Category: Udupi District

  • ಪೆರಂಪಳ್ಳಿ ಚರ್ಚಿಗೆ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸೌಹಾರ್ದ ಭೇಟಿ

    ಮಣಿಪಾಲ, ಜುಲೈ 6, 2025: ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ಶನಿವಾರ ಪೆರಂಪಳ್ಳಿ ಫಾತಿಮಾ ಮಾತೆ ಚರ್ಚಿಗೆ ಸೌಹಾರ್ದ ಭೇಟಿ ನೀಡಿ ಚರ್ಚಿನ ಧರ್ಮಗುರುಗಳೊಂದಿಗೆ ಮಾಹಿತಿ ಪಡೆದರು.

    ಚರ್ಚಿನ ಇತಿಹಾಸ, ಕ್ರೈಸ್ತ ಸಮುದಾಯದ ವಿವರ ಹಾಗೂ ಚರ್ಚ್ ಕಟ್ಟಡದ ಐತಿಹಾಸಿಕ ವಿನ್ಯಾಸದ ಕುರಿತು ಮಾಹಿತಿ ಪಡೆದ ವರಿಷ್ಠಾಧಿಕಾರಿಗಳು ಕ್ರೈಸ್ತ ಸಮುದಾಯಕ್ಕೆ ಅಗತ್ಯವಿರುವ ಎಲ್ಲಾ ಕಾನೂನಾತ್ಮಕ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

    ಈ ವೇಳೆ ಚರ್ಚಿನ ಪ್ರಧಾನ ಧರ್ಮಗುರು ವಂ|ವಿಶಾಲ್ ಲೋಬೊ, ಮಣಿಪಾಲ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಉಪಸ್ಥಿತರಿದ್ದರು. 

  • ಉಡುಪಿ ಜಾಮಿಯ ಮಸೀದಿಗೆ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸೌಹಾರ್ದ ಭೇಟಿ

    ಉಡುಪಿ, ಜುಲೈ 5, 2025: ಉಡುಪಿ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ಶನಿವಾರ ಉಡುಪಿ ಜಾಮಿಯ ಮಸೀದಿಗೆ ಸೌಹಾರ್ದ ಭೇಟಿ ನೀಡಿ, ಉಡುಪಿ ಜಿಲ್ಲಾ ಮುಸ್ಲಿ ಒಕ್ಕೂಟದ ಮತ್ತು ಜಾಮಿಯಾ ಮಸೀದಿಯ ಪದಾಧಿಕಾರಿಗಳು ಮತ್ತು  ಮುಸ್ಲಿಂ ಸಮಾಜದ ಮುಖಂಡರ ಜೊತೆ ಮಾತುಕತೆ ನಡೆಸಿ ಜಿಲ್ಲೆಯಲ್ಲಿ ಸೌಹಾರ್ದ, ಸಾಮರಸ್ಯ ಕಾಪಾಡಲು ಮತ್ತು ಕಾನೂನಾತ್ಮಕವಾಗಿ ಎಲ್ಲಾ ರೀತಿಯ ಸಮಸ್ಯೆಗೆ ಸ್ಪಂದಿಸುವ ಬಗ್ಗೆ ತಿಳಿಸಿದರು.

    ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಮೊಹಮ್ಮದ್ ಮೌಲಾ,ಜಾಮಿಯ ಮಸೀದಿಯ ಅಧ್ಯಕ್ಷರಾದ ಮಹಮ್ಮದ್ ರಿಯಾಝ್,  ಮುಸ್ಲಿಂ ಸಮಾಜದ ಗಣ್ಯರಾದ, ಇಸ್ಮಾಯಿಲ್ ಕಟಪಾಡಿ, ಪೀರು ಸಾಹೇಬ್, ಶಾಹಿದ್ ಅಲಿ, ಖಾಲಿದ್, ಅಝೀಜ್ ಮುಂತಾದವರು ಉಪಸ್ಥಿತರಿದ್ದರು.

  • ಬ್ರಹ್ಮಾವರ:ಕುಂಜಾಲು ದನದ ರುಂಡ ಪತ್ತೆ ಪ್ರಕರಣ ಪೂರ್ವಯೋಜಿತವೇ ಎಂದು ತನಿಖೆಯಾಗಬೇಕು : SDPI

    ಬ್ರಹ್ಮಾವರ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಬ್ರಹ್ಮಾವರದ ಕುಂಜಾಲುವಿನಲ್ಲಿ ನಡೆದ ದನದ ರುಂಡ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಉಡುಪಿಯ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು.

    ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಎಸ್ ಡಿ ಪಿ ಐ ರಾಜ್ಯ ಕಾರ್ಯದರ್ಶಿ ರಿಯಾಜ್ ಕಡಂಬು ಮಾತನಾಡಿ ಕುಂಜಾಲು ಪ್ರಕರಣದ ಹಿಂದೆ ಬಿಜೆಪಿ ಹಾಗೂ ಸಂಘ ಪರಿವಾರ ಇರುವ ಶಂಕೆ ಇದೆ ಏಕೆಂದರೆ ಈ ಘಟನೆ ನಡೆದಂತಹ ಸಂದರ್ಭದಲ್ಲಿ ಪೊಲೀಸರು ತನಿಖೆ ನಡೆಸುವುದಕ್ಕಿಂತ ಮುಂಚೆಯೇ ಇದನ್ನು ಒಂದು ಸಮುದಾಯದವರೇ ಮಾಡಿರುವುದು ಎನ್ನುವಂತಹ ರೀತಿಯಲ್ಲಿ ಉಡುಪಿಯ ಶಾಸಕರು ಅಲ್ಲಿಗೆ ಹೋಗಿ ಹೇಳಿಕೆ ನೀಡಿ ಸೌಹಾರ್ದತೆಯನ್ನು ಕೆಡಿಸುವ ಪ್ರಯತ್ನವನ್ನು ಮಾಡಿದ್ದರು , ಇದಲ್ಲದೆ ಪೊಲೀಸರು ನೈಜ ಆರೋಪಿಗಳನ್ನು ಬಂಧಿಸಿದ ನಂತರವೂ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಉಡುಪಿಗೆ ಬಂದು ಇದರ ಹಿಂದೆ ಮುಸ್ಲಿಮರಿದ್ದಾರೆ ಎಂಬ ಹೇಳಿಕೆಯನ್ನು ನೀಡಿ ಮುಸ್ಲಿಂ ಸಮುದಾಯವನ್ನು ಎತ್ತಿ ಕಟ್ಟುವ ಪ್ರಯತ್ನವನ್ನು ಮಾಡಿದ್ದರು.
    ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಇಂತಹ ಘಟನೆಗಳನ್ನು ನಡೆಸುವ ಮೂಲಕ ಸೌಹಾರ್ದತೆಯನ್ನು ಕೆಡಿಸಿ
    ರಾಜಕೀಯ ಲಾಭವನ್ನು ಪಡೆಯುವ ಷಡ್ಯಂತರವೂ ಈ ಘಟನೆ ಹಿಂದೆ ಇರುವಂತೆ ಕಾಣುತ್ತಿದೆ. ಆದ್ದರಿಂದ ಪೊಲೀಸರು ಈ ಘಟನೆ ಪೂರ್ವ ನಿಯೋಜಿತವೇ ಎಂಬ ಬಗ್ಗೆ
    ಕೂಲಂಕುಶ ತನಿಖೆ ನಡೆಸಿ ಇದರ ಹಿಂದಿರುವ ಕಾಣದ ಕೈಗಳನ್ನು ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಎಸ್ ಡಿ ಪಿ ಐ ಉಡುಪಿ ಜಿಲ್ಲಾಧ್ಯಕ್ಷರಾದ ಆಸಿಫ್ ಕೋಟೇಶ್ವರ ಜಿಲ್ಲಾ ಉಪಾಧ್ಯಕ್ಷರಾದ ಹನೀಫ್ ಮುಳೂರು ಉಡುಪಿ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಶ್ರಫ್ ಭಾವ ಹಾಗೂ ಕ್ಷೇತ್ರ ಸಮಿತಿ ಉಪಾಧ್ಯಕ್ಷರಾದ ರಹೀಮ್ ಆದಿ ಉಡುಪಿ ಉಪಸ್ಥಿತರಿದ್ದರು

  • ಉಡುಪಿ: ವಿಹಿಂಪ ನಾಯಕ ಶರಣ್ ಪಂಪ್‌ವೆಲ್ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲು

    ಉಡುಪಿ, ಜುಲೈ 4, 2025: ಕುಂಜಾಲು ಗ್ರಾಮದಲ್ಲಿ ಇತ್ತೀಚೆಗೆ ವರದಿಯಾದ ಗೋವು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮುದಾಯಿಕ ಕಲಹವನ್ನು ಪ್ರಚೋದಿಸುವ ರೀತಿಯಲ್ಲಿ ಭಡಕವಾದ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ವಿಶ್ವ ಹಿಂದೂ ಪರಿಷತ್ (ವಿಹಿಂಪ) ನಾಯಕ ಶರಣ್ ಪಂಪ್‌ವೆಲ್ ವಿರುದ್ಧ ಉಡುಪಿ ಟೌನ್ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ.

    ದೂರಿನ ಪ್ರಕಾರ, ಆರೋಪಿ ಶರಣ್ ಪಂಪ್‌ವೆಲ್ ಅವರು ತನಿಖೆ ಪೂರ್ಣಗೊಳ್ಳುವ ಮೊದಲೇ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ, ಸಾಮುದಾಯಿಕ ಸೌಹಾರ್ದತೆಗೆ ಧಕ್ಕೆ ತರುವಂತಹ ಭಾವನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಅವರು ತಪ್ಪು ಮಾಹಿತಿಯನ್ನು ಹರಡಿದ್ದಾರೆ ಎಂದು ಆರೋಪಿಸಲಾಗಿದ್ದು, ಇದು ಸಾರ್ವಜನಿಕ ಶಾಂತಿಗೆ ಭಂಗ ತಂದು ಅಶಾಂತಿಯನ್ನು ಸೃಷ್ಟಿಸುವ ಸಾಧ್ಯತೆಯಿದೆ. ಅವರ ಹೇಳಿಕೆಗಳು ವಿವಿಧ ಧಾರ್ಮಿಕ ಸಮುದಾಯಗಳ ನಡುವೆ ವೈಮನಸ್ಸನ್ನು ಪ್ರಚೋದಿಸುವ ಉದ್ದೇಶದಿಂದ ಕೂಡಿದ್ದವು ಎಂದು ದೂರಿನಲ್ಲಿ ತಿಳಿಸಲಾಗಿದೆ.

    ತನಿಖೆಯ ಸೂಕ್ಷ್ಮ ಹಂತದಲ್ಲಿ ಇಂತಹ ಹೇಳಿಕೆಗಳು ಜವಾಬ್ದಾರಿಯಿಲ್ಲದವು ಮಾತ್ರವಲ್ಲ, ವಿವಿಧ ಸಮುದಾಯಗಳ ನಡುವೆ ಒಡಕು ಮೂಡಿಸುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಅಪಾಯಕಾರಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಈ ವಿಷಯದ ಬಗ್ಗೆ ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ.

    ಈ ಆರೋಪಗಳ ಆಧಾರದ ಮೇಲೆ, ಉಡುಪಿ ಟೌನ್ ಪೊಲೀಸರು ಶರಣ್ ಪಂಪ್‌ವೆಲ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 353(2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

  • ಉಡುಪಿ ಜಿಲ್ಲೆಯಾದ್ಯಂತ “ವಕ್ಫ್ ತಿದ್ದುಪಡಿ ಕಾಯಿದೆ” ವಿರೋಧಿಸಿ ಮಾನವ ಸರಪಳಿ

    ಉಡುಪಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ “ವಕ್ಫ್ ತಿದ್ದುಪಡಿ ಕಾಯಿದೆ” ವಿರೋಧಿಸಿ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ರಾಜ್ಯಾದ್ಯಂತ ಮಾನವ ಸರಪಳಿಗೆ ಕರೆ ನೀಡಿತ್ತು. ಆ ಹಿನ್ನೆಲೆಯಲ್ಲಿ ಇಂದು ಉಡುಪಿ ಜಿಲ್ಲೆಯಾದ್ಯಂತ ಶುಕ್ರವಾರ ಜುಮ್ಮಾ ನಮಾಝಿನ ನಂತರ ಮಸೀದಿಯ ಸಮೀಪ ಮುಸ್ಲಿಮರು ಮಾನವ ಸರಪಳಿ ಸಂಘಟಿಸಿದರು.

    ಮಾನವ ಸರಳಪಳಿಯಲ್ಲಿ ವಕ್ಫ್ ತಿದ್ದುಪಡಿ ಕಾಯಿದೆಯನ್ನು ವಿರೋಧಿಸಿ ಕರಪತ್ರ ಪ್ರದರ್ಶಿಸಿದರು. ಉಡುಪಿ ಜಿಲ್ಲೆಯಾದ್ಯಂತ ನಡೆದ ಮಾನವ ಸರಪಳಿಯ ಫೋಟೊಗಳು ಇಂತಿವೆ:

  • ಉಡುಪಿ ಮೂಲಕ 10 ದೇಶಗಳಿಗೆ ‘ಡ್ರಗ್ಸ್’ ಸರಬರಾಜು- ಬೃಹತ್ ಜಾಲ ಪತ್ತೆ, 8 ಮಂದಿಯ ಬಂಧನ

    ಉಡುಪಿ ಸೇರಿದಂತೆ ದೇಶದ ಹಲವು ನಗರಗಳ ಮೂಲಕ 10 ಕ್ಕೂ ಹೆಚ್ಚು ದೇಶಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಬೃಹತ್ ಮಾದಕ ವಸ್ತು ಜಾಲವನ್ನು ಮಾದಕ ವಸ್ತು ನಿಗ್ರಹ ದಳ ಬಯಲಿಗೆಳೆದಿದೆ.

    ಈ ಸಂಬಂಧ 10 ಮಂದಿಯನ್ನು ಬಂಧಿಸಿದ್ದು, ಬೃಹತ್ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಮಣಿಪಾಲದಲ್ಲಿ ಆರೋಪಿಗಳು ಕಾಲ್ ಸೆಂಟರ್ ಸ್ಥಾಪಿಸಿ ಡ್ರಗ್ಸ್ ವ್ಯವಹಾರ ನಡೆಸುತ್ತಿತ್ತು ಎನ್ನಲಾಗಿದೆ. ಉಡುಪಿ ಸೇರಿ ದೇಶದ 4 ಊರುಗಳ ಮೂಲಕ ಈ ಕಾರ್ಯಾಚರಣೆ ನಡೆಯುತ್ತಿತ್ತು. ದೆಹಲಿ, ಜೈಪುರ, ಉಡುಪಿ, ರೂರ್ಕಿಯಲ್ಲಿ ಸೇರಿ 8 ಮಂದಿಯನ್ನು ಬಂಧಿಸಲಾಗಿದೆ.

    ಈ ಡ್ರಗ್ಸ್ ಗ್ಯಾಂಗ್ ಉಡುಪಿಯಲ್ಲೇ ಕಾಲ್ ಸೆಂಟರ್ ಸ್ಥಾಪಿಸಿ ಆ ಮೂಲಕ ಡ್ರಗ್ಸ್ ವ್ಯವಹಾರದ ಕಾರ್ಯಾಚರಣೆ ನಡೆಸುತ್ತಿತ್ತು. ಕಾಲ್ ಸೆಂಟರ್ನಲ್ಲಿ 10 ಜನರನ್ನು ನೇಮಿಸಿಕೊಂಡು ಆರ್ಡರ್ ಪಡೆಯುವುದು ಸೇರಿ ವಿವಿಧ ವ್ಯವಹಾರಗಳನ್ನು ಗ್ಯಾಂಗ್ ನಡೆಸುತ್ತಿತ್ತು.

  • ‘ಸರ್ಕಾರಿ ಕೆಲಸ’ಕ್ಕಾಗಿ 30 ವರ್ಷದ ಹಿಂದೆ 200 ರೂ. ಪಡೆದು ವಂಚಿಸಿದ್ದ ವ್ಯಕ್ತಿ ಸೆರೆ

    ಬೈಂದೂರು: ಸರಕಾರಿ ಕೆಲಸ ಕೊಡಿಸುತ್ತೇನೆ ಎಂದು ಭರವಸೆ ನೀಡಿ 30 ವರ್ಷಗಳ ಹಿಂದೆ 200 ರೂ. ಪಡೆದು ಮೋಸ ಮಾಡಿದ್ದ ಆರೋಪಿ ಬೈಂದೂರಿನ ಮಯ್ಯಾಡಿಯ ಬಿ.ಕೆ. ರಾಮಚಂದ್ರ ರಾವ್‌ ಎಂಬಾತನನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಶಿರಸಿಯ ಬಿಳಿಗಿರಿ ಕೊಪ್ಪದ ವೆಂಕಟೇಶ ಅವರಿಗೆ ಪದವಿ ಓದುತ್ತಿರುವಾಗ ರಾಮಚಂದ್ರನ ಪರಿಚಯವಾಗಿತ್ತು. ಆತ ಸರಕಾರಿ ನೌಕರಿ ಕೊಡಿಸುವುದಾಗಿ 200 ರೂ. ಪಡೆದು ಕೆಲಸ ಕೊಡಿಸದೆ ವಂಚಿಸಿರುವ ಕುರಿತು ಪ್ರಕರಣ ದಾಖಲಾಗಿತ್ತು.

    ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ 30 ವರ್ಷದಿಂದ ತಲೆಮರೆಸಿಕೊಂಡಿದ್ದ. ಡಿಎಸ್ಪಿ ಗೀತಾ ಪಾಟೀಲ್‌ ಹಾಗೂ ಶಿರಸಿ ಗ್ರಾಮೀಣ ಠಾಣೆ ಪಿಐ ಮಂಜುನಾಥ್‌ ಎಂ., ಪಿಎಸ್‌ಐ ಸಂತೋಷ ಕುಮಾರ್‌ ಎಂ., ಅಶೋಕ್‌ ರಾಠೊಡ್‌ ಮಾರ್ಗದರ್ಶನದಂತೆ ಠಾಣೆಯ ರಾಘವೇಂದ್ರ ಜಿ. ಮತ್ತು ಮಾರುತಿ ಗೌಡ ಬೆಂಗಳೂರಿನ ಬಳೆಪೇಟೆಯಲ್ಲಿದ್ದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿ ಕರೆ ತಂದಿದ್ದಾರೆ.

  • ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಘಟನಾತ್ಮಕ ಸಭೆ: ಶ್ರೀಮತಿ ಅನಿತಾ ಆರ್. ಕೆ. ನೇತೃತ್ವ

    ಬೈಂದೂರು, ಜುಲೈ 1, 2025: ಬೈಂದೂರು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮಂಡಲ ಅಧ್ಯಕ್ಷರಾದ ಶ್ರೀಮತಿ ಅನಿತಾ ಆರ್. ಕೆ. ಅವರ ಉಪಸ್ಥಿತಿಯಲ್ಲಿ ಜಿಲ್ಲಾ ಮತ್ತು ಮಂಡಲ ಪದಾಧಿಕಾರಿಗಳು ಹಾಗೂ ವಿವಿಧ ಮೋರ್ಚಾಗಳ ಪದಾಧಿಕಾರಿಗಳೊಂದಿಗೆ ಪಕ್ಷದ ಸಂಘಟನಾತ್ಮಕ ವಿಚಾರಗಳ ಕುರಿತು ಪ್ರಮುಖ ಸಭೆ ನಡೆಯಿತು.

    ಸಭೆಯಲ್ಲಿ ಜಿಲ್ಲಾ ಮತ್ತು ಮಂಡಲ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು. ಬಿಜೆಪಿಯ ಸಂಘಟನಾತ್ಮಕ ಚಟುವಟಿಕೆಗಳನ್ನು ಬಲಪಡಿಸುವ ಉದ್ದೇಶದಿಂದ ಮಹತ್ವದ ಚರ್ಚೆಗಳು ನಡೆದವು.

  • Brotherhood Football Match to Kick Off on July 6

    Kundapura, July 1, 2025: An exhilarating football showdown is on the horizon as the Brotherhood Football Match, organized by SIO, is scheduled for Sunday, July 6, 2025, at 1:00 PM at Sahana Sports, Kundapura. This event is exclusively open to boys aged 15-18 from the Muslim communities of Shiroor, Mavinkatte, Kandlur, Brahmavara, Uppinkote, and Gangolli.

    The thrilling competition will see participants forming teams of 5+1 or joining squads organized by the event coordinators. Registration is open for students in 9th, 10th, 1st PUC, 2nd PUC, or those who recently completed 2nd PUC, with the last date to sign up set for July 4, 2025, before 4:00 PM.

    Interested players can register by visiting the link https://forms.gle/zn2WvCLAeUFZCGT7A or contacting +919916753525 for further details.

    Event Details:

    • Date: Sunday, July 6, 2025
    • Time: 1:00 PM
    • Place: Sahana Sports, Kundapura
    • Registration Deadline: July 4, 2025, before 4:00 PM
    • Contact: +919916753525

    Don’t miss this exciting display of talent and unity at Sahana Sports, Kundapura!

  • ಕುಂದಾಪುರ ಫ್ರೆಂಡ್ಸ್ ಸರ್ಕಲ್: ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣೆ, ಪ್ರತಿಭಾ ಪುರಸ್ಕಾರ

    ಕುಂದಾಪುರ, ಜುಲೈ 1, 2025: ಕರ್ನಾಟಕ ಸಂಘ ರತ್ನ ಹಾಗೂ ಭಾರತ ಸಂಘ ಸಿರಿ ಪ್ರಶಸ್ತಿ ಪುರಸ್ಕೃತ ಕುಂದಾಪುರ ಫ್ರೆಂಡ್ಸ್ ಸರ್ಕಲ್ ವತಿಯಿಂದ ಪುರಸಭಾ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ೩೫ನೇ ವರ್ಷದ ಪ್ರೋತ್ಸಾಹ ಧನ ವಿತರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಕುಂದಾಪುರದ ಬಿ.ಆರ್ ರಾಯರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನೆರವೇರಿತು.

    ಸಂಸ್ಥೆಯ ಅಧ್ಯಕ್ಷ ನಾಗರಾಜ್ ಖಾರ್ವಿ ಸಭಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕುಂದಾಪುರ ಪುರಸಭಾ ಸದಸ್ಯೆ ದೇವಕಿ ಪಿ ಸಣ್ಣಯ್ಯ, ಮಾಜಿ ಪುರಸಭಾ ಸದಸ್ಯ ಸತೀಶ್ ಶೆಟ್ಟಿಯವರು ಸಂಸ್ಥೆಯ ಕಾರ್ಯ ಶ್ಲಾಘಿಸಿದರು.

    ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉದ್ಯಮಿ ರವಿನಾಥ್ ಶೆಣೈ, ಬಿ ಆರ್ ರಾಯರ ಹಿಂದೂ ಶಾಲೆಯ ಮುಖ್ಯೋಪಾಧ್ಯಾಯ ನಿಂಗಪ್ಪ ಎಂ. ಸಂಸ್ಥೆಯ ಕಾರ್ಯದರ್ಶಿ ಗಣೇಶ್ ನಾಯ್ಕ್ ಉಪಸ್ಥಿತರಿದ್ದರು. ಸಂಸ್ಥೆಯ ಸದಸ್ಯರಾದ ಮಂಜುನಾಥ ಪೂಜಾರಿ, ಮನೋಹರ್ ಪುತ್ರನ್, ಗುರುಪ್ರಸಾದ್ ಖಾರ್ವಿ, ಧನಪಾಲ ಪುತ್ರನ್, ಶರತ್ ಎಸ್ ಖಾರ್ವಿ,ಗಣೇಶ ಆಚಾರ್, ಗಣಪತಿ ಖಾರ್ವಿ ಉದಯ ಮಾಣಿಮನೆ, ಸುರೇಶ್ ಪುತ್ರನ್, ಗಣೇಶ ಸಾಲಿಯಾನ್ ಹಾಗೂ ವಿದ್ಯಾರ್ಥಿಗಳು, ಪೋಷಕರು ಶಿಕ್ಷಕರು ಭಾಗವಹಿಸಿದ್ದರು.

    ಚೇತನ್ ದೇವಾಡಿಗ ಸ್ವಾಗತಿಸಿದರು, ಶೇಖರ್ ಜಿ ಖಾರ್ವಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.