Category: Udupi

  • ಉಡುಪಿ: ಬಕ್ರೀದ್ ಹಬ್ಬದ ಪೂರ್ವಭಾವಿಯಾಗಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಶಾಂತಿ ಸಭೆ

    ಉಡುಪಿ, ಜೂನ್ 4, 2025: ಮುಂಬರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಾದ ಕೊಲ್ಲೂರು, ಅಮಾಸೆಬೈಲು, ಶಿರ್ವ, ಮತ್ತು ಮಣಿಪಾಲದಲ್ಲಿ ಧಾರ್ಮಿಕ ಮುಖಂಡರನ್ನು ಕರೆಯಿಸಿ ಶಾಂತಿ ಸಭೆಗಳನ್ನು ಆಯೋಜಿಸಲಾಗಿತ್ತು. ಈ ಸಭೆಗಳಲ್ಲಿ ಹಬ್ಬದ ಸಂದರ್ಭದಲ್ಲಿ ಸಾಮರಸ್ಯ, ಸೌಹಾರ್ದತೆ, ಮತ್ತು ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆ ಬಾರದಂತೆ ಬಕ್ರೀದ್ ಹಬ್ಬವನ್ನು ಆಚರಿಸುವಂತೆ ಧಾರ್ಮಿಕ ಮುಖಂಡರಿಗೆ ಪೊಲೀಸ್ ಅಧಿಕಾರಿಗಳು ಸೂಚಿಸಿದರು.

    ಕೊಲ್ಲೂರು: ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಧಾರ್ಮಿಕ ಮುಖಂಡರನ್ನು ಠಾಣೆಗೆ ಕರೆಯಿಸಿ ಶಾಂತಿ ಸಭೆ ನಡೆಸಿ ಹಬ್ಬದ ಸಮಯದಲ್ಲಿ ಶಾಂತಿ ಹಾಗೂ ಸೌಹಾರ್ದತೆಯಿಂದ ಕಾನೂನು ಸುವ್ಯವಸ್ಥೆಗೆ ದಕ್ಕೆ ಬಾರದಂತೆ ಆಚರಣೆ ಮಾಡುವಂತೆ ತಿಳಿಸಲಾಯಿತು.

    ಅಮಾಸೆಬೈಲು: ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಧಾರ್ಮಿಕ ಮುಖಂಡರನ್ನು ಠಾಣೆಗೆ ಕರೆಯಿಸಿ ಶಾಂತಿ ಸಭೆ ನಡೆಸಿ ಹಬ್ಬದ ಸಮಯದಲ್ಲಿ ಶಾಂತಿ ಹಾಗೂ ಸೌಹಾರ್ದತೆಯಿಂದ ಕಾನೂನು ಸುವ್ಯವಸ್ಥೆಗೆ ದಕ್ಕೆ ಬಾರದಂತೆ ಆಚರಣೆ ಮಾಡುವಂತೆ ತಿಳಿಸಲಾಯಿತು.

    ಕಾರ್ಕಳ: ಗ್ರಾಮಾಂತರ ಮತ್ತು ಕಾರ್ಕಳ ನಗರ ಠಾಣಾ ವತಿಯಿಂದ ಬಕ್ರೀದ್ ಹಬ್ಬದ ಪ್ರಯುಕ್ತ ಧಾರ್ಮಿಕ ಮುಖಂಡರನ್ನು ಠಾಣೆಗೆ ಕರೆಯಿಸಿ ಶಾಂತಿ ಸಭೆ ನಡೆಸಿ ಹಬ್ಬದ ಸಮಯದಲ್ಲಿ ಶಾಂತಿ ಹಾಗೂ ಸೌಹಾರ್ದತೆಯಿಂದ ಕಾನೂನು ಸುವ್ಯವಸ್ಥೆಗೆ ದಕ್ಕೆ ಬಾರದಂತೆ ಆಚರಣೆ ಮಾಡುವಂತೆ ತಿಳಿಸಲಾಯಿತು

    ಮಣಿಪಾಲ: ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಧಾರ್ಮಿಕ ಮುಖಂಡರನ್ನು ಠಾಣೆಗೆ ಕರೆಯಿಸಿ ಶಾಂತಿ ಸಭೆ ನಡೆಸಿ ಹಬ್ಬದ ಸಮಯದಲ್ಲಿ ಶಾಂತಿ ಹಾಗೂ ಸೌಹಾರ್ದತೆಯಿಂದ ಕಾನೂನು ಸುವ್ಯವಸ್ಥೆಗೆ ದಕ್ಕೆ ಬಾರದಂತೆ ಆಚರಣೆ ಮಾಡುವಂತೆ ತಿಳಿಸಲಾಯಿತು.

  • ಉಡುಪಿ: ಬಕ್ರೀದ್ ಹಬ್ಬದ ಪೂರ್ವಭಾವಿಯಾಗಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಶಾಂತಿ ಸಭೆ

    ಉಡುಪಿ, ಜೂನ್ 03, 2025: ಮುಂಬರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಾದ ಅಜೆಕಾರು, ಮಲ್ಪೆ, ಶಿರ್ವ, ಮತ್ತು ಹೆಬ್ರಿಯಲ್ಲಿ ಧಾರ್ಮಿಕ ಮುಖಂಡರನ್ನು ಕರೆಯಿಸಿ ಶಾಂತಿ ಸಭೆಗಳನ್ನು ಆಯೋಜಿಸಲಾಗಿತ್ತು. ಈ ಸಭೆಗಳಲ್ಲಿ ಹಬ್ಬದ ಸಂದರ್ಭದಲ್ಲಿ ಸಾಮರಸ್ಯ, ಸೌಹಾರ್ದತೆ, ಮತ್ತು ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆ ಬಾರದಂತೆ ಬಕ್ರೀದ್ ಹಬ್ಬವನ್ನು ಆಚರಿಸುವಂತೆ ಧಾರ್ಮಿಕ ಮುಖಂಡರಿಗೆ ಪೊಲೀಸ್ ಅಧಿಕಾರಿಗಳು ಸೂಚಿಸಿದರು.

    ಅಜೆಕಾರು, ಮಲ್ಪೆ, ಶಿರ್ವ, ಮತ್ತು ಹೆಬ್ರಿ ಪೊಲೀಸ್ ಠಾಣೆಗಳಲ್ಲಿ ನಡೆದ ಈ ಸಭೆಗಳಲ್ಲಿ ಎಲ್ಲಾ ಸಮುದಾಯದ ಮುಖಂಡರು ಭಾಗವಹಿಸಿ, ಶಾಂತಿಯುತವಾಗಿ ಹಬ್ಬ ಆಚರಿಸುವ ಕುರಿತು ಚರ್ಚಿಸಿದರು. ಕಾನೂನು ಉಲ್ಲಂಘನೆಯಾಗದಂತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸೌಹಾರ್ದತೆ ಕಾಪಾಡಿಕೊಂಡು ಹಬ್ಬವನ್ನು ಆಚರಿಸಲು ಸಹಕರಿಸುವಂತೆ ಪೊಲೀಸರು ಮನವಿ ಮಾಡಿದರು.

  • ತೋಟಗಾರಿಕೆ ಇಲಾಖೆಯ ಯೋಜನೆಯಡಿ ಸಹಾಯಧನ : ಅರ್ಜಿ ಆಹ್ವಾನ

    ಉಡುಪಿ, ಜೂನ್ 02 : ತೋಟಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕುಂದಾಪುರ ತಾಲೂಕಿನಲ್ಲಿ ಅನುಷ್ಠಾನಗೊಳ್ಳಲಿರುವ ವಿವಿಧ ಯೋಜನೆಗಳಡಿ ಸಹಾಯಧನ ಸೌಲಭ್ಯ ಲಭ್ಯವಿದ್ದು, ಆಸಕ್ತ ರೈತರುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    ಪ್ರಸಕ್ತ ಸಾಲಿನ ವಿವಿಧ ಯೋಜನೆಗಳಡಿ ರೈತರಿಗೆ ಕಾಳುಮೆಣಸು, ಅನಾನಸ್ಸು, ಅಂಗಾಂಶಬಾಳೆ, ಅಪ್ರಧಾನ ಹಣ್ಣುಗಳಾದ ರಾಂಬೂಟಾನ್, ಮ್ಯಾಂಗೋಸ್ಟೀನ್ ಮತ್ತು ಡ್ರಾ್ಯಗನ್ ಫ್ರೂಟ್ ತೋಟಗಳ ಸ್ಥಾಪನೆಗೆ ಶೇ. 40 ರ ಸಹಾಯಧನ, ನೀರು ಸಂಗ್ರಹಣ ಘಟಕ ನಿರ್ಮಾಣಕ್ಕೆ, ಗರಿಷ್ಠ 0.75 ಲಕ್ಷ ರೂ.ಗಳ ಸಹಾಯಧನ, ವಿವಿಧ ತೋಟಗಾರಿಕೆ ಬೆಳೆಗಳಿಗೆ ಹಾನಿಯುಂಟು ಮಾಡುವ ರೋಗ/ಕೀಟಗಳ ನಿಯಂತ್ರಣಕ್ಕಾಗಿ ಸಸ್ಯ ಸಂರಕ್ಷಣಾ ಔಷಧಿಗಳಿಗೆ ಪ್ರತಿ ಹೆಕ್ಟೇರಿಗೆ 1,500 ಹಾಗೂ ಅಡಿಕೆ ತೋಟ ಹೊಂದಿರುವ ರೈತರಿಗೆ ಅಡಿಕೆ ಸಂರಕ್ಷಣೆ/ ಒಣಗಿಸಲು ಸೋಲಾರ್ ಶೀಟ್ ಖರೀದಿಗೆ ಶೇ.40 ರ ಸಹಾಯಧನ ಲಭ್ಯವಿದೆ.

    ತೋಟಗಾರಿಕೆ ಬೆಳೆಗಳ ಪ್ರಾಥಮಿಕ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಶೇ.40 ರ ದರದಲ್ಲಿ (ಗರಿಷ್ಠ 12.25 ಲಕ್ಷಗಳವರೆಗೆ), ಪ್ಯಾಕ್ ಹೌಸ್ಗಳ ನಿರ್ಮಾಣಕ್ಕೆ ಗರಿಷ್ಠ 2.40 ಲಕ್ಷಗಳವರೆಗೆ ಶೇ.50 ರ ವರೆಗೆ ಹಾಗೂ ರೈತರ ಯಾಂತ್ರೀಕರಣ ಅವಶ್ಯಕತೆಗೆ 20 hಠಿ ಗಿಂತ ಕಡಿಮೆ ಸಾಮರ್ಥ್ಯದ ಟ್ರ್ಯಾಕ್ಟರ್ ಖರೀದಿಗೆ ರೂ. 1.6 ರಿಂದ 2.45 ಲಕ್ಷ ರೂ. ವರೆಗೆ ಸಹಾಯಧನ ಲಭ್ಯವಿದೆ.

    ಕೃಷಿ ಯಾಂತ್ರೀಕರಣ ಉಪಅಭಿಯಾನ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಗಳಡಿ ತೋಟಗಾರಿಕೆ ಯಾಂತ್ರಿಕರಣ ಕಾರ್ಯಕ್ರಮದಡಿ ಅನುಮೋದಿತ ವಿವಿಧ ಯಂತ್ರೋಪಕರಣಗಳಿಗೆ ಶೇ. 40/50 ರ ಸಹಾಯಧನ ಹಾಗೂ ದೊಡ್ಡ ಗಾತ್ರದ ನೀರು ಸಂಗ್ರಹಣಾ ಘಟಕ, ಪ್ಯಾಕಿಂಗ್ ಮತ್ತು ಸಂಗ್ರಹಣಾ ಘಟಕಗಳ ನಿರ್ಮಾಣಕ್ಕೆ ಹಾಗೂ ನೀರಿನಲ್ಲಿ ಕರಗುವ ರಸಗೊಬ್ಬರ ಮತ್ತು ಲಘುಪೋಷಕಾಂಶಗಳ ಖರೀದಿಗೆ ಸಹಾಯಧನ ಪಡೆಯಲು ಅವಕಾಶವಿದೆ.

    ತೋಟಗಾರಿಕೆ ಬೆಳೆಗಳಲ್ಲಿ ನೀರಿನ ಸಮರ್ಪಕ ಬಳಕೆಗಾಗಿ ಹನಿ ನೀರಾವರಿ /ತುಂತುರು ನೀರಾವರಿ ಅಳವಡಿಕೆಗೆ ರೈತರಿಗೆ ಶೇ.90 ರಷ್ಟು ಸಹಾಯಧನ, ಭವಿಷ್ಯದ ಬೆಳೆಯಾದ ತಾಳೆ ಬೆಳೆಗಾಗಿ ತಾಳೆಬೆಳೆ ಯೋಜನೆಯಡಿ ಹೊಸದಾಗಿ ತಾಳೆಬೆಳೆ ಪ್ರದೇಶ ವಿಸ್ತರಣೆಗೆ ಹಾಗೂ ತಾಳೆ ಬೆಳೆ ಬೆಳೆಯುವ ರೈತರಿಗೆ ಬೋರ್ವೆಲ್, ಬಾವಿ ನಿರ್ಮಿಸಿಕೊಳ್ಳಲು, ವಿದ್ಯುತ್/ಡೀಸೆಲ್ ಪಂಪ್ ಮತ್ತು ಯಂತ್ರೋಪಕರಣ ಖರೀದಿಗೆ ಸಹಾಯಧನ ಮತ್ತು ಜೇನು ಸಾಕಾಣಿಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ 2 ದಿನಗಳ ತರಬೇತಿಯೊಂದಿಗೆ ಜೇನು ಕುಟುಂಬ ಸಹಿತ ಗರಿಷ್ಠ 4 ಪೆಟ್ಟಿಗೆ ಖರೀದಿಗೆ ಶೇ.75 ರಿಂದ 90 ರ ಸಹಾಯಧನ ಪಡೆಯಬಹುದಾಗಿದೆ.

    ಮಹಾತ್ಮಾಗಾಂಧೀ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಹಾಗೂ ಪೌಷ್ಠಿಕ ತೋಟಗಳ ನಿರ್ಮಾಣಕ್ಕೆ ಅವಕಾಶವಿದ್ದು, ಈ ಯೋಜನೆಯ ಪ್ರಯೋಜನೆ ಪಡೆಯಲಿಚ್ಚಿಸುವವರು ಕೂಡಲೆ ಅರ್ಜಿ ಸಲ್ಲಿಸಿ, ಯೋಜನೆಯ ಫಲಾನುಭವಿಯಾಗಬಹುದಾಗಿದೆ.

    ಈ ಎಲ್ಲಾ ಯೋಜನೆಗಳ ಪ್ರಯೋಜನೆ ಪಡೆಯಲು ಆಸಕ್ತ ರೈತರು ಪ್ರಥಮ ಹಂತದಲ್ಲಿ ನೋಂದಣಿ ಅರ್ಜಿಯೊಂದಿಗೆ ಬೆಳೆ ನಮೂದಿಸಿರುವ ಇತ್ತೀಚಿನ ಪಹಣಿ ಪತ್ರ ಮತ್ತು ಅಗತ್ಯ ಪ್ರಮಾಣ ಪತ್ರಗಳೊಂದಿಗೆ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಇಲಾಖಾ ಮಾರ್ಗಸೂಚಿಯನುಸಾರ ಅರ್ಜಿಗಳನ್ನು ಜೇಷ್ಠತೆಯ ಆಧಾರದಲ್ಲಿ ಇಲಾಖೆ ನಿಗಧಿಪಡಿಸಿದ ಗುರಿಗೆ ಅನುಗುಣವಾಗಿ ಸಹಾಯಧನಕ್ಕೆ ಪರಿಗಣಿಸಲಾಗುವುದು ಎಂದು ಕುಂದಾಪುರ ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ ರಕಟಣೆ ತಿಳಿಸಿದೆ.

  • ಉಡುಪಿ: ಮಟ್ಕಾ ಜುಗಾರಿ ಜಾಲದ ಮೇಲೆ ಪೊಲೀಸ್ ದಾಳಿ; ಎಂಟು ಪ್ರಕರಣಗಳು ದಾಖಲು, ಹಲವರು ವಶಕ್ಕೆ

    ಉಡುಪಿ, ಜೂನ್ 03, 2025: ಉಡುಪಿ ಜಿಲ್ಲೆಯ ವಿವಿಧೆಡೆ ದಿನಾಂಕ 02/06/2025 ರಂದು ಸಾರ್ವಜನಿಕ ಸ್ಥಳಗಳಲ್ಲಿ ಮಟ್ಕಾ ಜುಗಾರಿ ಆಟವಾಡಿಸಿ ಹಣ ಸಂಗ್ರಹಿಸುತ್ತಿದ್ದ ಆರೋಪಿಗಳ ವಿರುದ್ಧ ಉಡುಪಿ ನಗರ, ಮಣಿಪಾಲ, ಮತ್ತು ಬ್ರಹ್ಮಾವರ ಪೊಲೀಸ್ ಠಾಣೆಗಳಲ್ಲಿ ಒಟ್ಟು ಎಂಟು ಪ್ರಕರಣಗಳು ದಾಖಲಾಗಿವೆ. ಈ ಎಲ್ಲಾ ಘಟನೆಗಳಲ್ಲಿ ಆರೋಪಿಗಳು ಅಂಬಾಗಿಲಿನ ಲಿಯೋ ಕರ್ನಾಲಿಯೋ ಎಂಬಾತನ ಸೂಚನೆಯಂತೆ ಕಮಿಷನ್‌ಗಾಗಿ ಮಟ್ಕಾ ಜುಗಾರಿ ಆಟವಾಡಿಸಿ, ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದರು ಎಂದು ತಿಳಿದುಬಂದಿದೆ.

    ಉಡುಪಿ ನಗರದಲ್ಲಿ ಆರು ಪ್ರಕರಣಗಳು:
    ನಾರಾಯಣ ಬಿ, ಪೊಲೀಸ್ ಉಪನಿರೀಕ್ಷಕರು (ತನಿಖೆ-2), ಉಡುಪಿ ನಗರ ಪೊಲೀಸ್ ಠಾಣೆ, ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಉಡುಪಿ ತಾಲೂಕಿನ 76 ಬಡಗುಬೆಟ್ಟು ಗ್ರಾಮದ ಬೀಡಿನಗುಡ್ಡೆ ಜಂಕ್ಷನ್ ಬಳಿಯ ಗೂಡಂಗಡಿಯ ಹತ್ತಿರ ರಾಮರಾಜ್ ಎಂಬಾತ, ಪುತ್ತೂರು ಗ್ರಾಮದ ಆದರ್ಶ ಬೇಕರಿ ಬಳಿ ಜಗದೀಶ್, ಮತ್ತು ಬೆಂಗಳೂರು ಅಯ್ಯಂಗಾರ್ ಬೇಕರಿ ಬಳಿ ಚಿದಾನಂದ ಎಂಬವರು ಮಟ್ಕಾ ಜುಗಾರಿ ಆಟವಾಡಿಸುತ್ತಿರುವುದನ್ನು ಕಂಡು ದಾಳಿ ನಡೆಸಿದ್ದಾರೆ. ಗೋಪಾಲಕೃಷ್ಣ ಜೋಗಿ, ಪೊಲೀಸ್ ಉಪನಿರೀಕ್ಷಕರು (ತನಿಖೆ-3), ಪುತ್ತೂರು ಬಸ್ ನಿಲ್ದಾಣ ಬಳಿ ಉದಯ ಎಸ್, ಶಿವಳ್ಳಿ ಗ್ರಾಮದ ಕಕ್ಕುಂಜೆ ಕ್ಲಾಸಿಕ್ ಕಾಂಪ್ಲೆಕ್ಸ್ ಎದುರು ತಿಪ್ಪೆಸ್ವಾಮಿ, ಮತ್ತು ಸಂತೆಕಟ್ಟೆ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದ ಮುಂಭಾಗ ರಾಘವೇಂದ್ರ ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ಈ ಆರೋಪಿಗಳಿಂದ ಒಟ್ಟು 3,950 ರೂಪಾಯಿ ನಗದು, ಮಟ್ಕಾ ಚೀಟಿಗಳು, ಬಾಲ್‌ಪೆನ್‌ಗಳು, ಮತ್ತು ನೋಕಿಯಾ, ಹೀರೋ, ಸೆಲ್‌ಕೋರ್, ವಿವೋ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣಗಳು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 76/2025, 77/2025, 78/2025, 79/2025, 80/2025, ಮತ್ತು 81/2025ರಡಿ ಕಲಂ 78(i)(iii) ಕರ್ನಾಟಕ ಪೊಲೀಸ್ ಕಾಯ್ದೆ ಮತ್ತು ಕಲಂ 112, 318(2) BNS ಅಡಿಯಲ್ಲಿ ದಾಖಲಾಗಿವೆ.

    ಮಣಿಪಾಲದಲ್ಲಿ ಒಂದು ಪ್ರಕರಣ:
    ರಾಮಪ್ರಭು, ಸಹಾಯಕ ಪೊಲೀಸ್ ಉಪನಿರೀಕ್ಷಕರು, ಮಣಿಪಾಲ ಪೊಲೀಸ್ ಠಾಣೆ, ಶಿವಳ್ಳಿ ಗ್ರಾಮದ ಬಾಂಬ್ ಬಜಾರ್‌ ಬಳಿಯ ಸಾರ್ವಜನಿಕ ಶೌಚಾಲಯದ ಹತ್ತಿರ ಡಿ. ನಾಗೇಶ್ ಎಂಬಾತನನ್ನು ಮಟ್ಕಾ ಜುಗಾರಿ ಆಟವಾಡಿಸುತ್ತಿರುವಾಗ ವಶಕ್ಕೆ ಪಡೆದಿದ್ದಾರೆ. ಆರೋಪಿಯಿಂದ 910 ರೂಪಾಯಿ ನಗದು, ಮಟ್ಕಾ ಚೀಟಿ, ಮತ್ತು ಬಾಲ್‌ಪೆನ್‌ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 90/2025ರಡಿ ಕಲಂ 78(i)(iii) ಕರ್ನಾಟಕ ಪೊಲೀಸ್ ಕಾಯ್ದೆ ಮತ್ತು ಕಲಂ 112 BNS ಅಡಿಯಲ್ಲಿ ದಾಖಲಾಗಿದೆ.

    ಬ್ರಹ್ಮಾವರದಲ್ಲಿ ಒಂದು ಪ್ರಕರಣ:
    ಮಹಾಂತೇಶ ಜಾಬಗೌಡರ, ಪೊಲೀಸ್ ಉಪನಿರೀಕ್ಷಕರು (ತನಿಖೆ), ಬ್ರಹ್ಮಾವರ ಪೊಲೀಸ್ ಠಾಣೆ, ಉಪ್ಪೂರು ಗ್ರಾಮದ ಶ್ರೀ ಲಕ್ಷ್ಮಿ ಬಾರ್ & ಫ್ಯಾಮಿಲಿ ರೆಸ್ಟೋರೆಂಟ್ ಎದುರು ಕಮಲಾಕ್ಷ ಎಂಬಾತನನ್ನು ಮಟ್ಕಾ ಜುಗಾರಿ ಆಟಕ್ಕೆ ಹಣ ಸಂಗ್ರಹಿಸುತ್ತಿರುವಾಗ ವಶಕ್ಕೆ ಪಡೆದಿದ್ದಾರೆ. ಆರೋಪಿಯಿಂದ 1,600 ರೂಪಾಯಿ ನಗದು, ಮಟ್ಕಾ ಚೀಟಿ, ಮತ್ತು ಬಾಲ್‌ಪೆನ್‌ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 123/2025ರಡಿ ಕಲಂ 112 BNS ಮತ್ತು ಕಲಂ 78(i)(iii) ಕರ್ನಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ ದಾಖಲಾಗಿದೆ.

    ಎಲ್ಲಾ ಆರೋಪಿಗಳು ಲಿಯೋ ಕರ್ನಾಲಿಯೋ ಎಂಬಾತನ ಸೂಚನೆಯಂತೆ ಕಮಿಷನ್‌ಗಾಗಿ ಮಟ್ಕಾ ಜುಗಾರಿ ಆಟವಾಡಿಸಿ, ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಪೊಲೀಸರು ಈ ಜಾಲದ ಬಗ್ಗೆ ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ.

  • ಉಡುಪಿ: ಪ್ರಧಾನ ಮಂತ್ರಿಯವರ 15 ಅಂಶಗಳ ಕಾರ್ಯಕ್ರಮದ ಜಿಲ್ಲಾ ಸಮಿತಿಗೆ ಅಧಿಕಾರೇತರ ಸದಸ್ಯರ ನಾಮನಿರ್ದೇಶನ

    ಉಡುಪಿ: ಪ್ರಧಾನ ಮಂತ್ರಿಯವರ 15 ಅಂಶಗಳ ಕಾರ್ಯಕ್ರಮದ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಗೆ ಅಧಿಕಾರೇತರ ಸದಸ್ಯರನ್ನು ನಾಮನಿರ್ದೇಶನ ಮಾಡುವ ಕುರಿತು ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಕಾರ್ಯದರ್ಶಿಯವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ದಿನಾಂಕ 17-08-2025ರ ಸರ್ಕಾರಿ ಆದೇಶದಂತೆ ತುಮಕೂರು, ದಾವಣಗೆರೆ, ಚಾಮರಾಜನಗರ, ಮಂಡ್ಯ, ಮೈಸೂರು, ಕೊಪ್ಪಳ, ರಾಯಚೂರು ಮತ್ತು ಬೆಂಗಳೂರು ನಗರ ಜಿಲ್ಲೆಗಳಿಗೆ ನಾಮನಿರ್ದೇಶನ ಮಾಡಲಾದ ಸದಸ್ಯರ ಪಟ್ಟಿಯಲ್ಲಿ, ರಾಯಚೂರು ಜಿಲ್ಲೆಯ ಸದಸ್ಯರನ್ನು ಸಂಪೂರ್ಣವಾಗಿ ಪರಿಷ್ಕರಿಸಲಾಗಿದೆ. ಜೊತೆಗೆ, ಮೈಸೂರು ಜಿಲ್ಲೆಯ ಒಬ್ಬ ಸದಸ್ಯರನ್ನು ಬದಲಾಯಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಗೆ ಆರು ಸದಸ್ಯರನ್ನು ಮತ್ತು ಬೆಂಗಳೂರು ನಗರ ಜಿಲ್ಲೆಗೆ ಎಂಟು ಸದಸ್ಯರನ್ನು ಅಧಿಕಾರೇತರ ಸದಸ್ಯರನ್ನಾಗಿ ಸೀಮಿತಗೊಳಿಸಿ, ಸರ್ಕಾರಿ ಆದೇಶ ಹೊರಡಿಸುವಂತೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.

    ಉಡುಪಿ ಜಿಲ್ಲೆಗೆ ನಾಮನಿರ್ದೇಶನಗೊಂಡ ಅಧಿಕಾರೇತರ ಸದಸ್ಯರ ಪಟ್ಟಿ ಈ ಕೆಳಗಿನಂತಿದೆ:

    1. ಶ್ರೀ ನಕ್ವಾ ಯಾಹ್ಯಾ ಸಾಹೇಬ್, ಕೊಡವೂರು, ಉಡುಪಿ
    2. ಶ್ರೀ ಮೊಹಮ್ಮದ್ ಮೌಲಾ, ಅಧ್ಯಕ್ಷರು, ಮುಸ್ಲಿಂ ಉಡುಪಿ ಜಿಲ್ಲಾ ಒಕ್ಕೂಟ
    3. ಶ್ರೀ ಯಾಸೀನ್ ಮಲ್ಪೆ, ಉಡುಪಿ
    4. ಶ್ರೀಮತಿ ಪ್ರಮೀಳಾ ಜತ್ತನ್, ಕೊರಂಗರಪಾಡಿ, ಉಡುಪಿ
    5. ಶ್ರೀ ಸೂರಜ್ ಜೈನ್, ಕುಕ್ಕಂದೂರು, ಕಾರ್ಕಳ
    6. ಶ್ರೀ ಶರ್ಫುದ್ದೀನ್ ಶೇಖ್, ಕಾಪು, ಉಡುಪಿ
  • ಕರ್ಜೆ ಅರಿವು ಕೇಂದ್ರ ಗ್ರಂಥಾಲಯಕ್ಕೆ ಗೌರವ ಸ್ಮರಣಿಕೆ

    ಉಡುಪಿ, ಜೂನ್ 01, 2025: ಶಿಕ್ಷಣ ಫೌಂಡೇಶನ್ ಮತ್ತು ಜಿಲ್ಲಾಡಳಿತ ಉಡುಪಿಯ ಸಹಯೋಗದೊಂದಿಗೆ ದಿನಾಂಕ 25-05-2025 ರಂದು ಜಿಲ್ಲಾ ಪಂಚಾಯತ್ ಉಡುಪಿಯಲ್ಲಿ ನಡೆದ ಅರಿವು ಕೇಂದ್ರ ಮೇಲ್ವಿಚಾರಕರ ವಾರ್ಷಿಕ ಪ್ರಗತಿ ಪರಿಶೀಲನ ಸಭೆಯಲ್ಲಿ ಕರ್ಜೆ ಅರಿವು ಕೇಂದ್ರ ಗ್ರಂಥಾಲಯಕ್ಕೆ ವಿಶೇಷ ಗೌರವ ಸಂದಿದೆ.

    ಗ್ರಂಥಾಲಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕರ್ಜೆ ಅರಿವು ಕೇಂದ್ರದ ಕೊಡುಗೆಯನ್ನು ಗುರುತಿಸಿ, ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಪ್ರತೀಕ್ ಬಾಯಲ್ ಅವರು ಗೌರವ ಸ್ಮರಣಿಕೆಯನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಕರ್ಜೆ ಅರಿವು ಕೇಂದ್ರದ ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು.

  • ಬ್ರಹ್ಮಾವರ: ಆಂಬ್ಯುಲೆನ್ಸ್ ಕೊಠಡಿ, 4 ಆಕ್ಸಿಜನ್ ಕಾನ್ಸೆಂಟ್ರೇಟರ್ ಹಸ್ತಾಂತರ

    ಬ್ರಹ್ಮಾವರ: ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಮತ್ತು ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಇದರ ಆಶ್ರಯದಲ್ಲಿ ಜನೌಷಧಿ ಕೇಂದ್ರದ ಬಳಿ ನೂತನವಾಗಿ ನಿರ್ಮಿಸಿರುವ ಅಂಬುಲೆನ್ಸ್‌ ಕೊಠಡಿ ಮತ್ತು 4 ಆಕ್ಸಿಜನ್ ಕಾನ್ಸೆಂಟ್ರೇಟರ್ ಹಸ್ತಾಂತರ ಸಮಾರಂಭ ಮೇ 31 ರಂದು ಶನಿವಾರ ಸಿಟಿ ಸೆಂಟರ್ ಬ್ರಹ್ಮಾವರದಲ್ಲಿ ನಡೆಯಿತು.

    ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ನಮ್ಮೊಳಗಿನ ನಮ್ಮತನ ಕಳೆದುಕೊಳ್ಳದೆ ಸದಾ ಕಾಲ ಜನಪಯೋಗಿಯಾಗಿ ಬದುಕು ಸಾಗಿಸಿದರೆ ನಮ್ಮ ಜೀವನ ಸಾರ್ಥಕವಾಗಲು ಸಾಧ್ಯ. ಶಾಲೆಯಲ್ಲಿ ಶಿಕ್ಷಣ ನೀಡಿದರೆ, ಮನೆಯಲ್ಲಿ ಸಂಸ್ಕಾರ ನೀಡುವ ಕಾಯ೯ ನಡೆಯಬೇಕು ನಮ್ಮ ವಾತಾವರಣ ತಿಳಿಮಾಡುವ ಕೆಲಸ ನಿತ್ಯ ನಿರಂತವಾಗಿರಬೇಕು ಎಂದರು.

    ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ, ಜಯಂಟ್ಸ್ ಸಂಸ್ಥೆಯು ಪರಿಸರದ ಜನರಿಗೆ ಅನೇಕ ಜನೋಪಯೋಗಿ ಕಾರ್ಯಕ್ರಮವನ್ನು ನಡೆಸುತ್ತಿರುವುದು ಅಭಿನಂದನೀಯ ಎಂದರು.

    ಜಯಂಟ್ಸ್ ಕೇಂದ್ರ ಸಮಿತಿ ಸದಸ್ಯ ದಿನಕರ ಅಮೀನ್, ಸ್ವಚ್ಚ ಭಾರತ ಮತ್ತು ವನಮಹೋತ್ಸವ ಕಾರ್ಯಕ್ರಮಗಳು ರಾಷ್ಟ್ರಮಟ್ಟದ ಕಾರ್ಯಕ್ರಮ ಗಳಾಗಿದ್ದು, ಅದನ್ನು ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಮಾಡಲಾಗುವುದು ಎಂದರು.

    ಜಯಂಟ್ಸ್ ಫೆಡರೇಶನ್ ಅಧ್ಯಕ್ಷ ತೇಜೇಶ್ವರ್ ರಾವ್, ತಾ.ಪಂ ಇಒ ಹೆಚ್.ವಿ ಇಬ್ರಾಹಿಂಪುರ ಶುಭ ಹಾರೈಸಿದರು.

    ಈ ಸಂದಭ೯ದಲ್ಲಿ ಅಮೇರಿಕ ಅನಿವಾಸಿ ಭಾರತೀಯ ಹಲವಾರು ಸಂಸ್ಥೆಗಳಿಗೆ ದಾನ ನೀಡಿದ ಡಾ.ಜೀವನ್ ಪ್ರಕಾಶಿನಿ ಮೂತಿ೯ ಮತ್ತು ಎನ್.ಸಿ ಮೂತಿ೯ ದಂಪತಿಗಳನ್ನು ಸನ್ಮಾನಿಸಲಾಯಿತು. ಈ ಸಂದಭ೯ದಲ್ಲಿ ಅವರು ಸಂಸ್ಥೆಯ ಕಾರ್ಯವೈಖರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಂಟ್ಸ್ ಗ್ರೂಪ್ ಅಧ್ಯಕ್ಷ ಅಣ್ಣಯ್ಯ ದಾಸ್ ವಹಿಸಿ ಅತಿಥಿಗಳನ್ನು ಸ್ವಾಗತಿಸಿದರು. ವಾರಂಬಳ್ಳಿ ಗ್ರಾ.ಪಂ ಅಧ್ಯಕ್ಷ ನಿತ್ಯಾನಂದ ಬಿ. ಆರ್ ರವರನ್ನು ಗೌರವಿಸಲಾಯಿತು. ನಾಯ್ಕನಕಟ್ಟೆ ಶಾಲೆಗೆ ನೋಟ್ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು.

    ವೇದಿಕೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಮಹೇಶ್ ಐತಾಳ, ವಿವೇಕಾನಂದ ಕಾಮತ್, ನಿಕಟಪೂರ್ವ ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕ್ಕುಡೆ ಮುಂತಾದವರಿದ್ದರು. ಕಾರ್ಯದರ್ಶಿ ಮಿಲ್ಟನ್ ಒಲಿವರ್ ವರದಿ ವಾಚಿಸಿದರು. ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು ಪ್ರಸ್ತಾವನೆಗೈದು, ಅತಿಥಿಗಳಿಗೆ ಸಿಂದೂರ ವಿಶೇಷ ಗಿಡವನ್ನು ನೀಡಿ ಗೌರವಿಸಿದರು. ದಿವ್ಯ ಪೂಜಾರಿ, ಶ್ರೀನಾಥ ಕೋಟ, ಪ್ರಸನ್ನ ಕಾರಂತ, ರೊನಾಲ್ಡ್ ಡಯಾಸ್ ಪರಿಚಯಿಸಿದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿ, ವಂದಿಸಿದರು. ಈ ಸಂದರ್ಭದಲ್ಲಿ ಜನೌಷಧಿ ಸಿಬ್ಬಂದಿಗಳು ಮತ್ತು ಜಯಂಟ್ಸ್ ಹಿರಿಯ ಸದಸ್ಯರನ್ನು ಗೌರವಿಸಲಾಯಿತು.

    ಜಯಂಟ್ಸ್ ನಿರ್ದೇಶಕ ಪ್ರದೀಪ್ ಶೆಟ್ಟಿ ಪ್ರತಿಮಾ ಡೋರಿಸ್ ಸಹಕರಿಸಿದರು.

  • ಉಡುಪಿ ಮತ್ತು ಕಾರವಾರದಲ್ಲಿ ವಿಶ್ವ ಬೈಸಿಕಲ್ ದಿನಾಚರಣೆ

    ಉಡುಪಿ, ಜೂನ್ 01, 2025: ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ “ವಿಶ್ವ ಬೈಸಿಕಲ್ ದಿನಾಚರಣೆ”ಯನ್ನು ಆಚರಿಸಲು ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜೋಡುಕಟ್ಟೆಯಿಂದ ಬ್ರಹ್ಮಗಿರಿ, ಕರಾವಳಿ ಮಾರ್ಗವಾಗಿ ಕೋಟೆವರೆಗೆ ಸೈಕಲ್ ಜಾಥವನ್ನು ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮವು ಆರೋಗ್ಯ, ಫಿಟ್‌ನೆಸ್ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ.

    ಕಾರವಾರ, ಜೂನ್ 01, 2025: ಉತ್ತರ ಕನ್ನಡ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಖೇಲೋ ಇಂಡಿಯಾ ಯೋಜನೆಯ “ಫಿಟ್ ಇಂಡಿಯಾ” ಉಪಕ್ರಮದ ಅಡಿಯಲ್ಲಿ, ಸಿಟಿ ಬೈಸಿಕಲ್ ಕ್ಲಬ್ ಕಾರವಾರದ ಸಹಕಾರದೊಂದಿಗೆ “ವಿಶ್ವ ಬೈಸಿಕಲ್ ದಿನ”ವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ದಿನಾಂಕ 01-06-2025 ರಂದು ಬೈಸಿಕಲ್ ಅಭಿಯಾನವನ್ನು ಆಯೋಜಿಸುವ ಮೂಲಕ ಈ ದಿನವನ್ನು ವಿಶೇಷವಾಗಿ ಗುರುತಿಸಲಾಯಿತು. ಈ ಕಾರ್ಯಕ್ರಮವು ದೈಹಿಕ ಆರೋಗ್ಯವನ್ನು ಉತ್ತೇಜಿಸುವ ಜೊತೆಗೆ ಸೈಕಲ್ ಬಳಕೆಯ ಮಹತ್ವವನ್ನು ಜನರಿಗೆ ತಿಳಿಸುವ ಉದ್ದೇಶವನ್ನು ಹೊಂದಿತ್ತು.

  • ಮಂಗಳೂರು/ಉಡುಪಿ: ಕರಾವಳಿಯಲ್ಲಿ 61 ದಿನಗಳ ಯಾಂತ್ರಿಕ ಮೀನುಗಾರಿಕೆ ನಿಷೇಧ ಆರಂಭ; ಭಾರೀ ನಷ್ಟದ ಋತು

    ಮಂಗಳೂರು/ಉಡುಪಿ, ಜೂನ್ 01, 2025: ಮುಂಗಾರಿನ ಆಗಮನ ಮತ್ತು ಕಡಲಿನ ಅಶಾಂತ ಪರಿಸ್ಥಿತಿಯಿಂದಾಗಿ ಕರ್ನಾಟಕದ ಕರಾವಳಿಯಾದ್ಯಂತ ಜೂನ್ 1 ರಿಂದ ಜುಲೈ 31 ರವರೆಗೆ 61 ದಿನಗಳ ಕಾಲ ಯಾಂತ್ರಿಕ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. ಈ ಅವಧಿಯು ಸಮುದ್ರ ಜೀವಿಗಳ ಸಂತಾನೋತ್ಪತ್ತಿಗೆ ಮಹತ್ವದ್ದಾಗಿದ್ದು, ಈ ಆಧಾರದ ಮೇಲೆ ವಾರ್ಷಿಕ ನಿಷೇಧವನ್ನು ಜಾರಿಗೊಳಿಸಲಾಗಿದೆ.

    ಕಾರ್ಮಿಕರು ತವರಿಗೆ ಮರಳುವಿಕೆ

    ಮೀನುಗಾರಿಕೆ ಚಟುವಟಿಕೆಗಳು ಸ್ಥಗಿತಗೊಂಡಿರುವುದರಿಂದ, ಮಂಗಳೂರು ಮತ್ತು ಮಲ್ಪೆ ಬಂದರಿನಲ್ಲಿ ಮೀನುಗಳನ್ನು ಒಡ್ಡುವ, ಲೋಡ್ ಮಾಡುವ ಮತ್ತು ಇಳಿಸುವ ಕೆಲಸದಲ್ಲಿ ತೊಡಗಿದ್ದ ಪುರುಷ ಮತ್ತು ಮಹಿಳಾ ಕಾರ್ಮಿಕರು ತಮ್ಮ ತವರು ಊರುಗಳಿಗೆ ಮರಳಲು ಆರಂಭಿಸಿದ್ದಾರೆ. ಈ ಕಾರ್ಮಿಕರಲ್ಲಿ ಹೆಚ್ಚಿನವರು ಒಡಿಶಾ, ಆಂಧ್ರಪ್ರದೇಶ ಮತ್ತು ಜಾರ್ಖಂಡ್‌ನಂತಹ ಇತರ ರಾಜ್ಯಗಳಿಂದ ಬಂದವರಾಗಿದ್ದಾರೆ. ಬಹುತೇಕರು ಈಗಾಗಲೇ ತೆರಳಿದ್ದು, ಉಳಿದವರು ಮರಳಲು ಸಿದ್ಧತೆ ನಡೆಸಿದ್ದಾರೆ.

    ನಿಷೇಧದ ನಡುವೆಯೂ ಕೆಲಸ ಮುಂದುವರಿಕೆ

    ಆದರೆ, ಈ ವಿರಾಮವು ದೋಣಿಗಳ ಮಾಲೀಕರು ಮತ್ತು ಮೀನುಗಾರರಿಗೆ ಅನ್ವಯಿಸುವುದಿಲ್ಲ. ಅವರು ದೋಣಿಗಳನ್ನು ಒಡ್ಡಿಗೆ ತೆಗೆಯುವುದು, ದಡಕ್ಕೆ ಎಳೆಯುವುದು, ದುರಸ್ತಿ, ನಿರ್ವಹಣೆ ಮತ್ತು ಬಲೆಗಳನ್ನು ಸಿದ್ಧಪಡಿಸುವ ಕೆಲಸದಲ್ಲಿ ತೊಡಗಿದ್ದಾರೆ. ನಿಷೇಧ ಮುಗಿದ ನಂತರ ಮೀನುಗಾರಿಕೆಯನ್ನು ಪುನರಾರಂಭಿಸಲು ಈ ಕೆಲಸಗಳನ್ನು ನಡೆಸಲಾಗುತ್ತಿದೆ.

    ಕಳೆದ ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ, ಈ ಋತುವು ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಮೀನುಗಾರ ಸಮುದಾಯಕ್ಕೆ ಅತ್ಯಂತ ಕೆಟ್ಟ ಋತುವಾಗಿದೆ. ಅನೇಕ ದೋಣಿಗಳಿಗೆ ಆಶಿಸಿದಷ್ಟು ಮೀನು ಸಿಗದ ಕಾರಣ, ಸುಮಾರು 60% ದೋಣಿಗಳು ಮಧ್ಯ ಋತುವಿನಲ್ಲೇ ಲಂಗರು ಹಾಕಿ, ಹೆಚ್ಚಿನ ನಷ್ಟವನ್ನು ತಪ್ಪಿಸಿವೆ.

    ಮೀನಿನ ಕೊರತೆಯಿಂದ ಬೆಲೆ ಏರಿಕೆ

    ಮೀನಿನ ಕೊರತೆಯಿಂದ ಬೆಲೆಗಳು ಗಗನಕ್ಕೇರಿವೆ. ಕೆಲವೇ ದಿನಗಳ ಹಿಂದೆ ಮಲ್ಪೆ ಬಂದರಿನಲ್ಲಿ ದರಗಳು ಈ ಕೆಳಗಿನಂತಿದ್ದವು:

    • ಕಿಂಗ್‌ಫಿಶ್: ಕೆ.ಜಿ.ಗೆ 1,500–1,600 ರೂ.
    • ಮ್ಯಾಕರೆಲ್: ಕೆ.ಜಿ.ಗೆ 200–300 ರೂ.
    • ಸ್ಕ್ವಿಡ್: ಕೆ.ಜಿ.ಗೆ 500–600 ರೂ.
    • ಟೈಗರ್ ಪ್ರಾನ್ಸ್: ಕೆ.ಜಿ.ಗೆ 500–600 ರೂ.
    • ಕ್ರೋಕರ್ ಫಿಶ್: ಕೆ.ಜಿ.ಗೆ 200–350 ರೂ.
    • ಸೋಲ್ ಫಿಶ್: ಕೆ.ಜಿ.ಗೆ 300 ರೂ.

    ಇದರಿಂದಾಗಿ, ಹೋಟೆಲ್‌ಗಳಲ್ಲಿ ಮೀನಿನ ಊಟದ ಬೆಲೆಯೂ ಏರಿಕೆಯಾಗಿದೆ. ಹಿಂದಿನ ವರ್ಷಗಳಲ್ಲಿ ಋತುವಿನ ಕೊನೆಯ ಎರಡು ತಿಂಗಳು ಸಾಮಾನ್ಯವಾಗಿ ಲಾಭದಾಯಕವಾಗಿದ್ದವು, ಆದರೆ ಈ ಬಾರಿ ಋತುವು ಭಾರೀ ನಷ್ಟದೊಂದಿಗೆ ಕೊನೆಗೊಂಡಿದೆ ಎಂದು ಮಲ್ಪೆ ಕನ್ನಿ ಮೀನುಗಾರರ ಸಂಘದ ಅಧ್ಯಕ್ಷ ದಯಾಕರ್ ವಿ. ಸುವರ್ಣ ತಿಳಿಸಿದ್ದಾರೆ.

    ನಿಷೇಧ ಉಲ್ಲಂಘನೆಗೆ ಕಠಿಣ ಕ್ರಮ

    61 ದಿನಗಳ ಈ ಅವಧಿಯಲ್ಲಿ ಯಾಂತ್ರಿಕ ಮೀನುಗಾರಿಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಕೇವಲ 10 ಅಶ್ವಶಕ್ತಿಯ ಎಂಜಿನ್‌ಗಳನ್ನು ಹೊಂದಿರುವ ಸಾಂಪ್ರದಾಯಿಕ ದೇಶಿ ದೋಣಿಗಳಿಗೆ ಮಾತ್ರ ಕಾರ್ಯಾಚರಣೆಗೆ ಅನುಮತಿಯಿದೆ. ಸರ್ಕಾರದ ನಿಷೇಧವನ್ನು ಉಲ್ಲಂಘಿಸಿದರೆ ಕರ್ನಾಟಕ ಸಮುದ್ರ ಮೀನುಗಾರಿಕೆ ನಿಯಂತ್ರಣ ಕಾಯ್ದೆ, 1986ರ ಅಡಿಯಲ್ಲಿ ದಂಡ ವಿಧಿಸಲಾಗುವುದು. ಜೊತೆಗೆ, ಉಲ್ಲಂಘಕರು ಒಂದು ವರ್ಷದವರೆಗೆ ತೆರಿಗೆ-ಮುಕ್ತ ಡೀಸೆಲ್ ಪಡೆಯುವ ಅರ್ಹತೆಯನ್ನು ಕಳೆದುಕೊಳ್ಳುತ್ತಾರೆ ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ವಿವೇಕ್ ಆರ್., ಮಲ್ಪೆ, ತಿಳಿಸಿದ್ದಾರೆ.

    ಸರ್ಕಾರದ ನಿರ್ದೇಶನದಂತೆ, ಮೇ 31 ರವರೆಗೆ ಮಾತ್ರ ಮೀನುಗಾರಿಕೆಗೆ ಅನುಮತಿಯಿತ್ತು. ರೆಮಲ್ ಚಂಡಮಾರುತದಿಂದಾಗಿ ಬಂದರಿನಿಂದ ಹೊರಗಡೆ ಸಿಲುಕಿದ ದೋಣಿಗಳು ಒಮ್ಮೆಗೆ ಮರಳುತ್ತಿರುವುದರಿಂದ ದಟ್ಟಣೆ ಉಂಟಾಗಿದೆ. ಆದ್ದರಿಂದ, ಮೀನು ಇಳಿಸಲು ಕೆಲವು ದಿನಗಳ ವಿನಾಯಿತಿಯನ್ನು ನೀಡಲಾಗಿದೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ ತಿಳಿಸಿದ್ದಾರೆ.

  • ಕರಾವಳಿ ಕರ್ನಾಟಕದ ಇತ್ತೀಚಿನ ಘಟನೆಗಳ ತನಿಖೆಗೆ ಕೆಪಿಸಿಸಿ ಸತ್ಯಶೋಧನಾ ಸಮಿತಿ ರಚನೆ

    ಬೆಂಗಳೂರು, ಜೂನ್ 01, 2025: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇತ್ತೀಚೆಗೆ ವರದಿಯಾದ ಕಲಕಿಕಾರಕ ಘಟನೆಗಳ ಸತ್ಯಾಸತ್ಯತೆಯನ್ನು ತನಿಖೆ ಮಾಡಲು ಏಳು ಪಕ್ಷದ ನಾಯಕರು ಮತ್ತು ಪದಾಧಿಕಾರಿಗಳನ್ನೊಳಗೊಂಡ ಸತ್ಯಶೋಧನಾ ಸಮಿತಿಯನ್ನು ರಚಿಸಿದೆ.

    ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ರಚನೆಯಾದ ಈ ಸಮಿತಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೈಯದ್ ನಸೀರ್ ಹುಸೇನ್, ಕಾರ್ಯಾಧ್ಯಕ್ಷ ಎಂ.ಎಸ್.ಸಿ. ಮಂಜುನಾಥ್ ಭಂಡಾರಿ, ಬಿಡಿಎ ಅಧ್ಯಕ್ಷ ಎನ್.ಎ. ಹಾರಿಸ್, ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್, ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್. ಸುದರ್ಶನ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮತ್ತು ಮಾಜಿ ಸಂಸದ ಜಯಪ್ರಕಾಶ್ ಹೆಗಡೆ ಸೇರಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಕರಾವಳಿ ಪ್ರದೇಶದಿಂದ ಕೊಲೆ, ದರೋಡೆ, ಹತ್ಯೆಗಳು ಮತ್ತು ಸಾಮುದಾಯಿಕ ಹಿಂಸಾಚಾರದಂತಹ ಆತಂಕಕಾರಿ ಶೀರ್ಷಿಕೆಗಳಡಿಯಲ್ಲಿ ವರದಿಗಳು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಕಟವಾಗಿವೆ. ಈ ಘಟನೆಗಳ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೆಪಿಸಿಸಿ ಈ ಸತ್ಯಶೋಧನಾ ತಂಡವನ್ನು ಕಳುಹಿಸಿದೆ.

    ಸಮಿತಿಯ ಸದಸ್ಯರು ಕರಾವಳಿ ಜಿಲ್ಲೆಗಳಲ್ಲಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಬಲಿಪಶುಗಳ ಕುಟುಂಬಗಳು, ಎಲ್ಲಾ ಸಮುದಾಯದ ಜನರು, ವಿವಿಧ ಸಂಘಟನೆಗಳು ಮತ್ತು ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಇತರ ಪಾಲುದಾರರೊಂದಿಗೆ ಚರ್ಚೆ ನಡೆಸಲಿದ್ದಾರೆ. ಸಮಗ್ರ ತನಿಖೆಯ ಆಧಾರದ ಮೇಲೆ, ಒಂದು ವಾರದೊಳಗೆ ಕೆಪಿಸಿಸಿಗೆ ವಿವರವಾದ ವರದಿಯನ್ನು ಸಲ್ಲಿಸಲಿದ್ದಾರೆ.

    ಸಮಿತಿಯ ಮುಖ್ಯ ಉದ್ದೇಶಗಳು:

    • ದಕ್ಷಿಣ ಕನ್ನಡದಲ್ಲಿ ಇತ್ತೀಚೆಗೆ ನಡೆದ ಕೊಲೆ ಪ್ರಕರಣಗಳ ತನಿಖೆ
    • ಈ ಕೊಲೆಗಳಿಂದ ಉಂಟಾದ ಸಾಮುದಾಯಿಕ ಉದ್ವಿಗ್ನತೆಯ ಪರಿಶೀಲನೆ
    • ಮಾಧ್ಯಮಗಳಲ್ಲಿ ಈ ಘಟನೆಗಳನ್ನು ಹೇಗೆ ಚಿತ್ರಿಸಲಾಗುತ್ತಿದೆ ಎಂಬುದರ ಮೌಲ್ಯಮಾಪನ
    • ವರದಿಯಾದ ಪ್ರಕರಣಗಳ ಸತ್ಯಾಸತ್ಯತೆ ಮತ್ತು ನೆಲದ ವಾಸ್ತವತೆಯ ದೃಢೀಕರಣ
    • ಪೀಡಿತ ಪ್ರದೇಶಗಳಲ್ಲಿ ಸಾರ್ವಜನಿಕರೊಂದಿಗೆ ನೇರ ಸಂವಾದ
    • ಒಂದು ವಾರದೊಳಗೆ ಕೆಪಿಸಿಸಿಗೆ ಸಮಗ್ರ ವರದಿ ಸಲ್ಲಿಕೆ

    ಕರಾವಳಿ ಪ್ರದೇಶದಲ್ಲಿ ನಡೆಯುತ್ತಿರುವ ಸಮಸ್ಯೆಗಳ ಬಗ್ಗೆ ಸ್ಪಷ್ಟತೆ ಮತ್ತು ಪಕ್ಷಪಾತರಹಿತ ತಿಳುವಳಿಕೆಯನ್ನು ತರುವ ಗುರಿಯನ್ನು ಈ ಸಮಿತಿ ಹೊಂದಿದೆ.