ಉಡುಪಿ, ಜುಲೈ 6, 2025: ಉಡುಪಿ ನಗರಸಭೆಯ ಅನುದಾನದಲ್ಲಿ ನಿರ್ಮಾಣಗೊಂಡ ಗೋಪಾಲಪುರ ವಾರ್ಡಿನ ಸಂತೆಕಟ್ಟೆ ಒಣ ಮೀನು ಮಾರುಕಟ್ಟೆಯನ್ನು ಉಡುಪಿ ಶಾಸಕ ಶ್ರೀ ಯಶ್ ಪಾಲ್ ಸುವರ್ಣ ಉದ್ಘಾಟಿಸಿದರು.
ನೂತನ ಮಾರುಕಟ್ಟೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ಸಂತೆಕಟ್ಟೆಯ ಒಣ ಮೀನು ಮಾರಾಟಗಾರ ಮಹಿಳೆಯರ ಬಹು ವರ್ಷಗಳ ಬೇಡಿಕೆಯಂತೆ ಉಡುಪಿ ನಗರಸಭೆಯ ಮೂಲಕ ₹10 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಲಾಗಿದ್ದು, ವಿದ್ಯುತ್ ದೀಪ ಹಾಗೂ ಫ್ಯಾನ್ ಅಳವಡಿಕೆಗೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಉಡುಪಿ ನಗರಸಭಾ ವ್ಯಾಪ್ತಿಯ ಎಲ್ಲಾ ಮೀನು ಮಾರುಕಟ್ಟೆಗಳ ಅಭಿವೃದ್ಧಿಗೆ ವಿಶೇಷ ಮುತುವರ್ಜಿ ವಹಿಸುವುದಾಗಿ ಹೇಳಿದರು.
ಉಡುಪಿ ನಗರಸಭೆ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿ, ನಗರಸಭಾ ಸದಸ್ಯರಾದ ಶ್ರೀಮತಿ ಮಂಜುಳಾ ನಾಯಕ್, ಶ್ರೀ ಬಾಲಕೃಷ್ಣ ಶೆಟ್ಟಿ, ಶ್ರೀಮತಿ ಜಯಂತಿ ಪೂಜಾರಿ, ಹಸಿ ಮೀನು ಮಾರಾಟಗಾರರ ಸಂಘದ ಅಧ್ಯಕ್ಷರಾದ ಶ್ರೀಮತಿ ಬೇಬಿ ಸಾಲ್ಯಾನ್, ಕಲ್ಯಾಣಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ನಾಗರಾಜ ಕುಂದರ್, ಸಹಕಾರಿ ಸಂಘದ ನಿರ್ದೇಶಕರಾದ ಶ್ರೀ ಸುರೇಶ್ ಕುಂದರ್, ಶ್ರೀ ನಾರಾಯಣ, ಮುಖಂಡರಾದ ಶ್ರೀ ಪ್ರಶಾಂತ್ ಕಾಂಚನ್ ಬೆಂಗ್ರೆ, ಶ್ರೀ ಉಮೇಶ್ ಶೆಟ್ಟಿ, ಶ್ರೀ ಸತೀಶ್ ನಾಯ್ಕ್, ಶ್ರೀ ಚಿನ್ಮಯ ಮೂರ್ತಿ, ಶ್ರೀ ಪ್ರಸಾದ್ ರಾವ್, ಶ್ರೀ ಅಜಿತ್ ಕೊಡವೂರು, ಶ್ರೀ ಕೃಷ್ಣ ಶೆಟ್ಟಿ, ಶ್ರೀ ರುಡಾಲ್ಫ್ ಹಾಗೂ ಒಣ ಮೀನು ಮಾರಾಟಗಾರ ಮಹಿಳೆಯರು ಉಪಸ್ಥಿತರಿದ್ದರು.
ಉಡುಪಿ, ಜುಲೈ 6, 2025: ಉಡುಪಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಹಿಂದೂ ಜಾಗರಣ ವೇದಿಕೆಯ ಮುಖಂಡ, ರೌಡಿ ಶೀಟರ್ ಸತೀಶ್ ಪೂಜಾರಿ ದಾವಣಗೆರೆ ಎಂಬಾತನಿಗೆ ಜು.7ರಿಂದ ಸೆ.7 ರವರೆಗೆ 2 ತಿಂಗಳ ಕಾಲ ಉಡುಪಿ ಜಿಲ್ಲೆಯಾದ್ಯಂತ ಪ್ರವೇಶವನ್ನು ನಿರ್ಬಂಧಿಸಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶ ಹೊರಡಿಸಿದ್ದಾರೆ.
ಹಿಂದೂ ಜಾಗರಣ ವೇದಿಕೆ ಉಡುಪಿ ಜಿಲ್ಲೆ ವತಿಯಿಂದ ರಾಜ್ಯ ಸರಕಾರದ ವಿರುದ್ಧ ಜು.7ರಂದು ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಗೆ ರೌಡಿ ಶೀಟರ್ ಸತೀಶ್ ಪೂಜಾರಿಯನ್ನು ಪ್ರಮುಖ ಭಾಷಣಕಾರನಾಗಿ ಕರೆಸಿ ಸಮಾಜದ ಸ್ವಾಸ್ತ್ಯ ಕದಡುವ ಸಾಧ್ಯತೆ ಇರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.
ಅಲ್ಲದೆ ಕಾರ್ಕಳ, ಕುಂದಾಪುರ ತಾಲೂಕುಗಳಲ್ಲಿಯೂ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡು ಅಲ್ಲಿಯೂ ಸತೀಶ ಪೂಜಾರಿಯನ್ನು ಕರೆಸಿ ಕೋಮು ಪ್ರಚೋಚಕ ಭಾಷಣ ಮಾಡಿಸಿ ಗಲಾಬೆ ಎಬ್ಬಿಸುವ ಹುನ್ನಾರ ಮಾಡಿರುವುದು ತಿಳಿದು ಬಂದಿದೆ.
ಇವರ ಕೋಮು ಪ್ರಚೋದಕ ಭಾಷಣಗಳಿಂದ ಇನ್ನೊಂದು ಸಮುದಾಯದ ಜನರನ್ನು ಕೆರಳಿಸಿ ಶಾಂತಿ ಕದಡುವ ಸಾಧ್ಯತೆಗಳು ಇರುವುದರಿಂದ ಸತೀಶ್ ಪೂಜಾರಿಗೆ ಉಡುಪಿ ಜಿಲ್ಲೆಯಾದ್ಯಂತ ಪ್ರವೇಶವನ್ನು ನಿರ್ಬಂಧಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು.
ಉಡುಪಿ ಜಿಲ್ಲೆಯ ಪ್ರಸಕ್ತ ವಿದ್ಯಮಾನಗಳನ್ನು ಗಣನೆಗೆ ತೆಗೆದುಕೊಂಡು, ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತಾ ಕ್ರಮವನ್ನು ತೆಗೆದುಕೊಳ್ಳುವುದು ಅತೀ ಅವಶ್ಯಕವಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಎಡೆಮಾಡಿಕೊಡದಂತೆ ಸೂಕ್ತ ಮುಂಜಾಗೃತಾ ಕ್ರಮ ತೆಗೆದುಕೊಳ್ಳಲು ಎಸ್ಪಿಯ ವರದಿಯನ್ನು ಆಧರಿಸಿ ಮುಂಜಾಗೃತ ಕ್ರಮವಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ರ ಕಲಂ 163 ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಆದೇಶ ಹೊರಡಿಸಿದ್ದಾರೆ.
ಈತನ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 19 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಡುಪಿ, ಜುಲೈ 6, 2025: ರಾಷ್ಟ್ರೀಯ ಹೆದ್ದಾರಿ 169ಎ ಕೆಳಪರ್ಕಳ ಭಾಗದಲ್ಲಿ ರಸ್ತೆಯ ದುರಾವಸ್ಥೆಯನ್ನು ಖಂಡಿಸಿ ಪರ್ಕಳ ರಸ್ತೆ ಹೋರಾಟ ಸಮಿತಿಯ ವತಿಯಿಂದ ರವಿವಾರ ಪರ್ಕಳ ನಾರಾಯಣಗುರು ಮಂದಿರದ ತಿರುವಿನ ಬಳಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಮಾತನಾಡಿ, ಪರ್ಕಳ ಪ್ರದೇಶದ ರಸ್ತೆಗಳ ಹದಗೆಟ್ಟ ಸ್ಥಿತಿಯಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತಿದ್ದಾರೆ. ಸತತ ಮಳೆಯ ಕಾರಣ ದಿನದಿಂದ ದಿನಕ್ಕೆ ರಸ್ತೆ ಪರಿಸ್ಥಿತಿ ಹದಗೆಡುತ್ತಿದ್ದು, ಸಂಚಾರಕ್ಕೆ ಬಳಸಲು ಅಸಮರ್ಥವಾಗಿದೆ. ಆದುದರಿಂದ ಕೂಡಲೇ ಅದನ್ನು ಸಂಚಾರ ಯೋಗ್ಯವನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು.
ಜನಪ್ರತಿನಿಧಿಗಳು ಈ ರಸ್ತೆ ಕಾಮಗಾರಿ ಬಗ್ಗೆ ಸಾರ್ವಜನಿಕರಿಗೆ ಮೋಸ ಮಾಡುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ರಸ್ತೆ ಕಾಮಗಾರಿ ವಿವಾದ ಹೈಕೋರ್ಟ್‌ನಲ್ಲಿರುವ ಸಬೂಬು ನೀಡಲಾಗುತ್ತಿದೆ. ನಮಗೆ ಸಮಸ್ಯೆ ಇರುವುದು ಹೈಕೋರ್ಟ್‌ನಲ್ಲಿರುವ ರಸ್ತೆ ಅಲ್ಲ. ಹಳೆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರರು ಕಾಮಗಾರಿ ಮುಗಿಯುವವರೆಗೆ ನಿರ್ವಹಣೆ ಮಾಡಬೇಕಾಗುತ್ತದೆ. ಆದರೆ ಹಳೆ ರಸ್ತೆ ನಿರ್ವಹಣೆಯೇ ಇಲ್ಲ. ಇದರಿಂದ ಸಾರ್ವಜನಿಕರು ಅನಾನುಕೂಲವಾಗುತ್ತಿದೆ. ನಮ್ಮ ಕಣ್ಣಿಗೆ ಮಣ್ಣು ಎರಚುವ ಕೆಲಸವನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾಡುತ್ತಿದ್ದಾರೆ ಎಂದರು.
ಈ ಹೋರಾಟದಲ್ಲಿ ಯಾವುದೇ ರಾಜಕೀಯ ಇಲ್ಲ. ಈ ಪ್ರತಿಭಟನೆ ಯಾವುದೇ ಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧವೂ ಅಲ್ಲ. ನಮಗೆ ನ್ಯಾಯ ಬೇಕು. ಈಗ ಇರುವ ಹಳೆಯ ರಸ್ತೆಯನ್ನೇ ದುರಸ್ತಿ ಮಾಡಿ ವಾಹನ ಸಂಚಾರಕ್ಕೆ ಯೋಗ್ಯವನ್ನಾಗಿ ಮಾಡಬೇಕು. ಇದು ಮೊದಲ ಹಂತದ ಹೋರಾಟ. ರಸ್ತೆ ದುರಸ್ತಿಯಾಗದಿದ್ದರೆ ನಾಲ್ಕು ವಾರಗಳ ಬಳಿಕ ಮತ್ತೆ ತೀವ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಸಂಚಾಲಕ ಅಮೃತ್ ಶೆಣೈ, ಪ್ರಮುಖರಾದ ಜೈವಿಠಲ್, ಅನ್ಸಾರ್ ಅಹ್ಮದ್, ರಮೇಶ್ ಕಾಂಚನ್, ವೈದ್ಯೆ ಡಾ.ಸುಲತಾ ಭಂಡಾರಿ, ರೋಟರಿ ಕ್ಲಬ್‌ನ ಮಂಜುನಾಥ ಉಪಾಧ್ಯ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪರ್ಕಳ, ಮಂಜುನಾಥ್ ನಗರ ನಿವಾಸಿಗಳು ಉಪಸ್ಥಿತರಿದ್ದರು.
ಉಡುಪಿ, ಜುಲೈ 6, 2025: ಸಂಘಪರಿವಾರ ಹಾಗೂ ಬಿಜೆಪಿಗೆ ಕರಾವಳಿ ಜಿಲ್ಲೆಗಳು ಹಿಂದುತ್ವದ ಪ್ರಯೋಗಾಲಯಗಳಾಗಿವೆ. ಕೋಮು ಹಿಂಸೆಯನ್ನು ನಿರಂತರವಾಗಿ ಚಾಲನೆಯಲ್ಲಿ ಇಟ್ಟುಕೊಳ್ಳುವ ಇಂಡಸ್ಟ್ರೀ ಆಗಿದೆ. ಇದಕ್ಕೆ ಹಣ ಹೂಡಿಕೆ ಮಾಡುತ್ತಾರೆ ಮತ್ತು ಅದರ ಲಾಭದ ನಿರೀಕ್ಷೆಯಲ್ಲೂ ಇರುತ್ತಾರೆ ಎಂದು ಹಿರಿಯ ಚಿಂತಕ ಪ್ರೊ.ಫಣಿರಾಜ್ ಹೇಳಿದ್ದಾರೆ.
ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ, ಸಹಬಾಳ್ವೆ ಮತ್ತು ಮಾನವ ಬಂಧುತ್ವ ಉಡುಪಿ ವಲಯ ಹಾಗೂ ಸಮಾನ ಮನಸ್ಕ ಸಂಘಟನೆಗಳ ಆಶ್ರಯದಲ್ಲಿ ಇಂದು ನೀಲಾವರದಲ್ಲಿ ಹಮ್ಮಿಕೊಳ್ಳಲಾದ ಸಾಮರಸ್ಯ ನಡಿಗೆ -ಸೌಹಾರ್ದ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಸಮಾಜದಲ್ಲಿ ಉದ್ರೇಕ ಎಬ್ಬಿಸಿ ಕೋಮು ಹಿಂಸೆಯನ್ನು ಜ್ವಲಂತವಾಗಿರಿಸುವ ಪ್ರಯತ್ನ ನಡೆಯುತ್ತಿದೆ. ಇದು 2000ರಿಂದ ಉಡುಪಿ ಜಿಲ್ಲೆಯಲ್ಲಿ ಮುಂದುವರೆಯುತ್ತಿದೆ. ಇವರೇ ದಾಳಿ ಮಾಡಿ, ಇವರೇ ಬೀದಿಗೆ ಬಂದು ಪ್ರತಿಭಟನೆ ನಡೆಸುತ್ತಾರೆ ಎಂದ ಅವರು, ಕರಾವಳಿಯ ಹಿಂದುಳಿದ ಜಾತಿಯ ಯುವಕರನ್ನು ಸಂಘಪರಿವಾರ ಹಿಂಸೆಗೆ ಇಳಿಸುತ್ತದೆ ಮತ್ತು ಜೈಲುಪಾಲಾಗಿಸುತ್ತದೆ. ಮತ್ತೆ ಅವರಿಗೂ ಅವರ ಕುಟುಂಬಕ್ಕೂ ಹಣ ನೀಡುತ್ತದೆ. ಅವರ ಕೇಸ್ ನಡೆಸಲು ಕ್ರಿಮಿನಲ್ ವಕೀಲರನ್ನು ನಿಯೋಜಿಸಲಾಗುತ್ತದೆ. ಹೀಗೆ ಇದೊಂದು ಉದ್ಯಮವಾಗಿ ಬಿಟ್ಟಿದೆ ಎಂದರು.
ನಾವು ಇಂತಹ ಘಟನೆ ನಡೆದಾಗ ಕೇವಲ ಸೌಹಾರ್ದ ಮಾತನಾಡಿದರೆ ಸಾಕಾಗುವುದಿಲ್ಲ. ತಳ ಸಮುದಾಯದ ಯುವಕರು ಆ ಕಡೆ ಹೋಗದಂತೆ ತಡೆಯಬೇಕು. ಅವರೆಲ್ಲ ಜೀವನ ಹಾಗೂ ವಿದ್ಯೆ ಇಲ್ಲದ ಕಾರಣಕ್ಕೆ ಹರಣಕ್ಕಾಗಿ ಅತ್ತ ಹೋಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ಕೇರಿಗಳಿಗೆ ಭೇಟಿ ನೀಡಿ ಅವರ ಸ್ಥಿತಿ ಗತಿಗಳನ್ನು ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರ ಸಂಘ ಪರಿವಾರದ ಕೋಮು ಹಿಂಸೆಯ ಇಂಡಸ್ಟ್ರೀಯನ್ನು ತಡೆಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಸೌಹಾರ್ದ ಎಂಬುದು ಸಾಮಾಜಿಕ ರಾಜಕೀಯವಾಗಿದೆ. ಅದನ್ನು ಕಾಂಗ್ರೆಸ್ ಹಿಂದಿನಿಂದಲೂ ಮಾಡಿಕೊಂಡು ಬಂದಿದೆ. ಅದನ್ನು ಮರೆತರೆ ಆ ಸೌಹಾರ್ದವನ್ನು ಸಂಘಪರಿವಾರ ಸಾರ್ವಕರ್ ಹಾಗೂ ಗೊಲ್ವಕರ್ ರಾಜಕೀಯವನ್ನು ಬಳಸಿಕೊಂಡು ನಿಮ್ಮ ಕಣ್ಣೇದುರೇ ನಾಶ ಮಾಡುತ್ತದೆ. ಅದನ್ನು ಎದುರಿ ಸಲು ಸಿದ್ಧರಾಗಬೇಕು. ಸುಧಾರಣ ವಾದಿಯಿಂದ ಸಮಾಜವನ್ನು ತಲುಪುವ ಕಾರ್ಯ ಮಾಡಬೇಕೆ ಹೊರತು ಕೇವಲ ಭಾಷಣದಿಂದ ಅದನ್ನು ತಡೆಯಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಚಿಂತಕ ಎಂ.ಜಿ.ಹೆಗ್ಡೆ ಮಾತನಾಡಿ, ಶಾಲಾ ವಾರ್ಷಿಕೋತ್ಸವ, ಸಾಹಿತ್ಯ, ದೇವಸ್ಥಾನದ ಕಾರ್ಯಕ್ರಮಗಳಲ್ಲಿಯೂ ಧ್ವೇಷ ಭಾಷಣ ಮಾಡುವುದು ಸಾಮಾನ್ಯವಾಗಿದೆ ಮತ್ತು ಭಾಷಣದ ವ್ಯಾಖ್ಯಾನ ಕೂಡ ಆಗಿದೆ. ಧರ್ಮವನ್ನು ನಿಜವಾಗಿ ಅರ್ಥಮಾಡಿಕೊಂಡು ಪಾಲನೆ ಮಾಡುವವರಿಗೆ ಬೇರೆ ಧರ್ಮದವರನ್ನು ನೋಡಿದಾಗ ಅಸಹನೆ ಹುಟ್ಟಲು ಸಾಧ್ಯವೇ ಇಲ್ಲ ಎಂದು ಹೇಳಿದರು.
ಧರ್ಮದ ಅರ್ಥ ಗೊತ್ತಿಲ್ಲದ ಹಿಂದು ಚಳವಳಿಗಳು ಹುಟ್ಟಿರುವುದೇ ಇದಕ್ಕೆಲ್ಲ ಕಾರಣವಾಗಿದೆ.ಧರ್ಮಗಳಲ್ಲಿ ವೇದಾಂತ ಯಾರಿಗೂ ಬೇಡವಾಗಿದೆ. ಅದರಲ್ಲಿ ಅಸಮಾನತೆ, ಹಿಂಸೆ ಅಸ್ಪಸೃಶ್ಯ ಅಸಹನೆ ಯಾವುದು ಇಲ್ಲ. ಆದರೆ ನಾವು ಆ ವೇದಾಂತವನ್ನು ಬಿಟ್ಟು ಜಗಳ ಕಾರಣವಾಗುವ ಆಚರಣೆಗಳನ್ನೇ ಧರ್ಮ ಎಂಂದು ನಂಬಿಕೊಂಡಿದ್ದೇವೆ. ಆಚರಣೆಗಳು ಮತಗಳ ಒಂದು ಭಾಗವಾಗಿವೇ ಹೊರತು ಅದುವೇ ಧರ್ಮ ಅಲ್ಲ ಎಂದರು.
ಅಧ್ಯಕ್ಷತೆಯನ್ನು ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ವಹಿಸಿದ್ದರು. ವೇದಿಕೆಯಲ್ಲಿ ದಸಂಸ ಮುಖಂಡರಾದ ಶ್ಯಾಮ್‌ರಾಜ್ ಬಿರ್ತಿ, ಸುಂದರ್ ಮಾಸ್ತರ್, ಸ್ಟಿವನ್ ವಿಕ್ಟರ್ ಲೂವೀಸ್, ಧರ್ಮಗುರು ಮುಹಮ್ಮದ್ ರಶೀದ್ ಕಣ್ಣಂಗಾರ್, ಕಾಂಗ್ರೆಸ್ ಮುಖಂಡರಾದ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್, ಎಂ.ಎ.ಗಫೂರ್, ಅಶೋಕ್ ಕುಮಾರ್ ಕೊಡವೂರು, ಪ್ರಸಾದ್‌ರಾಜ್ ಕಾಂಚನ್, ರಾಘವೇಂದ್ರ ಶೆಟ್ಟಿ ಕರ್ಜೆ, ಜ್ಯೋತಿ ಹೆಬ್ಬಾರ್, ಶರ್ಫುದ್ದೀನ್ ಶೇಖ್ ಭಾಗವಹಿಸಿದ್ದರು.
ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ವಂದಿಸಿದರು. ಸತೀಶ್ ಕೊಡವೂರು ಕಾರ್ಯ ಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ಬ್ರಹ್ಮಾವಾರದ ಕುಂಜಾಲು ಕೇಳಪೇಟೆಯಿಂದ ನೀಲಾವರ ಕ್ರಾಸ್‌ವರೆಗೆ ಸಾಮರಸ್ಯ ನಡಿಗೆ ಜರಗಿತು.
‘ಅವಿಭಜಿತ ದ.ಕ. ಜಿಲ್ಲೆಯಲ್ಲಿ ಗೊಡ್ಡದ ಹಸುವನ್ನು ರೈತರು ಮಾರಾಟ ಮಾಡುತ್ತಾರೆ. ಅದು ಮಾಂಸಕ್ಕೆ ಹೋಗುತ್ತದೆ ಎಂಬುದು ಕೂಡ ಅವರಿಗೆ ತಿಳಿದು ಇರುತ್ತದೆ. ಆದರೆ ಇಂತಹ ವಿಚಾರಗಳನ್ನು ಇಟ್ಟು ಕೊಂಡು ಯಶ್‌ಪಾಲ್ ಸುವರ್ಣಗೆ ಬೆಂಕಿ ಹಚ್ಚಲು ಐದು ನಿಮಿಷ ಸಾಕಾಗುತ್ತದೆ, ಆದರೆ ಆ ಬೆಂಕಿಯನ್ನು ಆರಿಸಲು 10 ದಿನ ಬೇಕಾಗುತ್ತದೆ’ – ಪ್ರೊ.ಫಣಿರಾಜ್, ಹಿರಿಯ ಚಿಂತಕರು
Udupi, July 6, 2025: Udupi district has surpassed Meghalaya’s Cherrapunji and Karnataka’s Agumbe — both known for their heavy rainfall — by recording the highest rainfall in the country during June. According to the India Meteorological Department (IMD), this marks an all-time record for the district.
As per rainfall statistics for June, Udupi district topped the country with 1,140 mm of rain in just one month. With an annual average rainfall of 4,300 mm, this year is likely to set a new record for Udupi if the trend continues.
The coastal district has been witnessing intense and consistent rainfall for over a month and a half. IMD data confirms that this year has seen the highest rainfall in the district over the past two decades. As of June 27, Udupi emerged as the wettest district in the country.
Cherrapunji, long recognised as the wettest place in India, and Agumbe, often called the ‘Cherrapunji of the South’, were both outpaced by Udupi this year. For three consecutive days in June, Udupi recorded over 150 mm of rainfall daily — a rare and significant occurrence.
Udupi district consists of three taluks bordering the Western Ghats and five taluks along the coast, creating ideal conditions for heavy monsoon rains. Since May 15, pre-monsoon showers followed by cyclonic activity led to severe rainfall, which seamlessly transitioned into the full monsoon spell.
Rainfall comparison across regions in June:
Udupi (Karnataka): 1,140 mm
Dakshina Kannada (Karnataka): 980 mm
Kannur (Kerala): 902 mm
South West Khasi Hills (Meghalaya): 880 mm
Dadra and Nagar Haveli: 858 mm
Due to the persistent heavy rains, Udupi district was under red alert for over 15 days in the past six weeks. Orange and yellow alerts were also issued for several days. As a result, tourism activities in river and coastal regions were completely banned, and fishing operations were suspended for nearly a month.
The exceptional rainfall in Udupi has set a new benchmark in the country’s monsoon history and has drawn attention to the district’s changing weather patterns and the need for heightened preparedness.
ಉಡುಪಿ, ಜುಲೈ 6, 2025: ಕೊಲಾಲಗಿರಿಯ ಯುವತಿಯೊಬ್ಬರನ್ನು ಮದುವೆಯ ಆಮಿಷದೊಡ್ಡಿ ಅತ್ಯಾಚಾರ ಮಾಡಿದ ಆರೋಪದ ಮೇಲೆ ಉಡುಪಿ ಮಹಿಳಾ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿಯು ಬಳಿಕ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಲು ತಯಾರಿ ನಡೆಸಿದ್ದ ಎಂದು ತಿಳಿದುಬಂದಿದೆ.
ಆರೋಪಿಯನ್ನು ಕೊಲಾಲಗಿರಿ ಗ್ರಾಮದ ಲಕ್ಷ್ಮೀನಗರದ ನಾರ್ನದುಗುಡ್ಡೆಯ ನಿವಾಸಿ ಸಂಜಯ್ ಕಾರ್ಕೇರ (28) ಎಂದು ಗುರುತಿಸಲಾಗಿದೆ. ಅವನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಪ್ರಕರಣದ ವಿವರ: ಬಾಧಿತೆ ಸಲ್ಲಿಸಿದ ದೂರಿನ ಪ್ರಕಾರ, ಆರೋಪಿಯೊಂದಿಗೆ ಕಳೆದ ಎರಡು ವರ್ಷಗಳಿಂದ ಸಂಬಂಧದಲ್ಲಿದ್ದಳು. 2024ರ ಜುಲೈ 11ರಂದು ಆಕೆ ಆರೋಪಿಯೊಂದಿಗೆ ಕಲ್ಲಾಸೆಗೆ ಟ್ರಕ್ಕಿಂಗ್‌ಗೆ ತೆರಳಿದ್ದಳು. ಟ್ರಕ್ಕಿಂಗ್ ಬಳಿಕ ಆರೋಪಿಯು ಆಕೆಗೆ ಜ್ಯೂಸ್ ನೀಡಿದ್ದು, ಅದರಿಂದ ಆಕೆ ಅರ್ಧಪ್ರಜ್ಞೆಯ ಸ್ಥಿತಿಗೆ ತಲುಪಿದ್ದಳು. ಬಳಿಕ ಆರೋಪಿಯು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿಯು ಬಳಿಕ ಆಕೆಯನ್ನು ಶೃಂಗೇರಿಯ ದೇವಸ್ಥಾನಕ್ಕೆ ಕರೆದೊಯ್ದು, ಕುಂಕುಮ ಇಟ್ಟು ಹೂವಿನ ಹಾರವನ್ನು ಹಾಕಿ ಮದುವೆಯಾದಂತೆ ತೋರಿಸಿದ್ದಾನೆ. ತನ್ನ ಕುಟುಂಬವನ್ನು ಮನವೊಲಿಸಿ ಔಪಚಾರಿಕವಾಗಿ ಮದುವೆಯಾಗುವುದಾಗಿ ಭರವಸೆ ನೀಡಿದ್ದಾನೆ. ಆದರೆ, ಮದುವೆಯ ಆಮಿಷದೊಡ್ಡಿ ಆರೋಪಿಯು ಆಕೆಯ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮಹಿಳಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
ಉಡುಪಿ, ಜುಲೈ 6, 2025: ಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್‌ದಾರರಿಗೆ ಇ-ಕೆವೈಸಿ ಪೂರ್ಣಗೊಳಿಸಲು ಸರ್ಕಾರ ನಿಗದಿಪಡಿಸಿದ ಗಡುವು ಮುಕ್ತಾಯಗೊಂಡಿದೆ. ಇ-ಕೆವೈಸಿ ಮಾಡದವರಿಗೆ ರೇಷನ್ ಸರಬರಾಜು ನಿಲ್ಲಿಸುವುದಾಗಿ ಘೋಷಿಸಲಾಗಿತ್ತಾದರೂ, ಮುಂದಿನ ಆದೇಶದವರೆಗೆ ವಿತರಣೆ ಮುಂದುವರಿಯಲಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 17,778 ಫಲಾನುಭವಿಗಳು ಮತ್ತು ಉಡುಪಿಯಲ್ಲಿ 3,301 ಜನರು ಇ-ಕೆವೈಸಿ ಪೂರ್ಣಗೊಳಿಸಬೇಕಿದೆ. ದಕ್ಷಿಣ ಕನ್ನಡದಲ್ಲಿ 22,871 ಅಂತ್ಯೋದಯ ಮತ್ತು 2,58,910 ಬಿಪಿಎಲ್ ಕಾರ್ಡ್‌ದಾರರಿದ್ದಾರೆ. ಉಡುಪಿಯಲ್ಲಿ 1,98,265 ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ದಾರರಿದ್ದಾರೆ. ಜೊತೆಗೆ, 673 ಅನರ್ಹ ಕಾರ್ಡ್‌ಗಳನ್ನು ಗುರುತಿಸಲಾಗಿದೆ.
ಫಲಾನುಭವಿಗಳು ರೇಷನ್ ಅಂಗಡಿಗಳಲ್ಲಿ ಉಚಿತವಾಗಿ ಇ-ಕೆವೈಸಿ ಮಾಡಬಹುದು. ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳಲ್ಲೂ ಈ ಸೇವೆ ಲಭ್ಯವಿದೆ.
ಬಂಟ್ವಾಳ ತಾಲೂಕಿನಲ್ಲಿ 4,552 ಇ-ಕೆವೈಸಿ ನೋಂದಣಿ ಬಾಕಿಯಿದ್ದು, ಉಡುಪಿಯ ಬೈಂದೂರು ತಾಲೂಕಿನಲ್ಲಿ 2,242 ನೋಂದಣಿಗಳು ಬಾಕಿಯಿವೆ. ಸುಳ್ಯದಲ್ಲಿ 78 ಮತ್ತು ಕುಂದಾಪುರದಲ್ಲಿ 28 ನೋಂದಣಿಗಳು ಬಾಕಿಯಿವೆ. ಕೆಲವರು ಕೆಲಸ ಅಥವಾ ಇತರ ಕಾರಣಗಳಿಂದ ಜಿಲ್ಲೆ/ರಾಜ್ಯದಿಂದ ಹೊರಗಿರುವುದರಿಂದ ಇ-ಕೆವೈಸಿ ಮಾಡಿಲ್ಲ. ಸಮೀಪದ ರೇಷನ್ ಅಂಗಡಿಗಳಲ್ಲಿ ದಾಖಲೆ ಸಲ್ಲಿಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.
10,128 ಜನರು, ಒಳಗೊಂಡಂತೆ ಹಾಸಿಗೆಯಲ್ಲಿರುವ ರೋಗಿಗಳು ಮತ್ತು ಬಯೋಮೆಟ್ರಿಕ್ ಪರಿಶೀಲನೆಗೆ ಆಗದವರು, ವಿನಾಯಿತಿ ಕೋರಿದ್ದಾರೆ. ಇವರಿಗೆ ಇಲಾಖೆಯಿಂದ ವಿನಾಯಿತಿ ಪತ್ರಗಳನ್ನು ನೀಡಲಾಗಿದೆ. ಅವರು ಹಂತಹಂತವಾಗಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೇಷನ್ ಕಾರ್ಡ್‌ನಲ್ಲಿ ದಾಖಲಾದ ಎಲ್ಲಾ ಸದಸ್ಯರು ಇ-ಕೆವೈಸಿ ಮಾಡಿದಾಗ ಮಾತ್ರ ಪ್ರಕ್ರಿಯೆ ಪೂರ್ಣವೆನಿಸಲಿದೆ. ಕುಟುಂಬದ ಯಾವುದೇ ಸದಸ್ಯರು ಮರಣ ಹೊಂದಿದ್ದರೆ, ಅವರ ಹೆಸರನ್ನು ಕಾರ್ಡ್‌ನಿಂದ ಅಧಿಕೃತವಾಗಿ ತೆಗೆಯಬೇಕು.
ಗಡುವು ಮುಗಿದಿದ್ದರೂ, ವಿಸ್ತರಣೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆರೋಗ್ಯ ಕಾರಣಗಳಿಂದ ಬೆರಳಚ್ಚು ನೀಡಲಾಗದವರು ರೇಷನ್ ಅಂಗಡಿಗಳಲ್ಲಿ ಕಣ್ಣಿನ ಸ್ಕ್ಯಾನ್ ಮೂಲಕ ಇ-ಕೆವೈಸಿ ಪೂರ್ಣಗೊಳಿಸಬಹುದು. ದಕ್ಷಿಣ ಕನ್ನಡದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಈ ಸೇವೆ ಉಚಿತವಾಗಿದೆ ಎಂದು ಪುನರುಚ್ಚರಿಸಿದೆ.
ಉಡುಪಿ: ಕಿನ್ನಿಮುಲ್ಕಿಯ ಸಂದೇಶ್ (25) ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ಎಂ.ಎಸ್. ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ದಿನಾಂಕ 30/06/2025ರಂದು ಸಂಜೆ 6:05ಕ್ಕೆ ಅಪರಿಚಿತ ವ್ಯಕ್ತಿಯೊಬ್ಬ +3530120***** ಸಂಖ್ಯೆಯಿಂದ ಸಂದೇಶ್‌ಗೆ ಕರೆ ಮಾಡಿ, “ನಾನು ಭಾರತೀಯ ರಾಯಭಾರಿ ಕಚೇರಿಯಿಂದ ಮಾತನಾಡುತ್ತಿದ್ದೇನೆ. ನೀವು ಐರ್ಲೆಂಡ್‌ನಲ್ಲಿ ಸಲ್ಲಿಸಿದ IRP ಅರ್ಜಿಯಲ್ಲಿ ಜನ್ಮ ದಿನಾಂಕ ತಪ್ಪಾಗಿದೆ. ತಕ್ಷಣ ಸರಿಪಡಿಸದಿದ್ದರೆ, ನಿಮ್ಮ ಪಾಸ್‌ಪೋರ್ಟ್‌ನ್ನು YELLOW ಗ್ರೂಪ್‌ಗೆ ಸೇರಿಸಿ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದ್ದಾನೆ.
ಆರೋಪಿಯು ನೀಡಿದ rakeshcons.dublin@***.***.** ಇ-ಮೇಲ್‌ಗೆ ಸಂದೇಶ್ ತಮ್ಮ ಆಧಾರ್ ಕಾರ್ಡ್, ಜನ್ಮ ದಿನಾಂಕ ಪ್ರಮಾಣಪತ್ರ ಹಾಗೂ ಮತದಾರರ ಗುರುತಿನ ಚೀಟಿಯ ನಕಲುಗಳನ್ನು ಕಳುಹಿಸಿದ್ದಾರೆ. ಬಳಿಕ ಆರೋಪಿಯು, ಭದ್ರತೆಗಾಗಿ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಲು ತಿಳಿಸಿ, “ಜನ್ಮ ದಿನಾಂಕ ಪರಿಶೀಲನೆಯ ನಂತರ ಹಣ ಹಿಂದಿರುಗಿಸಲಾಗುವುದು” ಎಂದು ನಂಬಿಸಿದ್ದಾನೆ. ಇದನ್ನು ನಂಬಿದ ಸಂದೇಶ್ ತಮ್ಮ ಪೇಟಿಎಂ ಖಾತೆಯಿಂದ ಆಕ್ಸಿಸ್ ಬ್ಯಾಂಕ್ ಖಾತೆಗೆ 58,533.07 ರೂ. ವರ್ಗಾಯಿಸಿದ್ದಾರೆ.
ಪೇಟಿಎಂ ಖಾತೆಯ ವರ್ಗಾವಣೆ ಮಿತಿ ಮುಗಿದ ಕಾರಣ, ಸಂದೇಶ್ ತಮ್ಮ ತಂದೆ ಶ್ರೀಕಾಂತ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಶ್ರೀಕಾಂತ್ ಕಿನ್ನಿಮುಲ್ಕಿಯ ವೀರಭದ್ರೇಶ್ವರ ದೇವಾಸ್ಥಾನದ ಹಿಂಭಾಗದ ನಿವಾಸಿಯಾಗಿದ್ದು, ತಮ್ಮ ಪೇಟಿಎಂ ಮತ್ತು ಗೂಗಲ್ ಪೇ ಖಾತೆಗಳಿಂದ ಆರೋಪಿಯ ಖಾತೆಗಳಿಗೆ ಕ್ರಮವಾಗಿ 33,588.11 ರೂ. ಮತ್ತು 67,075.64 ರೂ. ಸೇರಿ ಒಟ್ಟು 1,00,663.75 ರೂ. ವರ್ಗಾಯಿಸಿದ್ದಾರೆ.
ಆನಂತರ ಆರೋಪಿಯು ಮತ್ತೆ ಹೆಚ್ಚಿನ ಹಣ ಕೇಳಿದಾಗ, ಸಂದೇಶ್‌ಗೆ ಮೋಸದ ಅನುಮಾನ ಬಂದಿದೆ. ಆರೋಪಿಯು ಆನ್‌ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ಮೋಸ ಮಾಡಿರುವುದು ದೃಢಪಟ್ಟಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 124/2025, ಕಲಂ 318(2) BNS, 66(D) IT ಆಕ್ಟ್‌ನಡಿ ಪ್ರಕರಣ ದಾಖಲಾಗಿದೆ.
ಉಡುಪಿ: ಮೊನ್ನೆ ಉಡುಪಿ ಜಿಲ್ಲೆಯ ಕುಂಜಾಲುವಿನಲ್ಲಿ ದನದ ರುಂಡ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನೈಜ ಆರೋಪಿಗಳನ್ನು ಬಂಧಿಸಿದ ಹೊರತಾಗಿಯೂ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮುಸ್ಲಿಮರ ವಿರುದ್ಧ ದ್ವೇಷವನ್ನು ಹರಡುವ ಹೇಳಿಕೆಯನ್ನು ನೀಡಿ ಗೊಂದಲವನ್ನು ನಿರ್ಮಿಸಿದ್ದರು.
ಇದರ ವಿರುದ್ಧ ಎಸ್ ಡಿ ಪಿ ಐ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿತ್ತು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ರಿಯಾಜ್ ಕಡಂಬು ಕುಂಜಾಲುವಿನ ಘಟನೆ ನಡೆದು ಪೊಲೀಸರು ತನಿಖೆ ಆರಂಭಿಸುವುದಕ್ಕಿಂತ ಮುಂಚೆ ಇಲ್ಲಿಯ ಶಾಸಕರು ಅದನ್ನು ಒಂದು ಸಮುದಾಯದವರ ತಲೆಗೆ ಕಟ್ಟುವ ರೀತಿಯ ಹೇಳಿಕೆಯನ್ನು ನೀಡಿದ್ದರು ಹಾಗೂ ನಂತರ ಪೊಲೀಸರು ನೈಜ ಆರೋಪಿಗಳನ್ನು ಬಂಧಿಸಿದ ಮೇಲೂ ಸಂಘ ಪರಿವಾರದ ನಾಯಕ ಇದನ್ನು ಮುಸ್ಲಿಮರ ತಲೆಗೆ ಕಟ್ಟಲು ಪ್ರಯತ್ನಿಸಿದರು.
ಈ ಎಲ್ಲ ಬೆಳವಣಿಗೆಯನ್ನು ಗಮನಿಸುವಾಗ ಇದರ ಹಿಂದೆ ಬಿಜೆಪಿ ಹಾಗೂ ಸಂಘ ಪರಿವಾರ ಇರುವ ಶಂಕೆ ಇದೆ ಆದ್ದರಿಂದ ಪೊಲೀಸರು ಕೂಲಂಕುಶ ತನಿಖೆ ನಡೆಸಬೇಕು ಎಂದಷ್ಟೇ ಹೇಳಿದ್ದರು, ಇಲ್ಲಿ ಅವರು ಯಾವುದೇ ಧರ್ಮದ ವಿರುದ್ಧ ಹೇಳಿಕೆಯನ್ನು ನೀಡಿಲ್ಲ. ಕೇವಲ ಸಂಘ ಪರಿವಾರ ಹಾಗೂ ಬಿಜೆಪಿಯ ವಿರುದ್ಧ ಮಾತನಾಡಿದ್ದಾರೆ ಎನ್ನುವ ಒಂದೇ ಕಾರಣಕ್ಕೆ ಸಂಘ ಪರಿವಾರದ ಒತ್ತಡಕ್ಕೆ ಮಣಿದು ಸರಕಾರ ರಿಯಾಜ್ ಕಡಂಬು ವಿರುದ್ಧ ಪ್ರಕರಣವನ್ನು ದಾಖಲಿಸಿದೆ ನಾವು ಇದರ ವಿರುದ್ಧ ಕಾನೂನು ಹೋರಾಟವನ್ನು ನಡೆಸಲಿದ್ದೇವೆ ಎಂದು ಎಸ್ ಡಿ ಪಿ ಐ ಉಡುಪಿ ಜಿಲ್ಲಾಧ್ಯಕ್ಷರಾದ ಆಸಿಫ್ ಕೋಟೇಶ್ವರ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿರೂರು, ಜುಲೈ 5, 2025: ಸಾರ್ವಜನಿಕರಿಗೆ ಮಾಹಿತಿ ನೀಡಬೇಕಾದ ಗ್ರಾಮಸಭೆಯಲ್ಲಿ ಕೆಲವು ಅಧಿಕಾರಿಗಳು ಗೈರು ಹಾಜರಾಗಿದ್ದು ಸಾರ್ವಜನಿಕರಿಗೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ಶಿರೂರು ಗ್ರಾಮಸಭೆಯಲ್ಲಿ ನಡೆದಿದೆ.
ಶಿರೂರು ಗ್ರಾಮಸಭೆ ಶನಿವಾರ 11 ಗಂಟೆಗೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಆಯೋಜಿಸಿದ್ದು 22 ಅಧಿಕಾರಿಗಳು ಹಾಜರಾಗಬೇಕಾದ ಸಭೆಯಲ್ಲಿ ಕೇವಲ 10 ಜನ ಅಧಿಕಾರಿಗಳು ಮಾತ್ರ ಹಾಜರಾಗಿದ್ದಾರೆ.ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಪದೇ ಪದೇ ಗ್ರಾಮಸಭೆ ಕಾಟಾಚಾರದ ಸಭೆಯಾಗುತ್ತಿದೆ.ಹೀಗಾಗಿ ಸಭೆಗೆ ಬಾರದ ಅಧಿಕಾರಿಗಳ ನಡೆಯನ್ನು ಗ್ರಾಮ ಪಂಚಾಯತ್ ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು ಮತ್ತು ಈ ಬಗ್ಗೆ ನಿರ್ಣಯ ಕೈಗೊಳ್ಳಲು ಒತ್ತಾಯಿಸಿದರು.ಇನ್ನುಳಿದಂತೆ ಗ್ರಾಮದ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.
ಶಿರೂರು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳೆ ಇಲ್ಲಾ; ಅತೀ ದೊಡ್ಡ ಗ್ರಾಮ ಪಂಚಾಯತ್ ವ್ಯಾಪ್ತಿ ಹೊಂದಿರುವ ಶಿರೂರಿನ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲಾ. ಪ್ರತಿದಿನ ಇಲ್ಲಿಗೆ ನೂರಾರು ರೋಗಿಗಳು ಚಿಕಿತ್ಸೆಗಾಗಿ ಬಂದರೆ ಶಿರೂರು ಸರಕಾರಿ ಆಸ್ಪತ್ರೆಯಲ್ಲಿ ಖಾಯಂ ವೈದ್ಯರಿಲ್ಲದಿರುವುದು ಸಾರ್ವಜನಿಕರಿಗೆ ಸಮಸ್ಯೆಯಾಗಿ ಕಾಡಿದೆ.ದಾನಿಗಳ ಸಹಕಾರವಿದ್ದರು ಕೂಡ ಇಲಾಖೆಯ ಬೇಜವಬ್ದಾರಿ ಸಲ್ಲದು ಎಂದು ಗ್ರಾ.ಪಂ ಸದಸ್ಯ ಪ್ರಸನ್ನ ಕುಮಾರ್ ಶೆಟ್ಟಿ ಹಾಗೂ ಸಾರ್ವಜನಿಕರು ಹೇಳಿದರು.
ನೀರ್‍ಗದ್ದೆ ಅಂಗನವಾಡಿ ಶೀಘ್ರ ನಿರ್ಮಾಣವಾಗಬೇಕು: ಶಿರೂರು ಗ್ರಾಮದ ನೀರ್‍ಗದ್ದೆ ಬಳಿ ಈ ಹಿಂದೆ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಸುತ್ತಿದ್ದು ಈಗ ಸರಕಾರದಿಂದ ಜಾಗ ಮಂಜೂರಾಗಿದೆ.ಆದರೆ ಇಲಾಖೆ ಇದುವರೆಗೆ ಅಂಗನವಾಡಿ ಕಟ್ಟಡ ನಿರ್ಮಾಣವಾಗಿಲ್ಲ.ಹೀಗಾಗಿ ಇಲಾಖೆ ಈ ಬಗ್ಗೆ ಶೀಘ್ರವಾಗಿ ಕಟ್ಟಡ ನಿರ್ಮಾಣವಾಗಬೇಕು ಎಂದು ಗ್ರಾ.ಪಂ ಸದಸ್ಯ ಉದಯ ಪೂಜಾರಿ ಮೈದಿನಪುರ ಆಗ್ರಹಿಸಿದರು.
ಮೆಸ್ಕಾಂ ಇಲಾಖೆ ಸ್ವಿಚ್ ಆಫ್: ಗ್ರಾ.ಪಂ ಸದಸ್ಯರಾದ ಮುಕ್ರಿ ಅಲ್ತಾಫ್,ಮಹ್ಮದ್ ಗೌಸ್,ಗಣಪತಿ ಗಾಣಿಗ,ಯಾಶೀನ್ ಕೆಸರಕೋಡಿ ಮುಂತಾದವರು ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸಣ್ಣ ಕಂಬ ಬಿದ್ದರು ಮೂರು ದಿನ ಪವರ್ ಕಟ್ ಮಾಡಲಾಗುತ್ತದೆ.ಪ್ರತಿದಿನ ಶಿರೂರು ಭಾಗದಲ್ಲಿ ವಿದ್ಯುತ್ ಕಣ್ಣುಮುಚ್ಚಾಲೆ ಸಹಜವಾಗಿ ಬಿಟ್ಟಿದೆ.ಮೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿದರೆ ಸ್ವಿಚ್ ಆಫ್ ಮಾಡಿಕೊಳ್ಳುತ್ತಾರೆ.ಹೀಗಾಗಿ ಮೆಸ್ಕಾಂ ವಿರುದ್ದ ಗ್ರಾಮಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಶಿರೂರು ಗ್ರಾ.ಪಂ ಅಧ್ಯಕ್ಷೆ ನಾಗರತ್ನ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷ ಕಾಪ್ಸಿ ನೂರ್‌ಮಹ್ಮದ್,ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ರಾಜೇಂದ್ರ ಶೆಟ್ಟಿ,ನೋಡೆಲ್ ಅಧಿಕಾರಿ ಗಾಯತ್ರಿದೇವಿ,ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು.