ಓರ್ವನ ಬಂಧನ

    ಬ್ರಹ್ಮಾವರ,ಜು. 11: ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಾರಂಬಳ್ಳಿ ಗ್ರಾಮದ ಕುಂಜಾಲ್ ಜಂಕ್ಷನ್‌ನಲ್ಲಿರುವ ಪ್ರವಾಸಿ ಟೆಂಪೋ ಸ್ಟ್ಯಾಂಡ್ ಬಳಿ ದಾಳಿ ನಡೆಸಿ ಬಂಧಿಸಲಾಗಿದೆ.

    ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಮದ್ಯ ಮಾರಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬ್ರಹ್ಮಾವರ ಪೊಲೀಸ್ ಠಾಣೆಯ ಪಿಎಸ್ಐ ಅಶೋಕ್ ಮಲಬಾಗಿ ಅವರ ತಂಡ ಕಾರ್ಯಾಚರಣೆ ನಡೆಸಿದ್ದಾರೆ.

    ಕಾರ್ಯಾಚರಣೆಯ ಸಂದರ್ಭದಲ್ಲಿ, ಬ್ರಹ್ಮಾವರದ ಹಂದಾಡಿ ಗ್ರಾಮದ ನಿವಾಸಿ ಉಮೇಶ್ ಪೂಜಾರಿ (49) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಯಾವುದೇ ಪರವಾನಗಿ ಇಲ್ಲದೆ KA-19-X-9055 ನೋಂದಣಿ ಸಂಖ್ಯೆಯ ಸ್ಕೂಟರ್‌ನಿಂದ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ. ತನಿಖೆಯಿಂದ ಆತ ಬ್ರಹ್ಮಾವರದ ವೈನ್ ಅಂಗಡಿಯಿಂದ ಮದ್ಯವನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

    ಪೊಲೀಸರು ಚೀಲವನ್ನು ವಶಪಡಿಸಿಕೊಂಡಿದ್ದು, ಅದರಲ್ಲಿ ಪ್ರೆಸ್ಟೀಜ್ ಫೈನ್ ವಿಸ್ಕಿ, ಹೇವರ್ಡ್ಸ್ ಚಿಯರ್ಸ್, ಒರಿಜಿನಲ್ ಚಾಯ್ಸ್, ಮೈಸೂರು ಲ್ಯಾನ್ಸರ್ ಡಿಲಕ್ಸ್, ಬ್ಯಾಗ್‌ಪೈಪರ್ ಡಿಲಕ್ಸ್ ಮತ್ತು ಓಲ್ಡ್ ಗ್ರೇನ್‌ನಂತಹ ವಿವಿಧ ಬ್ರಾಂಡ್‌ಗಳು ಸೇರಿದಂತೆ ಒಟ್ಟು 30 ಮದ್ಯ ತುಂಬಿದ ಟೆಟ್ರಾ ಪ್ಯಾಕ್‌ಗಳಿದ್ದು, ಇದರ ಅಂದಾಜು ಮೌಲ್ಯ ರೂ. 1,700. ಇದರ ಜೊತೆಗೆ, ಮಾರಾಟದಿಂದ ಬಂದ ಹಣ ಎಂದು ನಂಬಲಾದ 280 ರೂ. ನಗದು ಮತ್ತು ಸಾಗಣೆಗೆ ಬಳಸಲಾಗಿದ್ದ ಸ್ಕೂಟರ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಗರುಡ ಗ್ಯಾಂಗ್‌ನ ಕುಖ್ಯಾತ ಆರೋಪಿಯನ್ನು ಗೂಂಡಾ ಕಾಯ್ದೆಯಡಿ ಬಂಧನಕ್ಕೆ ಆದೇಶ

    ಉಡುಪಿ: ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಉಡುಪಿ ಜಿಲ್ಲೆ, ಉಡುಪಿ ಇವರು ಕಾರ್ಕಳದ ಕಂಪನ ಕೌಡೂರು ಗ್ರಾಮದ ಕಬೀರ್ ಅಲಿಯಾಸ್ ಕಬೀರ್ ಹುಸೇನ್(46) ಎಂಬಾತನಿಗೆ ಗೂಂಡಾ ಕಾಯ್ದೆ ಅಡಿ ಬಂಧನ ಆದೇಶ ಹೊರಡಿಸಿರುತ್ತಾರೆ.  

    ಈತನನ್ನ ಬಂಧಿಸಿ ಮೈಸೂರು ಕೇಂದ್ರ ಕಾರಾಗೃಹಕ್ಕೆ ಬಿಡಲಾಗಿದೆ. ಈತನು 2005ನೇ ಇಸವಿಯಿಂದ ಇಲ್ಲಿಯ ತನಕ ಕೊಲೆ, ಕೊಲೆ ಯತ್ನ, ದರೋಡೆ, ಸುಲಿಗೆ, ಕಳ್ಳತನ, ಜಾನುವಾರು ಕಳವು, ಸರಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಮುಂತಾದ 17 ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ. ಇವುಗಳ ಪೈಕಿ ಈಗಾಗಲೇ ಎರಡು ಪ್ರಕರಣಗಳಲ್ಲಿ ಸಜೆ ಹೊಂದಿದ್ದು, 8 ಪ್ರಕರಣಗಳಲ್ಲಿ ಖುಲಾಸೆ ಹೊಂದಿರುತ್ತಾನೆ. ಮೂರು ಪ್ರಕರಣಗಳಲ್ಲಿ ರಾಜಿ ಮಾಡಿಕೊಂಡಿದ್ದು, ಎರಡು ಪ್ರಕರಣಗಳು ನ್ಯಾಯಾಲಯ ವಿಚಾರಣೆಯಲ್ಲಿ ಇರುತ್ತದೆ. ಉಳಿದ ಎರಡು ಪ್ರಕರಣಗಳು ಪೊಲೀಸ್ ತನಿಖೆಯಲ್ಲಿರುತ್ತದೆ. 

    ಈತನು ಉಡುಪಿ ಜಿಲ್ಲೆಯ ಕಾರ್ಕಳ ನಗರ, ಹಿರಿಯಡ್ಕ, ಪಡುಬಿದ್ರಿ, ಮಣಿಪಾಲ, ಶಿರ್ವ,  ಕಾಪು ಠಾಣೆಗಳ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ. 

    ಉಡುಪಿ ಜಿಲ್ಲೆಯಲ್ಲಿ ಮಾತ್ರವಲ್ಲದೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮತ್ತು ಕೊಪ್ಪ,  ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು, ಮಂಗಳೂರು ನಗರ ವ್ಯಾಪ್ತಿಯ ಸುರತ್ಕಲ್ ಠಾಣೆಯ ಪ್ರಕರಣಗಳಲ್ಲೂ ಭಾಗಿಯಾಗಿರುತ್ತಾನೆ. 

    ಈತನು ಗರುಡ ಗ್ಯಾಂಗನ ಸಕ್ರಿಯ ಸದಸ್ಯನಾಗಿರುತ್ತಾನೆ