Category: Udupi

  • NSS Unit of Milagres College Kallianpur organizes Blood Donation Camp

    Udupi: Milagres College Kallianpur, National Service Scheme (NSS) successfully organized a blood donation camp on April 29, 2025. The event commenced with an inaugural program held at the Audio Visual Hall, where esteemed guests and faculty members gathered to emphasize the importance of blood donation.

    Dr. Deepika, Associate Professor, Department of IHBT, KMC Manipal, delivered the inaugural address, enlightening the audience about the eligibility criteria for donors, health benefits, and common blood-related issues. Mr. Sathish Salian, President of Abhayahasta Charitable Trust, Udupi, graced the occasion as the chief guest, acknowledging the organizers’ efforts and the significance of the blood donation camp.

    Dr. Jayaram Shettigar, Staff Secretary and Head of the Department of History, highlighted the importance of blood donation, citing inspiring examples to motivate the students. Mrs. Sophia Dias, Vice Principal, delivered a presidential remark, encouraging students to participate in this life-saving initiative.

    The program was attended by notable faculty members, including Mrs. Shylet Mathias, IQAC Coordinator, Mrs. Clara Menezes, Convenor of Youth Red Cross, Mr. Ganesh Nayak, and Mrs. Shubalatha, NSS Programme Officers, along with other teaching and administrative staff.

    First-year B.Com students actively participated in the program, with Ms. Amrutha, delivered a warm welcome address and Ms. Thanisha, proposed vote of thanks. Mr. Asthik, also a first-year B.Com student, hosted the program with confidence and poise.

    The blood donation camp was a resounding success, with a total of 49 units of blood collected. The NSS team deserves commendation for their meticulous planning and execution, making this event a testament to the college’s commitment to social responsibility and community service.

  • ತೋನ್ಸೆ: ಸಾಲಿಹಾತ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.100 ಫಲಿತಾಂಶ

    ತೋನ್ಸೆ: ಹೂಡೆಯ ಸಾಲಿಹಾತ್ ಆಂಗ್ಲ ಮಾಧ್ಯಮ ಪ್ರೌಢಶಾಲೆ 2024-25ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಪಬ್ಲಿಕ್ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 74 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರಲ್ಲಿ 22 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 36 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು 16 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

    ತೂಬಾ ಫಿರ್ದೋಸ್ (610/625) ಶಾಲೆಗೆ ಪ್ರಥಮ, ಶೈಮಾ ನಾಝ್ ಐ. (606/625) ದ್ವಿತೀಯ ಮತ್ತು ರಿದಾ (605/625) ತೃತೀಯ ಸ್ಥಾನ ಪಡೆದಿದ್ದಾರೆ.

  • ಉಡುಪಿ: ಬಾಡಿಗೆ ನೆಪದಲ್ಲಿ ರಿಕ್ಷಾ ಚಾಲಕನ ಕೊಲೆ ಯತ್ನ, SDPI ಜಿಲ್ಲಾಧ್ಯಕ್ಷರಿಂದ ಕಠಿಣ ಕ್ರಮಕ್ಕೆ ಅಗ್ರಹ

    “ಸುಹಾಸ್ ಶೆಟ್ಟಿ ಕೊಲೆ ನೆಪವನ್ನ ಇಟ್ಟುಕೊಂಡು ಸಂಘಪಾರಿವಾರಾ ಉಡುಪಿ ಜಿಲ್ಲೆಯ ಶಾಂತಿಯನ್ನು ಕಡಡಲು ಪ್ರಯತ್ನಿಸುತ್ತಿದ್ದು, ನಿನ್ನೆ ರಾತ್ರಿ ಅಮಾಯಕ ರಿಕ್ಷಾ ಚಾಲಕಾರೊಬ್ಬರ ಕೊಲೆಗೆ ವಿಫಲ ಯತ್ನ ನಡೆಸಿದ್ದಾರೆ. ಪೊಲೀಸ್ ಇಲಾಖೆ ಈ ಸಂಚಿನ ಹಿಂದೆ ಇರುವ ಕಾಣದ ಕೈಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು“ ಎಂದು ಎಸ್.ಡಿ.ಪಿ.ಐ ಉಡುಪಿ ಜಿಲ್ಲಾಧ್ಯಕ್ಷರು ಆಸೀಫ್ ಕೋಟೇಶ್ವರ ಹೇಳಿದ್ದಾರೆ.

    ಆಟೋ ರಿಕ್ಷಾ ಚಾಲಕನೋರ್ವರಿಗೆ ಕರೆ ಮಾಡಿ ಬಾಡಿಗೆ ಇದೆ ಕರೆಯಿಸಿಕೊಂಡು ದುಷ್ಕರ್ಮಿಗಳು ಕೊಲೆ ಮಾಡಲು ಯತ್ನಿಸಿರುವ ಘಟನೆ ಆತ್ರಾಡಿ ಗ್ಯಾಸ್‌ ಪೆಟ್ರೋಲ್‌ ಬಂಕ್‌ ಬಳಿ ಗುರುವಾರ ರಾತ್ರಿ ನಡೆದಿದೆ.

    ಆಟೋ ರಿಕ್ಷಾ ಚಾಲಕ ಬಡಗಬೆಟ್ಟು ನಿವಾಸಿ ಅಬುಬಕ್ಕರ್‌ (50), ಎನ್ನುವರರಿಗೆ ಅವರ ಪರಿಚಯದ‌ ದಿನೇಶ್ ಎನ್ನುವವರು ಕರೆ ಮಾಡಿ ಮದಗದಿಂದ ಆತ್ರಾಡಿಗೆ ಬಾಡಿಗೆ ಬರಲು ತಿಳಿಸಿದ್ದಾರೆ. ಈ ಹಿನ್ನೆಲೆ ಅಬುಬಕ್ಕರ್‌ ರಿಕ್ಷಾದಲ್ಲಿ ಆತ್ರಾಡಿ ಪೆಟ್ರೋಲ್‌ ಬಂಕ್‌ ಬಳಿ ಮೋಟಾರ್‌ ಸೈಕಲ್‌ ನಲ್ಲಿ ಹಿಂದಿನಿಂದ ಬಂದ ಇಬ್ಬರು ದುಷ್ಕರ್ಮಿಗಳು ರಿಕ್ಷಾ ಹಿಂಬಾಲಿಸಿಕೊಂಡು ಬಂದು ಗಾಡಿಯನ್ನು ನಿಲ್ಲಿಸುವಂತೆ ಅವ್ಯಾಚ್ಯ ಶಬ್ದಗಳಿಂದ ಬೈದಿದ್ದಾರೆ.

    ಈ ವೇಳೆ ಅಬುಬಕ್ಕರ್‌ ಗಾಡಿಯನ್ನು ನಿಲ್ಲಿಸದೇ ಮುಂದೆ ಬಂದು ಶೇಡಿಗುಡ್ಡೆ ಬಳಿ ರಸ್ತೆಯಲ್ಲಿ ಆಟೋವನ್ನು ನಿಲ್ಲಿಸಿ ಓಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಮೋಟಾರ್‌ ಸೈಕಲ್‌ನಲ್ಲಿದ್ದ ಓರ್ವ ವ್ಯಕ್ತಿ ತನ್ನ ಕೈಯಲ್ಲಿದ್ದ ತಲವಾರಿನಿಂದ ಅಬುಬಕ್ಕರ್‌ ತಲೆಗೆ ಬೀಸಿದ್ದು, ತಲವಾರಿನ ಹೊಡೆತದಿಂದ ಅಬುಬಕ್ಕರ್‌ ತಪ್ಪಿಸಿಕೊಂಡಿದ್ದಾರೆ.

    ಬಜರಂಗದಳ ಕಾರ್ಯಕರ್ತ ಹಾಗೂ ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಹಿನ್ನಲೆಯೆಲ್ಲಿ ಜಿಲ್ಲೆಯ ಭಾಗಗಳಲ್ಲಿ ಹಲ್ಲೆ ಮತ್ತು ಕೊಲೆ ಯತ್ನ ಸುದ್ದಿ ಬರ್ತಾ ಇವೆ.

  • ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟ: ಕಾರ್ಕಳದ ಸ್ವಸ್ತಿ ಕಾಮತ್ ಗೆ 625 ಕ್ಕೆ 625 ಅಂಕ !

    ಉಡುಪಿ: ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ 22 ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಈ ಸಾಲಿಗೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ವಿದ್ಯಾರ್ಥಿನಿ ಕೂಡ ಸೇರ್ಪಡೆಯಾಗಿದ್ದಾರೆ.
    ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಗಣಿತ ನಗರದ ಜ್ಞಾನಸುಧಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ವಿದ್ಯಾರ್ಥಿನಿ ಸ್ವಸ್ತಿ ಕಾಮತ್ 625 ಮಾರ್ಕ್ ಗಳಿಸಿ ರಾಜ್ಯಕ್ಕೇ ಪ್ರಥಮ ಸ್ಥಾನಿಯಾಗಿದ್ದಾಳೆ.

  • ಹಿರಿಯಡ್ಕ: ರಿಕ್ಷಾ ಚಾಲಕನ ಹತ್ಯೆಗೆ ಯತ್ನ- ಇಬ್ಬರ ಬಂಧನ

    ಹಿರಿಯಡ್ಕ: ಆಟೋ ರಿಕ್ಷಾ ಚಾಲಕನೋರ್ವರಿಗೆ ಕರೆ ಮಾಡಿ ಬಾಡಿಗೆ ಇದೆ ಕರೆಯಿಸಿಕೊಂಡು ದುಷ್ಕರ್ಮಿಗಳು ಕೊಲೆ ಮಾಡಲು ಯತ್ನಿಸಿರುವ ಘಟನೆ ಆತ್ರಾಡಿ ಗ್ಯಾಸ್‌ ಪೆಟ್ರೋಲ್‌ ಬಂಕ್‌ ಬಳಿ ಗುರುವಾರ ರಾತ್ರಿ ನಡೆದಿದೆ.

    ಆಟೋ ರಿಕ್ಷಾ ಚಾಲಕ ಬಡಗಬೆಟ್ಟು ನಿವಾಸಿ ಅಬುಬಕ್ಕರ್‌ (50), ಎನ್ನುವರರಿಗೆ ಅವರ ಪರಿಚಯದ‌ ದಿನೇಶ್ ಎನ್ನುವವರು ಕರೆ ಮಾಡಿ ಮದಗದಿಂದ ಆತ್ರಾಡಿಗೆ ಬಾಡಿಗೆ ಬರಲು ತಿಳಿಸಿದ್ದಾರೆ. ಈ ಹಿನ್ನೆಲೆ ಅಬುಬಕ್ಕರ್‌ ರಿಕ್ಷಾದಲ್ಲಿ ಆತ್ರಾಡಿ ಪೆಟ್ರೋಲ್‌ ಬಂಕ್‌ ಬಳಿ ಮೋಟಾರ್‌ ಸೈಕಲ್‌ ನಲ್ಲಿ ಹಿಂದಿನಿಂದ ಬಂದ ಇಬ್ಬರು ದುಷ್ಕರ್ಮಿಗಳು ರಿಕ್ಷಾ ಹಿಂಬಾಲಿಸಿಕೊಂಡು ಬಂದು ಗಾಡಿಯನ್ನು ನಿಲ್ಲಿಸುವಂತೆ ಅವ್ಯಾಚ್ಯ ಶಬ್ದಗಳಿಂದ ಬೈದಿದ್ದಾರೆ.

    ಈ ವೇಳೆ ಅಬುಬಕ್ಕರ್‌ ಗಾಡಿಯನ್ನು ನಿಲ್ಲಿಸದೇ ಮುಂದೆ ಬಂದು ಶೇಡಿಗುಡ್ಡೆ ಬಳಿ ರಸ್ತೆಯಲ್ಲಿ ಆಟೋವನ್ನು ನಿಲ್ಲಿಸಿ ಓಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಮೋಟಾರ್‌ ಸೈಕಲ್‌ನಲ್ಲಿದ್ದ ಓರ್ವ ವ್ಯಕ್ತಿ ತನ್ನ ಕೈಯಲ್ಲಿದ್ದ ತಲವಾರಿನಿಂದ ಅಬುಬಕ್ಕರ್‌ ತಲೆಗೆ ಬೀಸಿದ್ದು, ತಲವಾರಿನ ಹೊಡೆತದಿಂದ ಅಬುಬಕ್ಕರ್‌ ತಪ್ಪಿಸಿಕೊಂಡಿದ್ದಾರೆ.

    ಬೈಕ್‌ನಲ್ಲಿದ್ದ ಇನ್ನೋರ್ವ ವ್ಯಕ್ತಿ ಬಾಟಲಿಯನ್ನು ಕೈಯಲ್ಲಿ ಹಿಡಿದು ಆಟೋ ರಿಕ್ಷಾದ ಮುಂಭಾಗ ಗ್ಲಾಸಿಗೆ ಹೊಡೆದಿದ್ದಾನೆ. ಕೊಲೆ ಮಾಡುವ ಉದ್ದೇಶದಿಂದ ಅವರು ಹೀಗೆ ಮಾಡಿದ್ದಾರೆಂಬುದನ್ನು ಅರಿತ ಅಬುಬಕ್ಕರ್‌ ಅಲ್ಲೇ ಪಕ್ಕದಲ್ಲಿದ್ದ ಕಂಪೌಡನ್ನು ಜಿಗಿದು ಓಡಿ ಹೋಗಿದ್ದಾರೆ.

    ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲು ಪ್ರಕರಣ ದಾಖಲಾಗಿದ್ದು, ಅಬುಬಕ್ಕರ್‌ ನೀಡಿದ ದೂರಿನ ಅನ್ವಯ ಆರೋಪಿಗಳಾದ ಹಿರಿಯಡ್ಕದ ಬೊಮ್ಮರಬೆಟ್ಟುವಿನ ಸಂದೇಶ್‌(31), ಹಿರಿಯಡ್ಕ ಧರ್ಕಸ್‌ನ ಸುಶಾಂತ್(‌32) ಅವರನ್ನು ಬಂಧಿಸಲಾಗಿದೆ.

  • ಕಾರ್ಕಳ: ಶ್ರೀ ವೆಂಕಟರಮಣ ದೇವಳದ ರಾಥೋತ್ಸವ ಸಂಬಂಧ ಪರ್ಯಾಯ ಸಂಚಾರ ವ್ಯವಸ್ಥೆ

    ಕಾರ್ಕಳ: ಉಡುಪಿ ಜಿಲ್ಲಾ ಪೊಲೀಸ್ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ರಾಥೋತ್ಸವ ಕಾರ್ಯಕ್ರಮ ನಡೆಯಲಿರುವುದರಿಂದ ದಿನಾಂಕ 02-05-2025 ರಂದು ಸಂಜೆ 4:00 ಗಂಟೆಯಿಂದ ಮರುದಿನ ಬೆಳಿಗ್ಗೆ 6:00 ಗಂಟೆಯವರೆಗೆ ಮೂರು ಮಾರ್ಗದಿಂದ ಸ್ಟೇಟ್ ಬ್ಯಾಂಕ್ ಜುಂಕ್ಷನ್ ರವರೆಗೆ ವಾಹನ ಸಂಚಾರ ನಿಷೇಧಿಸಿ ಪರ್ಯಾಯ ಸಂಚಾರ ವ್ಯವಸ್ಥೆ ಬಗ್ಗೆ ಈ ಕೆಳಗಿನ ಆದೇಶ ಹೊರಡಿಸಿದ್ದಾರೆ.

    ಪರ್ಯಾಯ ಮಾರ್ಗದ ವಿವರ

    • ಘನವಾಹನಗಳು ಬಂಗ್ಲೆ ಗುಡ್ಡೆ – ಹಿರಿಯಂಗಡಿ – ಪುಲ್ಕೆರಿ ಮಾರ್ಗವಾಗಿ ಸಂಚರಿಸುದು.
    • ಕಾರ್ಕಳದಿಂದ ಜೋಡುರಸ್ತೆ ಕಡೆಗೆ ಹಾಗೂ ಜೋಡು ರಸ್ತೆಯಿಂದ ಕಾರ್ಕಳ ಕಡೆಗೆ ಸಂಚರಿಸುವ ಬಸ್ ಗಳು ತಾಲೂಕು ಜುಂಕ್ಷನ್ ನಿಂದ ಕಲೊಟ್ಟೆ , ಮಾರ್ಕೆಟ್ ಮಾರ್ಗವಾಗಿ ಬಸ್ ನಿಲ್ದಾಣ ಪ್ರವೇಶಿಸುವುದು.
    • ಸ್ಟೇಟ್ ಬ್ಯಾಂಕ್ – ಮೂರು ಮಾರ್ಗದಲ್ಲಿ ಸಂಚರಿಸುವ ಲಘು ವಾಹನ ಹಾಗೂ ದ್ವಿಚಕ್ರ ವಾಹನಗಳು ಸ್ಟೇಟ್ ಬ್ಯಾಂಕ್ ಜುಂಕ್ಷನ್ ನಿಂದ ಗಾಂಧಿ ಮೈದಾನವಾಗಿ ಅಂಚೆ ಕಚೇರಿ, ಕಾಮಧೇನು ಹೋಟೆಲ್ ಜುಂಕ್ಷನ್ ಮಾರ್ಗವಾಗಿ ಸಂಚರಿಸುದು.

    ಸಾರ್ವಜನಿಕರಲ್ಲಿ ಸಹಕರಿಸಲು ಉಡುಪಿ ಪೊಲೀಸ್ ವಿನಂತಿಸಿದ್ದಾರೆ.

  • ಆರ್‌ಎಸ್‌ಎಸ್‌ನಿಂದ ಬ್ರಹ್ಮಾವರದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿಬಿಎಸ್‌ಇ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಉದ್ಘಾಟನೆ

    ಉಡುಪಿ, ಏಪ್ರಿಲ್ 30, 2025: ಉಡುಪಿ ಜಿಲ್ಲೆಯ ಬ್ರಹ್ಮಾವರದ ಚೆರ್ಕಾಡಿಯ ಕೇಶವನಗರದಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿಬಿಎಸ್‌ಇ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಹೊಸ ಕಟ್ಟಡಗಳು ಏಪ್ರಿಲ್ 29, 2025 ರಂದು ಉದ್ಘಾಟನೆಗೊಂಡವು. ಈ ಸಮಾರಂಭದಲ್ಲಿ ಇಸ್ರೋದ ಮಾಜಿ ಅಧ್ಯಕ್ಷ ಡಾ. ಎಸ್. ಸೋಮನಾಥ್, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

    ರಾಷ್ಟ್ರೋತ್ಥಾನ ಪರಿಷತ್, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಜೊತೆಗೆ ನಿಕಟ ಸಂಬಂಧವನ್ನು ಹೊಂದಿದೆ. ರಾಷ್ಟ್ರೋತ್ಥಾನ ವಿದ್ಯಾಕೇಂದ್ರವು ಕರ್ನಾಟಕದಲ್ಲಿರುವ ಶಿಕ್ಷಣ ಸಂಸ್ಥೆಗಳ ಒಂದು ಗುಂಪಾಗಿದ್ದು, ಇದನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮಾರ್ಗದರ್ಶನ ಮತ್ತು ಪ್ರೇರಣೆಯಡಿಯಲ್ಲಿ ಸ್ಥಾಪಿಸಲಾಗಿದೆ. 1965ರಲ್ಲಿ ಸ್ಥಾಪಿತವಾದ ಈ ಸಂಸ್ಥೆ, ದೇಶಭಕ್ತಿ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ರಾಷ್ಟ್ರೋತ್ಥಾನ ವಿದ್ಯಾಕೇಂದ್ರವನ್ನು ಆರಂಭಿಸುವ ಮೂಲಕ, ಆರ್‌ಎಸ್‌ಎಸ್-ಪ್ರೇರಿತ ಈ ಸಂಸ್ಥೆಯು ಯುವಕರಲ್ಲಿ ಹಿಂದುತ್ವದ ತತ್ವಗಳನ್ನು ಬೆಳೆಸಲು ಉದ್ದೇಶಿಸಿರಬಹುದು ಎಂದು ಕೆಲವರು ಗಮನಿಸಿದ್ದಾರೆ. ಈ ಶಾಲೆಯ ಪಂಚಮುಖಿ ಶಿಕ್ಷಣ ಪದ್ಧತಿಯು ಶೈಕ್ಷಣಿಕ ಜ್ಞಾನದ ಜೊತೆಗೆ ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಗುರುತನ್ನು ಒತ್ತಿಹೇಳುತ್ತದೆ.

    ಡಾ. ಸೋಮನಾಥ್ ತಮ್ಮ ಭಾಷಣದಲ್ಲಿ ಭಾರತವು ಶಾಂತಿಯ ಸಂದೇಶದೊಂದಿಗೆ ವಿಶ್ವಗುರುವಾಗಬೇಕು ಎಂದು ಕರೆ ನೀಡಿದರು. ಭಾರತೀಯ ಸಂಸ್ಕೃತಿ, ಯೋಗ, ಆಯುರ್ವೇದ ಮತ್ತು ವಿಜ್ಞಾನದ ಕೊಡುಗೆಗಳನ್ನು ಯುವ ಪೀಳಿಗೆಗೆ ರವಾನಿಸುವ ಅಗತ್ಯವನ್ನು ಒತ್ತಿ ಹೇಳಿದರು. ಪೇಜಾವರ ಸ್ವಾಮೀಜಿ, ಸ್ಥಳೀಯ ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳೆಸುವ ಶಿಕ್ಷಣದ ಮಹತ್ವವನ್ನು ಒತ್ತಾಯಿಸಿದರು.

    ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರ ಭೇಟಿಯು ಈ ಸಂಸ್ಥೆಯ ಶಿಕ್ಷಣ ಕಾರ್ಯಕ್ರಮಗಳಲ್ಲಿ ಆರ್‌ಎಸ್‌ಎಸ್‌ನ ಪ್ರಮುಖ ಪಾತ್ರವನ್ನು ಸೂಚಿಸುತ್ತದೆ. ಸಮಾರಂಭದಲ್ಲಿ ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ, ಸಮಿತಿ ಅಧ್ಯಕ್ಷ ಸಾಧು ಸಾಲಿಯನ್ ಮತ್ತು ಇತರರು ಉಪಸ್ಥಿತರಿದ್ದರು. ಕೆಲವರು ಈ ಶಾಲೆಯ ಸ್ಥಾಪನೆಯನ್ನು ಸಾಂಸ್ಕೃತಿಕ ಗುರುತನ್ನು ಬಲಪಡಿಸುವ ಆರ್‌ಎಸ್‌ಎಸ್‌ನ ಒಂದು ಹೆಜ್ಜೆ ಎಂದು ಪರಿಗಣಿಸಿದರೆ, ಇತರರು ಇದನ್ನು ಶಿಕ್ಷಣದ ಮೂಲಕ ಸಮಾಜ ಸೇವೆಯ ಭಾಗವೆಂದು ಗುರುತಿಸುತ್ತಾರೆ.

  • ಉಡುಪಿ ಪೊಲೀಸ್ ಇಲಾಖೆಯ ಹೆಡ್ ಕಾನ್ಸ್‌ಟೇಬಲ್ ಶ್ರೀ ಅರುಣ್‌ಗೆ ನಿವೃತ್ತಿ ಸನ್ಮಾನ

    ಉಡುಪಿ: ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಹೆಡ್ ಕಾನ್ಸ್‌ಟೇಬಲ್ ಶ್ರೀ ಅರುಣ್ ಅವರು ಏಪ್ರಿಲ್ 29 ರಂದು ಸ್ವಯಂ ಇಚ್ಛೆಯಿಂದ ನಿವೃತ್ತಿ ಹೊಂದಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಲಾಯಿತು.

    ಶ್ರೀ ಅರುಣ್ ಅವರ ಸಮರ್ಪಣೆ ಮತ್ತು ಕರ್ತವ್ಯ ನಿಷ್ಠೆಯನ್ನು ಶ್ಲಾಘಿಸಿದ ಪೊಲೀಸ್ ಇಲಾಖೆ, ಅವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸಿದೆ. ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

  • ಉಡುಪಿ ಪೊಲೀಸ್ ಕಚೇರಿಯೆಲ್ಲಿ ಬಸವ ಜಯಂತಿ

    ಬಸವ ಜಯಂತಿ ಪ್ರಯುಕ್ತ ಈ ದಿನ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು

    ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು ,ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಹಾಗೂ ಜಿಲ್ಲಾ ಪೊಲೀಸ್ ಕಚೇರಿ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು.

  • ಗಂಗೊಳ್ಳಿ: ಮೀನುಗಾರನ ಸಾವಿನ ಪ್ರಕರಣ: ಆರೋಪಿಗೆ 10 ವರ್ಷ ಕಠಿಣ ಜೈಲುಶಿಕ್ಷೆ

    ಕುಂದಾಪುರ: ಗಂಗೊಳ್ಳಿ ಮೀನುಗಾರಿಕಾ ಬಂದರಿನ ದಕ್ಕೆಯಲ್ಲಿ ಬೋಟ್ ಕಟ್ಟುವ ವಿಷಯಕ್ಕೆ ಸಂಬಂಧಿಸಿದ ಹಲ್ಲೆಯಿಂದ ಮೀನುಗಾರನೊಬ್ಬ ಮೃತಪಟ್ಟ ಪ್ರಕರಣದಲ್ಲಿ ಆರೋಪಿಗೆ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 10 ವರ್ಷ ಕಠಿಣ ಜೈಲುಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

    ಆರೋಪಿಯನ್ನು ಭಟ್ಕಳ ಮೂಲದ ಚಂದ್ರಕಾಂತ ಖಾರ್ವಿ ಎಂದು ಗುರುತಿಸಲಾಗಿದೆ. 2017ರ ಸೆಪ್ಟೆಂಬರ್ 15ರ ರಾತ್ರಿ, ಗಂಗೊಳ್ಳಿ ಮೀನುಗಾರಿಕಾ ಬಂದರಿನ ದಕ್ಕೆಯಲ್ಲಿ ಮೀನು ಖಾಲಿ ಮಾಡಲು ಪ್ರಕಾಶ ಪೂಜಾರಿ ತಾನು ಕೆಲಸ ಮಾಡುತ್ತಿದ್ದ ಮೀನುಗಾರಿಕಾ ಬೋಟ್‌ನ ಹಗ್ಗವನ್ನು ಚಂದ್ರಕಾಂತ ಚಾಲಕನಾಗಿದ್ದ ಬೋಟ್‌ಗೆ ಕಟ್ಟುತ್ತಿದ್ದಾಗ, ಆರೋಪಿಯು ಪ್ರಕಾಶ್‌ಗೆ ಅವಾಚ್ಯವಾಗಿ ಬೈದಿದ್ದನು.

    ಇದನ್ನು ಆಕ್ಷೇಪಿಸಿದ್ದಕ್ಕೆ, ಚಂದ್ರಕಾಂತನು ತನ್ನ ಬೋಟ್‌ನಲ್ಲಿದ್ದ ಮರದ ಹಲಗೆಯಿಂದ ಪ್ರಕಾಶ್‌ನ ತಲೆಗೆ, ಆತನಿಗೆ ಮಾರಕವಾಗಬಹುದೆಂಬ ತಿಳಿವಳಿಕೆ ಇದ್ದರೂ, ಹೊಡೆದಿದ್ದನು. ಪರಿಣಾಮವಾಗಿ, ತಲೆಗೆ ಗಾಯಗೊಂಡ ಪ್ರಕಾಶ ಪೂಜಾರಿ ಪಂಚಗಂಗಾವಳಿ ಹೊಳೆಗೆ ಬಿದ್ದಿದ್ದನು. ಆತನ ಶವವು ಗಂಗೊಳ್ಳಿ ಗ್ರಾಮದ ಬೇಲಿಕೆರೆ ಅರಬ್ಬಿ ಸಮುದ್ರದಲ್ಲಿ ಪತ್ತೆಯಾಗಿತ್ತು.

    ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಂದಿನ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಪರಮೇಶ್ವರ ಆರ್. ಗುನಗ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆಯನ್ನು ಪೂರ್ಣಗೊಳಿಸಿದ ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ್ ಶೇಖ್ ಅವರು ಆರೋಪಿಯನ್ನು ದೋಷಿಯೆಂದು ಘೋಷಿಸಿ, ಐಪಿಸಿ ಕಲಂ 304(2) ಅಡಿಯಲ್ಲಿ 10 ವರ್ಷ ಕಠಿಣ ಜೈಲುಶಿಕ್ಷೆಯ ಜೊತೆಗೆ 10,000 ರೂ. ದಂಡ, ಮತ್ತು ಕಲಂ 504 ಅಡಿಯಲ್ಲಿ 2 ವರ್ಷ ಶಿಕ್ಷೆಯ ಜೊತೆಗೆ 5,000 ರೂ. ದಂಡ ವಿಧಿಸಿ ಆದೇಶಿಸಿದರು.

    ಪ್ರಕರಣದ ಸಾಕ್ಷಿ ವಿಚಾರಣೆಯನ್ನು ಅಂದಿನ ಸರಕಾರಿ ಅಭಿಯೋಜಕರಾದ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ಮತ್ತು ಹರಿಶ್ಚಂದ್ರ ಉದ್ಯಾವರ ನಡೆಸಿದ್ದರು. ಈಗಿನ ಸರಕಾರಿ ಅಭಿಯೋಜಕ ಇಂದಿರಾ ನಾಯ್ಕ ಅವರು ವಿಚಾರಣೆಯನ್ನು ಮುಂದುವರಿಸಿ ವಾದ ಮಂಡಿಸಿದ್ದಾರೆ.