ಗಂಗೊಳ್ಳಿ: ಅಂಜುಮನ್ ನೂರುಲ್ ಇಸ್ಲಾಂ ಸಂಸ್ಥೆ ಗಂಗೊಳ್ಳಿ ಇದರ 3 ವರ್ಷದ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಶನಿವಾರ ಬೆಳಗ್ಗೆ 10 ಗಂಟೆಗೆ ಅಂಜುಮನ್ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆಯಿತು.
BSF ಮೊಹಮ್ಮದ್ ರಫೀಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ 3 ವರ್ಷದ ಅವಧಿಗೆ ಅಂಜುಮನ್ ನೂರುಲ್ ಇಸ್ಲಾಂ ಸಂಸ್ಥೆಯ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಮೊಹಮ್ಮದ್ ಇಬ್ರಾಹಿಂ ಮೌಲಾನಾ (ಕೊಲ್ವಾ), ಅಧ್ಯಕ್ಷರಾಗಿ ಮುಜಾಹಿದ್ ಅಲಿ ನಾಖುದಾ, ಉಪಾಧ್ಯಕ್ಷರಾಗಿ ಮೊಹಮ್ಮದ್ ಅನ್ವರ್ ಚೌಗುಲೆ, ಕಾರ್ಯದರ್ಶಿಯಾಗಿ ಉಮರ್ ಭಾಷಾ ಸಾಹೇಬ್, ಜೊತೆ ಕಾರ್ಯದರ್ಶಿಯಾಗಿ ಮೊಹಮ್ಮದ್ ತಮೀಮ್ ಮೌಲಾನಾ, ಖಜಾಂಜಿಯಾಗಿ ಫಝಲ್ ರಹ್ಮಾನ್ ಎಂ ಎಚ್ ಹಾಗು ಸದಸ್ಯರುಗಳಾಗಿ ಎಚ್ ಅಬ್ದುಲ್ ರಹೀಮ್, ಜಿ ರೆಹಾನ್ ಅಹ್ಮದ್, ಖಲಿಫೆ ಮೊಹಮ್ಮದ್ ತಬ್ರೇಝ್, ಜಿ ಅಬೂಬಕರ್ ಸಾಹೇಬ್, ಝಹಿರ್ ಅಹ್ಮದ್ ನಾಖುದಾ, ಪಿ ಎಂ ಹಸೈನಾರ್ ಹಾಗು ಎಸ್ ಎಂ ಮೊಹಮ್ಮದ್ ಮೀರಾ ಸಾಹೇಬ್ ಅವರನ್ನು ಆಯ್ಕೆ ಮಾಡಲಾಯಿತು ಎಂದು ಪ್ರಕಟನೆ ತಿಳಿಸಿದೆ.