ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ನಡೆಸಿದ ಈ ಕುಕೃತ್ಯದಿಂದ ಪರಿಸರದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು. ಭಜರಂಗದಳದ ಮುಖಂಡ ಭುಜಂಗ ಕುಲಾಲ್ ಸಮೇತ ಹಲವಾರು ಮಂದಿ ಸ್ಥಳಕ್ಕೆ ಧಾವಿಸಿ ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದರು. ಕಂದಾವರ ಮೂಡುಕೆರೆ ಬೈಮಾಗಣೆಯ ಧೂಮಾವತಿ ಪುಣ್ಯಕ್ಷೇತ್ರ ಸಮೀಪದಲ್ಲಿಯೇ ಈ ಕೃತ್ಯ ಎಸಗಿರುವುದರ ವಿರುದ್ಧ ಭಜರಂಗದಳ ಹರಿಹಾಯ್ದಿದ್ದು.
ರುಂಡವನ್ನು ಕೆಲವೇ ಗಂಟೆಗಳ ಹಿಂದೆ ಕತ್ತರಿಸಿದಂತಿದ್ದು ರುಂಡ ಎಲ್ಲಿಂದ ಬಂದಿದೆ, ಯಾರ ಕೃತ್ಯ ಎಂಬುದು ಗೊತ್ತಾಗಿಲ್ಲ. ದನವನ್ನು ಪಕ್ಕದ ಗುಡ್ಡದ ಬಳಿ ಕಡಿದು ಅದರ ರುಂಡವನ್ನು ಅಶ್ವತಕಟ್ಟೆ ಬಳಿ ಎಸೆದಿರುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಬಜ್ಪೆ ಪೊಲೀಸರು ರುಂಡವನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
Share on Whatsapp
Source – OneIndia