Category: Udupi District

  • ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

    ನಮ್ಮ ನಾಡ ಒಕ್ಕೂಟ (ರಿ.) ಉಡುಪಿ ಜಿಲ್ಲೆ ಪತ್ರಿಕಾ ಪ್ರಕಟಣೆ

    2024 – 25ನೇ (ಈ ವರ್ಷ) ಸಾಲಿನ SSLC ಮತ್ತು 2nd PUC ಯಲ್ಲಿ 90% ಶೇಕಡಕ್ಕಿಂತ ಅಧಿಕ ಅಂಕ ಪಡೆದಿರುವ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 90%ಕ್ಕಿಂತ ಅಧಿಕ ಅಂಕ ಪಡೆದಿರುವ ವಿದ್ಯಾರ್ಥಿಗಳು ತಕ್ಷಣ ಈ ಕೆಳಗಿನ Google form ನಲ್ಲಿ ಅರ್ಜಿ ಸಲ್ಲಿಸಬೇಕಾಗಿ ವಿನಂತಿ. 

    ನಿಬಂಧನೆಗಳು:

    1. ವಿದ್ಯಾರ್ಥಿಗಳು ಅಲ್ಪಸಂಖ್ಯಾತರಾಗಿರಬೇಕು.
    2. ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿ 90% ಕ್ಕಿಂತ ಹೆಚ್ಚಿನ ಅಂಕ ಪಡೆದಿರಬೇಕು.
    3. ವಿದ್ಯಾರ್ಥಿಗಳು ಉಡುಪಿ ಜಿಲ್ಲೆಯವರಾಗಿರಬೇಕು.
    4. ವಿದ್ಯಾರ್ಥಿಗಳು ಈ ಕೆಳಗಿನ Google form ನಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯ: https://forms.gle/6EjXiAUWjmABw7sf8
    5. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10 ಮೇ 2025

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಝಮೀರ್ ಅಹ್ಮದ್ ರಶಾದಿ (ಸಂಚಾಲಕರು) 9880122968

    _______________💐_______________

    ಮುಷ್ತಾಕ್ ಅಹ್ಮದ್ ಬೆಳ್ವೆ

    ಜಿಲ್ಲಾಧ್ಯಕ್ಷರು 

    ಝಹೀರ್ ನಾಖುದಾ ಗಂಗೊಳ್ಳಿ

    ಪ್ರಧಾನ ಕಾರ್ಯದರ್ಶಿ 

    ನಕ್ವಾ ಯಾಹ್ಯ ಮಲ್ಪೆ

    ಕೋಶಾಧಿಕಾರಿ

  • ಕಾರ್ಕಳದಲ್ಲಿ ಮತ್ತೆರಡು ಕಲ್ಲು ತೂರಾಟ ಪ್ರಕರಣಗಳು ವರದಿ

    ಕಾರ್ಕಳ, ಮೇ 03: ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಬಳಿಕ ಕಾರ್ಕಳ ತಾಲೂಕಿನಲ್ಲಿ ಮತ್ತೆರಡು ಕಲ್ಲು ತೂರಾಟ ಪ್ರಕರಣಗಳು ವರದಿಯಾಗಿವೆ.

    ಮೊದಲ ಘಟನೆಯಲ್ಲಿ, ಇಬ್ಬರು ಮುಸುಕುಧಾರಿ ವ್ಯಕ್ತಿಗಳು ತಮಿಳುನಾಡು ನೋಂದಾಯಿತ ಮೀನುಗಾರಿಕಾ ಟ್ರಕ್‌ನ ಮುಂಭಾಗದ ಗಾಜಿಗೆ ಕಲ್ಲು ತೂರಿದ್ದಾರೆ. ಈ ಟ್ರಕ್ ಮಲ್ಪೆಯಿಂದ ಮೀನು ತುಂಬಿಸಿಕೊಂಡು ತಮಿಳುನಾಡಿಗೆ ತೆರಳುತ್ತಿತ್ತು. ಕೆಮರು ಪರ್ಪಲೆ ಬಳಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಸುಮಾರು 15,000 ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

    ಇನ್ನೊಂದು ಘಟನೆಯಲ್ಲಿ, ಕಾರ್ಕಳದಿಂದ ಬೆಳ್ಮಣ್‌ಗೆ ತೆರಳುತ್ತಿದ್ದ ಖಾಸಗಿ ಬಸ್ಸಿನ ಮುಂಭಾಗದ ಗಾಜಿಗೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕಲ್ಲು ತೂರಿ ಹಾನಿಗೊಳಿಸಿದ್ದಾರೆ. ಈ ಘಟನೆಯಲ್ಲಿ ಸುಮಾರು 45,000 ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ಬಡವರ ಮಕ್ಕಳ ಕೊಲೆಗಳನ್ನು ಬಲಿದಾನ ಎಂದು ಬಣ್ಣಿಸುವವರು ಸ್ವತಃ ಬಲಿದಾನ ನೀಡಲಿ.

    ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅಶ್ರಫ್ ಕೇರಳದಿಂದ ಮಂಗಳೂರಿಗೆ ಬಂದಿದ್ದ ಯುವಕ. ಮಂಗಳೂರಿನ ರೈಲು ಹಳಿಗಳ ಮೇಲೆ ಬಿದ್ದ ಚಿಂದಿ ಆಯುತ್ತಾ ಬದುಕು ಸಾಗಿಸುವ ಅಶ್ರಫ್‌ಗೆ ಮಂಗಳೂರಿನಲ್ಲಿ ಮನೆ ಇಲ್ಲ, ಸೂರಿಲ್ಲ. ರಾತ್ರಿ ಸಿಕ್ಕ ಜಾಗದಲ್ಲಿ ಮಲಗುತ್ತಾನೆ.

    ಅಶ್ರಫ್ ಕ್ರಿಕೆಟ್ ಮ್ಯಾಚ್ ನಡೆಯುತ್ತಿದ್ದ ಒಂದು ಜಾಗಕ್ಕೆ ಹೋಗುತ್ತಾನೆ. ಅಲ್ಲಿ ನೀರು ಕುಡಿಯುತ್ತಾನೆ. ಮೊದಲೇ ಮಾನಸಿಕ ಅಸ್ವಸ್ಥ. ಮೇಲಾಗಿ ಮುಸ್ಲಿಂ. ಇಷ್ಟಕ್ಕೇ ಆತನ ಮೇಲೆ ಮೂವತ್ತಕ್ಕೂ ಹೆಚ್ಚು ಯುವಕರು ಮುಗಿಬೀಳುತ್ತಾರೆ. ಆತನ ಇಡೀ ದೇಹಕ್ಕೆ ಮನಬಂದಂತೆ ಥಳಿಸಿ ಗುಂಪು ಹಲ್ಲೆ ಮಾಡಿ ಕೊಲೆ ಮಾಡುತ್ತಾರೆ.

    ಅಸಹಜ ಸಾವು ಎಂದು ದಾಖಲಾಗಿದ್ದ ಈ ಸಾವು ಮರಣೋತ್ತರ ಶವಪರೀಕ್ಷೆಯ ಬಳಿಕ ಗುಂಪುಹಲ್ಲೆಯಿಂದ ಆದ ಸಾವು ಎಂದು ಗೊತ್ತಾಗುತ್ತದೆ. ಅದಕ್ಕೆ ಬಿಜೆಪಿ ಮತ್ತು ಆರೆಸ್ಸೆಸ್ “ಆತ ಪಾಕಿಸ್ತಾನ ಝಿಂದಾಬಾದ್ ಎಂದು ಕೂಗಿದ. ಅದಕ್ಕಾಗಿ ಅವನ ಮೇಲೆ ಗುಂಪು ಹಲ್ಲೆ ಮಾಡಿದೆ” ಎಂದು ಕಥೆ ಕಟ್ಟಿತು. ಏಕೆಂದರೆ ಈ ಗುಂಪು ಹಲ್ಲೆಯಲ್ಲಿ ಪಾಲ್ಗೊಂದ ಬಹುತೇಕ ಯುವಕರು ಒಂದೋ ಇವರ ಕಾರ್ಯಕರ್ತರು ಅಥವಾ ಕನಿಷ್ಟ ಪಕ್ಷ ಇವರ ದ್ವೇಷದ ವಿಷ ಕಾರುವ ಸಂಘಿ ಐಡಿಯಾಲಜಿಯಿಂದ ಪ್ರೇರಿತರಾದವರು.

    ಪಾಕಿಸ್ತಾನ ಝಿಂದಾಬಾದ್ ಎಂದು ಅಶ್ರಫ್ ಕೂಗಿದ ಅಂದು ಕೊಳ್ಳೋಣ. ಹಾಗೆ ಘೋಷಣೆ ಕೂಗಿದರೆ ತಪ್ಪು. ಹಾಗಂತ ಅಷ್ಟಕ್ಕೆ ಒಬ್ಬ ಮಾನಸಿಕ ಅಸ್ವಸ್ಥನನ್ನು ಕೊಲೆ ಮಾಡಿಬಿಡುವುದೆ? ಮತ್ತು ಕಾನೂನಿನಲ್ಲಿ ನಂಬಿಕೆ ಎಂದು ಬಾಯಿಮಾತಿಗಾದರೂ ಹೇಳುವ ಬಿಜೆಪಿ ನಾಯಕರು ಈ ಕೊಲೆಯನ್ನು ಒಂದು ಶಬ್ದದಲ್ಲಿಯೂ ಖಂಡಿಸದೆ ಈ ಕಗ್ಗೊಲೆಯನ್ನು ಸಮರ್ಥಿಸಿಬಿಡುವುದೆ?

    ಅದಾದ ಬಳಿಕ ಕೆಲವೇ ದಿನಗಳಲ್ಲಿ ಅಂದರೆ ನಿನ್ನೆ ಸುಹಾಸ್ ಶೆಟ್ಟಿ ಎಂಬಾತನ ಕೊಲೆಯಾಗುತ್ತದೆ. ಈತ ರೌಡಿ ಶೀಟರ್. ಎರಡೆರಡು ಕೊಲೆಗಳಲ್ಲಿ ಆರೋಪಿ. ಒಂದು ಆರೋಪ ಅಮಾಯಕ ಮುಸ್ಲಿಂ ಯುವಕ ಫಾಝಿಲ್ ಹತ್ಯೆ ಮಾಡಿದ್ದು. ಇನ್ನೊಂದು ಆರೋಪ ಹಿಂದೂ ಯುವಕ ಕೀರ್ತಿ ಕೊಲೆಯಲ್ಲಿ ಭಾಗಿಯಾಗಿದ್ದು. ಅದಲ್ಲದೆ ಆತನ ವಿರುದ್ಧ ಹಲವು ಪ್ರಕರಣಗಳಿವೆ. ಬಿಜೆಪಿ ಮತ್ತು ಸಂಘಪರಿವಾರದ ಪ್ರಕಾರ ಇಷ್ಟು ನಟೋರಿಯಸ್ ಹಿನ್ನೆಲೆಯ ಸುಹಾಸ್ ಶೆಟ್ಟಿ ಅವರ ಹಿಂದೂ ಕಾರ್ಯಕರ್ತ! ಹಿಂದೂ ಹೋರಾಟಗಾರ!
    ಬಿಜೆಪಿಯವರ ಪ್ರಕಾರ ಅಶ್ರಫ್ ಕಗ್ಗೊಲೆಯಾಗುವ ತನಕ ಸರಿಯಾಗಿದ್ದ ಮಂಗಳೂರಿನ ಶಾಂತಿ ಸುವ್ಯವಸ್ಥೆ ಸುಹಾಸ್ ಶೆಟ್ಟಿ ಕೊಲೆಯಾದ ಕೂಡಲೇ ಹಾಳಾಗುತ್ತದೆ. ಅಶ್ರಫ್ ಕೊಲೆಯಾದಾಗ ದೇಶಭಕ್ತರ ನಾಡಾಗಿ ಕಂಡಿದ್ದ ಮಂಗಳೂರು ಸುಹಾಸ್ ಕೊಲೆಯಾದ ಕೂಡಲೇ ಪಾಪಿ ಪಾಕಿಸ್ತಾನದಂತೆ ಕಾಣಿಸುತ್ತದೆ.

    ಸುಹಾಸ್ ಕೊಲೆ ಖಂಡನೀಯ. ಆದರೆ ಆ ಕೊಲೆಯನ್ನು ಬಳಸಿಕೊಂಡು ಹೆಣದ ಮೇಲೆ ರಾಜಕೀಯ ಮಾಡುತ್ತಾ, ಬಾಯಿಗೆ ಬಂದಂತೆ ಕೋಮುದ್ವೇಷ ಪ್ರಚೋದಿಸುವ ಹೇಳಿಕೆಗಳನ್ನು ಪದೇಪದೆ ನೀಡುತ್ತಾ ಹಿಂದೂ ಯುವಕರನ್ನು ಕೆಣಕುತ್ತಿರುವುದು ಇದೇ ಬಿಜೆಪಿ ಮತ್ತು ಇವರ ಸಂಘಟನೆಗಳ ನಾಯಕರು ತಾನೆ? ಶಾಂತಿ ಸುವ್ಯವಸ್ಥೆ ಕಾಪಡಲು ಸಹಕರಿಸುವ ಜವಾಬ್ದಾರಿ ಬಿಜೆಪಿಗೆ, ಆರೆಸ್ಸೆಸ್‌ಗೆ ಇಲ್ಲವೆ?

    ನಿನ್ನೆ ಸುಹಾಸ್ ಕೊಲೆ ನಡೆದ ಸಮಯದಿಂದ ಈ ಪೋಸ್ಟ್ ಬರೆಯುವ ಹೊತ್ತಿನ ವರೆಗೆ ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿ, ಮಂಗಳೂರಿನ ಮೂರು ಬೇರೆಬೇರೆ ಪ್ರದೇಶಗಳಲ್ಲಿ ಈ ಯಾವುದೇ ಘಟನೆಗಳಿಗೆ ಸಂಬಂಧವೇ ಇಲ್ಲದ ನಾಲ್ವರು ಅಮಾಯಕ ಮುಸ್ಲಿಮ್ ಯುವಕರ ಮೇಲೆ ಹಲ್ಲೆಯಾಗಿದೆ. ಮಂಗಳೂರಲ್ಲಿ ಇಷ್ಟೆಲ್ಲ ಹಿಂಸೆ ನಡೆಯುತ್ತಿದ್ದರೂ ತಮ್ಮ ಕಾರ್ಯಕರ್ತರನ್ನು ತಡೆಯುವುದು ಬಿಟ್ಟು ಇನ್ನಷ್ಟು ಹಿಂಸೆಗೆ ಪ್ರಚೋದನೆ ನೀಡುತ್ತಿರುವುದು ಇದೇ ಕಲ್ಲಡ್ಕ ಗ್ಯಾಂಗ್ ಅಲ್ಲವೆ? ಮಂಗಳೂರಿನಲ್ಲಿ ಇಂದು ಹಿಂದೂ ಪ್ರಯಾಣಿಕರೇ ಹೆಚ್ಚಿದ್ದ ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಮೇಲೆ ನಿಮ್ಮದೇ ಕಾರ್ಯಕರ್ತರು ಕಲ್ಲು ತೂರಿದರಲ್ಲ ಅದಕ್ಕೆ ಯಾರು ಹೊಣೆ.

    ಯಾವುದಾದರೂ ಪ್ರಯಾಣಿಕರಿಗೆ ಅದರಲ್ಲೂ ಹಿಂದೂಗಳಿಗೆ ಗಂಭೀರ ಗಾಯಗಳಾಗುತ್ತಿದ್ದರೆ ಯಾರು ಹೊಣೆ?
    ಹಿಂದೂತ್ವಕ್ಕಾಗಿ, ಹಿಂದೂ ಧರ್ಮಕ್ಕಾಗಿ ಇನ್ನೊಬ್ಬ ಯುವಕನ ಬಲಿದಾನವಾಗಿದೆ ಎಂದು ಹೇಳಿಕೆ ನೀಡುವ ಕಲ್ಲಡ್ಕ ಪ್ರಭಾಕರ ಭಟ್ಟರೆ, ನಿಮ್ಮ ಹಿಂದೂ ಧರ್ಮಕ್ಕೆ ಕರಾವಳಿಯ ಇನ್ನೂ ಎಷ್ಟು ಬಡ ಹಿಂದೂ ಮನೆಗಳ ಮಕ್ಕಳ ಹೆಣಗಳು ನಿಮಗೆ ಬೇಕು?

    ಅಶ್ರಫ್ ಕೊಲೆಯೂ ಖಂಡನೀಯ. ಸುಹಾಸ್ ಕೊಲೆಯೂ ತಪ್ಪು. ಇದು ನನ್ನ ನಿಲುವು. ನಮ್ಮಂಥವರು ಎರಡೂ ಕುಟುಂಬಗಳಿಗಾಗಿ ಮಿಡಿಯುತ್ತೇವೆ. ಆದರೆ ಬಿಜೆಪಿ ಮತ್ತು ಸಂಘಕ್ಕೆ ಸುಹಾಸ್ ಕೊಲೆ ಮಾತ್ರ ತಪ್ಪು, ಅಶ್ರಫ್ ಕೊಲೆ ಸರಿ!

    ಪೊಲೀಸರಿರಲಿ, ಕಾನೂನು ವ್ಯವಸ್ಥೆ ಇರಲಿ, ಸರ್ಕಾರವಿರಲಿ ಸುಹಾಸ್ ಮತ್ತು ಅಶ್ರಫ್ ಕೊಲೆ ಮಾಡಿದ ಕೊಲೆಗಡುಕರನ್ನು ಪತ್ತೆ ಮಾಡಬಹುದು, ಶಿಕ್ಷೆ ನೀಡಬಹುದು. ಅದಕಿಂತ ಹೆಚ್ಚಿನದನ್ನು ಅವು ಈ ವ್ಯವಸ್ಥೆಗಳು ಮಾಡಲಾರವು. ಕರಾವಳಿಯ ಸಜ್ಜನರು, ಅದು ಯಾವುದೇ ಮತಧರ್ಮದವರಿರಲಿ, ಮಾಡಬೇಕಾದ ಮೊದಲ ಕೆಲಸವೆಂದರೆ ನಮ್ಮ ಮಕ್ಕಳನ್ನು ಈ ಮತಾಂಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳಿಂದ ದೂರವಿಟ್ಟು ಕಾಪಾಡುವುದು. ಈ hatemongerಗಳ ದ್ವೇಷದ, ಹಿಂಸೆಯ ಮಾತು ಮತ್ತು ಪ್ರಚೋದನೆಗಳನ್ನು ಧಿಕ್ಕರಿಸಿ ಮನಸ್ಸಿನ ಸ್ವಾಸ್ಥ್ಯವನ್ನು ಕಾಪಿಟ್ಟುಕೊಂಡು ಶಾಂತಿ, ಸಹಬಾಳ್ವೆಯ ಬದುಕು ಬಾಳುವುದು.

    ಈ ಮತಾಂಢ, ಕೋಮುವಾದಿ, hatemonger ಪಾರ್ಟಿಗಳಿಗೆ, ನಾಯಕರಿಗೆ, ಸಂಘಟನೆಗಳಿಗೆ ಅವರ ರಾಜಕೀಯ ಲಾಭಕ್ಕಾಗಿ ಅವರವರ ಧರ್ಮಗಳ ಯುವಕರದ್ದೇ ಬಲಿದಾನಗಳು ಬೇಕಾದರೆ ಅಂತಹ ಬಲಿದಾನಕ್ಕೆ ಕರೆಕೊಡುತ್ತಿರುವವರು, ಅದಕ್ಕೆ ಪ್ರಚೋದಿಸುವವರು ಮೊದಲು ತಮ್ಮದೇ ಪ್ರಾಣಗಳನ್ನು ಧರ್ಮ ಉಳಿಸುವ ಆ ಮಾಹಾಕಾರ್ಯಕ್ಕಾಗಿ ಬಲಿಕೊಡಲಿ. ಆಗಲಾದರೂ ನಾವು ನೆಮ್ಮದಿಯಿಂದ ಬದುಕಬಹುದೋ, ಟ್ರೈ ಮಾಡೋಣ..

    ಲೇಖಕ: ಶಶಿಧರ ಹೆಮ್ಮಾಡಿ

    ಶಶಿಧರ್ ಹೆಮ್ಮಾಡಿ ಅವರು ಕರಾವಳಿ ಕರ್ನಾಟಕ ಪತ್ರಿಕೆಯ ಮುಖ್ಯ ಸಂಪಾದಕರಾಗಿದ್ದಾರೆ. ಅವರು ಕರಾವಳಿಯ ಸಾಮಾಜಿಕ-ರಾಜಕೀಯ ಸ್ಥಿತಿಗತಿಯ ಬಗ್ಗೆ ಗಹನ ತಿಳುವಳಿಕೆಯನ್ನು ಹೊಂದಿರುವ ಅನುಭವೀ ಪತ್ರಕರ್ತರು. ಅಭಿಪ್ರಾಯಗಳು ವೈಯಕ್ತಿಕವಾಗಿವೆ. ಅನುಮತಿಯಿಂದ ಪ್ರಕಟಿಸಲಾಗಿದೆ.

  • NSS Unit of Milagres College Kallianpur organizes Blood Donation Camp

    Udupi: Milagres College Kallianpur, National Service Scheme (NSS) successfully organized a blood donation camp on April 29, 2025. The event commenced with an inaugural program held at the Audio Visual Hall, where esteemed guests and faculty members gathered to emphasize the importance of blood donation.

    Dr. Deepika, Associate Professor, Department of IHBT, KMC Manipal, delivered the inaugural address, enlightening the audience about the eligibility criteria for donors, health benefits, and common blood-related issues. Mr. Sathish Salian, President of Abhayahasta Charitable Trust, Udupi, graced the occasion as the chief guest, acknowledging the organizers’ efforts and the significance of the blood donation camp.

    Dr. Jayaram Shettigar, Staff Secretary and Head of the Department of History, highlighted the importance of blood donation, citing inspiring examples to motivate the students. Mrs. Sophia Dias, Vice Principal, delivered a presidential remark, encouraging students to participate in this life-saving initiative.

    The program was attended by notable faculty members, including Mrs. Shylet Mathias, IQAC Coordinator, Mrs. Clara Menezes, Convenor of Youth Red Cross, Mr. Ganesh Nayak, and Mrs. Shubalatha, NSS Programme Officers, along with other teaching and administrative staff.

    First-year B.Com students actively participated in the program, with Ms. Amrutha, delivered a warm welcome address and Ms. Thanisha, proposed vote of thanks. Mr. Asthik, also a first-year B.Com student, hosted the program with confidence and poise.

    The blood donation camp was a resounding success, with a total of 49 units of blood collected. The NSS team deserves commendation for their meticulous planning and execution, making this event a testament to the college’s commitment to social responsibility and community service.

  • ತೋನ್ಸೆ: ಸಾಲಿಹಾತ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.100 ಫಲಿತಾಂಶ

    ತೋನ್ಸೆ: ಹೂಡೆಯ ಸಾಲಿಹಾತ್ ಆಂಗ್ಲ ಮಾಧ್ಯಮ ಪ್ರೌಢಶಾಲೆ 2024-25ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಪಬ್ಲಿಕ್ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 74 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರಲ್ಲಿ 22 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 36 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು 16 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

    ತೂಬಾ ಫಿರ್ದೋಸ್ (610/625) ಶಾಲೆಗೆ ಪ್ರಥಮ, ಶೈಮಾ ನಾಝ್ ಐ. (606/625) ದ್ವಿತೀಯ ಮತ್ತು ರಿದಾ (605/625) ತೃತೀಯ ಸ್ಥಾನ ಪಡೆದಿದ್ದಾರೆ.

  • ಕುಂದಾಪುರ ವಿ.ಕೆ.ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆ: ಎಸ್ಎಸ್ಎಲ್‌ಸಿ ಶೇ. 99.05 ಫಲಿತಾಂಶ  

    ಅಪ್ಡೇಟ್:

    • ಕುಂದಾಪುರ ಎಜುಕೇಶನ್‌ ಸೊಸೈಟಿ ಪ್ರವರ್ತಿತ ಎಚ್‌.ಎಮ್‌.ಎಮ್‌. ಮತ್ತು ವಿ. ಕೆ. ಆರ್‌. ಶಾಲೆಯ ಎಸೆಸೆಲ್ಸಿ ಪರೀಕ್ಷೆ-1ರ ಮರುಮೌಲ್ಯಮಾಪನದಲ್ಲಿ ಸಾಯಿಸ್ಪರ್ಶ ಕೆ. 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ರ್‍ಯಾಂಕ್‌ ಗಳಿಸಿದ್ದಾರೆ.
    • ಈಕೆಗೆ 623 ಅಂಕಗಳು ಬಂದಿದ್ದವು. ಬಿ. ವಿ. ಜಯಸೂರ್ಯ 623 ಅಂಕಗಳೊಂದಿಗೆ 3ನೇ, ಭಕ್ತಿ ಶೆಟ್ಟಿ ಹಾಗೂ ಪ್ರಿಯಾ 622 ಅಂಕಗಳೊಂದಿಗೆ 4 ನೇ, ವಿನ್ಯಾಸ ಅಡಿಗ ಹಾಗೂ ನಿರೀಕ್ಷಾ ಎನ್‌. ಶೆಟ್ಟಿಗಾರ್‌ 621 ಅಂಕಗಳೊಂದಿಗೆ ಐದನೇ, ಸನ್ವಿತ್‌ ಶೆಟ್ಟಿ 620 ಅಂಕಗಳೊಂದಿಗೆ 6ನೇ , ಸಮನ್ವಿ ಎಸ್‌. 618 ಅಂಕಗಳೊಂದಿಗೆ 8 ನೇ, ಮತ್ತು ಅನ್ವಿತ್‌ ಕೆ. 616 ಅಂಕಗಳೊಂದಿಗೆ 10 ನೇ ರ್‍ಯಾಂಕ್‌ ಗಳಿಸಿದ್ದಾರೆ.
    • ಶಾಲೆಗೆ ಒಟ್ಟು ರಾಜ್ಯಮಟ್ಟದ 9 ರ್‍ಯಾಂಕ್‌ಗಳು ಲಭಿಸಿವೆ ಎಂದು ಶಾಲಾ ಅಧ್ಯಕ್ಷ ಹಾಗೂ ಸಂಚಾಲಕ ಬಿ. ಎಂ. ಸುಕುಮಾರ ಶೆಟ್ಟಿ ಮತ್ತು ಕಾರ್ಯದರ್ಶಿ ಕೆ. ಸೀತಾರಾಮ ನಕ್ಕತ್ತಾಯ, ಪ್ರಾಂಶುಪಾಲೆ ಡಾ| ಚಿಂತನಾ ರಾಜೇಶ್‌ ತಿಳಿಸಿದ್ದಾರೆ.

    ಕುಂದಾಪುರ: ಎಜ್ಯುಕೇಶನ್‍ ಸೊಸೈಟಿ ರಿ. ಪ್ರವರ್ತಿತ ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಈ ಬಾರಿ ಎಸ್. ಎಸ್. ಎಲ್‍. ಸಿ ಪರೀಕ್ಷೆಗೆ 106 ವಿದ್ಯಾರ್ಥಿಗಳು ಹಾಜರಾಗಿದ್ದು, 56 ವಿದ್ಯಾರ್ಥಿಗಳು ವಿಶಿಷ್ಟ ದರ್ಜೆಯಲ್ಲಿ ಮತ್ತು 41 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಶಾಲೆಗೆ ಶೇಕಡಾ 99.05 ಫಲಿತಾಂಶ ಲಭಿಸಿರುತ್ತದೆ.

    ವಿದ್ಯಾರ್ಥಿಗಳಾದ  ಸಾಯಿಸ್ಪರ್ಶ ಕೆ. 623 (99.68%), ಬಿ.ವಿ. ಜಯಸೂರ್ಯ 622 (99.52%), ಪ್ರಿಯಾ 622 (99.52%), ಭಕ್ತಿ ಶೆಟ್ಟಿ 621 (99.36%), ನಿರೀಕ್ಷಾ ಎನ್‌. ಶೆಟ್ಟಿಗಾರ್‌ 621 (99.36%), ಸನ್ವಿತ್‌ ಶೆಟ್ಟಿ 619 (99.04%), ವಿನ್ಯಾಸ್‌ ಅಡಿಗ (619 (99.04%), ಸಮನ್ವಿ ಎಸ್‌ 616 (98.56%) ಅನ್ವಿತ್‌ ಕೆ. 615 (98.405) ಸಿಂಚನಾ ಎಸ್‌. ಶೆಟ್ಟಿ  614( 98.24%)  ನಿಹಾಲ್‌ ಅಮಿನ್‌  610 ( 97.60%) ರವಿನಾ ಬಿ. 610 ( 97.60%)  ಅದ್ವೈತ್‌ ಟಿ 609 (97.44%)  ರಾಘವೇಂದ್ರ  ಅಡಿಗ 609 (97.44%) ಆಶ್ಲೇಷ್‌ ಎನ್‌. 607 (97.12%), ಪ್ರೀತಿ 606 (96.96%) ಅದಿತಿ ಅಡಿಗ 605 (96.80%) ಲಹರಿ 605 (96.80%), ಸುಭಿಕ್ಷಾ 605 (96.80%), ಕೀರ್ತನಾ ವಿ. ಶೆಟ್ಟಿ 604 (96.64%) ಸೃಜನಿ ಎಸ್. 603, ತನ್ಮಯಿ ಹೊಳ್ಳ 603, ಸುಮುಖ 601, ಪೂರ್ವಿಕಾ ರಾವ್‍ 601, ಶ್ರೀನಂದನ್‍ ಉಪಾಧ್ಯಾಯ 599, ವರೇಣ್ಯ ಶರ್ಮಾ ಎನ್‍. ವಿ. 599, ಭುವಿ ಆರ್. ಗಾಣಿಗ 599, ಮನ್ವಿತ್‍ ಜೆ. ಶೆಟ್ಟಿ 598, ರಿತೇಶ್‍ 598, ಐಶಾತುಲ್‍ ಬುಶ್ರಾ 596, ರಿಶಿತಾ ಎಸ್‍. 596, ಬ್ರಾಹ್ಮೀ ಉಡುಪ 594, ಧನ್ಯ ರಾಯ್ಕರ್‍ 594 ಅಂಕ ಗಳಿಸಿದ್ದಾರೆ.  

  • ಉಡುಪಿ: ಬಾಡಿಗೆ ನೆಪದಲ್ಲಿ ರಿಕ್ಷಾ ಚಾಲಕನ ಕೊಲೆ ಯತ್ನ, SDPI ಜಿಲ್ಲಾಧ್ಯಕ್ಷರಿಂದ ಕಠಿಣ ಕ್ರಮಕ್ಕೆ ಅಗ್ರಹ

    “ಸುಹಾಸ್ ಶೆಟ್ಟಿ ಕೊಲೆ ನೆಪವನ್ನ ಇಟ್ಟುಕೊಂಡು ಸಂಘಪಾರಿವಾರಾ ಉಡುಪಿ ಜಿಲ್ಲೆಯ ಶಾಂತಿಯನ್ನು ಕಡಡಲು ಪ್ರಯತ್ನಿಸುತ್ತಿದ್ದು, ನಿನ್ನೆ ರಾತ್ರಿ ಅಮಾಯಕ ರಿಕ್ಷಾ ಚಾಲಕಾರೊಬ್ಬರ ಕೊಲೆಗೆ ವಿಫಲ ಯತ್ನ ನಡೆಸಿದ್ದಾರೆ. ಪೊಲೀಸ್ ಇಲಾಖೆ ಈ ಸಂಚಿನ ಹಿಂದೆ ಇರುವ ಕಾಣದ ಕೈಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು“ ಎಂದು ಎಸ್.ಡಿ.ಪಿ.ಐ ಉಡುಪಿ ಜಿಲ್ಲಾಧ್ಯಕ್ಷರು ಆಸೀಫ್ ಕೋಟೇಶ್ವರ ಹೇಳಿದ್ದಾರೆ.

    ಆಟೋ ರಿಕ್ಷಾ ಚಾಲಕನೋರ್ವರಿಗೆ ಕರೆ ಮಾಡಿ ಬಾಡಿಗೆ ಇದೆ ಕರೆಯಿಸಿಕೊಂಡು ದುಷ್ಕರ್ಮಿಗಳು ಕೊಲೆ ಮಾಡಲು ಯತ್ನಿಸಿರುವ ಘಟನೆ ಆತ್ರಾಡಿ ಗ್ಯಾಸ್‌ ಪೆಟ್ರೋಲ್‌ ಬಂಕ್‌ ಬಳಿ ಗುರುವಾರ ರಾತ್ರಿ ನಡೆದಿದೆ.

    ಆಟೋ ರಿಕ್ಷಾ ಚಾಲಕ ಬಡಗಬೆಟ್ಟು ನಿವಾಸಿ ಅಬುಬಕ್ಕರ್‌ (50), ಎನ್ನುವರರಿಗೆ ಅವರ ಪರಿಚಯದ‌ ದಿನೇಶ್ ಎನ್ನುವವರು ಕರೆ ಮಾಡಿ ಮದಗದಿಂದ ಆತ್ರಾಡಿಗೆ ಬಾಡಿಗೆ ಬರಲು ತಿಳಿಸಿದ್ದಾರೆ. ಈ ಹಿನ್ನೆಲೆ ಅಬುಬಕ್ಕರ್‌ ರಿಕ್ಷಾದಲ್ಲಿ ಆತ್ರಾಡಿ ಪೆಟ್ರೋಲ್‌ ಬಂಕ್‌ ಬಳಿ ಮೋಟಾರ್‌ ಸೈಕಲ್‌ ನಲ್ಲಿ ಹಿಂದಿನಿಂದ ಬಂದ ಇಬ್ಬರು ದುಷ್ಕರ್ಮಿಗಳು ರಿಕ್ಷಾ ಹಿಂಬಾಲಿಸಿಕೊಂಡು ಬಂದು ಗಾಡಿಯನ್ನು ನಿಲ್ಲಿಸುವಂತೆ ಅವ್ಯಾಚ್ಯ ಶಬ್ದಗಳಿಂದ ಬೈದಿದ್ದಾರೆ.

    ಈ ವೇಳೆ ಅಬುಬಕ್ಕರ್‌ ಗಾಡಿಯನ್ನು ನಿಲ್ಲಿಸದೇ ಮುಂದೆ ಬಂದು ಶೇಡಿಗುಡ್ಡೆ ಬಳಿ ರಸ್ತೆಯಲ್ಲಿ ಆಟೋವನ್ನು ನಿಲ್ಲಿಸಿ ಓಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಮೋಟಾರ್‌ ಸೈಕಲ್‌ನಲ್ಲಿದ್ದ ಓರ್ವ ವ್ಯಕ್ತಿ ತನ್ನ ಕೈಯಲ್ಲಿದ್ದ ತಲವಾರಿನಿಂದ ಅಬುಬಕ್ಕರ್‌ ತಲೆಗೆ ಬೀಸಿದ್ದು, ತಲವಾರಿನ ಹೊಡೆತದಿಂದ ಅಬುಬಕ್ಕರ್‌ ತಪ್ಪಿಸಿಕೊಂಡಿದ್ದಾರೆ.

    ಬಜರಂಗದಳ ಕಾರ್ಯಕರ್ತ ಹಾಗೂ ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಹಿನ್ನಲೆಯೆಲ್ಲಿ ಜಿಲ್ಲೆಯ ಭಾಗಗಳಲ್ಲಿ ಹಲ್ಲೆ ಮತ್ತು ಕೊಲೆ ಯತ್ನ ಸುದ್ದಿ ಬರ್ತಾ ಇವೆ.

  • ಕಾಶ್ಮೀರ ಭಯೋತ್ಪಾದಕ ದಾಳಿ ಖಂಡಿಸಿ ಬೈಂದೂರು ಯುವ ಕಾಂಗ್ರೆಸ್ ಪ್ರತಿಭಟನೆ

    ಬೈಂದೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಪ್ರತಿಭಟನೆ ಹಾಗೂ ಸಂತಾಪ ಸಭೆ ಬೈಂದೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಕ್ಷಯ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯಿತು.

    ಮಾಜಿ ಶಾಸಕರಾದ ಕೆ. ಗೋಪಾಲ್ ಪೂಜಾರಿ, ಹಿರಿಯ ಕಾಂಗ್ರೆಸ್ ನಾಯಕರಾದ ಪ್ರಕಾಶ್ಚಂದ್ರ ಶೆಟ್ಟಿ, ಬೈಂದೂರು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಮೋಹನ್ ಪೂಜಾರಿ, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೂರಜ್ ಜಿ. ಪೂಜಾರಿ, ಬೈಂದೂರು ಪಪಂ ನಾಮನಿರ್ದೇಶಿತ ಸದಸ್ಯ ನಾಗರಾಜ ಗಾಣಿಗ, ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ವಿಕಾಸ್ ಹೆಗ್ಡೆ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ಬೈಂದೂರು ಬ್ಲಾಕ್‌ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಬ್ಬೀರ್‌ ಬೈಂದೂರು, ಕಿಸಾನ್‌ ಘಟಕದ ಅಧ್ಯಕ್ಷ ವೀರಭದ್ರ ಗಾಣಿಗ, ಸುಬ್ರಹ್ಮಣ್ಯ ಪೂಜಾರಿ ಯಡ್ತರೆ, ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗ ಉಪಾಧ್ಯಕ್ಷರಾದ ಕೆ. ಚಂದ್ರಶೇಖರ್ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಪ್ರಮೋದ್ ಪೂಜಾರಿ ನಾವುಂದ, ಉಡುಪಿ ಜಿಲ್ಲಾ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ರೋಶನ್ ಶೆಟ್ಟಿ ಹಾಗೂ ವಿವಿಧ ನಾಯಕರು ಉಪಸ್ಥಿತರಿದ್ದರು.

  • ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟ: ಕಾರ್ಕಳದ ಸ್ವಸ್ತಿ ಕಾಮತ್ ಗೆ 625 ಕ್ಕೆ 625 ಅಂಕ !

    ಉಡುಪಿ: ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ 22 ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಈ ಸಾಲಿಗೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ವಿದ್ಯಾರ್ಥಿನಿ ಕೂಡ ಸೇರ್ಪಡೆಯಾಗಿದ್ದಾರೆ.
    ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಗಣಿತ ನಗರದ ಜ್ಞಾನಸುಧಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ವಿದ್ಯಾರ್ಥಿನಿ ಸ್ವಸ್ತಿ ಕಾಮತ್ 625 ಮಾರ್ಕ್ ಗಳಿಸಿ ರಾಜ್ಯಕ್ಕೇ ಪ್ರಥಮ ಸ್ಥಾನಿಯಾಗಿದ್ದಾಳೆ.

  • ಹಿರಿಯಡ್ಕ: ರಿಕ್ಷಾ ಚಾಲಕನ ಹತ್ಯೆಗೆ ಯತ್ನ- ಇಬ್ಬರ ಬಂಧನ

    ಹಿರಿಯಡ್ಕ: ಆಟೋ ರಿಕ್ಷಾ ಚಾಲಕನೋರ್ವರಿಗೆ ಕರೆ ಮಾಡಿ ಬಾಡಿಗೆ ಇದೆ ಕರೆಯಿಸಿಕೊಂಡು ದುಷ್ಕರ್ಮಿಗಳು ಕೊಲೆ ಮಾಡಲು ಯತ್ನಿಸಿರುವ ಘಟನೆ ಆತ್ರಾಡಿ ಗ್ಯಾಸ್‌ ಪೆಟ್ರೋಲ್‌ ಬಂಕ್‌ ಬಳಿ ಗುರುವಾರ ರಾತ್ರಿ ನಡೆದಿದೆ.

    ಆಟೋ ರಿಕ್ಷಾ ಚಾಲಕ ಬಡಗಬೆಟ್ಟು ನಿವಾಸಿ ಅಬುಬಕ್ಕರ್‌ (50), ಎನ್ನುವರರಿಗೆ ಅವರ ಪರಿಚಯದ‌ ದಿನೇಶ್ ಎನ್ನುವವರು ಕರೆ ಮಾಡಿ ಮದಗದಿಂದ ಆತ್ರಾಡಿಗೆ ಬಾಡಿಗೆ ಬರಲು ತಿಳಿಸಿದ್ದಾರೆ. ಈ ಹಿನ್ನೆಲೆ ಅಬುಬಕ್ಕರ್‌ ರಿಕ್ಷಾದಲ್ಲಿ ಆತ್ರಾಡಿ ಪೆಟ್ರೋಲ್‌ ಬಂಕ್‌ ಬಳಿ ಮೋಟಾರ್‌ ಸೈಕಲ್‌ ನಲ್ಲಿ ಹಿಂದಿನಿಂದ ಬಂದ ಇಬ್ಬರು ದುಷ್ಕರ್ಮಿಗಳು ರಿಕ್ಷಾ ಹಿಂಬಾಲಿಸಿಕೊಂಡು ಬಂದು ಗಾಡಿಯನ್ನು ನಿಲ್ಲಿಸುವಂತೆ ಅವ್ಯಾಚ್ಯ ಶಬ್ದಗಳಿಂದ ಬೈದಿದ್ದಾರೆ.

    ಈ ವೇಳೆ ಅಬುಬಕ್ಕರ್‌ ಗಾಡಿಯನ್ನು ನಿಲ್ಲಿಸದೇ ಮುಂದೆ ಬಂದು ಶೇಡಿಗುಡ್ಡೆ ಬಳಿ ರಸ್ತೆಯಲ್ಲಿ ಆಟೋವನ್ನು ನಿಲ್ಲಿಸಿ ಓಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಮೋಟಾರ್‌ ಸೈಕಲ್‌ನಲ್ಲಿದ್ದ ಓರ್ವ ವ್ಯಕ್ತಿ ತನ್ನ ಕೈಯಲ್ಲಿದ್ದ ತಲವಾರಿನಿಂದ ಅಬುಬಕ್ಕರ್‌ ತಲೆಗೆ ಬೀಸಿದ್ದು, ತಲವಾರಿನ ಹೊಡೆತದಿಂದ ಅಬುಬಕ್ಕರ್‌ ತಪ್ಪಿಸಿಕೊಂಡಿದ್ದಾರೆ.

    ಬೈಕ್‌ನಲ್ಲಿದ್ದ ಇನ್ನೋರ್ವ ವ್ಯಕ್ತಿ ಬಾಟಲಿಯನ್ನು ಕೈಯಲ್ಲಿ ಹಿಡಿದು ಆಟೋ ರಿಕ್ಷಾದ ಮುಂಭಾಗ ಗ್ಲಾಸಿಗೆ ಹೊಡೆದಿದ್ದಾನೆ. ಕೊಲೆ ಮಾಡುವ ಉದ್ದೇಶದಿಂದ ಅವರು ಹೀಗೆ ಮಾಡಿದ್ದಾರೆಂಬುದನ್ನು ಅರಿತ ಅಬುಬಕ್ಕರ್‌ ಅಲ್ಲೇ ಪಕ್ಕದಲ್ಲಿದ್ದ ಕಂಪೌಡನ್ನು ಜಿಗಿದು ಓಡಿ ಹೋಗಿದ್ದಾರೆ.

    ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲು ಪ್ರಕರಣ ದಾಖಲಾಗಿದ್ದು, ಅಬುಬಕ್ಕರ್‌ ನೀಡಿದ ದೂರಿನ ಅನ್ವಯ ಆರೋಪಿಗಳಾದ ಹಿರಿಯಡ್ಕದ ಬೊಮ್ಮರಬೆಟ್ಟುವಿನ ಸಂದೇಶ್‌(31), ಹಿರಿಯಡ್ಕ ಧರ್ಕಸ್‌ನ ಸುಶಾಂತ್(‌32) ಅವರನ್ನು ಬಂಧಿಸಲಾಗಿದೆ.